ವರ್ತೂರು ಸಂತೋಷ್‌ ಮೇಷ್ಟ್ರಾಗಿರುವ ತರಗತಿಯಲ್ಲಿ ಒಬ್ಬರನ್ನೊಬ್ಬರು ಎಲಿಮಿನೇಟ್ ಮಾಡುವ ಚಟುವಟಿಕೆಯೂ ನಡೆದಿದೆ. ಸಂಗೀತಾ ಮತ್ತು ಪ್ರತಾಪ್‌ ಇಬ್ಬರೂ ಮೈಕಲ್‌ ಅವರನ್ನು ಎಲಿಮಿನೇಟ್ ಮಾಡಬೇಕು ಎಂದು ಹೇಳಿದ್ದಾರೆ.

ಬಿಗ್‌ಬಾಸ್‌ ಪಾಠಶಾಲೆ ತರಗತಿಯಿಂದ ತರಗತಿಗೆ ಸೀರಿಯಸ್ ಆಗುತ್ತ ನಡೆದಿದೆ. ಮೊದಲ ದಿನಕ್ಕೆ ಹೋಲಿಸಿದರೆ ನಿನ್ನೆಯ ತರಗತಿಗಳು ಸಾಕಷ್ಟು ಸೀರಿಯಸ್ ಆಗಿದ್ದವು. ನಮ್ರತಾ ಕ್ಲಾಸಿನಲ್ಲಿ ಎಲ್ಲರೂ ಡಾನ್ಸ್‌ ಮಾಡಿ ಖುಷಿಪಟ್ಟರೆ, ಸಂಗೀತಾ ಬಹುಗಂಭೀರವಾಗಿ ಅಧ್ಯಾತ್ಮದ ಪಾಠವನ್ನು ಹೇಳಿಕೊಟ್ಟಿದ್ದರು. ತುಂಬ ಗಹನವಾಗಿಯೂ ಇದ್ದ ಅವರ ತರಗತಿ ಪ್ರೀತಿಯನ್ನು ಹರಡುವ ಸಂದೇಶದೊಂದಿಗೆ ಕೊನೆಗೊಂಡಿತ್ತು. 

ಸಿರಿ ಅವರ ತರಗತಿಯಲ್ಲಿ ಕಾರ್ತಿಕ್‌ ಮತ್ತು ವಿನಯ್‌ ಪರಸ್ಪರ ಹಾರ್ಟ್‌ ಕ್ರಾಫ್ಟ್ ಹಂಚಿಕೊಂಡು ಖುಷಿಗೊಂಡಿದ್ದರು. 
ಹಾಗಾದರೆ ಇಂದಿನ ತರಗತಿಗಳು ಹೇಗೆ ನಡೆಯುತ್ತಿವೆ? ಕಾರ್ತಿಕ್ ಪೊಲಿಟಿಕ್ಸ್‌ ತರಗತಿಯ ಝಲಕ್‌ನ ನಂತರ JioCinema ಬಿಡುಗಡೆ ಮಾಡಿರುವ ಪ್ರೋಮೊದ ಈಗ ವರ್ತೂರು ಸಂತೋಷ್ ಅವರ ಕ್ಲಾಸಿನ ಖದರ್ ಹೇಗಿದೆ ಎನ್ನುವುದರ ಸುಳಿವು ನೀಡಿದೆ. 

