BBK9; ಬಿಗ್ ಮನೆಯಲ್ಲಿ ಮಕ್ಕಳದ್ದೇ ದರ್ಬಾರು, ಮಗುವನ್ನು ತಬ್ಬಿ ಬಿಕ್ಕಿ ಬಿಕ್ಕಿ ಅತ್ತ ಮಯೂರಿ


ಬಿಗ್ ಬಾಸ್ ಮನೆಗೆ ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ 2 ರಿಯಾಲಿಟಿ ಶೋ ಖ್ಯಾತಿಯ ಮಕ್ಕಳು ಎಂಟ್ರಿ ಕೊಟ್ಟಿದ್ದಾರೆ.

Nammamma Super star season 2 children enter to bigg boss Kannada 9 house sgk

ಬಿಗ್ ಬಾಸ್ ಕನ್ನಡ ಸೀಸನ್ 9 ಮೂರನೇ ವಾರವೂ ರೋಚಕವಾಗಿದೆ. ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಜೊತೆ ಅಳು, ನಗು, ಕಿತ್ತಾಟ, ವಾಗ್ವಾದ ಕೂಡ ಜೋರಾಗಿದೆ. ಈ ವಾರ ಕೂಡ ಬಿಗ್ ಬಾಸ್ ಮನೆಯಲ್ಲಿ ಕಿತ್ತಾಟವಿತ್ತು. ಕ್ಯಾಪ್ಟನ್ಸಿ ಟಾಸ್ಕ್‌‌ಗಾಗಿ ಬಿಗ್ ಮನೆ ಹೊತ್ತಿ ಉರಿಯುತ್ತಿತ್ತು. ಕ್ಯಾಪ್ಟನ್ ಆಯ್ಕೆಗೆ ಬಿಗ್ ಬಾಸ್ ಚಿನ್ನದ ಗಣಿ ಟಾಸ್ಕ್ ನೀಡಿದೆ. ಚಿನ್ನಕ್ಕಾಗಿ ಬಿಗ್ ಸ್ಪರ್ಧಿಗಳ ನಡುವೆ ಕಿತ್ತಾಟ ಜೋರಾಗಿದೆ. ಈ ನಡುವೆ ಸ್ಪರ್ಧಿಗಳಿಗೆ ಕೊಂಚ ಬ್ರೇಕ್ ನೀಡಿದ್ದಾರೆ ಸೂಪರ್ ಮಕ್ಕಳು. ಇವತ್ತು (ಅಕ್ಟೋಬರ್ 14) ಬಿಗ್ ಮನೆಯಲ್ಲಿ ಮಕ್ಕಳದ್ದೇ ದರ್ಬಾರು. 

ಬಿಗ್ ಬಾಸ್ ಮನೆಗೆ ನಮ್ಮಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಖ್ಯಾತಿಯ ಮಕ್ಕಳು ಎಂಟ್ರಿ ಕೊಟ್ಟಿದ್ದಾರೆ. ಬಿಗ್ ಮನೆತುಂಬಾ ಮಕ್ಕಳ ತುಂಟಾಟ, ಕೂಗಾಟ, ತರ್ಲೆ ನೋಡಿ ಸ್ಪರ್ಧಿಗಳು ಅಚ್ಚರಿ ಪಟ್ಟಿದ್ದಾರೆ. ಬಿಗ್ ಮನೆಗೆ ಎಂಟ್ರಿ ಕೊಡುತ್ತಿದ್ದಂತೆ ಮಕ್ಕಳ ಸಂಭ್ರಮ ಮುಗಿಲು ಮುಟ್ಟಿತ್ತು. ಸ್ಪರ್ಧಿಗಳು ಸಹ ಮಕ್ಕಳ ಜೊತೆ ಆಟವಾಡಿದ್ದಾರೆ. ಒಂದು ಮಗು ಪ್ರಶಾಂತ್ ಸಂಬರಗಿ ಭುಜದ ಮೇಲೆ ಕುಳಿತು ತಲೆಮೇಲೆ  ಸರಿಯಾಗಿ ಹೊಡೆಯುತ್ತಿದೆ. ಮತ್ತೊಂದು ಮಗು ರೂಪೇಶ್‌ಗೆ ತರಾಟೆ ತೆಗೆದುಕೊಂಡಿದೆ. ಇನ್ನು ನಟಿ ಮಯೂರಿ ಒಂದು ಮಗುವನ್ನು ತಬ್ಬಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಮಗುವನ್ನು ನೋಡಿದ ಮಯೂರಿ ತನ್ನ ಮಗು ಕೂಡ ಹೀಗೆ ಇದೆ ಎಂದು ತಬ್ಬಿಕೊಂಡು ಜೋರಾಗಿ ಅತ್ತಿದ್ದಾರೆ.  

