ಸಿಹಿಯ ಗುಟ್ಟು ತಿಳಿದಿರೋ, ಮೇಲಿಂದ ಮೇಲೆ ಶಾಕ್ ಕೊಡ್ತಿರೋ ನಿಗೂಢ ವೈದ್ಯೆ ಅನಂತಲಕ್ಷ್ಮಿ ಯಾರು?
ಸೀತಾಳ ಆಸ್ಪತ್ರೆಯ ಫೈಲ್ ಭಾರ್ಗವಿ ಕೈಸೇರಿದೆ, ಆದರೆ ಅಪ್ಪನ ಗುಟ್ಟು ಗುಟ್ಟಾಗಿಯೇ ಉಳಿದಿದೆ. ಅತ್ತ ಡಾ.ಅನಂತಲಕ್ಷ್ಮಿಯ ಹೆಸರು ಕೇಳಿ ಡಾ.ಮೇಘಶ್ಯಾಮನೂ ಶಾಕ್ ಆಗಿದ್ದಾನೆ. ಇದೇನಿದು ಟ್ವಿಸ್ಟ್?
ಸೀತಾರಾಮ ಸೀರಿಯಲ್ ಇದೀಗ ಇಂಟರೆಸ್ಟಿಂಗ್ ಹಂತಕ್ಕೆ ಬಂದು ತಲುಪಿದೆ. ಡಾ.ಅನಂತಲಕ್ಷ್ಮಿ ಎಂಬ ನಿಗೂಢ ವೈದ್ಯೆಯ ಹೆಸರು ಮೇಲಿನಿಂದ ಮೇಲೆ ಕೇಳಿ ಬರುತ್ತಿದೆ. ಸಿಹಿ ಯಾರು? ಅವಳಿಗೂ ಸೀತಾಳಿಗೂ ಏನು ಸಂಬಂಧ? ಸಿಹಿಯ ಅಪ್ಪ ಯಾರು ಎಂಬೆಲ್ಲಾ ಪ್ರಶ್ನೆಗೆ ಉತ್ತರ ಕೊಡಲು ಸಾಧ್ಯ ಈ ಅನಂತಲಕ್ಷ್ಮಿ ಮಾತ್ರ. ಅತ್ತ ಈ ವೈದ್ಯೆಯ ಹೆಸರು ಕೇಳುತ್ತಿದ್ದಂತೆಯೇ, ಸೀತಾಳೂ ಶಾಕ್ ಆಗಿದ್ದಾಳೆ, ಅತ್ತ ಡಾ.ಮೇಘಶ್ಯಾಮನೂ ಶಾಕ್ ಆಗಿದ್ದಾನೆ. ಸೀತಾಳ ರಹಸ್ಯ ಬಯಲು ಮಾಡುವಲ್ಲಿ ಭಾರ್ಗವಿ, ಚಾಂದನಿ ಮತ್ತು ರುದ್ರಪ್ರತಾಪ್ ಇನ್ನಿಲ್ಲದ ಶ್ರಮ ವಹಿಸುತ್ತಾ ಇದ್ದಾರೆ. ಆದರೆ ಅದಿನ್ನೂ ಬಹಿರಂಗಗೊಳ್ಳಲಿಲ್ಲ. ಇದೀಗ ರುದ್ರಪ್ರತಾಪ್ ಸೀತಾಳ ಆಸ್ಪತ್ರೆಯ ಡಿಟೇಲ್ಸ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾನೆ. ಇದು ಸೀತಾ ಹೆಣ್ಣುಮಗುವಿಗೆ ಜನ್ಮ ಕೊಟ್ಟ ಆಸ್ಪತ್ರೆ, ಹೆಣ್ಣು ಮಗುವಿಗೆ ಜನ್ಮ ಕೊಟ್ಟಿದ್ದಳು. ಆದರೆ ಅಪ್ಪನ ಡಿಟೇಲ್ಸ್ ಇಲ್ಲ ಎಂದಿದ್ದಾನೆ.
ಹಾಗಿದ್ದರೆ ಸಿಹಿ ಸೀತಾಳ ಮಗಳೆ ಎನ್ನುವ ಗೊಂದಲ ಅಭಿಮಾನಿಗಳಲ್ಲಿ ಶುರುವಾಗಿದೆ. ಇಲ್ಲಿಯವರೆಗೆ ಸೀತಾ ಮತ್ತು ಸಿಹಿ ಅಮ್ಮ-ಮಗಳು ಅಲ್ಲ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಇದರಲ್ಲಿ ಸೀತಾ ಮಗುವಿನ ಜನ್ಮ ನೀಡಿದ ಉಲ್ಲೇಖವಿದೆ. ಅದೇ ಇನ್ನೊಂದೆಡೆ, ಡಾ.ಅನಂತ ಲಕ್ಷ್ಮಿ ಹೆಸರು ಕೇಳುತ್ತಿದ್ದಂತೆಯೇ ಸೀತಾ ಶಾಕ್ ಆಗಿದ್ದಳು. ಇದೀಗ ಶಾಕ್ ಆಗೋ ಸರದಿ ಡಾ.ಮೇಘಶ್ಯಾಮ್ದು. ಸೀತಾಳ ರಹಸ್ಯವನ್ನು ಅರಿಯಲು ಚಾಂದನಿ ಇನ್ನಿಲ್ಲ ಪ್ರಯತ್ನ ಪಡುತ್ತಿದ್ದಾಳೆ. ಒಂದಿಷ್ಟು ಸಾಕ್ಷ್ಯಾಧಾರಗಳನ್ನೂ ಕಲೆಕ್ಟ್ ಮಾಡಿದ್ದಾಳೆ. ಆದರೆ ವೈದ್ಯೆ ಡಿಟೇಲ್ಸ್ ಕೊಡಲು ನಿರಾಕರಿಸಿದ್ದಾಳೆ. ಇದೇ ಕಾರಣಕ್ಕೆ ಮೇಘಶ್ಯಾಮನ ನಾದಿನಿಯಾಗಿರೋ ಚಾಂದನಿ ಇನ್ಫ್ಲುಯೆನ್ಸ್ಗೆ ಬಂದಿದ್ದಾಳೆ. ಮೇಘಶ್ಯಾಮ್ ಏನು ಇನ್ಫ್ಲುಯೆನ್ಸ್ ಬೇಕು ಹೇಳು ಎಂದಾಗ ಚಾಂದನಿ ಡಾ.ಅನಂತ ಲಕ್ಷ್ಮಿಯ ಹೆಸರು ಹೇಳಿದ್ದಾಳೆ.