ವರ್ತೂರು ಸಂತೋಷ್‌ ಮೇಷ್ಟ್ರಾಗಿರುವ ತರಗತಿಯಲ್ಲಿ ಒಬ್ಬರನ್ನೊಬ್ಬರು ಎಲಿಮಿನೇಟ್ ಮಾಡುವ ಚಟುವಟಿಕೆಯೂ ನಡೆದಿದೆ. ಸಂಗೀತಾ ಮತ್ತು ಪ್ರತಾಪ್‌ ಇಬ್ಬರೂ ಮೈಕಲ್‌ ಅವರನ್ನು ಎಲಿಮಿನೇಟ್ ಮಾಡಬೇಕು ಎಂದು ಹೇಳಿದ್ದಾರೆ. ‘ಮೈಕಲ್‌ ಸಣ್ಣ ಸಣ್ಣ ವಿಷಯಕ್ಕೂ ನನಗೆ ಚುಚ್ಚಿ ಮಾತಾಡುತ್ತಿದ್ದಾರೆ’ ಎಂದು ಸಂಗೀತಾ ಆರೋಪಿಸಿದ್ದರೆ, “ನನ್ನ ವಿರುದ್ಧ ಎಲ್ಲರ ಮನಸ್ಸಿನಲ್ಲಿಯೂ ತಪ್ಪು ಭಾವನೆ ಮೂಡಿಸುತ್ತಿದ್ದಾರೆ’ ಎಂದು ಪ್ರತಾಪ್ ಹೇಳಿದ್ದಾರೆ. 

ಬಿಗ್ ಬಾಸ್ ಮನೆಯಲ್ಲಿ ಕಾರ್ತಿಕ್‌ ಪೊಲಿಟಿಕ್ಸ್, ನಗೆಬುಗ್ಗೆ ಕರಗಿ ಏಳುತ್ತಿದೆಯಾ ಅಸಮಾಧಾನದ ಹೊಗೆ!

ಇದಕ್ಕೆ ಪ್ರತಿಕ್ರಿಯಿಸಿರುವ ಮೈಕಲ್, ‘ಐ ಡೋಂಟ್ ಲೈಕ್ ಯು’ ಎಂದು ನೇರವಾಗಿ ಹೇಳಿದ್ದಾರೆ. ‘ಪ್ರತಾಪ್‌ ಅವರಿಗೆ ಸ್ವಂತ ಪರ್ಸನಾಲಿಟಿ ಇಲ್ಲ. ಸಿಂಪಥಿಯಲ್ಲಿದ್ದು ಬದುಕುವವನ ಬಳಿ ಮಾತಾಡಲು ನನಗೆ ಏನೂ ಇಲ್ಲ’ ಎಂದೂ ಉತ್ತರಿಸಿದ್ದಾರೆ. ಹಾಗಾದರೆ ವರ್ತೂರ್‍ ಕ್ಲಾಸ್‌ನಲ್ಲಿ ನಡೆದಿದ್ದು ರಿಯಲ್ ಎಲಿಮಿನೇಷನ್ನಾ? ಅಥವಾ ಟಾಸ್ಕ್‌ನ ಭಾಗವಾ? 

ಡಾನ್ಸ್ ಮಾಡಿ ಕುಳಿತ ಭಾಗ್ಯಾ ಕಣ್ಣಲ್ಲಿ ಯಾಕೆ ಬಂತು ನೀರು!

ಅಂದಹಾಗೆ, ಬಿಗ್ ಬಾಸ್‌ ಮನೆಯಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ತಿಳಿಯಲು 'JioCinema'ದಲ್ಲಿ ಪ್ರಕಟವಾಗುತ್ತಿರುವ ಬಿಗ್‌ಬಾಸ್ ಕನ್ನಡ ನೇರಪ್ರಸಾರವನ್ನು ವೀಕ್ಷಿಸಬಹುದು. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಬಹುದು. ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ರಾತ್ರಿ 9.30ಕ್ಕೆ, ಶನಿವಾರ-ಭಾನುವಾರ ರಾತ್ರಿ 9.00 ಕ್ಕೆ ವೀಕ್ಷಿಸಬಹುದು.

ಜಗತ್ತಿನೆಲ್ಲೆಡೆ ಖ್ಯಾತಿ ಪಡೆಯುವ ಮೊದಲು ಸೋಪ್ ಮಾರಾಟ ಮಾಡ್ತಿದ್ರು; ಟಿವಿ ಶೋ ಮಾಡಿ ಸ್ಟಾರ್ ಆಗ್ಬಿಟ್ರು!