ಜೂನ್ 1 ರಿಂದ ಜೀ ಕನ್ನಡದ ಎಲ್ಲ ಸೀರಿಯಲ್‌ಗಳ ಜೊತೆಗೆ ಗಟ್ಟಿಮೇಳವೂ ತೆರೆ ಕಾಣಲಿದೆ. ಲಾಕ್‌ಡೌನ್‌ಗೂ ಮೊದಲು ಈ ಸೀರಿಯಲ್‌ ಸಖತ್‌ ಫೇಮಸ್ ಆಗಿತ್ತು. ಅದರಲ್ಲೂ ರೌಡಿ ಬೇಬಿಯಂಥಾ ಅಮೂಲ್ಯ ಪಾತ್ರದ ಮೂಲಕ ಗಮನ ಸೆಳೆದ ಹುಡುಗಿ ನಿಶಾ ಮಿಲನ. ಸದಾ ವೇದಾಂತ್‌ನನ್ನು ಜಾಡಿಸುತ್ತಾ, ಜಗಳವಾಡುತ್ತಿದ್ದ ಹುಡುಗಿಗೆ ಆತನ ಮೇಲೆ ಲವ್ ಆದ್ರೆ ಆ ಸನ್ನಿವೇಶ ಹೇಗಿರಬಹುದು, ಆಕೆಯ ಬಗ್ಗೆ ತನಗಿರೋದು ಯಾವ ಭಾವನೆ, ಅದಕ್ಕೆ ಪ್ರೀತಿ ಅಂತ ಹೆಸರಾ ಅಂತ ಗೊಂದಲದಲ್ಲಿರುವಾಗಲೇ ತನ್ನ ಫೀಲಿಂಗ್‌ಗೆ ಸ್ಪಷ್ಟ ರೂಪ ಸಿಕ್ಕಾಗ ಆ ಸೀಕ್ವೆನ್ಸ್‌ ಹೇಗೆ ಬರಬಹುದು... ನೋಡುವ ಪ್ರೇಕ್ಷಕಿಯೂ ನಾಯಕಿ ಸ್ಥಾನದಲ್ಲಿ ತನ್ನನ್ನು ಕಲ್ಪಿಸಿಕೊಂಡು ಕಲ್ಪನಾ ಲೋಕದಲ್ಲಿ ವಿಹರಿಸಬೇಕು.. ಅಂಥಾ ಅಭಿನಯ ನೀಡಿದಾಕೆ ನಿಶಾ ಮಿಲನ.

ಗಟ್ಟಿಮೇಳ ಸೀರಿಯಲ್‌ನಲ್ಲಿ ಈ ನಿಶಾಗೆ ಯಾವ ಪರಿ ಫ್ಯಾನ್ಸ್ ಇದ್ದಾರೆ ಅಂದ್ರೆ ಈಕೆಯ ದೃಶ್ಯ ಬಂದಾಗ ಎಲ್ಲಿದ್ದರೂ ಬಂದು ಟಿವಿ ಮುಂದೆ ಕೂರುವವರಿದ್ದರು. ಯಾರು ಈ ಹುಡುಗಿ ಅಂತ ನೆಟ್‌ನಲ್ಲೆಲ್ಲ ಈಕೆಗಾಗಿ ಸರ್ಚ್ ಮಾಡಿದವರಿದ್ದರು. ಆ ಕಾರಣಕ್ಕೋ ಏನೋ ಜೀ ಕನ್ನಡದ ಮತ್ತೊಂದು ಜನಪ್ರಿಯ ಸೀರಿಯಲ್ ‘ಜೊತೆ ಜೊತೆಯಲಿಗೆ ಸಡ್ಡು ಹೊಡೆಯಲಾರಂಭಿಸಿತು ಈ ಕೌಟುಂಬಿಕ ಕಥಾ ಹಂದರವುಳ್ಳ ಸೀರಿಯಲ್.

 

ಗಟ್ಟಿಮೇಳದ ಅಂಜಲಿ ಯಾರು?

