Asianet Suvarna News Asianet Suvarna News

ಮಾನನಷ್ಟ ಮೊಕದ್ದಮೆ ಕೇಸ್​ ಬೆನ್ನಲ್ಲೇ, ಬಿಗ್ ಬಾಸ್ ಜೈಲು ಪಾಲಾದ ಡ್ರೋನ್​ ಪ್ರತಾಪ್​! ಫ್ಯಾನ್ಸ್​ ಶಾಕ್​...

ಮಾನನಷ್ಟ ಮೊಕದ್ದಮೆ ಎದುರಿಸುತ್ತಿರುವ ಬಿಗ್​ಬಾಸ್​ ಡ್ರೋನ್​ ಪ್ರತಾಪ್​ಗೆ ಬಿಗ್​ಬಾಸ್​  ಮನೆಯಲ್ಲಿ ಇನ್ನೊಂದು ಶಾಕ್​ ಎದುರಾಗಿದೆ. ಏನದು?
 

Another shock for Drone pratap Bigg Boss seasons last shoddy Rank to him suc
Author
First Published Jan 19, 2024, 3:49 PM IST

ಕೆಲ ವರ್ಷಗಳ ಹಿಂದೆ ಭಾರಿ ಸುದ್ದಿಯಲ್ಲಿದ್ದ ಡ್ರೋನ್​ ಪ್ರತಾಪ್​ ಇದೀಗ ಮತ್ತೊಮ್ಮೆ ಸದ್ದು ಮಾಡುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ ಈ ಯುವಕನ ಹೆಸರು ಹೇಳಿಕೊಂಡು ತಮ್ಮ ಮನೆಯ ಮಕ್ಕಳನ್ನು ಬೈದವರು ಅದೆಷ್ಟೋ ಮಂದಿ. ಇವನನ್ನು ನೋಡಿ ಸ್ವಲ್ಪನಾದರೂ ಬುದ್ಧಿ ಕಲಿ ಎಂದು ಹೇಳಿಸಿಕೊಂಡ ಮಕ್ಕಳು ಇನ್ನೆಷ್ಟೋ. ಹೋದಲ್ಲಿ, ಬಂದಲ್ಲಿ ಈ ಯುವಕನ ಮಾತೇ ಮಾತು. ಪ್ರತಾಪ್​ ಅವರ ಮಾತಿನ ಪ್ರತಾಪಕ್ಕೆ ಮೋಡಿಯಾಗದವೇ ಇಲ್ಲ. ವಿಭಿನ್ನ ಕ್ಷೇತ್ರಗಳ ನುರಿತರು, ಮೇಧಾವಿಗಳು ಎನಿಸಿಕೊಂಡವರೂ ಪ್ರತಾಪ್​ ಮಾತಿಗೆ ತಲೆದೂಗಿದರು. ಎಷ್ಟೋ ವೇದಿಕೆಗಳಲ್ಲಿ ಇವರು ಮಾಡುತ್ತಿದ್ದ ಪ್ರೇರಣಾತ್ಮಕ ಭಾಷಣಕ್ಕೆ ತಲೆದೂಗಿದರು. ಕೇಳುವ ಪ್ರಶ್ನೆಗಳಿಗೆ ಅಷ್ಟೇ ಚೆನ್ನಾಗಿ ಉತ್ತರಿಸುವ ಮೇಧಾವಿ ಎನಿಸಿಕೊಂಡವರು ಡ್ರೋಣ್​. ಡ್ರೋನ್​ ತಯಾರಿಸಲು ತಾನು ಪಟ್ಟಿರುವ ಕಷ್ಟಗಳನ್ನು, ಬೀದಿ ಬದಿಯಲ್ಲಿ ಮಲಗಿ ತುತ್ತು ಅನ್ನಕ್ಕಾಗಿ ಪರದಾಡಿದ ದಿನಗಳನ್ನು ಕಣ್ಣಿಗೆ ಕಟ್ಟುವಂತೆ ಹೇಳುತ್ತಾ ಕೇಳುಗರ ಕಣ್ಣಲ್ಲಿ ನೀರು ತರಿಸಿದ್ದ ಪ್ರತಾಪ್​ ನಿಜ ಬಣ್ಣ ಬದಲಾಗಲು ಹಲವಾರು ವರ್ಷಗಳೇ ಬೇಕಾದವು. ಕೊನೆಗೂ ಇಷ್ಟು ವರ್ಷ ಹೇಳಿದ್ದು, ಮಾತನಾಡಿದ್ದು, ತಮ್ಮ ಬಗ್ಗೆ ಹೇಳಿಕೊಂಡಿದ್ದು, ಡ್ರೋನ್​ ತಯಾರಿಕೆ ಕುರಿತು ವಿವರಣೆ ನೀಡಿದ್ದು ಎಲ್ಲವೂ ಹಸಿಹಸಿ ಸುಳ್ಳು ಎಂಬ ಆರೋಪದ ಮೇಲೆ  ಹಲವು ಕೇಸ್​ಗಳು ದಾಖಲಾದವು. 

