MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ವಿದ್ಯಾರ್ಥಿ ಪ್ರತಿಭಟನೆ ಕುರಿತು ಪೋಸ್ಟ್, 3 ಲಕ್ಷ ಫಾಲೋವರ್ಸ್ ಕಳೆದುಕೊಂಡ ಬಿಗ್ ಬಾಸ್ ಮಾಜಿ ವಿನ್ನರ್

ವಿದ್ಯಾರ್ಥಿ ಪ್ರತಿಭಟನೆ ಕುರಿತು ಪೋಸ್ಟ್, 3 ಲಕ್ಷ ಫಾಲೋವರ್ಸ್ ಕಳೆದುಕೊಂಡ ಬಿಗ್ ಬಾಸ್ ಮಾಜಿ ವಿನ್ನರ್

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ಕುರಿತು ಇತ್ತೀಚೆಗೆ ಬಿಗ್ ಬಾಸ್ ಮಾಜಿ ವಿನ್ನರ್, ನಟಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಪೋಸ್ಟ್ ಹಾಕಿದ್ದಾರೆ. ಈ ಪೋಸ್ಟ್‌ನಿಂದ 3 ಲಕ್ಷ ಫಾಲೋವರ್ಸ್ ಕಳೆದುಕೊಂಡಿದ್ದಾರೆ.

2 Min read
Author : Chethan Kumar
Published : Jul 26 2026, 05:37 PM IST
Share this Photo Gallery
  • FB
  • TW
  • Linkdin
  • Whatsapp
16
ಫಾಲೋವರ್ಸ್ ಕಳೆದುಕೊಂಡ ಬಿಗ್ ಬಾಸ್ ಮಾಜಿ ವಿನ್ನರ್
Image Credit : X

ಫಾಲೋವರ್ಸ್ ಕಳೆದುಕೊಂಡ ಬಿಗ್ ಬಾಸ್ ಮಾಜಿ ವಿನ್ನರ್

ದೆಹಲಿಯ ಜಂತರ್ ಮಂತರ್ ಸೇರಿದಂತೆ ದೇಶಾದ್ಯಂತ ನಡೆದ ನೀಟ್ ಪಶ್ನೆ ಪತ್ರಿಕೆ ಸೋರಿಕೆ ವಿರುದ್ಧದ ಪ್ರತಿಭಟನೆ ಅಂತ್ಯಗೊಂಡಿದೆ. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಬಳಿಕ ಪರಿಸ್ಥಿತಿ ತಣ್ಣಗಾಗಿದೆ. ಪ್ರತಿಭಟನೆ ವೇಳೆ ಪೊಲೀಸರ ಲಾಠಿ ಚಾರ್ಜ್ ಸೇರಿದಂತೆ ಹಲವು ಘಟನೆಗಳು ನಡೆದಿದೆ. ಈ ಬೆಳವಣಿಗೆ ಕುರಿತು, ವಿದ್ಯಾರ್ಥಿಗಳ ಭವಿಷ್ಯ ಹಾಗೂ ಜೀವನ ಕುರಿತು ಕಳಕಳಿ ವ್ಯಕ್ತಪಡಿಸಿ ಬಿಗ್ ಬಾಸ್ ಮಾಜಿ ವಿನ್ನರ್, ನಟಿ ಪರ್ಲೆ ಮೇನಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ ಫಾಲೋವರ್ಸ್ ಕಳೆದುಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಪರ್ಲೆ ಮೇನಿ ಹೇಳಿದ್ದೇನು?
Image Credit : ANI

ಪರ್ಲೆ ಮೇನಿ ಹೇಳಿದ್ದೇನು?

ವಿದ್ಯಾರ್ಥಿಗಳ ಪ್ರತಿಭಟನೆ ಕುರಿತು ಪರ್ಲೆ ಮೇನಿ ತೀವ್ರ ಕಳಕಳಿ ವ್ಯಕ್ತಪಡಿಸಿದ್ದರು. ವಿದ್ಯಾರ್ಥಿಗಳ ಬೇಡಿಕೆ ಅತ್ಯಂತ ಗಂಭೀರವಾಗಿದೆ. ಆದರೆ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳಿಗೆ ಗಾಯಗಳು ಆಗದಿರಲಿ, ಎಲ್ಲರೂ ಸುರಕ್ಷಿತವಾಗಿರಬೇಕು. ಜೀವಕ್ಕೆ ಅಪಾಯವಿದೆ ಎಂದೆನಿಸುತ್ತಿದ್ದರೆ ಮನೆಗೆ ಹಿಂದಿರುಗಿ. ಜೀವಕ್ಕಿಂತ ಮಿಗಿಲಾದ ಹೋರಾಟವಿಲ್ಲ. ವಿದ್ಯಾರ್ಥಿಗಳಿಗೆ ನ್ಯಾಯ ಸಿಗಬೇಕು, ಉತ್ತಮ ಶಿಕ್ಷಣ ಸಿಗಬೇಕು. ಆದರೆ ಪ್ರತಿಭಟನೆಯ ಮೂಲಕ ಉದ್ದೇಶದ ಹಾದಿ ತಪ್ಪದಿರಲಿ, ವಿದ್ಯಾರ್ಥಿಗಳು ಮನೆಗೆ ಹಿಂದಿರುಗಿ ಎಂದು ಪರ್ಲೆ ಮೇನಿ ಸೋಶಿಯಲ್ ಮೀಡಿಯಾ ಮೂಲಕ ಮನವಿ ಮಾಡಿದ್ದರು.

