ಮಗ ಗುಂಡನಿಗೆ ತಾಂಡವ್​ ಮಾಡಿದ್ದಾನೊಂದು ಪ್ರಾಮಿಸ್. ಅದನ್ನು ಕೇಳಿ ಶ್ರೇಷ್ಠಾ ಕಕ್ಕಾಬಿಕ್ಕಿಯಾಗಿದ್ದಾಳೆ. ಮುಂದೇನು?   

ತಾಂಡವ್​ ಅಮ್ಮನಿಗೆ ಡಿವೋರ್ಸ್​ ಕೊಡಬೇಕು ಅಂತ ಮಾಡಿರೋ ವಿಷ್ಯ ಮಗ ಗುಂಡನಿಗೆ ತಿಳಿದುಬಿಟ್ಟಿದೆ. ಅದೂ ಅಲ್ಲದೇ ಅಮ್ಮನಿಗೆ ಹುಷಾರ್​ ಇಲ್ಲ ಎನ್ನುವ ಕಾರಣಕ್ಕೆ ಅಜ್ಜಿ ಮನೆಗೆ ಹೋಗಿದ್ದಾಳೆ ಎಂದು ಹೇಳಿದ್ದೂ ಸುಳ್ಳು ಎಂದು ಗೊತ್ತಾಗಿದೆ. ಅಮ್ಮ ಭಾಗ್ಯ ಶಾಲೆಗೆ ಹೋಗಿದ್ದರಿಂದ ಎಲ್ಲರೂ ಸೇರಿ ನಾಟಕವಾಡುತ್ತಿದ್ದಾರೆ, ಅಮ್ಮನನ್ನು ದೂರ ಮಾಡಿದ್ದಾರೆ ಎನ್ನುವ ಸತ್ಯ ಮಕ್ಕಳಿಗೆ ತಿಳಿದಿದೆ. ಇದೇ ಕಾರಣಕ್ಕೆ ಅಪ್ಪನಿಗೆ ಪ್ರಶ್ನೆ ಮಾಡಿದ್ದಾನೆ ಗುಂಡ. ನಮಗೆ ನೀವು ಬೇಡ, ಅಮ್ಮ ಬೇಕು ಎಂದಿದ್ದಾರೆ ಮಕ್ಕಳು. ನಮ್ಮಿಬ್ಬರನ್ನು ಹಂಚಿಕೊಳ್ಳಬೇಡಿ ಎಂದಿದ್ದಾನೆ ಗುಂಡ. ಒಂದು ಕಡೆ ಮಕ್ಕಳು, ಇನ್ನೊಂದು ಕಡೆ ಶ್ರೇಷ್ಠಾ. ಅಡಕತ್ತರಿಯಲ್ಲಿ ತಾಂಡವ್​ ಸಿಲುಕಿದ್ದಾನೆ. ಇದೇ ವೇಳೆ ಗುಂಡ ಅಪ್ಪನಿಗೆ ಪ್ರಾಮಿಸ್​ ಮಾಡಲು ಹೇಳಿದ್ದಾನೆ. ಮಕ್ಕಳನ್ನು ಹಂಚಿಕೊಳ್ಳುವುದಿಲ್ಲ, ಅಮ್ಮ ತಮ್ಮ ಜೊತೆಯಲ್ಲಿಯೇ ಇರುತ್ತಾಳೆ ಎಂದು ಪ್ರಾಮಿಸ್​ ಮಾಡುವಂತೆ ಹೇಳಿದ್ದಾನೆ.

ಬೇರೆ ದಾರಿ ಕಾಣದೇ ತಾಂಡವ್​ ಮಗನಿಗೆ ಪ್ರಾಮಿಸ್​ ಮಾಡಿದ್ದಾನೆ. ಅಲ್ಲಿಯೇ ಇದ್ದ ಶ್ರೇಷ್ಠಾ ಇದನ್ನು ನೋಡಿ ಕಂಗಾಲಾಗಿ ಹೋಗಿದ್ದಾಳೆ. ತಾಂಡವ್​ಗೆ ಈಗ ಭಾಗ್ಯಳನ್ನು ಮನೆಗೆ ಕರೆತರುವುದು ಅನಿವಾರ್ಯವಾಗಿದೆ. ಅತ್ತ ಶ್ರೇಷ್ಠಾಳನ್ನೂ ಬಿಡುವಂತಿಲ್ಲ. ಇದೀಗ ಇಟ್ಟುಕೊಂಡವಳಾ? ಕಟ್ಟಿಕೊಂಡವಳಾ ಎನ್ನುವ ಸ್ಥಿತಿ ತಾಂಡವ್​ದು. ಅಂದ ಹಾಗೆ ಇದು ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಭಾಗ್ಯಲಕ್ಷ್ಮಿ ಸೀರಿಯಲ್​ ಕಥೆ. 

ಕಲ್ಲು ಶಿಲೆಯಾಗುವ ಸಮಯ ಬಂದಾಗ ನೂರೊಂದು ಪೆಟ್ಟು ತಿನ್ನಲೇಬೇಕು: ಏನಿದು ಗುರೂಜಿ ಮಾತು?

