Asianet Suvarna News Asianet Suvarna News

BBK9: ಇದನ್ನೆಲ್ಲ ನೋಡ್ತೀನಿ ಅಂತ ಯಾವತ್ತು ಅಂದುಕೊಂಡಿರ್ಲಿಲ್ಲ- ಕಿಚ್ಚ ಸುದೀಪ್

ಸುದೀಪ್, 'ಆರ್ಯವರ್ಧನ್ ಅವರೇ ಹೇಗಿದ್ದೀರಿ ಬುದ್ದಿ' ಎಂದು ಬಿಗ್ ಬಾಸ್ 9 ವೇದಿಕೆಗೆ ಸ್ವಾಗತ ಮಾಡಿದರು. ಇದಕ್ಕೆ ಆರ್ಯವರ್ಧನ್ 'ಸುಂದರವಾಗಿ ಇದ್ದೀನಿ' ಎಂದು ಹೇಳಿದರು. ಇದಕ್ಕೆ ಸುದೀಪ್ ಏನು... ಅಂತ ಕಾಲೆಳೆದರು. 

Sudeep about Aryavardhan and rakesh in bigg boss season 9 grand opening sgk
Author
First Published Sep 24, 2022, 1:38 PM IST

ಬಿಗ್ ಬಾಸ್ ಕನ್ನಡ ಒಟಿಟಿ ಶೋ ಮುಗಿದ ಬೆನ್ನಲ್ಲೇ ಟಿವಿ ಬಿಗ್ ಬಾಸ್ ಪ್ರಾರಂಭವಾಗುತ್ತಿದೆ. ಟಿವಿ ಬಿಗ್ ಬಾಸ್‌ಗೆ ಕ್ಷಣಗಣನೆ ಪ್ರಾರಂಭವಾಗಿದೆ. ಇಂದು ಸಂಜೆ (ಸೆಪ್ಟಂಬರ್ 24) ಟಿವಿ ಬಿಗ್ ಬಾಸ್ ಗ್ರ್ಯಾಂಡ್ ಓಪನಿಂಗ್ ಇದೆ. ಬಿಗ್ ಬಾಸ್ ಬರ್ತಿದೆ ಎನ್ನುತ್ತಿದ್ದಂತೆ ಯಾರೆಲ್ಲ ಬರ್ತಾರೆ, ಯಾವೆಲ್ಲ ಸೆಲೆಬ್ರಿಟಿಗಳು ಇರಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿರುತ್ತದೆ. ಹಾಗೆಯೆ ಈ ಬಾರಿ ಬಿಗ್ ಬಾಸ್ ನಲ್ಲಿಯೂ ಯಾರೆಲ್ಲ ಇರಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಿದೆ. ಆದರೆ ಈ ಬಾರಿ ಬಿಗ್ ಬಾಸ್ 9 ಜೂನಿಯರ್ಸ್ ವರ್ಸಸ್ ಸೀನಿಯರ್ ಎನ್ನುವ ಕಾನೆಪ್ಟ್‌ನಲ್ಲಿ ಪ್ರೇಕ್ಷಕರ ಮುಂದೆ ಬರ್ತಿದೆ. ಜೊತೆಗೆ ಒಟಿಟಿಯಲ್ಲಿ ಭಾಗಿಯಾಗಿದ್ದ ಸ್ಪರ್ಧಿಗಳಲ್ಲಿ 4 ಜನ ಟಿವಿ ಬಿಗ್ ಬಾಸ್ ‌ಗೆ ಎಂಟ್ರಿ ಕೊಡುತ್ತಿದ್ದಾರೆ.  

ಈಗಾಗಲೇ ಬಿಗ್ ಬಾಸ್ ಒಟಿಟಿ ಯಿಂದ ಟಿವಿ ಬಿಗ್ ಬಾಸ್ ‌ಗೆ ರೂಪೇಶ್, ರಾಕೇಶ್ ಅಡಿಗ, ಆರ್ಯವರ್ಧನ್ ಗುರೂಜಿ ಮತ್ತು ಸಾನ್ಯ ಅಯ್ಯರ್ ಎಂಟ್ರಿ ಕೊಟ್ಟಿದ್ದಾರೆ. ಈ ಬಾರಿಯ ಬಿಗ್ ಬಾಸ್ ವಿಶೇಷವಾಗಿ ಅಭಿಮಾನಿಗಳ ಮುಂದೆ ಬರ್ತಿದೆ. ಈಗಾಗಲೇ ಗ್ರ್ಯಾಂಡ್ ಓಪನಿಂಗ್‌ನ ಪ್ರೋಮೋ ರಿಲೀಸ್ ಆಗಿದೆ. ಇದರಲ್ಲಿ ಒಟಿಟಿ ಸ್ಪರ್ಧಿಗಳ ಎಂಟ್ರಿಯನ್ನು ಮಾತ್ರ ರಿವೀಲ್ ಮಾಡಲಾಗಿದೆ. ಆರ್ಯವರ್ಧನ್ ಮತ್ತು ರಾಕೇಶ್ ಅಡಿಗ ಇಬ್ಬರು ವೇದಿಕೆ ಮೇಲೆ ಎಂಟ್ರಿ ಕೊಡುತ್ತಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅದ್ದೂರಿಯಾಗಿ ಇಬ್ಬರನ್ನು ಬರಮಾಡಿಕೊಂಡರು. ಕಿಚ್ಚ, 'ಆರ್ಯವರ್ಧನ್ ಅವರೇ ಹೇಗಿದ್ದೀರಿ ಬುದ್ದಿ' ಎಂದು ಸ್ವಾಗತ ಮಾಡಿದರು. ಇದಕ್ಕೆ ಆರ್ಯವರ್ಧನ್ 'ಸುಂದರವಾಗಿ ಇದ್ದೀನಿ' ಎಂದು ಹೇಳಿದರು. ಇದಕ್ಕೆ ಸುದೀಪ್ ಏನು... ಅಂತ ಕಾಲೆಳೆದರು. 

