ಇಂದೇ ತಾಂಡವ್​- ಶ್ರೇಷ್ಠಾ ಮದ್ವೆ! ಭಾಗ್ಯಂಗೆ ತಂಗಿ ಪೂಜಾಳೇ ವಿಲನ್​? ಸೀರಿಯಲ್​ಗೆ ಇದೇನಿದು ಟ್ವಿಸ್ಟ್​?

ಇಂದೇ ತಾಂಡವ್​- ಶ್ರೇಷ್ಠಾ ಮದ್ವೆ! ಭಾಗ್ಯಳಿಗೆ ಆಮಂತ್ರಣ ಕೊಟ್ಟಿದ್ದಾಳೆ ಶ್ರೇಷ್ಠಾ. ಅಷ್ಟಕ್ಕೂ ಭಾಗ್ಯಂಗೆ ತಂಗಿ ಪೂಜಾಳೇ ವಿಲನ್ ಆಗಿಬಿಟ್ಟಳಾ​? 
 

Tandav Shreshtha marriage fixed and she  invited Bhagya Bhagyalakshmi fans cursing pooja suc

ಭಾಗ್ಯಳ ಮೇಲೆ ಸೇಡು ತೀರಿಸಿಕೊಳ್ಳಲು ಕುದಿಯುತ್ತಿರೋ ಶ್ರೇಷ್ಠಾ, ಅವಳ ಗಂಡ ತಾಂಡವ್​ ಜೊತೆ ಇಂದೇ ಮದ್ವೆ ಫಿಕ್ಸ್​ ಮಾಡಿದ್ದಾಳೆ! ಅದನ್ನು ಭಾಗ್ಯಳಿಗೂ ಫೋನ್​ ಮಾಡಿ ತಿಳಿಸಿದ್ದಾಳೆ. ಅಷ್ಟಕ್ಕೂ ಶ್ರೇಷ್ಠಾ ಅಕ್ಷರಶಃ ನಾಗವಲ್ಲಿಯಾಗಿದ್ದಾಳೆ. ಏನಾದರೂ ಮಾಡಿ ಭಾಗ್ಯಳಿಗೆ ಬುದ್ಧಿ ಕಲಿಸಲು ಮುಂದಾಗಿದ್ದಾಳೆ. ಭಾಗ್ಯಳಿಗೆ ಈಕೆ ಮದ್ವೆಯಾಗ್ತಿರೋದು ತನ್ನ ಗಂಡನೇ ಎನ್ನೋ ವಿಷ್ಯನೇ ಗೊತ್ತಿಲ್ಲ, ಆದರೂ ಇಬ್ಬರು ಮಕ್ಕಳ ಅಪ್ಪನ ಜೊತೆ  ಮದ್ವೆಯಾಗ್ತಿದ್ದಾಳೆ ಅನ್ನೋದು ಮಾತ್ರ ಗೊತ್ತಿದೆ. ಅಷ್ಟೇ ಅಲ್ಲದೇ ಯಾರೋ ಒಬ್ಬಳಿಗೆ ದುಡ್ಡು ಕೊಟ್ಟು ತನ್ನ ವಿರುದ್ಧ ವಿಡಿಯೋ ಹರಿಬಿಟ್ಟ ಶ್ರೇಷ್ಠಾಳಿಗೆ ಬುದ್ಧಿ ಕಲಿಸಿದ್ದಾಳೆ ಭಾಗ್ಯ.  ಭಾಗ್ಯಳ ವಿರುದ್ಧ ಇಲ್ಲಸಲ್ಲದ ವಿಡಿಯೋಗಳನ್ನು ದುಡ್ಡು ಕೊಟ್ಟು ವೈರಲ್​  ಮಾಡಿಸಿದ್ದಳು ಶ್ರೇಷ್ಠಾ. ಅವಳಿಗೆ ಸರಿಯಾದ ಬುದ್ಧಿ ಕಲಿಸಿ ಬಂದಿದ್ದಾಳೆ ಭಾಗ್ಯ. ಆದ್ದರಿಂದ ಮದ್ವೆ ಹೇಗೆ ತಪ್ಪಿಸ್ತಿಯಾ ನೋಡ್ತೇನೆ ಎಂದು ಚಾಲೆಂಜ್​ ಹಾಕಿದ್ದಾಳೆ ಶ್ರೇಷ್ಠಾ.

