Bigg Boss Kannada 9; ಮನೆಯ ಫೋಟೋ ರಿವೀಲ್, ಏನೂ ಬದಲಾಗಿಲ್ಲ ಎಂದ ವೀಕ್ಷಕರು

ಹಲವಾರು ವಿಶೇಷತೆಗಳೊಂದಿಗೆ ಈ ಬಾರಿ ಟಿವಿ ಸೀಸನ್​ ಬರ್ತಿದೆ. ಬಿಗ್ ಬಾಸ್ ಮನೆ ಕೂಡ ಆಕರ್ಷಕವಾಗಿದೆ. ಬಿಗ್ ಬಾಸ್ ಸೀಸನ್ 9ನ ಮನೆಯ ಫೋಟೋವನ್ನು ಕಲರ್ಸ್ ಕನ್ನಡ ವಾಹಿನಿ ಬಿಸ್ನೆಸ್​ ಹೆಡ್ ಪರಮೇಶ್ವರ್ ಗುಂಡ್ಕಲ್ ಹಂಚಿಕೊಂಡಿದ್ದಾರೆ.

Parameshwar gundkal shared Bigg Boss Kannada 9 house sgk

ಬಿಗ್ ಬಾಸ್ ಕನ್ನಡ ಒಟಿಟಿ ಶೋ ಮುಗಿಯುತ್ತಿದ್ದಂತೆ ಟಿವಿ ಬಿಗ್ ಬಾಸ್ ಪ್ರಾರಂಭವಾಗುತ್ತಿದೆ. ಟಿವಿ ಬಿಗ್ ಬಾಸ್‌ಗೆ ದಿನಗಣನೆ ಪ್ರಾರಂಭವಾಗಿದೆ. ಇದೇ ತಿಂಗಳು ಸೆಪ್ಟಂಬರ್ 24ರಿಂದ ಟಿವಿ ಬಿಗ್ ಬಾಸ್ ಪ್ರಾರಂಭವಾಗುತ್ತಿದೆ. ಬಿಗ್ ಬಾಸ್ ಬರ್ತಿದೆ ಎನ್ನುತ್ತಿದ್ದಂತೆ ಯಾರೆಲ್ಲ ಬರ್ತಾರೆ, ಯಾವೆಲ್ಲ ಸೆಲೆಬ್ರಿಟಿಗಳು ಇರಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿರುತ್ತದೆ. ಹಾಗೆಯೆ ಈ ಬಾರಿ ಬಿಗ್ ಬಾಸ್ ನಲ್ಲಿಯೂ ಯಾರೆಲ್ಲ ಇರಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಿದೆ. ಈಗಾಗಲೇ ಸಂಭಾವ್ಯ ಪಟ್ಟಿ ವೈರಲ್ ಆಗಿದೆ. ಅಂದಹಾಗೆ ಈ ಬಾರಿ ಬಿಗ್ ಬಾಸ್‌ನ ವಿಶೇಷ ಎಂದರೆ ಹೊಸಬರ ಜೊತೆ ಹಳೆಯ ಸ್ಪರ್ಧಿಗಳು ಸಹ ಭಾಗಿಯಾಗುತ್ತಿದೆ. ಹೌದು, ಬಿಗ್ ಬಾಸ್ 9 ಜೂನಿಯರ್ಸ್ ವರ್ಸಸ್ ಸೀನಿಯರ್ ಎನ್ನುವ ಕಾನೆಪ್ಟ್‌ನಲ್ಲಿ ಪ್ರೇಕ್ಷಕರ ಮುಂದೆ ಬರ್ತಿದೆ. ಜೊತೆಗೆ ಒಟಿಟಿಯಲ್ಲಿ ಭಾಗಿಯಾಗಿದ್ದ ಸ್ಪರ್ಧಿಗಳಲ್ಲಿ 4 ಜನ ಟಿವಿ ಬಿಗ್ ಬಾಸ್ ‌ಗೆ ಎಂಟ್ರಿ ಕೊಡುತ್ತಿದ್ದಾರೆ.  

ಹಲವಾರು ವಿಶೇಷತೆಗಳೊಂದಿಗೆ ಈ ಬಾರಿ ಟಿವಿ ಸೀಸನ್​ ಬರ್ತಿದೆ. ಬಿಗ್ ಬಾಸ್ ಮನೆ ಕೂಡ ಆಕರ್ಷಕವಾಗಿದೆ. ಬಿಗ್ ಬಾಸ್ ಸೀಸನ್ 9ನ ಮನೆಯ ಫೋಟೋವನ್ನು ಕಲರ್ಸ್ ಕನ್ನಡ ವಾಹಿನಿ ಬಿಸ್ನೆಸ್​ ಹೆಡ್ ಪರಮೇಶ್ವರ್ ಗುಂಡ್ಕಲ್ ಹಂಚಿಕೊಂಡಿದ್ದಾರೆ.

