ಆರ್ಯವರ್ಧನ್ ಮ್ಯಾಚ್ ಫಿಕ್ಸಿಂಗ್ ಆರೋಪ ಸುದೀಪ್ ಅವರನ್ನು ಕೆರಳಿಸಿದೆ. ವೇದಿಕೆ ಮೇಲೆ ಕಿಚ್ಚ ಸುದೀಪ್ ಕೆಂಡ ಆಗಿದ್ದಾರೆ. 

ಬಿಗ್ ಬಾಸ್ ಮನೆ ತಾರಕಕ್ಕೇರಿದೆ. ಸೂಪರ್ ಸಂಡೇ ವಿತ್ ಸುದೀಪ್ ಭಾನುವಾರದ ಸಂಚಿಕೆ ಹೊತ್ತಿ ಉರಿದಿದೆ. ಆರ್ಯವರ್ಧನ್ ಮ್ಯಾಚ್ ಫಿಕ್ಸಿಂಗ್ ಆರೋಪ ಸುದೀಪ್ ಅವರನ್ನು ಕೆರಳಿಸಿದೆ. ವೇದಿಕೆ ಮೇಲೆ ಕಿಚ್ಚ ಸುದೀಪ್ ಕೆಂಡ ಆಗಿದ್ದಾರೆ. ಆರ್ಯವರ್ಧನ್ ಅವರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಆರ್ಯವರ್ಧನ್ ಗುರೂಜಿ ಬಿಗ್ ಬಾಸ್ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ ಮಾಡಿದ್ದಾರೆ. ಬಿಗ್ ಬಾಸ್ ಅನುಪಮಾ ಗೌಡ ಪರ ಇದೆ, ಅವರನ್ನೇ ಗೆಲ್ಲಿಸೋದು ಎಂದು ಆರ್ಯವರ್ಧನ್ ಆರೋಪ ಮಾಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಏನಿದು ಆರ್ಯವರ್ಧನ್ ಆರೋಪ? 

ಭಾನುವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಎಂದಿನಂದೆ ಸ್ಪರ್ಧಿಗಳ ಜೊತೆ ಮಾತನಾಡಿದ್ದಾರೆ. ಸ್ಪರ್ಧಿಗಳಿಗೆ ಪ್ರಶ್ನೆ ಕೇಳಿದ್ದಾರೆ. 'ಈ 16 ಮಂದಿಯಲ್ಲಿ ಟಾಪ್ 2 ಯಾರು ಆಗ್ತಾರೆ ಎಂದು ಕೇಳಿದರು. ಸ್ಪರ್ಧಿಗಳು ಒಬ್ಬರ ಹೆಸರನ್ನು ಹೇಳುತ್ತಿದ್ದರು. ಆರ್ಯವರ್ಧನ್ ಗುರೂಜಿ, ಅನುಪಮಾ ಹೆಸರು ಹೇಳಿ ಬಿಗ್ ಬಾಸ್‌ಗೂ ಅನುಪಮಾ ಒಳಗಡೆ ಬರ್ಬೇಕು ಅಂತ ಆಸೆ ಇತ್ತು ಎಂದು ಹೇಳಿದರು. ಇದರಿಂದ ಕೆರಳಿದ ಸುದೀಪ್ ಹಾಗೆಲ್ಲ ಮಾತನಾಡಬೇಡಿ ಸರ್ ಎಂದು ಹೇಳಿದರು. 'ಬಂಗಾರದ ಟಾಸ್ಕ್ ನಲ್ಲಿ ಎಷ್ಟು ಬಂಗಾರ ಇದೆ ಅಂತ ಗೊತ್ತಿದ್ದರೂ ಅನುಪಮಾನ ಒಳಗಡೆ ಕರೆಸುತ್ತಾರೆ ಅಂದರೆ ಏನು ಅರ್ಥ. ಮ್ಯಾಚ್ ಫಿಕ್ಸಿಂಗ್ ಆಗಿದೆ ಇಲ್ಲಿ' ಎಂದು ಗಂಭೀರ ಅರೋಪ ಮಾಡಿದರು. ಸುದೀಪ್ ಸ್ಪರ್ಧಿಗಳಲ್ಲಿ ನಿಮಗೆ ಹಾಗೆ ಅನಿಸಿತಾ ಎಂದು ಕೇಳಿದರು. ಸ್ಪರ್ಧಿಗಳೆಲ್ಲಾ ಇಲ್ಲ ಎಂದರು. 