ನಿಶಾ ಅವರು ಈ ಸೀರಿಯಲ್ ಗೆ ಬರೋ ಮುಂಚೆಯೂ ಟಿವಿಯಲ್ಲಿ ಕಾಣಿಸಿಕೊಂಡಿದ್ದರು. ಕಿರಿಯ ವಯಸ್ಸಿನಿಂದಲೇ ಬಹಳ ಟ್ಯಾಲೆಂಟೆಡ್ ಗರ್ಲ್ ಎನಿಸಿಕೊಂಡವರೀಕೆ. ಎಳೆಯ ವಯಸ್ಸಲ್ಲಿ ಸ್ಕೂಲ್‌ನಲ್ಲಿ ಟ್ಯಾಲೆಂಟೆಡ್‌ ಗರ್ಲ್ ಅನಿಸಿಕೊಂಡ ನಿಶಾಗೆ ಈಗ ಹತ್ತೊಂಬತ್ತರ ಹರೆಯ. ತಾನು ಆರನೇ ಕ್ಲಾಸ್‌ನಲ್ಲಿದ್ದಾಗಲೇ ಚಿಂಟು ಟಿವಿಯ ನಿರೂಪಕಿಯಾಗಿ ಕಾಣಿಸಿಕೊಂಡೆ ಅಂತ ಈಕೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಸ್ಟಾರ್ ಸುವರ್ಣದ ಸರ್ವ ಮಂಗಲ ಮಾಂಗಲ್ಯೆ ಸೀರಿಯಲ್‌ ಮೂಲಕ ಕಿರುತೆರೆಗೆ ಅಡಿಯಿಟ್ಟವರು ಈ ಚೆಲುವೆ. ಅಲ್ಲಿ ಇವರ ಪಾತ್ರ ಅಂಥಾ ಗಮನ ಸೆಳೆಯದಿದ್ದರೂ ಆ್ಯಕ್ಟಿಂಗ್‌ ನೋಡಿದವರು, ಈ ಹುಡುಗಿ ಸಖತ್ ಟ್ಯಾಲೆಂಟೆಡ್ ಆಗಿರೋ ಹಾಗಿದೆ ಅಂದುಕೊಂಡಿದ್ದು ಸುಳ್ಳಲ್ಲ. ಜೊತೆಗೆ ಅಲ್ಲಿ ಕಾಣಿಸಿಕೊಂಡಾಗ ಒಂದಿಷ್ಟು ಜನ ಕಿರುತೆರೆಯ ಅಬ್ಸರ್‌ವರ್ಸ್ ಈಕೆಯ ಪ್ರತಿಭೆಯನ್ನು ಗಮನಿಸಿದರು. ಈ ಮೂಲಕ ಈ ಹುಡುಗಿ ‘ಗಟ್ಟಿಮೇಳ’ ಸೀರಿಯಲ್‌ನ ಅಮೂಲ್ಯ ಪಾತ್ರಕ್ಕೆ ಆಯ್ಕೆಯಾದರು. ಈಗಂತೂ ಎಲ್ಲರ ಬಾಯಲ್ಲೂ ‘ಅಮ್ಮು’ ಅಂತಲೇ ಕರೆಸಿಕೊಂಡಿದ್ದಾರೆ.

 

ನಟಿಸಿ, ಗದರಿಸಿ, ಮನೋರಂಜಿಸಿದ ನಟ ಅಂಬಿ ಹುಟ್ಟಿಹಬ್ಬ ಹೇಗಿತ್ತು?

 

ಈ ಹುಡುಗಿಯ ತಂದೆ ಹೆಸರು ರಾಮಕೃಷ್ಣ ಅಂತ. ಇವರ ರಿಯಲ್‌ ಹೆಸರು ನಿಶಾ ರಾಮಕೃಷ್ಣ ಅಂತಲೇ. ಅಪ್ಪನ ಮುದ್ದಿನ ಮಗಳು ಅನ್ನೋದು ಈಕೆ ಪೋಸ್ಟ್‌ ಮಾಡಿರೋ ಫೋಟೋಗಳಿಂದಲೇ ತಿಳಿಯುತ್ತೆ. ತಮ್ಮ ಮುದ್ದಿನ ನಾಯಿ ಜೊತೆಗೆ ಸಮಯ ಕಳೆಯೋದು ಇವರಿಗಿಷ್ಟ. ನೀವು ನಾಯಿ ಪ್ರಿಯರಾಗಿದ್ದರೆ, ಆ ನಾಯಿಯನ್ನು ನೋಡಬೇಕು ಅಂತಿದ್ದರೆ ನಿಶಾ ಅವರ ಇನ್‌ಸ್ಟಾ ಪ್ರೊಫೖಲ್‌ ಚೆಕ್‌ ಮಾಡಬಹುದು. ರೌಡಿ ಲುಕ್‌ನ ಹಳ್ಳಿ ಹುಡುಗಿ ಪಾತ್ರದಲ್ಲಿ ‘ಗಟ್ಟಿಮೇಳ’ದಲ್ಲಿ ಮಿಂಚುತ್ತಿರೋ ಹುಡುಗಿ ರಿಯಲ್ ಲೖಫ್‌ನಲ್ಲಿ ಸಖತ್‌ ಮಾಡರ್ನ್ ಆಗಿದ್ದಾರೆ. ಫ್ರೆಂಡ್ಸ್‌ ಜೊತೆಗೆ ಕಾಲ ಕಳೆಯೋ ಖಯಾಲಿ ಹೆಚ್ಚಾಗಿದೆ.

