ಮಗಳ ಬಾಳಲ್ಲಿ ಕಂಟಕವಾದ ಶ್ರೇಷ್ಠಾಳ ಕಥೆ ಮುಗಿಸೇ ಬಿಟ್ಟಳು ಅಮ್ಮ ಸುನಂದಾ? ಫ್ಯಾನ್ಸ್ ಫುಲ್ ಖುಷ್!
ಮಗಳು ಭಾಗ್ಯಳ ಬಾಳಲ್ಲಿ ಕಂಟಕವಾಗಿರೋ ಶ್ರೇಷ್ಠಾಳನ್ನು ಮುಗಿಸಿಯೇ ಬಿಟ್ಟಳಾ ಅಮ್ಮ ಸುನಂದಾ? ಪ್ರೊಮೋ ನೋಡಿ ಖುಷಿ ಪಟ್ಟ ನೆಟ್ಟಿಗರು!
ಅತ್ತೆ-ಮಾವ, ಮಕ್ಕಳನ್ನು ಕರೆದುಕೊಂಡು ಭಾಗ್ಯ ಮನೆ ಬಿಟ್ಟು ತವರು ಸೇರಿದ್ದಾಳೆ. ಗಂಡನಿಲ್ಲದೇ ಹೇಗೆ ಬಾಳುವುದು ಎನ್ನುವುದನ್ನು ತೋರಿಸಿಕೊಡುವ ಚಾಲೆಂಜ್ ಹಾಕಿದ್ದಾಳೆ. ನಿಮ್ಮ ಸಹಾಯ ಇಲ್ಲದೇ ನಾನು ಹೇಗೆ ಎಲ್ಲರನ್ನೂ ಸಾಕಬಲ್ಲೆ ಎನ್ನುವುದನ್ನು ತೋರಿಸುತ್ತೇನೆ ಎಂದು ಮಕ್ಕಳು, ಅತ್ತೆ-ಮಾವನನ್ನು ಕರೆದುಕೊಂಡು ಭಾಗ್ಯ ಮನೆಬಿಟ್ಟು ಹೋಗಿದ್ದಾಳೆ. ಈಗ ಇಬ್ಬರು ಬೆಳೆದುನಿಂತ ಮಕ್ಕಳು, ಅಮ್ಮ-ಅಮ್ಮ, ಅತ್ತೆ-ಮಾವ ಸೇರಿದಂತೆ ತಂಗಿ ಪೂಜಾ ಹಾಗೂ ಸುಂದ್ರಿ ಎಲ್ಲರ ಜವಾಬ್ದಾರಿಯನ್ನೂ ಭಾಗ್ಯ ಹೊತ್ತುಕೊಂಡಿದ್ದಾಳೆ. ಇಂಥ ಗಂಡ ನಿನಗೆ ಬೇಕಾ, ಬಿಟ್ಟು ಬಾ ಎಂದು ಒಂದೇ ಸಮನೆ ಕಮೆಂಟ್‌ನಲ್ಲಿ ಭಾಗ್ಯಳಿಗೆ ಬುದ್ಧಿ ಹೇಳುತ್ತಿದ್ದವರು ಫುಲ್ ಖುಷ್ ಆಗಿದ್ದಾರೆ. ಹೀಗೆ ಗಂಡನ ಮನೆ ಬಿಟ್ಟು ತವರು ಸೇರುವ ಹೆಣ್ಣುಮಕ್ಕಳನ್ನು ನಿಜ ಜೀವನದಲ್ಲಿ ಇದೇ ಕಮೆಂಟಿಗರು ಎಷ್ಟು ಪ್ರೋತ್ಸಾಹ ಕೊಡುತ್ತಾರೋ ಗೊತ್ತಿಲ್ಲ, ಒಟ್ಟಿನಲ್ಲಿ ಸೀರಿಯಲ್‌ನಲ್ಲಿ ಮುಂಚಿನಿಂದಲೂ ಭಾಗ್ಯಳ ಮೇಲೆ ಆಗುತ್ತಿರುವ ಅನ್ಯಾಯವನ್ನು ಕಣ್ಣಾರೆ ಕಂಡವರಂತೂ ಭಾಗ್ಯಳಿಗೆ ಗಂಡನನ್ನು ಬಿಟ್ಟುಬಿಡಲು ಸಲಹೆ ಕೊಟ್ಟು ಈಗ ಖುಷಿಯಿಂದ ಇದ್ದಾರೆ. ಗಂಡನಿಗೆ ವಿಚ್ಛೇದನ ಕೊಡದಿದ್ದರೂ ಲವರ್ ಶ್ರೇಷ್ಠಾಳ ಕೈಗೆ ಭಾಗ್ಯ ತನ್ನ ಗಂಡನನ್ನು ಒಪ್ಪಿಸಿ ಬಂದಾಗಿದೆ.
