ಸಂಕ್ರಾಂತಿ ಸಂಭ್ರಮದ ಶೂಟಿಂಗ್​ನಲ್ಲಿ ಏನೇನಾಯ್ತು? ವಿಡಿಯೋ ಮೂಲಕ ರೋಚಕ ಅನುಭವ ಹೇಳಿದ 'ಸೀತಾ'

ಸೀತಾರಾಮ ಸೀರಿಯಲ್​ನಲ್ಲಿ ನಡೆದ ಸಂಕ್ರಾತಿ ಸಂಭ್ರಮದ ಶೂಟಿಂಗ್​ ಹೇಗೆ ನಡೆದಿತ್ತು? ಇದರ ವಿಶೇಷ  ಅನುಭವ ಶೇರ್​ ಮಾಡಿದ ನಟಿ ವೈಷ್ಣವಿ ಗೌಡ.
 

Vaishnavi Gowda shares Sankranti celebrations in Sitarama serial shooting video suc

2024ರ ಮೊದಲ ಹಬ್ಬ ಸಂಕ್ರಾಂತಿ ಸಂಭ್ರಮ ಮುಗಿದು ಕೆಲವೇ ದಿನಗಳಾಗಿವೆ. ಎಲ್ಲೆಡೆ ಎಳ್ಳು ಬೆಲ್ಲವನ್ನು ಬೀರಿ ಸಂಕ್ರಾಂತಿಯ ಸಂಭ್ರಮವನ್ನು ಆಚರಿಸಿದರೆ, ಸೀರಿಯಲ್​ಗಳವರೇನೂ ಹಿಂದೆ ಬಿದ್ದಿಲ್ಲ. ಕೆಲವು ಧಾರಾವಾಹಿಗಳಲ್ಲಿ ಇನ್ನು ಕೂಡ ಸಂಕ್ರಾಂತಿ ಹಬ್ಬವನ್ನು ಆಚರಿಸುತ್ತಿದ್ದರೆ, ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಸೀತಾರಾಮ ಸೀರಿಯಲ್​ನಲ್ಲಿ ಈ ಎಪಿಸೋಡ್​ ಅಂದೇ ಆಗಿ ಹೋಗಿದೆ. ಸೀತಾ ಮತ್ತು ರಾಮರ ನಡುವೆ ಬಿರುಕು ಉಂಟಾಗಿರುವ ಸಮಯದಲ್ಲಿ ಸಂಕ್ರಾಂತಿಯ ಹೊತ್ತಿಲಿನಲ್ಲಿ ರಾಮನ ಮೊಗದಲ್ಲಿ ನಗು ಮೂಡಿದ್ದನ್ನು ಸೀರಿಯಲ್​ ಪ್ರಿಯರು ಇದಾಗಲೇ ನೋಡಿದ್ದಾರೆ. ಸಂಕ್ರಾಂತಿಯ ಸಂಭ್ರಮದಲ್ಲಿ ಇಡೀ ಸೀತಾರಾಮ ತಂಡ ಖುಷಿಯಾಗಿದ್ದನ್ನು ನೋಡಲಾಗಿದೆ.  ರಾಮ ಸೀತಾಳ ಹತ್ತಿರ ಆಗುವುದಕ್ಕೆ ಟ್ರೈ ಮಾಡುತ್ತಿದ್ದರೂ, ಸೀತಾ ಮಾತ್ರ ಅವನನ್ನು ದೂರ ತಳ್ಳುತ್ತಲೇ ಇದ್ದಾಳೆ.