ಪತ್ನಿಗೆ ಡಿವೋರ್ಸ್​ ಕೊಟ್ಟು ಕಟ್ಟಿಕೊಂಡವಳ ಬಿಟ್ಟು ಇಟ್ಟುಕೊಂಡವಳ ಬಳಿ ಹೋಗುವ ಕನಸು ಕಾಣುತ್ತಿರುವ ತಾಂಡವ್, ತಾನು ಮನೆಯನ್ನು ಚೆನ್ನಾಗಿ ನಿಭಾಯಿಸಬಲ್ಲೆ ಎಂದು ತೋರಿಸಲು ಮಕ್ಕಳನ್ನು ಕರೆದುಕೊಂಡು ರೆಸಾರ್ಟ್​ಗೆ ಬಂದಿದ್ದಾನೆ. ಕುಟುಂಬದವರನ್ನು ಕರೆದುಕೊಂಡು ಹೋಗಿರುವುದನ್ನು ಕೇಳಿ ಪ್ರೇಯಸಿ ಶ್ರೇಷ್ಠಾಳಿಗೆ ಉರಿ ಹತ್ತಿದೆ. ಅವಳು ರೆಸಾರ್ಟ್​ ಹುಡುಕಿಕೊಂಡು ಬಂದಿದ್ದಾಳೆ. ಅವಳನ್ನು ಕಂಡರೆ ಆಗದ ತನ್ವಿ ಚೆನ್ನಾಗಿ ಉಗಿದಿದ್ದಾಳೆ. ತಾಂಡವ್​ ಅಮ್ಮ ಕುಸುಮಾ, ನೀನ್ಯಾಕೆ ಇಲ್ಲಿಗೆ ಬಂದಿದ್ದು ಎಂದು ಪ್ರಶ್ನಿಸಿದ್ದಾಳೆ. ಅದಕ್ಕೆ ಶ್ರೇಷ್ಠಾ, ಆಫೀಸ್​ ಕೆಲಸದ ಮೇಲೆ ಬಂದಿರುವುದಾಗಿ ಹೇಳಿದ್ದಾಳೆ. ಇತ್ತ ತಾಂಡವ್​ಗೆ ಶ್ರೇಷ್ಠಾಳನ್ನು ನೋಡಿ ಗಾಬರಿ ಶುರುವಾಗಿದೆ. ಎಲ್ಲಿ ತನ್ನ ಬಣ್ಣ ಬಯಸಲಾಗುವುದೋ ಎಂದು ಶ್ರೇಷ್ಠಾಳನ್ನು ಮನಸ್ಸಿನಲ್ಲಿಯೇ ಬೈದುಕೊಳ್ಳುತ್ತಿದ್ದಾನೆ. ತಾನು ಬಂದಿರುವ ಉದ್ದೇಶ ಮರೆಮಾಚಲು ಆಫೀಸ್​ ಕೆಲಸದ ಕಾರಣವೊಡ್ಡಿದ್ದಾಳೆ ಶ್ರೇಷ್ಠಾ.

ಹೇಳಿಕೇಳಿ ಕುಸುಮಾ ಮಾಮೂಲಿ ಅತ್ತೆಯಲ್ಲ. ಅವಳಿಗೆ ಡೌಟ್​ ಬಂದಿದೆ. ಸರಿ, ಆಫೀಸ್​ ಕೆಲಸದ ಮೇಲೆ ಬಂದರೆ ಆಫೀಸ್​ನವರು ಎಲ್ಲಿ ಎಂದು ಪ್ರಶ್ನಿಸಿದ್ದಾಳೆ. ಶ್ರೇಷ್ಠಾ ಯಾರದ್ದೋ ಹೆಸರು ಹೇಳಿದ್ದಾಳೆ. ಕುಸುಮಾ ಬಿಡ್ತಾಳಾ? ಫೋನ್​ ಮಾಡಿಯೇ ಬಿಟ್ಟಿದ್ದಾಳೆ. ಈಗ ಶ್ರೇಷ್ಠಾ ಮತ್ತು ತಾಂಡವ್​ ಇಬ್ಬರಿಗೂ ಅಡಕತ್ತರಿಯಲ್ಲಿ ಸಿಲುಕಿದ ಅನುಭವ. ಇದರ ಮಧ್ಯೆಯೇ ಮಕ್ಕಳು ಬಂದು ಅಪ್ಪನ ಬಳಿ ಪ್ರಾಮಿಸ್​ ಪಡೆದುಕೊಂಡಿದ್ದಾರೆ. ಅದೇ ಇನ್ನೊಂದೆಡೆ, ಭಾಗ್ಯಳ ಭವಿಷ್ಯದ ಬಗ್ಗೆ ಗುರುಗಳು ನುಡಿದಿದ್ದಾರೆ. ಹಾಗಿದ್ದರೆ ಮುಂದೇನು? 

ಬಿಗ್​ಬಾಸ್​ ಮನೆಯಲ್ಲೇ ಪ್ರೆಗ್ನೆಂಟ್​ ಆದೆ ಅಂತ ಸುದ್ದಿಯಾಗಿದ್ದ ಅಂಕಿತಾಗೆ ಮಕ್ಕಳನ್ನು ಹೆರಲು ಸಲ್ಮಾನ್​ ಖಾನ್​ ಸಲಹೆ!

View post on Instagram