Asianet Suvarna News Asianet Suvarna News

ಕಲ್ಲು ಶಿಲೆಯಾಗುವ ಸಮಯ ಬಂದಾಗ ನೂರೊಂದು ಪೆಟ್ಟು ತಿನ್ನಲೇಬೇಕು: ಏನಿದು ಗುರೂಜಿ ಮಾತು?

ಭಾಗ್ಯಳ ಅಮ್ಮ ಗುರೂಜಿ ಹತ್ತಿರ ಹೋಗಿ ಮಗಳ ಭವಿಷ್ಯ ಕೇಳಿದ್ದಾಳೆ. ಗುರೂಜಿ ಹೇಳಿದ್ದೇನು? ಭಾಗ್ಯಳ ಭವಿಷ್ಯವೇನು?
 

Bhagyas mother went to Guruji and asked about her daughters fate What did Guruji say suc
Author
First Published Feb 27, 2024, 3:46 PM IST

 ಭಾಗ್ಯಳ ಬಾಳಲ್ಲಿ ಅಲ್ಲೋಲ ಕಲ್ಲೋಲ ಆಗ್ತಿದೆ. ಮಗಳ ಬಾಳಲ್ಲಿ ಬಂದೊದಗಿದ ಬಿರುಗಾಳಿಯಿಂದ ಅಮ್ಮ ಸಿಕ್ಕಾಪಟ್ಟೆ ನೋವಿನಿಂದ ನರಳಾಡುತ್ತಿದ್ದಾಳೆ. ಮಗಳ ಭವಿಷ್ಯದ ಚಿಂತೆ ಕಾಡುತ್ತಲೇ ಗುರುಗಳ ಬಳಿ ಹೋಗಿದ್ದಾಳೆ. ಮಗಳು ಭಾಗ್ಯ ಮೊದಲಿನ ಥರ ಆಗ್ತಾಳಾ, ಗಂಡನ ಜೊತೆ ಸುಖವಾಗಿ ಸಂಸಾರ ಮಾಡ್ತಾಳಾ ಎಂದು ಗುರೂಜಿಯನ್ನು ಕೇಳಿದ್ದಾಳೆ. ಆಗ ಗುರುಗಳು, ಭಾಗ್ಯದ ಗೆರೆ ಬದಲಾದಾಗ ಇವೆಲ್ಲಾ ಮಾಮೂಲು. ನಿಮ್ಮ ಮಗಳ ಬದುಕಿನಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ. ಆ ಬದಲಾವಣೆಗೆ ಸಿಕ್ಕಿರುವ ಸೂಚನೆ ಇದು. ಯಾವುದೂ ಮೊದಲಿನ ಹಾಗೆ ಇರುವುದಿಲ್ಲ ಎನ್ನುತ್ತಾರೆ. ಇದರ ಅರ್ಥ ಕೇಳಿದಾಗ ಗುರೂಜಿ, ನಿಮ್ಮ ಮಗಳು ಗಟ್ಟಿಗಿತ್ತಿ, ಯಾವುದಕ್ಕೂ ಸುಲಭವಾಗಿ ಜಗ್ಗುವವಳಲ್ಲ. ಎಲ್ಲರ ಭಾರಕ್ಕೂ ಹೆಗಲು ಆಗ್ತಾಳೆ, ತನ್ನನ್ನೂ ತಾನು ಸಂಭಾಳಿಸಿಕೊಂಡು ಹೋಗ್ತಾಳೆ. ಕಲ್ಲು ಶಿಲೆಯಾಗುವ ಸಮಯ ಬಂದಾಗ ನೂರೊಂದು ಪೆಟ್ಟು ತಿನ್ನಲೇಬೇಕು. ಅತ್ತರೆ ಆಗಲ್ಲ, ದೇವರಿದ್ದಾನೆ, ಧೈರ್ಯವಾಗಿರಿ ಎನ್ನುತ್ತಾರೆ. 
 
