ಬಿಗ್​ಬಾಸ್​ ಮನೆಯಲ್ಲೇ ಪ್ರೆಗ್ನೆಂಟ್​ ಆದೆ ಅಂತ ಸುದ್ದಿಯಾಗಿದ್ದ ಅಂಕಿತಾಗೆ ಮಕ್ಕಳನ್ನು ಹೆರಲು ಸಲ್ಮಾನ್​ ಖಾನ್​ ಸಲಹೆ!

ಬಿಗ್​ಬಾಸ್​ ಮನೆಯಲ್ಲೇ ಪ್ರೆಗ್ನೆಂಟ್​ ಆದೆ ಅಂದು ಸುದ್ದಿಯಾಗಿದ್ದ ಅಂಕಿತಾಗೆ ಮಕ್ಕಳನ್ನು ಹೆರಲು ಸಲ್ಮಾನ್​ ಖಾನ್​ ಸಲಹೆ ಕೊಟ್ಟಿದ್ದಾರೆ. ಏನಿದು ವಿಷ್ಯ? 
 

Salman Khans advice for Ankita Lokhande to make her marriage with Vicky Jain stronger suc

  ಬಿಗ್​ಬಾಸ್​ ಖ್ಯಾತಿಯ ಅಂಕಿತಾ ಲೋಖಂಡೆ ಮತ್ತು ಅವರ ಪತಿ ವಿಕ್ಕಿ ಜೈನ್​ ಬಿಗ್​ಬಾಸ್​​ ಮನೆಯಲ್ಲಿ ಸೃಷ್ಟಿಸಿರೋ ಆವಾಂತರ ಅಷ್ಟಿಷ್ಟಲ್ಲ. ಇಬ್ಬರೂ ಒಬ್ಬರಿಗಿಂತ ಒಬ್ಬರು ನಾಟಕ ಪ್ರಿಯರು. ನಟ ಸುಶಾಂತ್​ ಸಿಂಗ್​ ಅವರ ಪ್ರೇಯಸಿಯಾಗಿದ್ದ ಅಂಕಿತಾ ಲೋಖಂಡೆ ಮೊದಲಿನಿಂದಲೂ ಸುದ್ದಿಯಲ್ಲಿ ಇರುವವರೇ. ಅಷ್ಟಕ್ಕೂ ನಟಿ ಸುಶಾಂತ್ ಸಿಂಗ್​ಗೆ ಕೈಕೊಟ್ಟವರು ಎಂದೇ ಖ್ಯಾತಿ ಪಡೆದಿರುವ ಅಂಕಿತಾ ನಂತರ ವಿಕ್ಕಿ ಜೈನ್​ ಅವರನ್ನು ಮದುವೆಯಾಗಿದ್ದು, ಈ ಜೋಡಿ ಬಿಗ್​ಬಾಸ್​ 17ನ ಒಳಗೆ ಹೋಗಿ ಹಂಗಾಮಾ ಸೃಷ್ಟಿಸಿದ್ದು ಬಿಗ್​ಬಾಸ್​ ಪ್ರಿಯರಿಗಎ ಗೊತ್ತೇ ಇದೆ. ಪ್ರತಿದಿನವೂ ಹಲ್​ಚಲ್​ ಸೃಷ್ಟಿಸುವ ಮೂಲಕ ಅಸಭ್ಯ, ಅಶ್ಲೀಲ ವರ್ತನೆಗಳಿಂದ ಬಿಗ್​ಬಾಸ್​ನ ಟಿಆರ್​ಪಿ ಹೆಚ್ಚಿಸುವಲ್ಲಿ ಈ ದಂಪತಿ ಬಹುದೊಡ್ಡ ಕೊಡುಗೆ ನೀಡಿದ್ದರು.  ಒಂದು ಹಂತದಲ್ಲಿ ಅಂಕಿತಾ ಪತಿಯ ಮೇಲೆ ಚಪ್ಪಲಿ ಕೂಡ ಎಸೆದು ಅಸಭ್ಯವಾಗಿ ವರ್ತಿಸಿದ್ದರು. ತಾವು ಗರ್ಭಿಣಿ ಎಂದು ಹೇಳುವ ಮೂಲಕ ಪ್ರಚಾರ ಗಿಟ್ಟಿಸಿಕೊಂಡಿದ್ದರು.