ಅತ್ತ ಸಂತೋಷ ಆಗಿರುವ ಬದಲು ತಾಂಡವ್ ಕೊತ ಕೊತ ಕುದಿಯುತ್ತಿದ್ದಾನೆ. ಮಕ್ಕಳನ್ನುಹೇಗಾದರೂ ವಾಪಸ್ ಕರೆತರುವ ಪಣ ತೊಟ್ಟಿದ್ದಾನೆ. ಇನ್ನು ಶ್ರೇಷ್ಠಾಳೋ ತಾನು ಗೆದ್ದು ಬೀಗಿದೆ ಎನ್ನುವ ಖುಷಿಯಲ್ಲಿದ್ದಾಳೆ. ಆದರೆ ಸುಮ್ಮನೇ ಇರದೇ ಭಾಗ್ಯಳ ತವರಿಗೆ ಹೋಗಿ ಕಿರಿಕ್ ಮಾಡುತ್ತಿದ್ದಾಳೆ. ಇದಾಗಲೇ ಕುಸುಮಾ, ಭಾಗ್ಯ, ಭಾಗ್ಯಳ ಅಮ್ಮ ಸುನಂದಾ ಅವರಿಂದ ಹಲವು ಬಾರಿ ಕಪಾಳಮೋಕ್ಷ ಮಾಡಿಸಿಕೊಂಡರೂ ಆಕೆಗೆ ಬುದ್ಧಿ ಬಂದಿಲ್ಲ. ಭಾಗ್ಯಳ ಬದುಕನ್ನು ಇನ್ನಷ್ಟು ಛಿದ್ರ ಮಾಡುವುದೇ ಅವಳಿಗೆ ಇರುವ ಗುರಿಯಾಗಿದೆ. ಅದೇ ಇನ್ನೊಂದೆಡೆ, ಅಕ್ಕ ಪಕ್ಕದ ಮನೆಯವರ ಕುಹಕದ ಮಾತುಗಳು. ಗಂಡನನ್ನು ಬಿಟ್ಟು ಬಂದ ಮಹಿಳೆಗೆ ಈ ಸಮಾಜ ಹೇಗೆಲ್ಲಾ ಚುಚ್ಚಿ ಹಿಂಸೆ ಕೊಡುತ್ತದೆಯೋ ಅದನ್ನೇ ಈ ಸೀರಿಯಲ್‌ನಲ್ಲಿಯೂ ತೋರಿಸಲಾಗಿದೆ.