ಇದು ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಭಾಗ್ಯಲಕ್ಷ್ಮಿ ಸೀರಿಯಲ್​ ಕಥೆ. ಪತ್ನಿಗೆ ಡಿವೋರ್ಸ್​ ಕೊಟ್ಟು ಕಟ್ಟಿಕೊಂಡವಳ ಬಿಟ್ಟು ಇಟ್ಟುಕೊಂಡವಳ ಬಳಿ ಹೋಗುವ ಕನಸು ಕಾಣುತ್ತಿರುವ ತಾಂಡವ್, ತಾನು ಮನೆಯನ್ನು ಚೆನ್ನಾಗಿ ನಿಭಾಯಿಸಬಲ್ಲೆ ಎಂದು ತೋರಿಸಲು ಮಕ್ಕಳನ್ನು ಕರೆದುಕೊಂಡು ರೆಸಾರ್ಟ್​ಗೆ ಬಂದಿದ್ದಾನೆ. ಕುಟುಂಬದವರನ್ನು ಕರೆದುಕೊಂಡು ಹೋಗಿರುವುದನ್ನು ಕೇಳಿ ಪ್ರೇಯಸಿ ಶ್ರೇಷ್ಠಾಳಿಗೆ ಉರಿ ಹತ್ತಿದೆ. ಅವಳು ರೆಸಾರ್ಟ್​ ಹುಡುಕಿಕೊಂಡು ಬಂದಿದ್ದಾಳೆ. ಅವಳನ್ನು ಕಂಡರೆ ಆಗದ ತನ್ವಿ ಚೆನ್ನಾಗಿ ಉಗಿದಿದ್ದಾಳೆ. ತಾಂಡವ್​ ಅಮ್ಮ ಕುಸುಮಾ, ನೀನ್ಯಾಕೆ ಇಲ್ಲಿಗೆ ಬಂದಿದ್ದು ಎಂದು ಪ್ರಶ್ನಿಸಿದ್ದಾಳೆ. ಅದಕ್ಕೆ ಶ್ರೇಷ್ಠಾ, ಆಫೀಸ್​ ಕೆಲಸದ ಮೇಲೆ ಬಂದಿರುವುದಾಗಿ ಹೇಳಿದ್ದಾಳೆ. ಇತ್ತ ತಾಂಡವ್​ಗೆ ಶ್ರೇಷ್ಠಾಳನ್ನು ನೋಡಿ ಗಾಬರಿ ಶುರುವಾಗಿದೆ. ಎಲ್ಲಿ ತನ್ನ ಬಣ್ಣ ಬಯಸಲಾಗುವುದೋ ಎಂದು ಶ್ರೇಷ್ಠಾಳನ್ನು ಮನಸ್ಸಿನಲ್ಲಿಯೇ ಬೈದುಕೊಳ್ಳುತ್ತಿದ್ದಾನೆ. ತಾನು ಬಂದಿರುವ ಉದ್ದೇಶ ಮರೆಮಾಚಲು ಆಫೀಸ್​ ಕೆಲಸದ ಕಾರಣವೊಡ್ಡಿದ್ದಾಳೆ ಶ್ರೇಷ್ಠಾ.

ನಿವೇದಿತಾ- ಚಂದನ್​ಶೆಟ್ಟಿ ದಾಂಪತ್ಯಕ್ಕೆ ನಾಲ್ಕು ವರ್ಷ: ಹೊಸ ಚಿತ್ರದ ರೊಮ್ಯಾಂಟಿಕ್​ ಮೂಡ್​ನಲ್ಲಿ ದಂಪತಿ