ಮಗಳ ಈ ಕುತಂತ್ರದ ಅರಿವಾಗಿ ಶ್ರೇಷ್ಠಾಳ ಅಪ್ಪ ಆಸ್ಪತ್ರೆಗೆ ದಾಖಲಾಗಿದ್ದಾನೆ. ಅವನಿಗೆ ಊಟ ಕೊಡಲು ಭಾಗ್ಯ ಅಡುಗೆ ರೆಡಿ ಮಾಡಿ ಟಿಫನ್​ಗೆ ಹಾಕಿ ಹೋಗುವಷ್ಟರಲ್ಲಿ ಶ್ರೇಷ್ಠಾಳ ಕಾಲ್​ ಬಂದಿದೆ. ನಿನಗೊಂದು ಗುಡ್​ ನ್ಯೂಸ್​. ಇವತ್ತೇ ಮದುವೆ ಎಂದಿದ್ದಾಳೆ. ಆದರೆ ನೆಟ್ಟಿಗರು ಈಗ ಪೂಜಾಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಈಗಲೂ ಪೂಜಾ ನಿಜ ಹೇಳಿಲ್ಲಾ ಎಂದರೆ ಅವಳೇ ವಿಲನ್​ ಎನ್ನುತ್ತಿದ್ದಾರೆ. ಪೂಜಾ ಏನು ಮಾಡುತ್ತಾಳೋ ನೋಡಬೇಕಿದೆ. ಎಲ್ಲವೂ ಅವಳ ಮೇಲೆ ನಿರ್ಧಾರ ಆಗಿದೆ. ಆದರೆ ಇದುವರೆಗೆ ಎಲ್ಲಾ  ಗೊತ್ತಿದ್ದರೂ ಪೂಜಾ ಸುಮ್ಮನೇ ಇದ್ದುದು ನೋಡಿ ಅವಳ ಮೇಲೆ ನೆಟ್ಟಿಗರು ಇನ್ನಿಲ್ಲದ ಕಿಡಿ ಕಾರುತ್ತಿದ್ದಾರೆ. ಇನ್ನು ಕೆಲವರು ಅವಳು ಮೊದ್ಲೇ ಹೇಳಿದ್ರೆ ಸೀರಿಯಲ್​  ಮುಗಿದು ಹೋಗುತ್ತೆ, ಯಾಕೆ ಪಾಪ ಅವಳನ್ನು ಬೈತೀರಿ ಎಂದು ಪ್ರಶ್ನಿಸುತ್ತಿದ್ದಾರೆ. ಒಟ್ಟಿನಲ್ಲಿ ಈಗ ಎಲ್ಲರ ದೃಷ್ಟಿ ಪೂಜಾಳತ್ತ ನೆಟ್ಟಿದೆ. ಅವಳು ವಿಲನ್​ ಆಗಬಾರದು ಎನ್ನುವುದು ಪೂಜಾ ಫ್ಯಾನ್ಸ್​ ಆಶಯ. 

ಇವಳದ್ದು ಮಗುವಿನಂಥ ಮನಸ್ಸು ಎಂದ್ರೆ, ನಿಮ್ದು ನಾಯಿಬುದ್ಧಿ ಅನ್ನೋದಾ ಭಾಗ್ಯ? ತುಂಟಾಟ ನೋಡಿ ಫ್ಯಾನ್ಸ್​ ಫುಲ್​ ಖುಷ್​

