ಡಾನ್ಸ್ ಮಾಡಿ ಕುಳಿತ ಭಾಗ್ಯಾ ಕಣ್ಣಲ್ಲಿ ಯಾಕೆ ಬಂತು ನೀರು!
ಸ್ಟೇಜ್‌ಗೆ ಬಂದಿರುವ ವ್ಯಕ್ತಿ ಮಾತನಾಡುತ್ತಿದ್ದರೆ ಭಾಗ್ಯಾ ಅವಮಾನದಿಂದ ಕುಗ್ಗಿ ತಲೆ ತಗ್ಗಿಸತೊಡಗಿದ್ದಾಳೆ. ಭಾಗ್ಯಾ ಹಾಘೂ ಕುಸುಮಾ ಕಣ್ಣಲ್ಲಿ ಕೂಡ ನೀರು ಹರಿಯ ತೊಡಗಿದೆ. ತಾಂಡವ್-ಶ್ರೇಷ್ಠಾ ಖುಷಿ ಮಿತಿ ಮೀರಿದೆ.
ಕಲರ್ಸ್ ಕನ್ನಡದಲ್ಲಿ ಮೂಡಿ ಬರುತ್ತಿರುವ ಭಾಗ್ಯಲಕ್ಷ್ಮೀ ಸೀರಿಯಲ್‌ನಲ್ಲಿ ಭಾಗ್ಯಾ ಕತೆ ಏನು? ಮಗಳ ಸ್ಕೂಲಿನಲ್ಲಿ ಕೊನೆಗೂ ಭಾಗ್ಯಾ ಡಾನ್ಸ್ ಮಾಡಿದ್ದಾಳೆ. ಈಗ ಬಹುಮಾನ ಘೋಷಣೆ ಸಮಯ. ಆದರೆ, ಬಹುಮಾನ ಕೊಡಬೇಕಾಗಿರುವವರು ಸ್ಟೇಜಿಗೆ ಬಂದು ಭಾಗ್ಯಾಳ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೆ. ಅದನ್ನು ಕೇಳಿ ಭಾಗ್ಯಾಗೆ ತುಂಬಾ ಬೇಸರವಾಗಿದೆ. ಭಾಗ್ಯಾ ಅತ್ತೆ ಕುಸುಮಾ, ಭಾಗ್ಯಾ ತಂಗಿ ಇವರೆಲ್ಲರಿಗೂ ನೋವಾಗಿದೆ. ಆದರೆ ತಾಂಡವ್, ಶ್ರೇಷ್ಠಾ ಹಾಗೂ ಕೆಲವು ಭಾಗ್ಯಾ ವಿರೋಧಿಗಳಿಗೆ ಸಖತ್ ಖುಷಿಯಾಗಿದೆ.
ಸ್ಟೇಜ್‌ಗೆ ಬಂದಿರುವ ವ್ಯಕ್ತಿ ಮಾತನಾಡುತ್ತಿದ್ದರೆ ಭಾಗ್ಯಾ ಅವಮಾನದಿಂದ ಕುಗ್ಗಿ ತಲೆ ತಗ್ಗಿಸತೊಡಗಿದ್ದಾಳೆ. ಭಾಗ್ಯಾ ಹಾಘೂ ಕುಸುಮಾ ಕಣ್ಣಲ್ಲಿ ಕೂಡ ನೀರು ಹರಿಯ ತೊಡಗಿದೆ. ತಾಂಡವ್-ಶ್ರೇಷ್ಠಾ ಖುಷಿ ಮಿತಿ ಮೀರಿದೆ. ಅಷ್ಟರಲ್ಲಿಯೇ ಸ್ಟೇಜ್ ಮೇಲಿದ್ದ ವ್ಯಕ್ತಿಯ ಮಾತು ಯೂ ಟರ್ನ್ ತೆಗೆದುಕೊಂಡಿದೆ. ಆ ವ್ಯಕ್ತಿ 'ಇಲ್ಲಿ ಮಕ್ಕಳ ಜತೆ ಆ ಭಾಗ್ಯಾ ಎಂಬ ಮಧ್ಯ ವಯಸ್ಕ ವ್ಯಕ್ತಿ ಡಾನ್ಸ್ ಮಾಡಿದ್ದು ನನಗೆ ಸರಿ ಬರಲಿಲ್ಲ. ಆದರೆ, ಆಕೆಯ ಡಾನ್ಸ್ ತುಂಬಾ ಅತ್ಯದ್ಭುತವಾಗಿತ್ತು. ಆ ವಯಸ್ಸಿನಲ್ಲೂ ಕುಂದದ ಆಕೆಯ ಉತ್ಸಾಹಕ್ಕೆ ಶಭಾಶ್ ಎನ್ನುತ್ತಾರೆ.
