ಗಂಡ ಗುಟ್ಟಾಗಿ ಇನ್ನೊಂದು ಮದ್ವೆಯಾದ್ರೆ ಪತ್ನಿಯಾದವಳಿಗೆ ಮನೆ ಮರ್ಯಾದೆ ಮುಖ್ಯನಾ ಅಥ್ವಾ..?
ಗಂಡ ಇನ್ನೊಂದು ಮದುವೆಯಾಗಿ ಆಕೆ ಕೂಡ ಅದೇ ಮನೆಯಲ್ಲಿರುವ ವಿಷಯ ತಿಳಿದಾಗ, ಮನೆ ಮರ್ಯಾದೆ ಮುಖ್ಯವಾಗತ್ತಾ ಅಥವಾ ಸವತಿಯನ್ನು ಮನೆಯಿಂದ ಹೊರಕ್ಕೆ ಹಾಕುವುದಾ?
ಸುಂದರ ಪತ್ನಿ, ಬೆಳೆದು ನಿಂತಿರೋ ಮಗಳು ಇದ್ದರೂ ಲಕ್ಷ್ಮಣ ಗುಟ್ಟಾಗಿ ಇನ್ನೊಂದು ಮದ್ವೆಯಾಗಿದ್ದು, ಓರ್ವ ಮಗನೂ ಇದ್ದಾನೆ. ಇಷ್ಟು ವರ್ಷ ಗುಟ್ಟಾಗಿ ನಡೆಯುತ್ತಿದ್ದ ಈ ಕಳ್ಳಾಟ ಕೊನೆಗೂ ಬಯಲಾಗಿದೆ. ಇನ್ನೊಂದು ಮನೆಯಲ್ಲಿ ಮದ್ವೆಯಾಗಿದ್ರೂ ತಾನು ಮಾಡಿದ ತಪ್ಪಿಗೆ ಒಂಟಿಯಾಗಿ ಮಗನ ಜೊತೆ ಬಾಳುತ್ತಿದ್ದ ಪದ್ಮಾ, ಗಂಡನ ಮನೆಯನ್ನೇ ಸೇರಿಕೊಂಡಾಗಿದೆ. ಆಕೆಗೆ ಅನ್ಯಾಯ ಆಗಬಾರದು ಹಾಗೂ ಆಕೆಯ ಒಳ್ಳೆತನ ನೋಡಿದ ಸತ್ಯಳೇ ತನ್ನ ಮಾವನ ಆಸೆಯಂತೆ ಪದ್ಮ ಮತ್ತು ಮಗನನ್ನು ಮನೆಗೆ ಕರೆದುಕೊಂಡು ಬಂದಿದ್ದಾಳೆ. ಒಬ್ಬೊಬ್ಬರಿಗೇ ಸತ್ಯದ ಅರಿವಾಗಿದೆ. ಆಕೆಯನ್ನು ಮನೆಯಿಂದ ಹೊರಕ್ಕೆ ಹಾಕಲು ಸತ್ಯಳ ಅತ್ತೆ ಶತಾಯುಗತಾಯು ಪ್ರಯತ್ನ ಮಾಡುತ್ತಿದ್ದಾಳೆ. ಕೋಟೆ ಮನೆಯ ಮಾನ ಹೋಗುತ್ತದೆ, ಹಾಗೆ ಮಾಡಬಾರದು ಎಂದ ಸೊಸೆ ಸತ್ಯ ಅವಳನ್ನು ಅಲ್ಲಿಯೇ ಉಳಿಸಿಕೊಳ್ಳುವ ಸರ್ವ ಪ್ರಯತ್ನ ಮಾಡುತ್ತಿದ್ದಾಳೆ.
ಇದೇ ವಿಷಯವಾಗಿ ಅತ್ತೆ ಮತ್ತು ಸೊಸೆಯ ನಡುವೆ ಭಾರಿ ಕದನವೇ ನಡೆದುಹೋಗಿದೆ. ಎಲ್ಲರಿಗೂ ಲಕ್ಷ್ಮಣನ ಈ ಎರಡನೆಯ ಸಂಬಂಧದ ಕುರಿತು ತಿಳಿದಿದ್ದರೂ ಪತ್ನಿ ಊರ್ಮಿಳಿಗೆ ಮಾತ್ರ ವಿಷಯ ಗೊತ್ತೇ ಇರಲಿಲ್ಲ. ಆದರೆ ಇದೀಗ ಅದೂ ಬಯಲಾಗಿದೆ. ತನ್ನ ಗಂಡ ಗುಟ್ಟಾಗಿ ಇನ್ನೊಂದು ಮದುವೆಯಾಗಿದ್ದು, ಓರ್ವ ಮಗ ಕೂಡ ಇರುವ ವಿಷಯ ತಿಳಿದರೆ ಯಾವ ಹೆಣ್ಣು ತಾನೇ ಸುಮ್ಮನಿದ್ದಾಳು? ಯಾವ ಹೆಣ್ಣಾದರೂ ಸಹಿಸಿಕೊಳ್ಳುವ ವಿಷಯವೇ ಅದು? ಅಲ್ಲವೇ ಅಲ್ಲ. ಅದೂ ತನ್ನ ಮನೆಯಲ್ಲಿಯೇ ಇಷ್ಟು ದಿನ ಆ ಹೆಣ್ಣು ಇದ್ದರೂ, ಆಕೆಯೇ ತನ್ನ ಸವತಿ ಎನ್ನುವ ಅರಿವಿಲ್ಲದ ಊರ್ಮಿಳಾಳಿಗೆ ನೆಲವೇ ಕುಸಿದು ಹೋದ ಅನುಭವ.
