Asianet Suvarna News Asianet Suvarna News

ಕೊನೆಗೂ ಒಂದಾದ ಅಮ್ಮ-ಮಗಳು! ಆದರೆ... ಅತ್ತೆ ಸರಿನಾ, ಸೊಸೆ ಸರಿನಾ? ಫ್ಯಾನ್ಸ್​ ಫುಲ್​ ಕನ್​ಫ್ಯೂಸ್​

ಭಾಗ್ಯಲಕ್ಷ್ಮಿ ಸೀರಿಯಲ್​ ಕುತೂಹಲ ಘಟ್ಟಕ್ಕೆ ತಲುಪಿದ್ದು ಅತ್ತೆ-ಸೊಸೆಯಂದಿರ ನಡುವೆ ಯಾರು ಸರಿ ಎನ್ನುವುದೇ ಈಗ ಕನ್​ಫ್ಯೂಷನ್​ ಆಗಿದೆ.
 

Bhagyalakshmi serial has reached a curious stage fans in dilama now suc
Author
First Published Jan 19, 2024, 2:19 PM IST

ತಾಂಡವ್​ ಪತ್ನಿ ಭಾಗ್ಯಲಕ್ಷ್ಮಿಗೆ ಡಿವೋರ್ಸ್ ಕೊಡಲು ಮುಂದಾಗಿದ್ದಾನೆ. ಇತ್ತ ಮನೆಯ ಖರ್ಚನ್ನು ನಿಭಾಯಿಸಲು ಭಾಗ್ಯ ಟೈಲರಿಂಗ್​  ಮಾಡುವ ಪ್ಲ್ಯಾನ್​ ಮಾಡಿ ಹಳೆಯ ಹೊಲಿಗೆ ಮಷಿನ್​ ಹೊರಕ್ಕೆ ತೆಗೆದಿದ್ದಾಳೆ. ಮಗಳು ತನ್ವಿಗೆ ಈಗ ಅಮ್ಮನ ಪ್ರೀತಿಯ ಅರಿವಾಗಿದೆ. ಗರ್ಲ್​ಫ್ರೆಂಡ್​ ಮಾತು ಕೇಳಿ ತನ್ನನ್ನೇ ಹೊರಹಾಕಿರೋ ಅಪ್ಪನ ಮೇಲೆ ಆಕೆಗೆ ತಾತ್ಸಾರ ಬೆಳೆದಿದೆ. ಅಮ್ಮ ಹೆಚ್ಚು ಕಲಿತಿಲ್ಲ, ಅವಳೊಬ್ಬಳು ಹಳ್ಳಿಯ ಗುಗ್ಗು ಎಂದೆಲ್ಲಾ ಹಂಗಿಸುತ್ತಲೇ ಅಮ್ಮನ ಮೇಲೆ ತಾತ್ಸಾರ ತೋರುತ್ತಿದ್ದ ತನ್ವಿಗೆ ಅಮ್ಮನ ಬೆಲೆ ಈಗ ಗೊತ್ತಾಗಿದೆ. ಟೈಲರಿಂಗ್​ ಅಂಗಡಿಗೆ ಏನು ಹೆಸರು ಇಡಬೇಕು ಎಂದು ಅಮ್ಮನಿಗೆ ಅವಳೇ ಹೇಳಿದ್ದಾಳೆ. ಮಗಳಲ್ಲಿ ಆಗಿರುವ ಬದಲಾವಣೆ ಕಂಡು ಭಾಗ್ಯಳಿಗೆ ಸಿಕ್ಕಾಪಟ್ಟೆ ಖುಷಿಯಾಗಿದೆ. ಭಾಗ್ಯ ಮಾತ್ರವಲ್ಲದೇ ತನ್ವಿಯ ಬದಲಾವಣೆ ಕಂಡು ನೆಟ್ಟಿಗರೂ ಸಕತ್​ ಖುಷಿ ಪಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಎನ್ನುತ್ತಿದ್ದಾರೆ.

ಇದೇನೋ ಸರಿ. ಅಮ್ಮ-ಮಗಳು ಒಂದಾಗಿದ್ದು ಎಲ್ಲಿಲ್ಲದ ಸಂತೋಷವೇ. ಆದರೆ ಕನ್​ಫ್ಯೂಷನ್​ ಶುರುವಾಗಿರುವುದು ಇನ್ನೊಂದೆಡೆ! ಅದೇನೆಂದರೆ ಹೊಲಿಗೆ ಮಾಡಿ ಜೀವನ ಸಾಗಿಸುವ ಭಾಗ್ಯಳಿಗೆ ಈಗ ಶಾಲೆ ಬಿಡುವ ಅನಿವಾರ್ಯತೆ. ತಾನು ಶಾಲೆಗೆ ಹೋಗುವುದಿಲ್ಲ ಎಂದಿದ್ದಾಳೆ. ಇದನ್ನು ಕೇಳ ಮಗ ಗುಂಡನಿಗೆ ಶಾಕ್​ ಆಗಿದೆ. ಹೋಗಿ ಅಜ್ಜಿಯ ಬಳಿ ವಿಷಯ ತಿಳಿಸಿದ್ದಾನೆ. ಭಾಗ್ಯಳನ್ನು ಶಾಲೆಗೆ ಸೇರಿಸಲು ಇನ್ನಿಲ್ಲದ ಮಾತು ಕೇಳಿ, ಎಲ್ಲರನ್ನೂ ಎದುರು ಹಾಕಿಕೊಂಡು, ಆಕಾಶ-ಭೂಮಿಯನ್ನು ಒಂದು ಮಾಡಿದ್ದ ಅತ್ತೆ ಕುಸುಮಳಿಗೆ ಇದು ಸಹಿಸಲು ಸಾಧ್ಯವಾದೀತೆ? ಭಾಗ್ಯ ಶಾಲೆ ಬಿಡುವ ಯೋಚನೆ ಮಾಡಿದ್ದನ್ನು ಕೇಳಿ ಇನ್ನಿಲ್ಲದ ಕೋಪ ಬಂದಿದೆ ಅತ್ತೆ ಕುಸುಮಾಳಿಗೆ.