BBK9; ರೂಪೇಶ್ ನನ್ನ ಬೆಡ್ ಮೇಲೆ ಡೆಕೋರೇಶನ್ ಮಾಡಿದ್ದ, ಬರ್ತಡೇ ಸರ್ಪ್ರೈಸ್ ರಿವೀಲ್ ಮಾಡಿದ ಸಾನ್ಯಾ

ಸುದೀಪ್ ಮಾತನಾಡುತ್ತಿದ್ರೆ ಆರ್ಯವರ್ಧನ್ ವೇದಿಕೆ ಮೇಲೆ ನಿಂತು ಯಾರನ್ನೋ ಹುಡುಕುತ್ತಿದ್ದರು. ಅದಕ್ಕೆ ಸುದೀಪ್ ಏನು ಹುಡುಕುತ್ತಿದ್ದೀರಾ ಎಂದು ಕೇಳಿದರು. ಎಲ್ಲಾ ಹೆಣ್ಣು ಮಕ್ಕಳು ಕೂತಿದ್ದಾರೆ ಎಲ್ಲರೂ ನೊಡ್ತಿದ್ದಾರೆ ಎಂದು ಕಿಚ್ಚ ಮತ್ತೆ ಕಾಲೆಳೆದರು. '14ನೇ ಸ್ಪರ್ಧಿ ರಾಕೇಶ್, 15 ನೇ ಸ್ಪರ್ಧಿ ನಾನು 9ನೇ ಸೀಸನ್ ಇದು ಆಟ ನಂದೆ' ಎಂದು ಪಂಚ್ ಹೊಡೆದರು. ಆರ್ಯವರ್ಧನ್ ಮಾತಿಗೆ ಸುದೀಪ್ ಜೋರಾಗಿ ನಕ್ಕಿದರು. ಬಳಿಕ ಸುದೀಪ್ ರಾಕೇಶ್ ಅವರಿಗೆ ಮೊದಲು ಆರ್ಯವರ್ಧನ್ ಹೋಗಲಿ ಎಂದು ಹೇಳಿದರು. ಆದರೆ ಆರ್ಯವರ್ಧನ್ ನಾನು ಹೋಗಲ್ಲ ಮೊದಲು 14 ಹೋಗಲಿ ಎಂದರು. ಸುದೀಪ್ ಮತ್ತೆ ಜೋರಾಗಿ ನಗುತ್ತಾ 'ವೇದಿಕೆಯಲ್ಲಿ ಇದನ್ನೆಲ್ಲ ನೋಡ್ತೀನಿ ಅಂತ ಯಾವತ್ತು ಅಂದುಕೊಂಡಿರಲಿಲ್ಲ' ಎಂದು ಹೇಳಿದರು.

Bigg Boss Kannada 9; ಮನೆಯ ಫೋಟೋ ರಿವೀಲ್, ಏನೂ ಬದಲಾಗಿಲ್ಲ ಎಂದ ವೀಕ್ಷಕರು

ಬಿಗ್ ಬಾಸ್ ಮನೆಗೆ ಹೋಗುವ ಸಂಭಾವ್ಯ ಪಟ್ಟಿ ಈಗಾಗಲೇ ವೈರಲ್ ಆಗಿದೆ. ಸೀನಿಯರ್ಸ್ ಜೊತೆ ಜೂನಿಯರ್ಸ್ ಕೂಡ ಇರುವುದರಿಂದ ಈ ಬಾರಿ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಾಗಿದೆ. ಸದ್ಯ ಹರಿದಾಡುತ್ತಿರುವ ಹೆಸರುಗಳಲ್ಲಿ ಅನುಪಮಾ ಗೌಡ, ದೀಪಿಕಾ ದಾಸ್, ದಿವ್ಯಾ ಉರುಡುಗ, ಅರುಣ್ ಸಾಗರ್, ಪ್ರಶಾಂತ್ ಸಂಭರ್ಗಿ, ನಟಿ ಕಾವ್ಯಶ್ರಿ, ನಟಿ ಮಯೂರಿ, ಸೋಶಿಯಲ್ ಮೀಡಿಯಾ ಸ್ಟಾರ್ ನವಾಜ್, ನಟಿ ನೇಹಾ ಗೌಡ, ಅಮೂಲ್ಯಾ ಗೌಡ, ದರ್ಶ್ ಚಂದ್ರಪ್ಪ, ನಟಿ ರಮೋಲಾ, ಬೈಕ್ ರೇಸರ್ ಐಶ್ವರ್ಯಾ, ಬೈಕ್ ರೇಸರ್ ಸಂದೇಶ್ ಪ್ರಸನ್ನ ಜೊತೆಗೆ ಒಟಿಟಿ ಸ್ಪರ್ಧಿಗಳು. ಇವರಲ್ಲಿ ನಿಜಕ್ಕೂ ಬಿಗ್ ಮನೆ ಎಂಟ್ರಿ ಕೊಡುವ ಸ್ಪರ್ಧಿಗಳ್ಯಾರು ಎನ್ನುವ ಕುತೂಹಲಕ್ಕೆ ಇಂದು ಸಂಜೆ ತೆರೆಬೀಳುವ ಸಾಧ್ಯತೆ ಇದೆ.  

Follow Us:
Download App:
  • android
  • ios