ಅಷ್ಟಕ್ಕೂ ಇದಾಗಲೇ ಶ್ರೇಷ್ಠಾ ಭಾಗ್ಯ ಮಾಡಿದ ಅವಮಾನದಿಂದ ಕೊತಕೊತ ಕುದಿಯುತ್ತಿದ್ದಾರೆ.  ಭಾಗ್ಯಳಿಗೆ  ತನ್ನ ವಿರುದ್ಧ ವಿಡಿಯೋ ಹರಿಬಿಡುವಂತೆ  ಮಾಡಿದ್ದು ಶ್ರೇಷ್ಠಾಳೇ ಎನ್ನುವ ಸತ್ಯ ಭಾಗ್ಯಳಿಗೆ ತಿಳಿಯಿತು. ಭಾಗ್ಯ ಇನ್ನು ತನ್ನ ತಂಟೆಗೆ ಬರುವುದಿಲ್ಲ ಎಂದು ಮದುವೆಗೆ ರೆಡಿ ಮಾಡಿಕೊಂಡಿದ್ದಳು ಶ್ರೇಷ್ಠಾ. ಮದುಮಗಳಂತೆ ಸಿಂಗರಿಸಿಕೊಂಡು ಕೂತಿದ್ದಳು.  ಮದುವೆಗೂ ಮನ್ನ ನಡೆಯುವ ಸಂಪ್ರದಾಯಕ್ಕೆ ಶ್ರೇಷ್ಠಾಳ ಅಪ್ಪ-ಅಮ್ಮನೂ ಬಂದಿದ್ದರು.  ಆದರೆ ಇದರ ನಡುವೆಯೇ ಭಾಗ್ಯ ಅಲ್ಲಿಗೆ ಬಂದು ತಾನೇ ಕನ್ಯಾಶುದ್ಧಿ ಮಾಡುತ್ತೇನೆ ಎಂದಿದ್ದಳು. ಕೊನೆಗೆ ರೆಡಿಯಾಗಿ ಕುಳಿತಿದ್ದ ಶ್ರೇಷ್ಠಾಳಿಗೆ ಬಿಂದಿಗೆಯಿಂದ ನೀರು ಹೊಯ್ದಿದ್ದಳು. ಇದಾದ ಬಳಿಕವೂ ಎಲ್ಲಾ ಶಾಸ್ತ್ರವನ್ನೂ ನಾನೇ  ಮಾಡುತ್ತೇನೆ ಎಂದು ಶ್ರೇಷ್ಠಾಳನ್ನು ಸಿಂಗರಿಸಿದ್ದಳು. ಕೊನೆಗೆ ಅಪ್ಪ-ಅಮ್ಮನ ಎದುರೇ ಎಲ್ಲ ಸತ್ಯ ಹೇಳಿ ಶ್ರೇಷ್ಠಾಳ ಮರ್ಯಾದೆ ತೆಗೆದಳು.

ತನ್ನ ಮಗಳ ಇಂಥ ಕೆಟ್ಟ ವರ್ತನೆ ನೋಡಿ ಅಪ್ಪ-ಅಮ್ಮನೂ ಮಗಳಿಗೆ ಬೈದರು. ಆದರೆ ಶ್ರೇಷ್ಠಾಳಿಗೆ ಅವಮರ್ಯಾದೆಯಾಗಿ ಅಪ್ಪ-ಅಮ್ಮನನ್ನೇ ಬೈದು ಕಳಿಸಿದಳು. ಇಷ್ಟೆಲ್ಲಾ ಆದ ಮೇಲೆ ತನ್ನ ಮದುವೆ ನಡೆದೇ ನಡೆಯುತ್ತದೆ. ಭಾಗ್ಯ ಅದನ್ನು ಹೇಗೆ ತಡೆಯುತ್ತಾಳೆ ಎಂದು ಚಾಲೆಂಜ್​  ಮಾಡಿದ್ದಾಳೆ. ಸ್ಥಳಕ್ಕೆ ಕುಸುಮಾನೂ ಬಂದಿದ್ದಳು. ಆದರೆ ಬುದ್ಧಿವಂತೆ ಕುಸುಮಾಗೂ ಈಕೆ ಮದ್ವೆಯಾಗ್ತಿರೋದು ತನ್ನ ಮಗನನ್ನೇ ಅನ್ನೋ ಸತ್ಯ ಗೊತ್ತೇ ಇಲ್ಲ. ಭಾಗ್ಯಳಿಗೂ ತಿಳಿದಿಲ್ಲ ಎನ್ನುವುದು ವಿಪರ್ಯಾಸ. ಎಲ್ಲಾ ಗೊತ್ತಿರೋ ಪೂಜಾ ಕೂಡ ಇನ್ನೂ ಯಾಕೆ ಸೈಲೆಂಟ್​ ಆಗಿದ್ದಾಳೆ ಎನ್ನೋದು ಇನ್ನೊಂದು ವಿಚಿತ್ರ. ಒಟ್ಟಿನಲ್ಲಿ ಸೀರಿಯಲ್​ ಮುಂದೆ ಹೋಗಬೇಕು ಅಷ್ಟೇ.

ಸಿಹಿಯ ಗುಟ್ಟು ತಿಳಿದಿರೋ, ಮೇಲಿಂದ ಮೇಲೆ ಶಾಕ್​ ಕೊಡ್ತಿರೋ ನಿಗೂಢ ವೈದ್ಯೆ ಅನಂತಲಕ್ಷ್ಮಿ ಯಾರು?

Latest Videos
Follow Us:
Download App:
  • android
  • ios