ಹೇಳಿಕೇಳಿ ಕುಸುಮಾ ಮಾಮೂಲಿ ಅತ್ತೆಯಲ್ಲ. ಅವಳಿಗೆ ಡೌಟ್​ ಬಂದಿದೆ. ಸರಿ, ಆಫೀಸ್​ ಕೆಲಸದ ಮೇಲೆ ಬಂದರೆ ಆಫೀಸ್​ನವರು ಎಲ್ಲಿ ಎಂದು ಪ್ರಶ್ನಿಸಿದ್ದಾಳೆ. ಶ್ರೇಷ್ಠಾ ಯಾರದ್ದೋ ಹೆಸರು ಹೇಳಿದ್ದಾಳೆ. ಕುಸುಮಾ ಬಿಡ್ತಾಳಾ? ಫೋನ್​ ಮಾಡಿಯೇ ಬಿಟ್ಟಿದ್ದಾಳೆ. ಈಗ ಶ್ರೇಷ್ಠಾ ಮತ್ತು ತಾಂಡವ್​ ಇಬ್ಬರಿಗೂ ಅಡಕತ್ತರಿಯಲ್ಲಿ ಸಿಲುಕಿದ ಅನುಭವ. ಕಲರ್ಸ್​ ಕನ್ನಡ ವಾಹಿನಿಯ ಭಾಗ್ಯಲಕ್ಷ್ಮಿ ಸೀರಿಯಲ್​  ಪ್ರೊಮೋ ರಿಲೀಸ್​ ಆಗಿದೆ.
 
ಅಷ್ಟಕ್ಕೂ ಇದಾಗಲೇ  ಭಾಗ್ಯ ತವರು ಸೇರಿದ್ದಾಳೆ.  ನಿನ್ನಿಂದಲೇ ನನ್ನ ಬದುಕು ನರಕವಾಗಿದ್ದು, ನೀನು ಇಲ್ಲದಿದ್ದರೆ ನಾನು ಹಾಗೂ ಇಡೀ ಕುಟುಂಬ ಸಂತೋಷವಾಗಿರುತ್ತಿದ್ದೆವು. ನೀನು ಮನೆ ಬಿಟ್ಟು ಹೋದರೆ ಎಲ್ಲವೂ ಸರಿಯಾಗಿರುತ್ತೆ, ನಾವೆಲ್ಲರೂ ನೆಮ್ಮದಿಯಿಂದ ಇರಬೇಕು ಎಂದರೆ ನೀನು ಮನೆಬಿಟ್ಟು ಹೋಗಬೇಕು ಎಂದು ತಾಂಡವ್​ ಪತ್ನಿ ಭಾಗ್ಯಳಿಗೆ ಹೇಳಿದ್ದಾನೆ. ಶ್ರೇಷ್ಠಾಳ ಪ್ರೇಮದ ನಶೆಯಲ್ಲಿ ಕಟ್ಟಿಕೊಂಡ ಹೆಂಡತಿ, ಹೆತ್ತ ಮಕ್ಕಳನ್ನೇ ಬಿಟ್ಟು ಹೋಗಿರುವ ತಾಂಡವ್​ಗೆ ಪತ್ನಿ ಭಾಗ್ಯ ಬೇಡವಾಗಿದೆ. ಆದ್ದರಿಂದ ಡಿವೋರ್ಸ್​ ಕೊಡಲು ಮುಂದಾಗಿದ್ದಾನೆ. ಮನೆ ಬಿಟ್ಟು ಹೋಗುವಂತೆ ಪತ್ನಿಗೆ ಹೇಳಿದ್ದಾನೆ. ಆಕೆ ಮನೆ ಬಿಟ್ಟು ಕೂಡ ಹೋಗಿಯಾಗಿದೆ. ಮುಂದೇನು? 
 
ಸತ್ಯದ ದಾರಿಯಲ್ಲಿ ಮುಳ್ಳುಗಳೇ ಜಾಸ್ತಿ! ಮಲ್ಲಿಗೆ ನ್ಯಾಯ ಒದಗಿಸಿದ ಭೂಮಿಯ ಬದುಕಲ್ಲೀಗ ಸಂಕಷ್ಟ....

Follow Us:
Download App:
  • android
  • ios