ವಿಕ್ಕಿ ಜೈನ್​ ಕೆಲ ವಾರಗಳಲ್ಲಿ ಬಿಗ್​ಬಾಸ್​ನಿಂದ ಹೊರಕ್ಕೆ ಬಂದಿದ್ದರೆ, ಅಂಕಿತಾ ನಾಲ್ಕನೇ ರನ್ನರ್​ ಅಪ್​ ಆದರು. ಈ ಬಗ್ಗೆ ಹೊರಕ್ಕೆ ಬಂದು ಬಹಳ ಬೇಸರ ಕೂಡ ವ್ಯಕ್ತಪಡಿಸಿದ್ದಿದೆ. ಬಿಗ್​ಬಾಸ್​ನಲ್ಲಿ ಗೆಲ್ಲಲಿ, ಬಿಡಲಿ ಅಲ್ಲಿ ಹೋಗಿ ಬಂದವರೆಲ್ಲರೂ ಸೆಲೆಬ್ರಿಟಿಗಳಾಗುವುದು ಮಾಮೂಲು. ಅಭಿಮಾನಿಗಳ ಸಂಖ್ಯೆಯೂ ಏರುತ್ತದೆ. ಅದೇ  ರೀತಿ ಇದೀಗ ಅಂಕಿತಾ ಪಬ್ಲಿಕ್​ ಫಿಗರ್​ ಆಗಿ ಹೊಮ್ಮಿದ್ದಾರೆ. ಬಿಗ್​ಬಾಸ್​ ಮನೆಯಲ್ಲಿ ತಾವು ಗರ್ಭಿಣಿ, ಪಿರಿಯಡ್ಸ್ ಮಿಸ್​ ಆಯಿತು ಎಂದು ಭಾರಿ ಡ್ರಾಮಾ ಮಾಡಿದ್ದರು ಅಂಕಿತಾ. ಹೇಳಿಕೇಳಿ ಅದು ಬಿಗ್​ಬಾಸ್​, ಕೇಳಬೇಕೆ? ಹೀಗೆ ಮಾಡುವ ಮೂಲಕ ಸಕತ್​ ಖ್ಯಾತಿಯೂ ಅವರಿಗೆ ಸಿಕ್ಕಿತು.

ಆಗ ನನಗಿನ್ನೂ 19 ವರ್ಷ... ಸೌತ್​ ನಿರ್ಮಾಪಕ ಮಂಚಕ್ಕೆ ಕರೆದ್ರು... ಅನುಭವ ಹೇಳಿದ ಬಿಗ್​ಬಾಸ್​ ಅಂಕಿತಾ

ಇದಾದ ಬಳಿಕ ಬಿಗ್​ಬಾಸ್​ನಲ್ಲಿಯೇ ಇಬ್ಬರೂ ಡಿವೋರ್ಸ್​ ಬಗ್ಗೆ ಮಾತನಾಡಿದರು. ಮನೆಯಿಂದ ಹೊರಕ್ಕೆ ಹೋಗುತ್ತಿದ್ದಂತೆಯೇ ಪತಿಗೆ ಡಿವೋರ್ಸ್​ ಕೊಡುವುದಾಗಿ ಹೇಳಿ ಮತ್ತೊಂದಿಷ್ಟು ದಿನ ಪ್ರಚಾರದಲ್ಲಿ ಇದ್ದರು. ಎಲ್ಲವೂ ಅವರು ಅಂದುಕೊಂಡಂತೆ ನಡೆಯಿತು. ಪ್ರಚಾರ ಸಕತ್​ ಸಿಕ್ಕಿತು. ಬಿಗ್​ಬಾಸ್​ ಮನೆಯಿಂದ ಹೊರಕ್ಕೆ ಬಂದ ಮೇಲೆ ಒಂದೊಂದು ರೀತಿಯ ವೇಷದಲ್ಲಿ ಈ ದಂಪತಿ ಮತ್ತೆ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ದಾಂಪತ್ಯ ಎಂಬ ಪವಿತ್ರ ಬಂಧನವನ್ನೇ ಪ್ರಚಾರಕ್ಕೆಂದು ಇಟ್ಟುಕೊಂಡು ಮಜ ತೆಗೆದುಕೊಳ್ಳುವ ಜೋಡಿ ಇವರದ್ದು.