ಈ ವರ್ಷ ಬಿಗ್ ಬಾಸ್ ಟಿವಿ ಸೀಸನ್ ಆರಂಭಕ್ಕೂ ಮೊದಲು ಒಟಿಟಿ ಸೀಸನ್ ಆರಂಭಿಸಲಾಗಿತ್ತು. 42 ದಿನಗಳ ಕಾಲ ಬಿಗ್ ಬಾಸ್​ ನಡೆದಿತ್ತು. 16 ಸ್ಪರ್ಧಿಗಳು ಭಾಗಿಯಾಗಿದ್ದರು. ಇದರಲ್ಲಿ 4 ಸ್ಪರ್ಧಿಗಳು ಒಟಿಟಿಯಿಂದ ಟಿವಿ ಸೀಸನ್​ಗೆ ಎಂಟ್ರಿ ಕೊಟ್ಟಿದ್ದಾರೆ. ರಾಕೇಶ್ ಅಡಿಗ, ಸಾನ್ಯಾ ಅಯ್ಯರ್, ಆರ್ಯವರ್ಧನ್ ಗುರೂಜಿ ಹಾಗೂ ರೂಪೇಶ್ ಶೆಟ್ಟಿ ಅವರು ಟಿವಿ ಸೀಸನ್​ಗೆ ಹೋಗುತ್ತಿದ್ದಾರೆ. ಹಳೆಯ ಸೀಸನ್​ನ ಸ್ಪರ್ಧಿಗಳಾದ ಪ್ರಶಾಂತ್ ಸಂಬರಗಿ, ಅನುಪಮಾ ಗೌಡ, ದೀಪಿಕಾ ದಾಸ್ ಸೇರಿ ಐವರು ಎಂಟ್ರಿ ಕೊಡುತ್ತಿದ್ದಾರೆ. ಈ 9 ಸ್ಪರ್ಧಿಗಳ ಜತೆ ಮತ್ತೆ 9 ಸ್ಪರ್ಧಿಗಳು ಹೊಸಬರು ಇರುತ್ತಿದ್ದಾರೆ. 

ಸದ್ಯ ಪರಮೇಶ್ವರ್​ ಗುಂಡ್ಕಲ್ ಹಂಚಿಕೊಂಡಿರುವ  ಬಿಗ್ ಬಾಸ್ ಮನೆಯ ಫೋಟೋದಲ್ಲಿ ಅವರು ಮನೆಯನ್ನು ನೋಡುಕುಳಿತಿದ್ದಾರೆ. ಫೋಟೋ ಜೊತೆಗೆ ‘ಬಹುತೇಕ ಸಿದ್ಧತೆ ನಡೆದಿದೆ’ ಎಂದು ಪರಮೇಶ್ವರ್​ ಕ್ಯಾಪ್ಶನ್ ನೀಡಿದ್ದಾರೆ. ಈ ಫೋಟೋದಲ್ಲಿ ಬಿಗ್ ಬಾಸ್ ಮನೆ ಹೆಚ್ಚು ಬದಲಾವಣೆ ಆದಂತೆ ಕಾಣುತ್ತಿಲ್ಲ. ಈ  ಮೊದಲು ಇದ್ದಂತೇ ಇದೆ. ಅನೇಕ ಅದೇ ಮನೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. 

Bigg Boss Kannada 9; ಕೋಟಿ ಕೊಟ್ರು ಹೋಗಲ್ಲ ಎಂದ ಬ್ರಹ್ಮಾಂಡ ಗುರೂಜಿ, ಬಿಗ್ ಮನೆಗೆ ಹೋಗೊರ್ಯಾರು?