ನಟನೆ ಜೊತೆಗೆ ಮಾಡೆಲಿಂಗ್‌ ನಲ್ಲೂ ಈಕೆ ಸೖ ಅನಿಸಿಕೊಂಡಿದ್ದಾರೆ. ಮಾದಕ ಉಡುಗೆಯಲ್ಲಿ ಸಖತ್ ಹಾಟ್ ಆಗಿ ಕಾಣ್ತಾರೆ. ಅರೆ, ಗಟ್ಟಿಮೇಳದಲ್ಲಿ ಬರ್ತಿದ್ದ ಪಕ್ಕದ್ಮನೆ ಹುಡುಗಿ ಈಕೆನೇನಾ ಅಂತ ಮೂಗಿನ ಮೇಲೆ ಕೖ ಇಟ್ಟುಕೊಳ್ಳಬೇಕು ಆ ಪರಿ ಮಾಡ್‌ ಆಗಿ ಸೋಷಲ್‌ ಮೀಡಿಯಾದಲ್ಲಿ ಕಾಣಿಸಿಕೊಳ್ತಿದ್ದಾರೆ.

 

ಒಂದಾನೊಂದು ಕಾಲದಲ್ಲಿ ಬಾಲಿವುಡ್ ಡಿಪ್ಪಿ ಹೇಗಿದ್ದರು ನೋಡಿ..

 

ಅಮ್ಮ ಅರ್ಥಾತ್ ನಿಶಾ ಟ್ಯಾಲೆಂಟೆಡ್ ಗರ್ಲ್ ಅನ್ನೋದರಲ್ಲಿ ಎರಡು ಮಾತಿಲ್ಲ. ಆದರೆ ಅವರ ಈ ಟ್ಯಾಲೆಂಟ್‌ ಕೇವಲ ನಟನೆ, ಮಾಡೆಲಿಂಗ್‌ ಗೆ ಅಷ್ಟೇ ಸೀಮಿತವಾಗಿಲ್ಲ. ಈಕೆಗೆ ಹಾಡು ಹಾಡೋದೂ ಗೊತ್ತು. ಡ್ಯಾನ್ಸ್‌ ಮಾಡೋದೂ ಗೊತ್ತು. ಆದರೆ ದುರದೃಷ್ಟವಶಾತ್ ಇವರ ಹಾಡು ಹಾಡೋ ಪ್ರತಿಭೆ ಬಾತ್‌ ರೂಮ್ ಗೇ ಸೀಮಿತಗೊಂಡಿದೆ. ಹಾಗಾಗಿ ತಾನೊಬ್ಬ ಬಾತ್‌ರೂಮ್‌ ಸಿಂಗರ್ ಅಂತ ಈಕೆ ಹೆಮ್ಮೆಯಿಂದ ಹೇಳಿಕೊಳ್ತಾರೆ. ಡ್ಯಾನ್ಸ್ ಮಾಡೋದೂ ಈಕೆಗೆ ಸಲೀಸು. ಶಾಸ್ತ್ರೀಯ ನೃತ್ಯ, ಕಂಟೆಂಪಪರಿ ಡ್ಯಾನ್ಸ್ ಮೂಲಕವೂ ಮತ್ತೊಂದು ಪ್ರೇಕ್ಷಕ ವಲಯವನ್ನು ಸೃಷ್ಟಿಸಿಕೊಂಡಿದ್ದಾರೆ. ಇಂಥಾ ಚೂಟಿ ಚೂಟಿ ರೌಡಿ ಬೇಬಿ ಮತ್ತೆ ಜೂನ್ 1 ರಿಂದ ನಿಮ್ಮನೆ ಟಿವಿಯಲ್ಲಿ ಬರುತ್ತಾರೆ. ಆಕೆಗೆ ಹಾಯ್ ಹೇಳಿ.
 

ಸೌತ್‌ ಇಂಡಿಯಾದಲ್ಲೇ ಸೂಪರ್‌ ಹಿಟ್ ಸಿನಿಮಾ ಹಾಡುಗಳಿವು....