ಅದೇನೇ ಇರಲಿ. ಬಿಗ್​ಬಾಸ್​ ಮನೆಯಲ್ಲಿ ತಾವು ಗರ್ಭಿಣಿ ಎನ್ನುವ ಮೂಲಕ ಸುಳ್ಳು ಪ್ರಚಾರ ಗಿಟ್ಟಿಸಿಕೊಂಡ ಅಂಕಿತಾಗೆ ಈಗ ನಿಜವಾಗಿಯೂ ಮಗು ಮಾಡಿಕೊಳ್ಳುವಂತೆ ಸಲ್ಮಾನ್​ ಖಾನ್​ ಸಲಹೆ ನೀಡಿದ್ದಾರೆ. ಸದ್ಯ ಪ್ರಚಾರದ ಹುಚ್ಚಿನಲ್ಲಿರುವ ಈ ಜೋಡಿ ಇಷ್ಟು ಬೇಗ ಮಕ್ಕಳನ್ನು ಮಾಡಿಕೊಳ್ಳುವುದಿಲ್ಲ ಎಂದು ಹಲವರು ಹೇಳುತ್ತಿದ್ದರೆ, ಇನ್ನೂ ಮದುವೆಯಾದ ಸಲ್ಮಾನ್​ ಖಾನ್​ ಮಕ್ಕಳನ್ನು ಮಾಡಿಕೊಳ್ಳುವುದಕ್ಕೆ ಸಲಹೆ ನೀಡುತ್ತಿರುವುದಕ್ಕೆ ಹಲವರು ಕಾಲೆಳೆಯುತ್ತಿದ್ದಾರೆ. 

ಮಗನ ಹೊಡೆದು, ಚಪ್ಪಲಿ ಎಸೆದ ಬಿಗ್​ಬಾಸ್​ ಡ್ರಾಮಾಕ್ವೀನ್ ​ಅಂಕಿತಾ ಲೋಖಂಡೆ ಅತ್ತೆಯಿಂದ ಶಾಕಿಂಗ್​ ಹೇಳಿಕೆ!

ಅಂದಹಾಗೆ ಈಚೆಗಷ್ಟೇ ಅಂಕಿತಾ ಕಾಸ್ಟಿಂಗ್​ ಕೌಚ್​ ಕುರಿತು ಮಾತನಾಡಿ ಪ್ರಚಾರದಲ್ಲಿದ್ದರು.  19 ವರ್ಷ ವಯಸ್ಸಿಗೆಲ್ಲಾ ವಯಸ್ಸು ಮೀರಿದ  ಪ್ರಬುದ್ಧತೆ ನನಗೆ ಬಂದಿತ್ತು.  ನಟನೆ ಆಸಕ್ತಿ ಇದ್ದಿದ್ದರಿಂದ ಆಡಿಷನ್‌ ಕೊಡುತ್ತಿದ್ದೆ. ಹೀಗಿರುವಾಗಲೇ ಸೌತ್‌ ಸಿನಿಮಾವೊಂದರ ಆಡಿಷನ್‌ಗೆ ಹೋದಾಗ ನಿರ್ಮಾಪಕ ಮಂಚಕ್ಕೆ ಕರೆದ ಘಟನೆ ನಡೆಯಿತು.  ಇದರಿಂದ ತುಂಬಾ ಶಾಕ್​ ಆದೆ.  ಆದರೂ ಧೈರ್ಯ ಕಳೆದುಕೊಳ್ಳದೇ, ನಿಮ್ಮ ನಿರ್ಮಾಪಕರ ಜತೆ ಮಲಗಲು ಒಬ್ಬ ಹುಡುಗಿ ಬೇಕಾಗಿದ್ದಾಳೆಯೇ ಹೊರತು, ಸಿನಿಮಾದಲ್ಲಿ ನಟಿಸಲು ಪ್ರತಿಭಾವಂತ ಹುಡುಗಿ ಬೇಕಿಲ್ಲ ಎಂದು ತಿರುಗೇಟು ಕೊಟ್ಟು ಹೊರಟು ಬಂದೆ. ನಂತರ  ಅದೇ ನಿರ್ಮಾಪಕ ಕ್ಷಮೆ ಕೋರಿ,  ಅದೇ ಸಿನಿಮಾದಲ್ಲಿ ಚಾನ್ಸ್‌ ನೀಡುವುದಾಗಿಯೂ ಹೇಳಿದ. ಆದರೆ ನಾನು ಒಪ್ಪಿಕೊಳ್ಳಲಿಲ್ಲ ಎಂದು ಹೇಳಿದ್ದರು. 
 

Latest Videos
Follow Us:
Download App:
  • android
  • ios