ಸ್ನೇಕ್ ಶ್ಯಾಮ್, ಗೌರೀಶ್ ಅಕ್ಕಿ ಬಿಗ್ಬಾಸ್ನಿಂದ ಬೇಗ ಹೊರಬಂದದ್ದೇಕೆ? ಕೆಲವೇ ದಿನ ಇದ್ದ ಭಾಗ್ಯಶ್ರೀ ಹೇಳಿದ್ದೇನು?
ವಿಷಯ ಊರ್ಮಿಳಾಗಿಯೂ ತಿಳಿಯುತ್ತಿದ್ದಂತೆಯೇ ಮತ್ತೆ ಸತ್ಯಾಳ ಸೊಸೆ ಸೀತಾ, ಪದ್ಮಾ ಮತ್ತು ಮಗನನ್ನು ಮನೆಯಿಂದ ಹೊರಕ್ಕೆ ಹಾಕಲು ಹೊರಟಿದ್ದಾಳೆ. ಆದರೆ ಆಕೆಗೆ ಅನ್ಯಾಯ ಆಗಬಾರದು, ಅದೂ ತನ್ನ ಪತಿಯಿಂದಲೇ ಎನ್ನುವುದು ಖುದ್ದು ಊರ್ಮಿಳಾ ವಾದ ಕೂಡ. ಆದರೂ ಯಾರ ಮಾತನ್ನೂ ಕೇಳದ ಸೀತಾ ತನ್ನ ತಂಗಿ ಅಂದರೆ ಗಂಡನ ತಮ್ಮನ ಪತ್ನಿ ಊರ್ಮಿಳಾಳಿಗೆ ಅನ್ಯಾಯ ಆಗುವುದನ್ನು ಸಹಿಸಳು. ಇದೇ ಕಾರಣಕ್ಕೆ ಪದ್ಮಾಳ ಕೈಹಿಡಿದು ಮನೆಯಿಂದ ಹೊರಕ್ಕೆ ಹಾಕಲು ಹೊರಟಿದ್ದಾಳೆ.
ಆಗ ಮತ್ತೆ ಸತ್ಯ ತಡೆದು ಕೋಟೆ ಮನೆಯಿಂದ ಓರ್ವ ಹೆಣ್ಣಿಗೆ ಅನ್ಯಾಯ ಆಗಬಾರದು, ಓರ್ವ ಹೆಣ್ಣನ್ನು ಬೀದಿ ಪಾಲು ಮಾಡಿದ ಕಳಂಕ ಕೋಟೆ ಮನೆಗೆ ತಟ್ಟಬಾರದು ಎಂದು ಅತ್ತೆಯನ್ನು ತಡೆದಿದ್ದಾಳೆ. ಆದರೆ ಈ ವಿಷಯದಲ್ಲಿ ಸೀತಾ ಯಾರ ಮಾತನ್ನೂ ಕೇಳಲು ರೆಡಿ ಇಲ್ಲ. ಅಷ್ಟರಲ್ಲಿಯೇ ಊರ್ಮಿಳಾ ಬಂದು ಎಲ್ಲಾ ನಿರ್ಧಾರವನ್ನೂ ಸತ್ಯಳಿಗೆ ಬಿಟ್ಟಿದ್ದಾಳೆ. ಇಷ್ಟು ವರ್ಷ ನಾನು ನನ್ನ ಅಕ್ಕನ ಮಾತಿನ ವಿರುದ್ಧ ಹೋಗಲಿಲ್ಲ. ಆದರೆ ಈಗ ಅವಳ ಮಾತಿನ ವಿರುದ್ಧ ಹೋಗಿ ನಿರ್ಧಾರವನ್ನು ಸತ್ಯಳಿಗೆ ಬಿಟ್ಟಿದ್ದೇನೆ ಎಂದಿದ್ದಾಳೆ. ಸತ್ಯಳ ನಿರ್ಧಾರ ಬದಲಾಗುತ್ತಿಲ್ಲ. ಅವಳಿಗೆ ಅತ್ತೆ ಮನೆಯ ಮಾನ ಕಾಪಾಡುವುದೇ ಮುಖ್ಯ. ಕೋಟೆ ಮನೆಯಿಂದ ಓರ್ವ ಹೆಣ್ಣಿಗೆ ಅನ್ಯಾಯ ಆಗಬಾರದು ಎನ್ನುವುದು ಆಕೆಯ ಕಳಕಳಿ. ಆದರೆ ನಿಜವಾಗಿಯೂ ಸತ್ಯ ಮಾಡುತ್ತಿರುವುದು ಸರಿಯೆ? ಊರ್ಮಿಳಾ ಜಾಗದಲ್ಲಿ ನಿಂತು ನೋಡಿದರೆ ಪತಿಯ ಇನ್ನೋರ್ವ ಪತ್ನಿಯನ್ನೂ ಮನೆಯಲ್ಲಿಯೇ ಇಟ್ಟುಕೊಂಡು ಬದುಕಿಯಾಳೆ? ಯಾವುದು ಸರಿ, ಯಾವುದು ತಪ್ಪು? ನಿರ್ಧಾರ ವೀಕ್ಷಕರದ್ದು.
ಮಗನಿಂದಲೇ ಬಯಲಾಗುತ್ತಾ ಅಪ್ಪನ ಬಂಡವಾಳ? ಅಡಕತ್ತರಿಯಲ್ಲಿ ತಾಂಡವ್, ಸಿಕ್ಕಿಬೀಳ್ತಾಳಾ ಸುಂದ್ರಿ?