Related Articles

Related image1
ಬಿಗ್ ಬಾಸ್ ಸೀಸನ್ 13 – ದೊಡ್ಮನೆಗೆ ಬರುವ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ವೈರಲ್
Related image2
ಹೋಟೆಲ್ ರೂಮಿಗೆ ಕರೆದು ತಡರಾತ್ರಿವರೆಗೂ ಕೂರಿಸಿದ್ರು: ಆ ಭಯಾನಕ ಸತ್ಯ ಬಿಚ್ಚಿಟ್ರು 'ಬಿಗ್ ಬಾಸ್' ಫರ್ಹಾನಾ
36
ಕಮೆಂಟ್ ಸೆಕ್ಷನ್ ಆಫ್ ಮಾಡಿದ ಪೆರ್ಲೆ ಮೇನಿ
Image Credit : Instagram/ Pearle Maaney

ಕಮೆಂಟ್ ಸೆಕ್ಷನ್ ಆಫ್ ಮಾಡಿದ ಪೆರ್ಲೆ ಮೇನಿ

ಬಿಗ್ ಬಾಸ್ ಮಾಜಿ ವಿನ್ನರ್ ಪೋಸ್ಟ್‌ಗೆ ಹಲವರು ಕೆರಳಿದ್ದಾರೆ. ನೀವು ಬಾಯಿಗೆ ಚಿನ್ನದ ಸ್ಪೂನ್ ಇಟ್ಟುಕೊಂಡು ಬಂದಿದ್ದೀರಿ. ನಾವು ನಮ್ಮ ಹಕ್ಕು, ಉತ್ತಮ ಜೀವನಕ್ಕಾಗಿ ಹೋರಾಡುತ್ತಿದ್ದೇವೆ. ವಾಕ್ ಸ್ವಾತಂತ್ರ್ಯ ಎಂದು ಹೇಳುವ ನೀವು ಕಮೆಂಟ್ ಸೆಕ್ಷನ್ ಆಫ್ ಮಾಡಿ ಓಡಿ ಹೋಗಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. ಹಲವರು ಸಂಘಿ, ಬಿಜೆಪಿ ಬಕೆಟ್ ಎಂದೆಲ್ಲಾ ಸೋಶಿಯಲ್ ಮೀಡಿಯಾ ಮೂಲಕ ಆಕ್ರೋಶ ಹೊರಹಾಕಿದ್ದರು.

46
ನನಗೆ ಕೇಸರಿ ಬಣ್ಣ ಇಷ್ಟ, ಧ್ವಜದಲ್ಲಿದೆ ಕೇಸರಿ
Image Credit : X

ನನಗೆ ಕೇಸರಿ ಬಣ್ಣ ಇಷ್ಟ, ಧ್ವಜದಲ್ಲಿದೆ ಕೇಸರಿ

ಟೀಕೆಗಗಳು ತೀವ್ರಗೊಳ್ಳುತ್ತಿದ್ದಂತೆ ಪರ್ಲೆ ಮೇನಿ ನೆಗಟೀವ್ ಕಮೆಂಟ್ ಮಾಡಿದವರ ವಿರುದ್ದ ಕಿಡಿ ಕಾರಿದ್ದರು. ನಾನು ಶಾಂತಿ ಹಾಗೂ ಅಂಹಿಸೆ ಬಯಸಿದ್ದೆ. ಆದರೆ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ. ಈ ಪೈಕಿ ಸೋತ ನಿರ್ಮಾಪಕರೊಬ್ಬರು 4 ಪುಟಗಳ ನನ್ನ ಪೋಸ್ಟ್‌ಗೆ 10 ಪುಟಗಳ ಮಸಾಲೆ ಸ್ಕ್ರಿಪ್ಟ್ ಮಾಡಿ ಹರಿಬಿಟ್ಟಿದ್ದಾರೆ. ನನ್ನ ನೆಚ್ಚಿನ ಬಣ್ಣ ಕೇಸರಿ, ಭಾರತದ ಧ್ವಜದ ಬಣ್ಣ ಕೇಸರಿ ಎಂದು ಮೇನಿ ತಿರುಗೇಟು ನೀಡಿದ್ದರು.