ಅಪ್ಪು ನಿಜವಾಗಿ ಸತ್ತಿದ್ದು ಹೇಗೆ? ಈಗ ಎಲ್ಲಿದ್ದಾರೆ? ಆತ್ಮದ ಜೊತೆ ಸಂಭಾಷಿಸಿದ ರಾಮಚಂದ್ರ ಗುರೂಜಿ
ಹೆಣ್ಣೊಬ್ಬಳು ಎಷ್ಟೇ ಮುಂದೆ ಬಂದರೂ, ಗಂಡ ಎಂಥದ್ದೇ ಕ್ರೂರಿಯಾಗಿದ್ದರೂ ಅದು ಲೆಕ್ಕಕ್ಕೆ ಬರುವುದೇ ಇಲ್ಲ. ಗಂಡನೇ ದೇವರು, ಆತನೇ ಸರ್ವಸ್ವ, ಏನೇ ಆದರೂ ಅವನ ಜೊತೆ ಬಾಳಬೇಕು ಎನ್ನುವ ಕ್ರೂರ ಮನಸ್ಥಿತಿಯಿಂದ ಸಮಾಜ ಹೇಗೆ ಹೊರಕ್ಕೆ ಬಂದಿಲ್ಲ ಎನ್ನುವುದನ್ನು ಇದಾಗಲೇ ಈ ಸೀರಿಯಲ್ ಮೂಲಕ ತೋರಿಸಲಾಗಿದೆ. ಒಂದು ಹೆಣ್ಣು, ಆಕೆಯ ಕುಟುಂಬದವರು ದುಃಖದಲ್ಲಿ ಇರುವಾಗ ಅವರನ್ನು ಇನ್ನಷ್ಟು ಹೇಗೆ ನೋಯಿಸಬೇಕು ಎಂದು ಅಕ್ಕ ಪಕ್ಕದ ಮಹಿಳೆಯರೇ ಹೇಗೆ ಮುಂದೆ ಬರುತ್ತಾರೆ ಎನ್ನುವುದು ಕೂಡ ಈ ಭಾಗ್ಯಲಕ್ಷ್ಮಿಯಲ್ಲಿ ತೋರಿಸಲಾಗಿದೆ. ಇದನ್ನೆಲ್ಲಾ ಕೇಳಿ ಕೇಳಿ ಸುನಂದಾ ರೋಸಿ ಹೋಗಿದ್ದಾಳೆ. ಚಾಕು ಹಿಡಿದು ಮನೆಯಿಂದ ನಡೆದಿದ್ದಾಳೆ.
ಸುನಂದಾ ಎಲ್ಲಿ ಹೋದಳು ಎಂದು ಮನೆಯವರೆಲ್ಲರೂ ಹುಡುಕಾಡಿದ್ದಾರೆ. ಮನೆಯಲ್ಲಿಯೇ ಫೋನ್ ಬಿಟ್ಟು ಹೋಗಿರುವ ಸುನಂದಾ ಎಲ್ಲಿ ಹೋದಳು ಎನ್ನುವುದು ತಿಳಿಯುತ್ತಿಲ್ಲ. ಅದರೆ ಸುನಂದಾ ನೇರವಾಗಿ ಹೋಗಿರುವುದು ಶ್ರೇಷ್ಠಾ ಇದ್ದಲ್ಲಿ. ಅವಳಿಗೆ ಎಚ್ಚರಿಕೆ ಕೊಟ್ಟು ಮಗಳ ಬಾಳಿನಲ್ಲಿ ಆಟವಾಡಬೇಡ ಎಂದು ಹೇಳಲು ಹೋಗಿದ್ದಾಳೆ. ಆದರೆ ಶ್ರೇಷ್ಠಾ ಕೇಳಬೇಕಲ್ಲ. ಸುನಂದಾಳನ್ನು ಮತ್ತಷ್ಟು ಉರಿಸಿದ್ದಾಳೆ. ಮೊದಲೇ ಚಾಕು ಹಿಡಿದು ಬಂದ ಸುನಂದಾ ಕೆಟ್ಟ ಕೋಪದಲ್ಲಿ ಶ್ರೇಷ್ಠಾಳ ಹೊಟ್ಟೆಗೆ ಚುಚ್ಚಿರುವಂತೆ ಪ್ರೊಮೋ ತೋರಿಸಲಾಗಿದೆ. ನಿಜಕ್ಕೂ ಅವಳು ಚಾಕು ಹಾಕಿದ್ಲಾ? ಮುಂದೇನು? ಶ್ರೇಷ್ಠಾಳ ಗತಿಯೇನು ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ. ನಿಜಕ್ಕೂ ಸಾಯಿಸಿದರೆ ಒಳ್ಳೆಯದಿತ್ತು, ಇದು ನಿಜವಾಗಲಿ, ಕನಸಾಗುವುದು ಬೇಡ ಎಂಬ ಕಮೆಂಟ್‌ಗಳೇ ಹೆಚ್ಚಾಗಿ ಕಾಣಿಸುತ್ತಿದೆ.
ರಾಗಿ ಹಿಟ್ಟು ಕೊಟ್ಟು ನನ್ನನ್ನು ಖರೀದಿಸಿದ್ರು... 'ಥಟ್ ಅಂತ ಹೇಳಿ' ಖ್ಯಾತಿಯ ಸೋಮೇಶ್ವರ್ ಮಾತು ಕೇಳಿ!