Divya Wagukar: ‘ಗೌರಿಶಂಕರ’ ಧಾರಾವಾಹಿಯಿಂದ ನಟಿ ದಿವ್ಯಾ ವಾಗುಕರ್ ಇದ್ದಕ್ಕಿದ್ದಂತೆ ಹೊರ ಬಂದಿದ್ದರು. ಈ ಬಗ್ಗೆ ಅಭಿಮಾನಿಗಳು ಬೇಸರ ವ್ಯಕ್ತಿಪಡಿಸಿದ್ದರು. ಇದೀಗ ಧಾರಾವಾಹಿ ಮುಗಿಯುವ ಹೊತ್ತಿಗೆ ನಟಿ ಮೌನ ಮುರಿದಿದ್ದು, ಕಾರಣವನ್ನು ತಿಳಿಸಿದ್ದಾರೆ. ಅಷ್ಟಕ್ಕೂ ನಟಿ ಧಾರಾವಾಹಿ ಬಿಟ್ಟಿದ್ದೇಕೆ ಗೊತ್ತಾ?
ಗೌರಿಶಂಕರ ಧಾರಾವಾಹಿ ಬಗ್ಗೆ ನಟಿ ದಿವ್ಯಾ ವಾಗುಕರ್
ಸ್ಟಾರ್ ಸುವರ್ಣ ವಾಹಿನಿಯ ಜನಪ್ರಿಯ ಧಾರಾವಾಹಿ ‘ಗೌರಿಶಂಕರ’. ಈ ಧಾರಾವಾಹಿಯಲ್ಲಿ ಗೌರಿಯಾಗಿ ದಿವ್ಯಾ ವಾಗುಕರ್ ಹಾಗೂ ಶಂಕರ್ ಪಾತ್ರದಲ್ಲಿ ಯಶವಂತ್ ಬೆಟ್ಟಸ್ವಾಮಿ ನಟಿಸುತ್ತಿದ್ದರು. ಇವರಿಬ್ಬರ ಜೋಡಿಯನ್ನು ವೀಕ್ಷಕರು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು. ಇಬ್ಬರ ಪ್ರೀತಿ, ಜಗಳ ಎಲ್ಲವನ್ನೂ ಜನ ಇಷ್ಟಪಟ್ಟಿದ್ದರು. ಆದರೆ ಕೆಲವು ದಿನಗಳ ಹಿಂದೆ ನಾಯಕಿ ಗೌರಿ ಅಂದ್ರೆ ದಿವ್ಯಾ ವಾಗುಕರ್ ಧಾರಾವಾಹಿಯಿಂದ ಇದ್ದಕ್ಕಿದ್ದಂತೆ ಹೊರನಡೆದಿದ್ದರು. ಇದು ಅಭಿಮಾನಿಗಳಿಗೆ ಬೇಸರವನ್ನುಂಟು ಮಾಡಿತ್ತು. ದಿವ್ಯಾ ಜಾಗಕ್ಕೆ ರಮೋಲ ಬಂದ ಬಳಿಕ, ವೀಕ್ಷಕರು ಮತ್ತಷ್ಟು ಕಿಡಿ ಕಾರಿದ್ದರು. ಇದೀಗ ಸದ್ಯದಲ್ಲೇ ಧಾರಾವಾಹಿ ಮುಕ್ತಾಯವಾಗುತ್ತಿದೆ. ಅದರ ಬೆನ್ನಲ್ಲೆ ನಟಿ ದಿವ್ಯಾ ವಾಗುಕರ್ ತಾವು ಸೀರಿಯಲ್ ಇದ್ದಕ್ಕಿದ್ದಂತೆ ಬಿಟ್ಟಿರುವ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
ಆರೋಗ್ಯ ಸಮಸ್ಯೆಯಿಂದ ಧಾರಾವಾಹಿ ಬಿಟ್ಟ ದಿವ್ಯಾ
Hi ಎಲ್ಲರಿಗೂ ನಮಸ್ಕಾರ, ನಾನು ಈ ಪೋಸ್ಟ್ ಹಾಕ್ತೀರೋ ಉದ್ದೇಶ ಏನು ಅಂದ್ರೆ ಇಷ್ಟು ದಿನ ತುಂಬಾ ಜನ ಕೇಳ್ತಾ ಇದ್ದರೂ ನೀವು ಗೌರಿಶಂಕರ ಸೀರಿಯಲ್ ಯಾಕೆ ಬಿಟ್ರಿ ಅಂತ? actually ನನಗೆ ಮೇ ತಿಂಗಳಲ್ಲಿ ಆರೋಗ್ಯ ಸಮಸ್ಯೆ ಶುರು