BBK9; ಬಿಗ್ ಮನೆಯಲ್ಲಿ ಮಕ್ಕಳದ್ದೇ ದರ್ಬಾರು, ಮಗುವನ್ನು ತಬ್ಬಿ ಬಿಕ್ಕಿ ಬಿಕ್ಕಿ ಅತ್ತ ಮಯೂರಿ

ಅರ್ಯವರ್ಧನ್ ಮಾತಿನಿಂದ ಕೆಂಡವಾದ ಸುದೀಪ್ ಮಾತಿನ ಮೇಲೆ ನಿಗಾ ಇರಲಿ ಎಂದು ಎಚ್ಚರಿಕೆ ನೀಡಿದರು. ಆದರೂ ಸಹ ಆರ್ಯವರ್ದನ್ ಯೋಚನೆ ಮಾಡಿ ಹೇಳಬೇಕಲ್ಲ ಹಾಗಾಗಿ ಹೇಳುತ್ತಿದ್ದೀನಿ ಎಂದು ತನ್ನ ಮಾತನ್ನು ಸಮರ್ಥಿಸಿಕೊಂಡರು. ಮ್ಯಾಚ್ ಫಿಕ್ಸಿಂಗ್ ಅಂದರೆ ಏನು? ಅಲ್ಲಿ ಕುಳಿತು ಆಡುತ್ತಿರುವವರೆಲ್ಲ ಏನು ಹಾಗಾದ್ರೆ, ಯಾರಿಗೂ ಯೋಗ್ಯತೆ ಇಲ್ವಾ, ಮೋಸ ಮಾಡಿ ಗೆಲ್ತಾ ಇದ್ದಾರಾ ಎಂದು ಸುದೀಪ್ ಏರು ಧ್ವನಿಯಲ್ಲಿ ಪ್ರತಿಕ್ರಿಯೆ ನೀಡಿದರು.

View post on Instagram

BBK9 ಊರು ಜಾತ್ರೆಯಲ್ಲೊಬ್ಬ ಕ್ರಶ್, ತಿರುಪತಿಯಲ್ಲೊಬ್ಬ ಕ್ರಶ್; ಮಂಗಳಗೌರಿ ಕಾವ್ಯಾ ಶಾಕಿಂಗ್ ಲವ್

ಜನರಲ್ಲಾಗಿ ನಾನು ಹೇಳಿದ್ದು ಎಂದು ಆರ್ಯವರ್ದನ್ ಮತ್ತೆ ಮಧ್ಯೆ ಮಾತಾಡಿದರು. 'ನಿಮ್ಮ ವ್ಯಕ್ತಿತ್ವದ ಮೇಲೆ ಮಾತನಾಡಿದರೆ ಇಷ್ಟು ಉದ್ದ ಮಾತನಾಡುತ್ತೀರಾ. ಈ ವೇದಿಕೆ ಮರ್ಯಾದೆ ತೆಗೆದರೆ ಸತ್ಯವಾಗಿ ಹೇಳ್ತೀನಿ, ನನಗೆ ನಿಮಗೆ ಇಲ್ಲೆ ಕೊನೆಯಾಗುತ್ತೆ' ಎಂದು ಸುದೀಪ್ ಖಡಕ್ ವಾರ್ನಿಂಗ್ ನೀಡಿದರು. ಸದ್ಯ ಇವತ್ತಿನ ಸಂಚಿಕೆಯ ಪ್ರೋಮೋ ರಿಲೀಸ್ ಆಗಿದೆ. ಈ ಪ್ರೋಮೋ ಈಗ ವೈರಲ್ ಆಗಿದೆ. ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.