ತುಂಬು ಗರ್ಭಿಣಿ ನೇಹಾಗೆ ಸಿಹಿಕಹಿ ಚಂದ್ರು ಸ್ಪೆಷಲ್ ದಡ್ ಬಡ್ ದೋಸೆ! ಫಟಾಫಟ್ ದೋಸೆ ನೀವೂ ಮಾಡಿ ನೋಡಿ...
ಈ ಹೆಸರು ಕೇಳ್ತಿದ್ದಂತೆಯೇ ಆತ ಕೂಡ ಶಾಕ್ ಆಗಿದ್ದಾನೆ. ಇದೀಗ ಸಿಹಿ ಮತ್ತು ಮೇಘಶ್ಯಾಮ್ ಬಾಂಡಿಂಗ್ ನೋಡಿ ಇಬ್ಬರೂ ನಿಜವಾದ ಅಪ್ಪ-ಮಗಳೇ ಇರಬೇಕು ಎಂದೇ ಊಹಿಸಲಾಗುತ್ತಿದೆ. ಆದರೆ ಸೀರಿಯಲ್ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಅದೇ ಇನ್ನೊಂದೆಡೆ ರಾಮ್ ಮತ್ತು ಮೇಘಶ್ಯಾಮ್ ಸ್ನೇಹಿತರು ಎಂದು ತೋರಿಸಲಾಗಿದೆ. ಮೇಘಶ್ಯಾಮ್ಗೆ ಇದಾಗಲೇ ಬೇರೆ ಮದುವೆಯಾಗಿದ್ದು, ಅವರಿಗೆ ಮಕ್ಕಳು ಇಲ್ಲ ಎಂದೂ ತೋರಿಸಲಾಗಿದೆ. ಸಿಹಿ ಕೂಡ ಮೇಘಶ್ಯಾಮ್ನನ್ನು ಸಿಕ್ಕಾಪಟ್ಟೆ ಪ್ರೀತಿಸುತ್ತಿದ್ದಾಳೆ. ಹಾಗಿದ್ದರೆ ಇದೊಂದು ರೀತಿಯ ಚಕ್ರವ್ಯೂಹ ಎಂದೇ ಸದ್ಯ ಅಭಿಮಾನಿಗಳು ಅಭಿಮತ ಪಡುತ್ತಿದ್ದಾರೆ.
ಇಲ್ಲಿಯವರೆಗೆ ಸೀತಾರಾಮರ ಕಲ್ಯಾಣಕ್ಕೆ ಕಾಯ್ತಿದ್ದ ಸೀರಿಯಲ್ ಪ್ರೇಮಿಗಳು, ನಡುವೆ ಒಂದಿಷ್ಟು ದಿನ ಸೀರಿಯಲ್ ಸಿಕ್ಕಾಪಟ್ಟೆ ಬೋರ್ ಹೊಡಿತಿದೆ, ನಮಗೆ ಮೊದಲಿನ ಸೀತಾರಾಮರೇ ಬೇಕು ಎನ್ನುತ್ತಿದ್ದರು. ಆದರೆ ಇದೀಗ ಸೀರಿಯಲ್ ಮತ್ತಷ್ಟು ಕುತೂಹಲ ಕೆರಳಿಸುತ್ತಿದೆ. ಯಾರು ಯಾರಿಗೆ ಹೇಗೆ ಸಂಬಂಧ ಎನ್ನುವುದನ್ನು ತಿಳಿಯುವುದು ಕಷ್ಟ. ಇದರ ನಡುವೆಯೇ ನೆಟ್ಟಿಗರು ತಮ್ಮದೇ ಆದ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಸೀತಾ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದಿರಬೇಕು, ಅದಕ್ಕೆ ಮೇಘಶ್ಯಾಮ್ ಅಪ್ಪ ಇರಬೇಕು ಎಂದೆಲ್ಲಾ ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಸೀರಿಯಲ್ ಇದೀಗ ಕುತೂಹಲದ ಘಟ್ಟಕ್ಕೆ ಬಂದು ತಲುಪಿದೆ.
ಇವಳದ್ದು ಮಗುವಿನಂಥ ಮನಸ್ಸು ಎಂದ್ರೆ, ನಿಮ್ದು ನಾಯಿಬುದ್ಧಿ ಅನ್ನೋದಾ ಭಾಗ್ಯ? ತುಂಟಾಟ ನೋಡಿ ಫ್ಯಾನ್ಸ್ ಫುಲ್ ಖುಷ್