ಆಯ್ತು. ಆಗ ನಾನು ಟೀಮ್ ಅವರಿಗೆ ಹೇಳ್ದೆ ಹುಷಾರಿಲ್ಲ ನನಗೆ, ಸೀರಿಯಲ್ ಮುಂದುವರಿಸಲು ಸಾಧ್ಯ ಆಗಲ್ಲ ಅಂತ. ಆದರೆ ಅವರು ಇಲ್ಲ ನೀವೇ ಮಾಡಬೇಕು, ನಾವು ಏನು ಸಪೋರ್ಟ್ ಬೇಕೋ ಮಾಡ್ತೀವಿ ಅಂತ ಹೇಳಿದರು. ಹಾಗೆ ಅವರು schedule ಎಲ್ಲ ಚೇಂಜ್ ಮಾಡಿ, ನನಗೋಸ್ಕರ 2 ದಿನ ಶೂಟ್ ಮಾಡಿ 2 ದಿನ ಬ್ರೇಕ್ ಕೊಟ್ರು. ಹೀಗೇ ನಾವು ಶೂಟ್ ಮಾಡ್ತಾ ಇದ್ವಿ. ಆದರೆ ಕೊನೆಗೆ ತುಂಬ ಹುಷಾರ್ ತಪ್ಪಿ, ನಾನು ಮಾಡೋಕೆ ಆಗಲ್ಲ ಅಂತ ನಿರ್ಧಾರ ಮಾಡಿ, ಟೀಮ್ ಹಾಗೂ ಚಾನೆಲ್ ಅವರಿಗೆ ಹೇಳ್ದೆ quit ಮಾಡ್ತೀನಿ ನಾನು ಗೌರಿಶಂಕರ ಸೀರಿಯಲ್ ನಾ ಅಂತ. ಜೊತೆಗೆ ನಮ್ಮ ಡಾಕ್ಟರ್ ಕೂಡಾ ನೀವು ರೆಸ್ಟ್ ಮಾಡ್ಬೇಕು ಅಂತ ಹೇಳಿದ್ರು .
ತುಂಬ ಯೋಚನೆ ಮಾಡಿ ಆರೋಗ್ಯ ಮುಖ್ಯ ಅಂತ ಹೇಳಿ ಸೀರಿಯಲ್ ಬಿಟ್ಟಿದ್ದು ಮತ್ತು ಅದಕ್ಕೆ team and channel ಅವರು ಆರೋಗ್ಯ ಮುಖ್ಯ ಅಂತ ನನ್ನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಸರಿ ಆಯ್ತು ಅಂತ ಹೇಳಿದ್ರು. ಹಾಗಾಗಿ ಚಾನೆಲ್ ಮತ್ತು ಟೀಂ ಅವರಿಗೆ ತುಂಬಾ ಥ್ಯಾಂಕ್ಯೂ. ಈಗ ಎಲ್ಲರಿಗೂ ಕ್ಲಾರಿಟಿ ಸಿಕ್ಕಿದೆ ಅಂತ ಅಂದುಕೊಳ್ಳುತ್ತೇನೆ. ಲ್ಲಿವರೆಗೂ ಗೌರಿಶಂಕರ ಸೀರಿಯಲ್ ಗೆ ಬೆಂಬಲ ನೀಡಿದ್ದಕ್ಕೆ ಮತ್ತು ಪ್ರೀತಿ ಕೊಟ್ಟಿದ್ದಕ್ಕೆ ಹಾಗೂ ಪ್ರೀತಿ ತೋರಿಸಿದಕ್ಕೆ ಗೌರಿಶಂಕರ ಫ್ಯಾನ್ಸ್ ಮತ್ತು ಫ್ಯಾನ್ಸ್ ಪೇಜ್ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು ಎಂದು ಹೇಳಿದ್ದಾರೆ ದಿವ್ಯಾ.
ಅಭಿಮಾನಿಗಳು ಹಾಗೂ ಗೌರಿ ಶಂಕರ ವೀಕ್ಷಕರು ನಟಿಗೆ ಆರೋಗ್ಯ ಆದಷ್ಟು ಬೇಗ ಸುಧಾರಿಸಲಿ ಎಂದು ಹಾರೈಸಿದ್ದಾರೆ. ಜೊತೆಗೆ ಯಶವಂತ್ ಮತ್ತು ದಿವ್ಯಾ ಜೋಡಿಯಾಗಿ ಮತ್ತೊಂದು ಧಾರಾವಾಹಿಯಲ್ಲಿ ಭಾಗವಹಿಸಲಿ ಎಂದು ಹಾರೈಸಿದ್ದಾರೆ.