ಸ್ವಲ್ಪ ಸಮಯ ತಲೆ ಮರೆಸಿಕೊಂಡು ಮತ್ತೆ ಈಗ ಬಿಗ್​ಬಾಸ್​​ನಲ್ಲಿ ತಮ್ಮ ನಡವಳಿಕೆ, ಮಾತಿನ ವೈಖರಿ, ಕಾರ್ಯ ವಿಧಾನಗಳಿಂದ ಭಾರಿ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಇವರೀಗ ಬಿಗ್​ಬಾಸ್​ನ ಇತರ ಸ್ಪರ್ಧಿಗಳಿಗೂ ತೀವ್ರ ಪೈಪೋಟಿ ನಡೆಸುವಷ್ಟು ಬೆಳೆದಿದ್ದಾರೆ. ಇವರೇ ಗೆಲ್ಲಬೇಕು ಎಂದುಕೊಂಡು ಹಲವರು ಸೋಷಿಯಲ್​ ಮೀಡಿಯಾಗಳಲ್ಲಿಯೂ ಅಭಿಯಾನವನ್ನೇ ನಡೆಸುತ್ತಿದ್ದಾರೆ. ಇದರ ನಡುವೆಯೇ, ಡ್ರೋನ್ ಪ್ರತಾಪ್​ಗೆ ಮತ್ತೊಮ್ಮೆ ತಮ್ಮ ಮಾತು, ಅನುಕಂಪ ಗಿಟ್ಟಿಸಿಕೊಳ್ಳುವ ಪರಿಯಿಂದಲೇ ಶಾಕ್​ ಎದುರಾಗಿದೆ.  ಕೆಲ ದಿನಗಳ ಹಿಂದೆ ತಮ್ಮ ನೋವಿನ ದಿನಗಳ ಬಗ್ಗೆ ಮಾತನಾಡಿದ್ದ ಪ್ರತಾಪ್​,  ಕೋವಿಡ್​ ಸಮಯದಲ್ಲಿ ತಮಗೆ ಅಧಿಕಾರಿಗಳು ಹಿಂಸೆ ಕೊಟ್ಟಿರುವುದಾಗಿ ಹೇಳಿದ್ದರು.  ಕೋವಿಡ್ ಸೋಂಕು ತಗುಲಿತ್ತು. ಕ್ವಾರಂಟೈನ್ ಮುಗಿಸಿ ಚಿಕ್ಕಮಗಳೂರಿಗೆ ಹೋದೆ.  ಆದರೆ ನನ್ನ ಮೇಲೆ ಪ್ರಕರಣ ದಾಖಲು ಮಾಡಲಾಯ್ತು. ಕೋವಿಡ್ ನಿಯಮ ಉಲ್ಲಂಘಿಸಿದ್ದಾರೆ ಎಂದು  ಚಿತ್ರಹಿಂಸೆ ಕೊಟ್ಟರು. ತಲೆ-ತಲೆಗೆ ಹೊಡೆದರು, ಕೆಟ್ಟದಾಗಿ ಮಾತನಾಡಿದರು ಎಂದು ಪ್ರತಾಪ್​ ಹೇಳಿದ್ದರು.  ಅದೇ ಸಮಯದಲ್ಲಿ ಅಪ್ಪ-ಅಮ್ಮನ ಬಳಿ ನನ್ನ ಬಗ್ಗೆ ಇಲ್ಲ-ಸಲ್ಲದ ದೂರುಗಳನ್ನು ಹೇಳಿದರು. ವಿಷವಿಟ್ಟು ಸಾಯಿಸಿ ಎಂದೆಲ್ಲ ಐಡಿಯಾ ಕೊಟ್ಟರು ಎಂದು ಹೇಳಿ ಬಿಕ್ಕಿ ಬಿಕ್ಕಿ ಅತ್ತಿದ್ದರು.

ಅನಿಮಲ್​ ನಿರ್ದೇಶಕ ಹೊಟ್ಟೆಗೆ ಏನ್​ ತಿಂತಾರೋ ಗೊತ್ತಿಲ್ಲ: ಹಸಿಬಿಸಿ ದೃಶ್ಯದ ಬಳಿಕ ರಶ್ಮಿಕಾ ಹೇಳಿದ್ದೇನು?  