ಬಿಗ್‌ಬಾಸ್ ಮನೆಯೇ ಮೊದಲ ಪಾಠಶಾಲೆ; ಮೈಕೆಲ್ ಮಾತು ಕೇಳಿ ಸ್ಪರ್ಧಿಗಳಿಗೆ ರೋಮಾಂಚನ!
ಸ್ಟೇಜ್ ಕೆಳಗೆ ಕುಳಿತಿದ್ದ ಭಾಗ್ಯಾ, ಕುಸುಮಾ ಕಣ್ಣಲ್ಲಿ ಆನಂದಭಾಷ್ಪ ಹರಿಯುತ್ತದೆ. ಆದರೆ, ತಾಂಡವ್ ಕೈಕೈ ಹಿಸುಕಿಕೊಳ್ಳುತ್ತಾನೆ. ಶ್ರೇಷ್ಠಾಗೆ ಕೋಪ ಉಕ್ಕೇರುತ್ತಿದೆ. ಆದರೆ ಆ ವ್ಯಕ್ತಿ ಮಾತ್ರ ಭಾಗ್ಯಾಗೆ ಸ್ಪೆಷಲ್ ಬಹುಮಾನ ಘೋಷಿಸಿ ಬಿಡುತ್ತಾನೆ. ಭಾಗ್ಯಾ ಅಲ್ಲಿ ಡಾನ್ಸ್ ಮಾಡಿದ್ದಕ್ಕೂ ಸಾರ್ಥಕ ಎಂಬಂತಾಗುತ್ತದೆ. ಭಾಗ್ಯಾ ಮಗಳು ಏನು ಹೇಳುತ್ತಾಳೆ? ತಾಂಡವ್, ಶ್ರೇಷ್ಠಾ ಮುಂದಿನ ಪ್ಲಾನ್ ಏನು? ಮನೆಗೆ ಬಂದ ಕುಸುಮಾ ಸೊಸೆ ಬಗ್ಗೆ ಅದೆಷ್ಟು ಸಂತೋಷ ವ್ಯಕ್ತಪಡಿಸುತ್ತಾಳೆ, ಎಲ್ಲವನ್ನೂ ತಿಳಿಯಲು ಇಂದಿನ ಸಂಚಿಕೆ ನೋಡಬೇಕು.
ಪ್ಲಾಪ್ ಸಿನಿಮಾ ಲವ್ ಬ್ರೇಕಪ್ ತರಹ, ಕುಳಿತು ಅಳುವುದರಲ್ಲಿ ಅರ್ಥವಿಲ್ಲ; ಪ್ರಿಯಾಂಕಾ ಚೋಪ್ರಾ
ಅಂದಹಾಗೆ, ಕಲರ್ಸ್ ಕನ್ನಡದಲ್ಲಿ ಭಾಗ್ಯಲಕ್ಷ್ಮೀ ಸೀರಿಯಲ್ ಸಾಯಂಕಾಲ 7.00 ಗಂಟೆಗೆ ಪ್ರಸಾರವಾಗುತ್ತದೆ. ಇಂದಿನ ಸಂಚಿಕೆ ನೋಡಿದರೆ ಭಾಗ್ಯಲಕ್ಷ್ಮೀ ಸದ್ಯದ ಕಥೆ ಏನು ಎಂಬುದು ಅರಿವಾಗುತ್ತದೆ. ಒಟ್ಟಿನಲ್ಲಿ, ಭಾಗ್ಯಲಕ್ಷ್ಮೀ ಕಥೆಯಲ್ಲಿ ಭಾಗ್ಯಾಳದೇ ಕಾರುಬಾರು, ಲಕ್ಷ್ಮೀ ಕಳೆದು ಹೋಗಿ ತುಂಬಾ ದಿನವಾಯ್ತು. ಲಕ್ಷ್ಮೀ ಯಾವಾಗ ಬರುತ್ತಾಳೋ, ಬರುತ್ತಾಳೋ ಇಲ್ಲವೋ ಗೊತ್ತಿಲ್ಲ.