ಆಸ್ಪತ್ರೆ ಸೇರಿದ್ದ ಉರ್ಫಿಗೆ ಇದೇನಾಯ್ತು? ಲಕ್ಷಗಟ್ಟಲೆ ಲೈಕ್ಸ್ ಪಡೆದ ಈ ಹೊಸ ಅವತಾರದಲ್ಲಿ ಅಂಥದ್ದೇನಿದೆ?

ಇನ್ನೊಬ್ಬಳ ಹಿಂದೆ ಹೋಗಿ, ಖುದ್ದು ಪತ್ನಿ, ಮಕ್ಕಳು, ಅಪ್ಪ-ಅಮ್ಮನನ್ನೇ ದೂರ ಮಾಡಿ ಮಗ ಮಾಡಿದ ತಪ್ಪಿಗೆ ತಾನೇ ಸಂಸಾರವನ್ನು ನಿಭಾಯಿಸುತ್ತೇನೆ ಎಂದು ಚಾಲೆಂಜ್​ ಹಾಕಿರುವ ಅತ್ತೆಗೆ ಭಾಗ್ಯ ಟೈಲರಿಂಗ್​  ಮಾಡುವ ಸಲುವಾಗಿ ಶಾಲೆಗೆ ಹೋಗುತ್ತಿಲ್ಲ ಎನ್ನುವುದನ್ನು ಕೇಳಿ ತಲೆ ತಿರುಗಿದಂತಾಗಿದೆ. ಸೊಸೆಯನ್ನು ಕರೆದು ಸಿಕ್ಕಾಪಟ್ಟೆ ಬೈದಿದ್ದಾಳೆ. ಮನೆಯನ್ನು ನಿಭಾಯಿಸಬೇಕು ಎಂದರೆ ಟೈಲರಿಂಗ್​ ಮಾಡಬೇಕು ಎಂದಿದ್ದಾಳೆ ಭಾಗ್ಯ. ಆದರೆ ಶಾಲೆಯನ್ನು ಬಿಟ್ಟು ಇದನ್ನು ಮಾಡುವುದಕ್ಕೆ ಸಿಕ್ಕಾಪಟ್ಟೆ ವಿರೋಧ ವ್ಯಕ್ತಪಡಿಸಿದ ಅತ್ತೆ ಕುಸುಮಾ, ಭಾಗ್ಯಳನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ. ಸಂಸಾರದ ಜವಾಬ್ದಾರಿ ನಾನು ನೋಡಿಕೊಳ್ಳುತ್ತೇನೆ, ನೀನು ಶಾಲೆಗೆ ಹೋಗು ಎಂದಿದ್ದಾಳೆ. ಆದರೆ ಸಂಸಾರ ಬೀದಿಪಾಲಾಗುತ್ತಿರುವ ಹೊತ್ತಿನಲ್ಲಿ ಭಾಗ್ಯ ಶಾಲೆಗೆ ಹೋಗಲು ಸಾಧ್ಯವಾದೀತೆ?

ಇದೀಗ ಅತ್ತೆ ಮತ್ತು ಸೊಸೆಯ ಈ ಮಾತಿನ ನಡುವೆ ಸರಿಯಾರು ಎಂಬ ಕನ್​ಫ್ಯೂಷನ್​ನಲ್ಲಿದ್ದಾರೆ ಭಾಗ್ಯಲಕ್ಷ್ಮಿ ಸೀರಿಯಲ್​ ಫ್ಯಾನ್ಸ್​. ಒಂದು ಕಡೆ ಯೋಚನೆ ಮಾಡಿದರೆ ಇಬ್ಬರೂ ಸರಿ, ಇನ್ನೊಂದು ರೀತಿಯಲ್ಲಿ ಯೋಚನೆ ಮಾಡಿದರೆ ಇಬ್ಬರೂ ತಪ್ಪು. ಸರಿ-ತಪ್ಪುಗಳ ನಡುವೆ ಸಿಲುಕಿಕೊಂಡಿರೋ ಅಭಿಮಾನಿಗಳಿಗೆ ಮುಂದಿನ ಸಂಚಿಕೆಗಳಲ್ಲಿ ಉತ್ತರ ಸಿಗಲಿದೆ.  

ಅನ್ನಪೂರ್ಣಿ 'ಫುಡ್​ ಜಿಹಾದ್'​: ಜೈ ಶ್ರೀ ರಾಮ್​ ಎನ್ನುತ್ತಲೇ ಬಹಿರಂಗ ಕ್ಷಮಾಪಣಾ ಪತ್ರ ಬರೆದ ನಯನತಾರಾ..

Follow Us:
Download App:
  • android
  • ios