ಒಟಿಟಿ ಸೀಸನ್​​ನಿಂದ ಟಿವಿ ಸೀಸನ್​ಗೆ ಇರೋದು ಒಂದು ವಾರದ ಗ್ಯಾಪ್ ಮಾತ್ರ. ಈ ಸಂದರ್ಭದಲ್ಲಿ ಸಾಕಷ್ಟು ಬದಲಾವಣೆ ಮಾಡಲು ಸಾಧ್ಯವಿಲ್ಲ. ಈ ಕಾರಣಕ್ಕೆ ಹೆಚ್ಚಿನ ಚೇಂಜಸ್ ಮಾಡಿಲ್ಲ ಎನ್ನಲಾಗುತ್ತಿದೆ. ಟಿವಿ ಸೀಸನ್​ಗಾಗಿ ವೀಕ್ಷಕರು ಕಾಯುತ್ತಿದ್ದಾರೆ. ಈ ಬಾರಿ ಯಾರೆಲ್ಲ ಸ್ಪರ್ಧಿಗಳಾಗಿ ಬರುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಬಿಗ್ ಬಾಸ್ ಟಿವಿ ಶೋ ಗ್ರ್ಯಾಂಡ್ ಓಪನಿಂಗ್ ಸೆಪ್ಟೆಂಬರ್ 24ರಂದು ಸಂಜೆ ಆರು ಗಂಟೆಗೆ ಆರಂಭ ಆಗಲಿದೆ. ನಂತರ ಪ್ರತಿದಿನ ರಾತ್ರಿ 9.30ಕ್ಕೆ ಈ ರಿಯಾಲಿಟಿ ಶೋ ಪ್ರಸಾರ ಕಾಣಲಿದೆ.

ವೈರಲ್ ಆದ ಸಂಭಾವ್ಯ ಪಟ್ಟಿ 

ಬಿಗ್ ಬಾಸ್ ಬರ್ತಿದೆ ಎನ್ನುತ್ತಿದ್ದಂತೆ ಸಂಭಾವ್ಯ ಪಟ್ಟಿ ವೈರಲ್ ಆಗುತ್ತೆ. ಯಾರೆಲ್ಲ ಹೋಗ್ತಾರೆ ಎಂದು ಅನೇಕರ ಹೆಸರು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತದೆ. ಸದ್ಯ ವೈರಲ್ ಆಗಿರುವ ಹೆಸರುಗಳೆಂದರೆ ಸೋಶಿಯಲ್ ಮೀಡಿಯಾ ಸ್ಟಾರ್ ಕಾಫಿನಾಡು ಚಂದ್ರು, ಕಮಲಿ ಧಾರಾವಾಹಿ ಖ್ಯಾತಿಯ ಅಮೂಲ್ಯಾ, ಮುದ್ದುಮಣಿಗಳು ಖ್ಯಾತಿಯ ಸಮೀಕ್ಷಾ, ಗಿಚ್ಚಿ ಗಿಲಿಗಿಲಿ ಖ್ಯಾತಿಯ ಪ್ರಿಯಾಂಕಾ ಕಾಮತ್, ಮಜಾಭಾರತ ಖ್ಯಾತಿಯ ಚಂದ್ರಪ್ರಭ, ಗಾಯಕಿ ಆಶಾ ಭಟ್ ಹೆಸರುಗಳು ಕೇಳಿಬರುತ್ತಿವೆ.

ಬಿಗ್ ಬಾಸ್ ಕನ್ನಡ ಒಟಿಟಿ ಫೈನಲ್, ಆರ್ಯವರ್ಧನ್, ರೂಪೇಶ್ ಸೇರಿ ನಾಲ್ವರು ಸ್ಪರ್ಧಿಗಳು 9ನೇ ಆವೃತ್ತಿಗೆ ಎಂಟ್ರಿ!

ಈ ಹೆಸರುಗಳಲ್ಲಿ ನಿಜಕ್ಕೂ ಬಿಗ್ ಮನೆಗೆ ಹೋಗುವವರು ಯಾರು ಎನ್ನುವುದು ಬಿಗ್ ಬಾಸ್ ಪ್ರಾರಂಭ ಆದ್ಮೇಲೆ ಗೊತ್ತಾಗಲಿದೆ. ಈಗಾಗಲೇ ಪ್ರೋಮೋ ರಿಲೀಸ್ ಆಗಿದ್ದು ಕಿಚ್ಚ ಸುದೀಪ್ ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚಿಗಷ್ಟೆ ಒಟಿಟಿ ಬಿಗ್ ಬಾಸ್ ಮುಗಿಸಿರುವ ಕಿಚ್ಚ ಇದೀಗ ಮತ್ತೆ ಟಿವಿ ಬಿಗ್ ಬಾಸ್ ಗೆ ತಯಾರಾಗಿದ್ದಾರೆ. ಸೀನಿಯರ್ಸ್ ಮತ್ತು ಜೂನಿರ್ಯ್ ಜೊತೆಗೆ ಹೊಸ ಸ್ಪರ್ಧಿಗಳ ಬಿಗ್ ಬಾಸ್ ಹೇಗಿರಲಿದೆ ಎಂದು ಕಾದುನೋಡಬೇಕು. 

Latest Videos
Follow Us:
Download App:
  • android
  • ios