ಸೀರಿಯಲ್​ ಕಥೆ ಏನೇ ಇರಲಿ. ಈ ಸಂಕ್ರಾಂತಿ ವಿಶೇಷ ಮೇಕಿಂಗ್​ ಮಾತ್ರ ಸೀತಾ-ರಾಮ ಸೇರಿ ಎಲ್ಲರೂ ಎಂಜಾಯ್​ ಮಾಡಿದ್ದಾರೆ. ಇದರ ಶೂಟಿಂಗ್​ ಹೇಗಿತ್ತು ಎಂಬ ಬಗ್ಗೆ  ನಟಿ ವೈಷ್ಣವಿ ಆರ್​.ಬಿ.ಗೌಡ ಅರ್ಥಾತ್​  ಸೀತಾರಾಮ ಸೀರಿಯಲ್​ ಸೀತಾ ಶೇರ್​ ಮಾಡಿಕೊಂಡಿದ್ದಾರೆ. ವೈಷ್ಣವಿ ಅವರು ಇದಾಗಲೇ ತಮ್ಮ ಸೋಷಿಯಲ್​ ಮೀಡಿಯಾಗಳಲ್ಲಿ ಹಲವಾರು ವಿಷಯಗಳನ್ನು ಶೇರ್​ ಮಾಡಿಕೊಳ್ಳುತ್ತಿರುತ್ತಾರೆ. ತಮ್ಮ ಯೂಟ್ಯೂಬ್​ ಚಾನೆಲ್​  ಮೂಲಕ  ಸಂಕ್ರಾಂತಿ ಸಂಭ್ರಮದ ಶೂಟಿಂಗ್​ ಕುರಿತು ಮಾಹಿತಿ ನೀಡಿದ್ದಾರೆ.  ಲೈಫ್​ನಲ್ಲಿ ಇದೇಮೊದಲ ಬಾರಿ ಗಾಳಿಪಟ ಹಾರಿಸುತ್ತಿರುವ ಬಗ್ಗೆಯೂ ವೈಷ್ಣವಿ ಹೇಳಿಕೊಂಡಿದ್ದಾರೆ. ಈ ಸೀರಿಯಲ್​ನಲ್ಲಿ ಸೀತಾ ರಾಮ ಇಬ್ಬರೂ ಗಾಳಿ ಪಟ ಹಾರಿಸುವ ದೃಶ್ಯವಿದೆ. ಹಾಗೆ ಹಾರಿಸುವ ಪೂರ್ವದಲ್ಲಿ ತಯಾರಿ ಹೇಗಿತ್ತು ಎಂಬ ಬಗ್ಗೆ ವೈಷ್ಣವಿ ತಿಳಿಸಿಕೊಟ್ಟಿದ್ದಾರೆ. ಈ ವಿಡಿಯೋಗೆ ಹಲವಾರು ಮಂದಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಕೊನೆಗೂ ಒಂದಾದ ಅಮ್ಮ-ಮಗಳು! ಆದರೆ... ಅತ್ತೆ ಸರಿನಾ, ಸೊಸೆ ಸರಿನಾ? ಫ್ಯಾನ್ಸ್​ ಫುಲ್​ ಕನ್​ಫ್ಯೂಸ್​