56
3 ಲಕ್ಷ ಫಾಲೋವರ್ಸ್ ಕಡಿತ
Image Credit : our own

3 ಲಕ್ಷ ಫಾಲೋವರ್ಸ್ ಕಡಿತ

ಪರ್ಲ್ ಮೇನಿ ಪೋಸ್ಟ್‌ ಮಾಡಿದ ಬಳಿಕ ಹಲವರು ಈಕೆ ಬಿಜೆಪಿ ಪರ, ಸಂಘಿ ಎಂದು ಬಿಂಬಿಸಿದ್ದಾರೆ. ಇಷ್ಟೇ ಅಲ್ಲ ಹಲವರು ಅನ್‌ಫಾಲೋ ಮಾಡಿದ್ದಾರೆ. 2.7 ಮಿಲಿಯನ್ ಫಾಲೋವರ್ಸ್‌ನಿಂದ ಒಂದು ಪೋಸ್ಟ್‌ನಿಂದ 2.4 ಮಿಲಿಯನ್ ಫಾಲೋವರ್ಸ್‌ಗೆ ಕುಸಿದಿದ್ದಾರೆ. ಕೇವಲ 48 ಗಂಟೆಗಳಲ್ಲಿ 3 ಲಕ್ಷ ಫಾಲೋವರ್ಸ್ ಕಳೆದುಕೊಂಡಿದ್ದಾರೆ. ಈಗಲೂ ನಟಿ ವಿರುದ್ಧ ಹಲವು ತಾಣಗಳಲ್ಲಿ ಕೆಟ್ಟದಾಗಿ ಕಮೆಂಟ್ ಮಾಡಲಾಗುತ್ತಿದೆ.

66
ಪರ ವಿರೋಧ ಜಟಾಪಟಿ
Image Credit : Instagram

ಪರ ವಿರೋಧ ಜಟಾಪಟಿ

ಈ ಪೋಸ್ಟ್ ಕುರಿತು ಪರ ವಿರೋಧಗಳು ಹೆಚ್ಚಾಗುತ್ತಿದೆ. ಈ ಪೈಕಿ ನಿರ್ಮಾಪಕರೊಬ್ಬರು ಎಂದು ಪರ್ಲೆ ಮೇನಿ ಹೆಸರು ಹೇಳದೆ ಮಾಡಿದ ಪ್ರತಿಕ್ರಿಯೆಗೆ ಹಿರಿಯ ಮಲಯಾಳಂ ನಿರ್ದೇಶಕ ಸಿಬಿ ಮಲಯಿಲ್ ಪುತ್ರ ಜೋಯ ಮಯಿಲ್ ಪ್ರತಿಕ್ರಿಯಿಸಿದ್ದಾರೆ.ನನ್ನ ತಂದೆ ವಿರುದ್ದ ಕಮೆಂಟ್ ಮಾಡಿದ್ದೀರಿ. ವೈಯುಕ್ತಿಕ ದಾಳಿ ಮಾಡುತ್ತಿದ್ದೀರಿ ಎಂದು ಹರಿಹಾಯ್ದಿದ್ದಾರೆ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಬಿಗ್ ಬಾಸ್
ನೀಟ್
ಪ್ರತಿಭಟನೆ
ಜಿರಳೆ ಜನತಾ ಪಾರ್ಟಿ

Latest Videos
Recommended Stories
Recommended image1
Now Playing
ಬಿಗ್ ಬಾಸ್ ಮನೆಯಲ್ಲಿ ಕಾವ್ಯನಿಗೆ ಡಾರ್ಲಿಂಗ್ ಎಂದು, ಗಿಲ್ಲಿ ಫ್ಯಾನ್ಸ್ ಕೆಂಗಣಿಗೆ ಗುರಿಯಾದ ವಿನೋದ್ ಗೊಬ್ರಗಾಲ.!
Recommended image2
‘ಗೌರಿಶಂಕರ’ ಧಾರಾವಾಹಿ ಬಿಟ್ಟಿದ್ಯಾಕೆ? ಕೊನೆಗೂ ಮೌನ ಮುರಿದ ನಟಿ ದಿವ್ಯಾ ವಾಗುಕರ್!
Recommended image3
ಟಾಕ್ಸಿಕ್‌ ರಾಯನ ಮತ್ತೊಂದು ಹೊಸ ಲುಕ್ ರಿವೀಲ್, ಹೇಗಿದೆ ಗೊತ್ತಾ ರಾಕಿ ಹೊಸ ಅವತಾರ ?
Related Stories
Recommended image1
ಬಿಗ್ ಬಾಸ್ ಸೀಸನ್ 13 – ದೊಡ್ಮನೆಗೆ ಬರುವ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ವೈರಲ್
Recommended image2
ಹೋಟೆಲ್ ರೂಮಿಗೆ ಕರೆದು ತಡರಾತ್ರಿವರೆಗೂ ಕೂರಿಸಿದ್ರು: ಆ ಭಯಾನಕ ಸತ್ಯ ಬಿಚ್ಚಿಟ್ರು 'ಬಿಗ್ ಬಾಸ್' ಫರ್ಹಾನಾ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved