ಸ್ಟಾರ್‌ ಸುವರ್ಣ ವಾಹಿನಿ ಮನರಂಜನೆಗೆ ಸಮಯದ ಮಿತಿಯಿಲ್ಲ ಅಂತ ತೋರಿಸಿದೆ. ಎಲ್ಲರೂ ಸುರಕ್ಷಿತವಾಗಿ ಸದಾ ಮನೆಯಲ್ಲಿರುವ ಈ ಸಂದರ್ಭದಲ್ಲಿ ತನ್ನ ವೀಕ್ಷಕರಿಗಾಗಿ ಮಧ್ಯಾಹ್ನ 12.30ರಿಂದ - 2.30ರವರೆಗೆ ವೈವಿಧ್ಯಮಯ ಧಾರಾವಾಹಿಗಳನ್ನು ಪ್ರಸ್ತುತ ಪಡಿಸುತ್ತಿದೆ. ಈ ಮೂಲಕ ಕನ್ನಡ ಕಿರುತೆರೆ ವೀಕ್ಷಕರು ಮಧ್ಯಾಹ್ನದ ಹೊತ್ತಲ್ಲಿ ಮರುಪ್ರಸಾರವಾಗುವ ಧಾರಾವಾಹಿಗಳ ಬದಲು ಹೊಸ ಧಾರಾವಾಹಿಗಳನ್ನು ವೀಕ್ಷಿಸಬಹುದಾಗಿದೆ.

ತೆರೆ ಮೇಲೆ ರಾಣಿ ಪದ್ಮಿನಿ ದರ್ಬಾರ್‌

ಆಗಸ್ಟ್‌ 24ರಿಂದ ಮಧ್ಯಾಹ್ನ 12.30ಕ್ಕೆ ರಾಣಿ ಪದ್ಮಿನಿ ದೇವಿ ಪ್ರಸಾರವಾಗುತ್ತಿದೆ. ಮಹೇಶ್ವರಿ ಅನ್ನೋ ಮುಗ್ಧ ಹುಡುಗಿಯ ಪ್ರೀತಿ ಮತ್ತು ನಂಬಿಕೆಯ ಕಥೆ ರಾಣಿ ಪದ್ಮಿನಿ ದೇವಿ, ಈಗಾಗಲೇ ಕಿರುತೆರೆ ವೀಕ್ಷಕರಿಗೆ ಹತ್ತಿರವಾಗಿದೆ. ನವ್ಯ, ರವಿ ಕೃಷ್ಣ, ಮೇಘನಾ ಮತ್ತು ಸಿರೀಶಾ ಧಾರಾವಾಹಿಯ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸ್ಟಾರ್ ಸುವರ್ಣ 'ರಾಧಾಕೃಷ್ಣ' ಧಾರಾವಾಹಿಯ ಮಹಾ ತಿರುವು!

ಇದರೊಂದಿಗೆ 1 ಗಂಟೆಗೆ ಪ್ರಸಾರವಾಗುತ್ತಿರುವ ಕಥೆಯ ರಾಜಕುಮಾರಿ ಸಹ ವೀಕ್ಷಕರ ಮೆಚ್ಚುಗೆ ಗಳಿಸಿದೆ. 1.30ಕ್ಕೆ ವೀಕ್ಷಕರ ಒತ್ತಾಯದಂತೆ ಮಧ್ಯಾಹ್ನದ ಮನರಂಜನೆಯಲ್ಲಿ ದೃಷ್ಟಿಮರುಪ್ರಸಾರವಾಗುತ್ತಿದೆ.

ಸದ್ದು ಮಾಡ್ತಿದ್ದಾನೆ ಸಾವಿತ್ರಮ್ಮನ ಮಗ

ಆಗಸ್ಟ್‌ 17ರಿಂದ ಮಧ್ಯಾಹ್ನ 2 ಗಂಟೆಗೆ ಸನ್‌ ಆಫ್‌ ಸವಿತ್ರಮ್ಮ ಧಾರಾವಾಹಿ ಪ್ರಸಾರವಾಗುತ್ತಿದೆ . ಸುರಸುಂದರಾಂಗ ಬಾಲರಾಜು ಅಂದ್ರೆ ಊರಲ್ಲಿರೋ ಎಲ್ಲಾ ಹೆಣ್ಣುಮಕ್ಕಳಿಗು ಅಚ್ಚುಮೆಚ್ಚು. ಆದ್ರೆ ಬಾಲರಾಜು ಮಾತ್ರ ಆಜನ್ಮ ಬ್ರಹ್ಮಚಾರಿಯಾಗುವ ನಿರ್ಧಾರ ಮಾಡಿರುತ್ತಾನೆ. ಚಂದನ್‌ ಕುಮಾರ್‌ ಬಾಲರಾಜು ಪಾತ್ರದಲ್ಲಿದ್ದಾರೆ, ಸಾವಿತ್ರಮ್ಮನಾಗಿ ನಟಿ ಹರಿತಾ ಕಾಣಿಸಿಕೊಂಡಿದ್ದಾರೆ. ನಟಿ ಆಯೇಷಾ ನಂದಿನಿ ಪಾತ್ರಕ್ಕೆ ಬಣ್ಣಹಚ್ಚಿದ್ದಾರೆ. ತಾಯಿಯ ಮಾತು ಮೀರದ ಈ ಅಮ್ಮನ ಮಗನ ಕತೆಯನ್ನು ಮೆಚ್ಚಿದ್ದಾರೆ ಕನ್ನಡದ ಹೆಣ್ಮಕ್ಕಳು.