ನಟಿ ಮಯೂರಿ ತನ್ನ ಪುಟ್ಟ ಮಗುವನ್ನು ಬಿಟ್ಟು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ತನ್ನ ಮಗು ಬಿಟ್ಟು ಬಂದಿರುವ ಮಯೂರಿಗೆ ಮಕ್ಕಳನ್ನು ನೋಡಿದ ತಕ್ಷಣ ಅಳು ತಡೆಯಲಾಗದೆ ಕಣ್ಣೀರಿಟ್ಟಿದ್ದಾರೆ. ತನ್ನ ಮಗನ ನೆನಪಾಗುತ್ತಿದೆ ಎಂದು ಹೇಳಿದ್ದಾರೆ.

BBK9 ಅನುಪಮಾ ಗೌಡ ಸ್ವಿಮ್ ಸ್ಯೂಟ್‌ ಫೋಟೋ ವೈರಲ್; ಆಟ ಈಗ ಶುರು ಎಂದ ನೆಟ್ಟಿಗರು


ಬಿಗ್ ಬಾಸ್ 9ಗೆ ಎಂಟ್ರಿ ಕೊಟ್ಟ ಸ್ಪರ್ಧಿಗಳು

ಅಂದಹಾಗೆ ಬಿಗ್‌ಬಾಸ್ 9 ಸೆಪ್ಟೆಂಬರ್ 24ರಿಂದ ಆರಂಭವಾಗಿದೆ. ಈ ಬಾರಿಯ ಬಿಗ್ ಬಾಸ್‌ನಲ್ಲಿ ಅರುಣ್ ಸಾಗರ್, ಅಶ್ವಿನ ನಕ್ಷತ್ರದ ಮೂಲಕ ಮನೆ ಮಾತಾಗಿದ್ದ ನಟಿ ಮಯೂರಿ, ದೀಪಿಕಾ ದಾಸ್, ನವಾಜ್,  ದಿವ್ಯಾ ಉರುಡುಗ, ದರ್ಶ್ ಚಂದ್ರಪ್ಪ, ಪ್ರಶಾಂತ್ ಸಂಬರಗಿ, ಅಮೂಲ್ಯ ಗೌಡ, ಸನ್ಯಾ ಅಯ್ಯರ್, ರೂಪೇಶ್ ಶೆಟ್ಟಿ, ವಿನೋದ್ ಗೊಬ್ರಗಾಲ (ಕಾಮಿಡಿ ಕಿಲಾಡಿಗಳು), ಲಕ್ಷ್ಮಿ ಬಾರಮ್ಮ ಸೀರಿಯಲ್ ಖ್ಯಾತಿಯ ನೇಹಾ ಗೌಡ,  ನಾನು ಅಂದ್ರೆ ನಂಬರ್, ನಂಬರ್ ಅಂದ್ರೆ ನಾನು ಎನ್ನುವ ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ, ಐಶ್ವರ್ಯಾ(ಬೈಕ್ ರೈಡರ್), ರೂಪೇಶ್ ರಾಜಣ್ಣ, ಮಂಗಳ ಗೌರಿಯ ಕಾವ್ಯಶ್ರೀ, ನಿರೂಪಕಿ ಅನುಪಮಾ ಗೌಡ ಸ್ಪರ್ಧಿಗಳಾಗಿ ಭಾಗಿಯಾಗಿದ್ದರು.

BBK9 ಗಿರಿರಾಜ ಕೋಳಿ ಮೊಟ್ಟೆ ಇಟ್ಟ ತಕ್ಷಣ ಕದ್ದು ಕುಡಿಯುತ್ತಿದ್ದೆ; ಮಂಗಳ ಗೌರಿ ಬಾಲ್ಯದ ಕಿತಾಪತಿ ಸ್ಟೋರಿ

ಈ ಬಾರಿಯ ಬಿಗ್ ಬಾಸ್ ಆವೃತ್ತಿಯಲ್ಲಿ ಈಗಾಗಲೇ ಒಮ್ಮೆ ಪಾಲ್ಗೊಂಡಿದ್ದ ಸ್ಪರ್ಧಿಗಳು ಹಾಗೂ ಇತ್ತೀಚೆಗೆ ಒಟಿಟಿ ಬಿಗ್ ಬಾಸ್‌ನಲ್ಲಿ ಗೆದ್ದ ನಾಲ್ಕು ಸ್ಪರ್ಧಿಗಳು ಜೊತೆಗೆ ಕೆಲವು ಹೊಸ ಮುಖಗಳು ಸೇರಿರುವುದು ವಿಶೇಷ. ಮೊದಲ ವಾರ ಐಶ್ವರ್ಯಾ ಪಿಸೆ ಮನೆಯಿಂದ ಹೊರಹೋಗಿದ್ದರು. 2ನೇ ವಾರ ನವಾಜ್ ಎಲಿಮಿನೇಟ್ ಆಗಿದ್ದಾರೆ. ಸದ್ಯ ಬಿಗ್ ಬಾಸ್ ಮನೆಯಲ್ಲಿ 16 ಮಂದಿ ಇದ್ದಾರೆ. ಮೂರನೇ ವಾರ ಯಾರು ಹೊರ ಹೋಗುತ್ತಾರೆ ಎಂದು ಕಾದು ನೋಡಬೇಕಿದೆ.

Latest Videos
Follow Us:
Download App:
  • android
  • ios