ಈ ಹಿಂದೆ ವೈಷ್ಣವಿ ಅವರು, ಸೀತಾರಾಮ ಸೀರಿಯಲ್​ ಶೂಟಿಂಗ್​ ಮನೆಯ ಪರಿಚಯ ಮಾಡಿಸಿದ್ದರು. ಪ್ರತಿಯೊಬ್ಬ ನಟ-ನಟಿಯರು ಅವರ ಮನೆಗಿಂತಲೂ ಹೆಚ್ಚಾಗಿ ಶೂಟಿಂಗ್​ ಸ್ಪಾಟ್​ನಲ್ಲಿಯೇ ಇರುತ್ತಾರೆ. ಸಿನಿಮಾಗಳಲ್ಲಿ ಈ ಸ್ಪಾಟ್​ ವಿಭಿನ್ನ ಪ್ರದೇಶಗಳಲ್ಲಿ ನಡೆದರೆ, ಸಾಮಾನ್ಯವಾಗಿ ಸೀರಿಯಲ್​ಗಳಲ್ಲಿ ಒಂದೇ ಕಡೆ ಸೆಟ್​ ಮಾಡಿ ಅಲ್ಲಿಯೇ ಸಂಪೂರ್ಣ ಚಿತ್ರೀಕರಣ ನಡೆಯುತ್ತದೆ. ಇದೇ ಕಾರಣಕ್ಕೆ ಸಂಪೂರ್ಣ ವಾತಾವರಣವನ್ನೇ ಬದಲಾಯಿಸಲಾಗುತ್ತದೆ. ಒಂದು ಸೀರಿಯಲ್​ ಐದಾರು ವರ್ಷಗಳು ನಡೆಯುವ ಕಾರಣ, ಇಲ್ಲಿ ಸೆಟ್​ ಅತ್ಯಂತ ಪ್ರಾಮುಖ್ಯತೆ ವಹಿಸುತ್ತದೆ. ಬೆಂಗಳೂರಿನಂಥ ನಗರಗಳಲ್ಲಿ  ಶೂಟಿಂಗ್​ ಮನೆಗಳನ್ನು ಕಟ್ಟಿ ಅದನ್ನು ಬಾಡಿಗೆಗೆ ಕೊಡುವುದು ಇದೆ. ಇನ್ನು ಕೆಲವು ಸೀರಿಯಲ್​ಗಳಲ್ಲಿ ತಮಗೆ ಬೇಕಾದಂತೆ ಹಳ್ಳಿಯ ವಾತಾವರಣ ನಿರ್ಮಾಣ ಮಾಡಿಕೊಂಡೋ ಅಥವಾ ಓಣಿ, ವಠಾರದ ರೀತಿಯಲ್ಲಿ ನೈಜ ಚಿತ್ರಣ ಬರುವಂತೆ ಶೂಟಿಂಗ್​  ಮನೆಗಳನ್ನು ನಿರ್ಮಿಸಿಕೊಂಡಿರುತ್ತಾರೆ ಎನ್ನುತ್ತಲೇ ಅದರ ಪರಿಚಯ ಮಾಡಿಸಿದ್ದರು. 


ಸಾಮಾನ್ಯವಾಗಿ ಹಳ್ಳಿಗಳಲ್ಲಿ ಇರುವಂತೆ ಗೋಡೆಗಳ ಮೇಲೆ ಪೋಸ್ಟರ್​ಗಳನ್ನು ಹಾಕಲಾಗುತ್ತದೆ. ಕಾಂಪೌಂಡ್​ ಅಂತೆ ತೋರುವ ಗೋಡೆಗಳನ್ನೂ ಹಾಕಲಾಗುತ್ತದೆ. ಆದರೆ ಅಸಲಿಗೆ ಅದು ಗೋಡೆಗಳಲ್ಲ, ಬದಲಿಗೆ ಅದನ್ನೇ ಹೋಲುವ ರೀತಿಯಲ್ಲಿ ಕಟ್ಟಿಗೆಗಳ ಮೇಲೆ  ಕ್ರೇಪ್ ವರ್ಕ್​​ ಮಾಡಿರುತ್ತಾರೆ. ಇದು ಸೆಟ್​ ಆಗಿರುವ ಕಾರಣ,  ನಿಜವಾದ ಗೋಡೆ ಅಂತ ಅನಿಸುತ್ತದೆ. ಸಾಮಾನ್ಯವಾಗಿ  ಗೋಡೆಯನ್ನು ಯಾರೂ ಏರಬಾರದು ಎಂದು  ಗಾಜು ಹಾಕಿಡಲಾಗುತ್ತದೆ. ಅದೇ ನೈಜತೆ ಕಾಣಿಸಲು ಸೀತಾರಾಮ ಸೀರಿಯಲ್​ನ ನಕಲಿ ಗೋಡೆಗಳ ಮೇಲೂ ಗಾಜು ಹಾಕಲಾಗಿದೆ ಎಂಬ ಬಗ್ಗೆ ತೋರಿಸಿಕೊಟ್ಟಿದ್ದರು ವೈಷ್ಣವಿ.

ಮಾನನಷ್ಟ ಮೊಕದ್ದಮೆ ಕೇಸ್​ ಬೆನ್ನಲ್ಲೇ, ಬಿಗ್ ಬಾಸ್ ಜೈಲು ಪಾಲಾದ ಡ್ರೋನ್​ ಪ್ರತಾಪ್​! ಫ್ಯಾನ್ಸ್​ ಶಾಕ್​...

Latest Videos
Follow Us:
Download App:
  • android
  • ios