'ಸರಸು'ಗಾಗಿ ಒಂದಾದ 'ಸೀತಾ ವಲ್ಲಭ' ಗುಬ್ಬಿ ಹಾಗೂ 'ರಾಧಾ ರಮಣ' ಸ್ಕಂದ! 

ಮನೆಮಾತಾಗಿದೆ ಮತ್ತೆ ವಸಂತ

ಆಗಸ್ಟ್‌ 31ರಿಂದ ಮಧ್ಯಾಹ್ನ 2.30ಕ್ಕೆ ಹೊಸ ಸಂಚಿಕೆಗಳೊಂದಿಗೆ ಮತ್ತೆ ಪ್ರಸಾರವಾಗುತ್ತಿದೆ ‘ಮತ್ತೆ ವಸಂತ’ ಧಾರಾವಾಹಿ. ಅಪರ್ಣ ಮತ್ತು ವಸಂತನ ಮುನಿಸು ಮನೆಮಾಡಿರುವ ಮನಸ್ಸುಗಳಲ್ಲಿ ಪ್ರೀತಿಯ ಕಾರಂಜಿ ಚಿಮ್ಮುತ್ತಾ ಅನ್ನೋದು ಶೀಘ್ರದಲ್ಲೇ ತಿಳಿಯಲಿದೆ. ರಾಜೇಶ್‌ ಮಾವಳ್ಳಿ ನಿರ್ದೇಶನದ ಧಾರಾವಾಹಿಯಲ್ಲಿ ರಕ್ಷಿತ್‌ ಮತ್ತು ಅಕ್ಷತಾ ಮುಖ್ಯ ಪಾತ್ರದಲ್ಲಿದ್ದಾರೆ. ಕಿರಣ್‌ ನಾಯಕ್‌, ಜಯದೇವ್‌ ಮೋಹನ್‌, ಸ್ಪಂದನ, ಕೀರ್ತಿ ಬಾನು, ಜಗದೀಶ್‌ ಮಲ್ನಾಡ್‌, ಅಕ್ಷಯ್‌ ನಾಯಕ್‌ ತಾರಾಬಳಗದಲ್ಲಿದ್ದಾರೆ. ವರಲಕ್ಷ್ಮಿ ಸ್ಟೋರ್ಸ್‌ ಖ್ಯಾತಿಯ ನಂಜುಂಡ ಮತ್ತು ರಕ್ಷಿತಾ ಜೋಡಿ ಮತ್ತೊಮ್ಮೆ ಮತ್ತೆ ವಸಂತದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ. ರಾಣವ್‌ ಅಂಬಿಯಾಗಿ, ರಿಷಾ ಸುಮ ಎನ್ನುವ ಪಾತ್ರದಲ್ಲಿ ವಿಶೇಷವಾಗಿ ಕಾಣಿಸಿಕೊಳ್ಳಲಿದ್ದಾರೆ.

ಈ ಸಾಲು ಸಾಲು ಹೊಸ ಕಾರ್ಯಕ್ರಮಗಳಿಂದಾಗಿ ಸ್ಟಾರ್‌ ಸುವರ್ಣ ವಾಹಿನಿಯ ‘ಮಧ್ಯಾಹ್ನದ ಮನರಂಜನೆ’ ಕನ್ನಡ ಕಿರುತೆರೆಯಲ್ಲೇ ಮತ್ತೊಂದು ಪ್ರೈಂಟೈಂ ಎನ್ನುವ ಮನ್ನಣೆ ಗಳಿಸುತ್ತಿದೆ.

ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿ 'ಸೀತೆಯ ರಾಮ'! 

ಮಧ್ಯಾಹ್ನದ ಮನರಂಜನೆ

12.30ಕ್ಕೆ- ರಾಣಿ ಪದ್ಮಿನಿ

1 ಗಂಟೆಗೆ- ಕಥೆಯ ರಾಜಕುಮಾರಿ

1.30ಕ್ಕೆ- ದೃಷ್ಟಿ

2 ಗಂಟೆಗೆ- ಸನ್‌ ಆಫ್‌ ಸವಿತ್ರಮ್ಮ

2.30ಕ್ಕೆ- ಮತ್ತೆ ವಸಂತ