ಇದು ಭಾರಿ ವೈರಲ್​  ಆಗುತ್ತಲೇ, ಇದೀಗ ಅವರ ವಿರುದ್ಧ ಕೇಸ್​ ದಾಖಲಿಸಿದಾಗಿದೆ. 50 ಲಕ್ಷ ರೂಪಾಯಿಗೆ ಮಾನನಷ್ಟ ಮೊಕದ್ದಮೆ ಹಾಕಲಾಗಿದೆ. ಬಿಬಿಎಂಪಿ ಅಧಿಕಾರಿಗಳ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಲಾಗಿದೆ, ಅನುಕಂಪ ಗಿಟ್ಟಿಸಿಕೊಳ್ಳಲು ಹಸಿಹಿಸಿ ಸುಳ್ಳು ಹೇಳಿದ್ದಾರೆ ಎಂದು ಈ ಕೇಸ್​ ದಾಖಲಾಗಿದೆ. ಇದೀಗ ಇದರ ನಡುವೆಯೇ ಬಿಗ್​ಬಾಸ್​ ಮನೆಯಲ್ಲಿ ಅವರಿಗೆ ಇನ್ನೊಂದು ಶಾಕ್​ ಎದುರಾಗಿದೆ.

ಅದೇನೆಂದರೆ, ಬಿಗ್ ಬಾಸ್ ಸೀಸನ್ 10ರ ಕೊನೆಯ ಕಳಪೆ ಪಟ್ಟ ಪ್ರತಾಪ್ ಪಾಲಿಗೆ ಬಂದಿದೆ. ಇವರ ವಿರುದ್ಧ ಇತರ ಸ್ಪರ್ಧಿಗಳು ತಕರಾರು ತೆಗೆದಿದ್ದರಿಂದ ಕಳಪೆ ಎನ್ನುವ ಹಣೆಪಟ್ಟಿ ಪ್ರತಾಪ್​ ಪಾಲಿಗೆ ಬಂದಿದೆ. ಇನ್ನೇನು ಫಿನಾಲೆ ಹತ್ತಿರ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಇದು ಕೊನೆಯ ಕಳಪೆ ಪಟ್ಟ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅವರು ಜೈಲು ಸೇರಿದ್ದಾರೆ.  ಈ ಹಿಂದೆ ಕೂಡ ಒಮ್ಮೆ ಪ್ರತಾಪ್​ಗೆ ಕಳಪೆ ಪಟ್ಟ ಬಂದಿತ್ತು. ಎಂಟನೇ ವಾರ ಕಳಪೆ ಪಟ್ಟ ಡ್ರೋನ್‌ ಪ್ರತಾಪ್‌ ಪಾಲಾಗಿತ್ತು. ಆಟದ ವೇಳೆ ಸಂಯಮ ಕಳೆದುಕೊಂಡು ಮಾತನಾಡುತ್ತಾರೆ ಎಂಬ ಕಾರಣ ಕೊಟ್ಟು ಕಾರ್ತಿಕ್ ಅವರನ್ನ ತಂಡದಿಂದ ಹೊರಗೆ ತಳ್ಳಿದ್ದಕ್ಕೆ, ಇಡೀ ತಂಡವನ್ನ ಹೀನಾಯವಾಗಿ ಸೋಲಿಸಿದ್ದಕ್ಕೆ  ಇತರ ಸ್ಪರ್ಧಿಗಳು ‘ಕಳಪೆ’ ಪಟ್ಟವನ್ನು ಡ್ರೋನ್ ಪ್ರತಾಪ್‌ಗೆ ನೀಡಿದ್ದರು. ಆದರೆ ಇದನ್ನು  ಡ್ರೋನ್ ಪ್ರತಾಪ್ ಒಪ್ಪಿಕೊಂಡಿರಲಿಲ್ಲ. ತಮ್ಮ ನಿರ್ಧಾರ ಸರಿಯಾಗಿಯೇ ಇತ್ತು ಅಂತ ವಾದಿಸಿದರು. ಕೊನೆಗೆ ಬೇರೆ ದಾರಿ ಇಲ್ಲದೆ ಜೈಲು ಸೇರಿದ್ದರು. ಅದೇ ಈಗ ಮತ್ತೆ ಪುನರಾವರ್ತನೆ ಆಗಿದೆ. ಮುಂದೇನು ಎನ್ನುವುದನ್ನು ಕಾಲವೇ ನಿರ್ಧರಿಸಬೇಕಿದೆ. 

ಕೊನೆಗೂ ಒಂದಾದ ಅಮ್ಮ-ಮಗಳು! ಆದರೆ... ಅತ್ತೆ ಸರಿನಾ, ಸೊಸೆ ಸರಿನಾ? ಫ್ಯಾನ್ಸ್​ ಫುಲ್​ ಕನ್​ಫ್ಯೂಸ್​

 

Follow Us:
Download App:
  • android
  • ios