ಭಾರತದ ಪರಂಪರೆ ಮತ್ತು ಸಂಸ್ಕೃತಿಯ ಪ್ರತೀಕವಾಗಿರುವ ಮಹಾಭಾರತ ಮತ್ತು ರಾಮಾಯಣ ಮಹಾಗ್ರಂಥಗಳಲ್ಲಿ ಈಗಾಗಲೇ ಮಹಾಭಾರತವನ್ನು ಧಾರಾವಾಹಿ ರೂಪದಲ್ಲಿ ಕನ್ನಡ ಕಿರುತೆರೆ ವೀಕ್ಷಕರು ನೋಡಿ ಮೆಚ್ಚಿದ್ದಾರೆ. ಈಗ ರಾಮಾಯಣದ ಸರದಿ, ವಿಶೇಷವಾಗಿ ಹಿಂದೆಂದೂ ಕಂಡಿರದ ರೀತಿಯಲ್ಲಿ ಮೂಲ ಕತೆಗೆ ಧಕ್ಕೆಯಾಗದಂತೆ, ‘ಸೀತೆಯ ರಾಮ’ ಧಾರಾವಾಹಿಯನ್ನು ಪ್ರಸ್ತುತಪಡಿಸಲಾಗುತ್ತಿದೆ. ಸೀತೆಯ ರಾಮ ಧಾರಾವಾಹಿ ಆಗಸ್ಟ್‌ 10ರಿಂದ ರಾತ್ರಿ 8.30ಕ್ಕೆ ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

'ಸರ್ವ ಮಂಗಳ ಮಾಂಗಲ್ಯೆ' ಧಾರಾವಾಹಿಯ ಸಂದೀಪ್‌ ರಾಜು ಕಲರ್‌ಫುಲ್‌ ಜರ್ನಿ ಇದು!

ಸೀತೆಯ ಬಾಲ್ಯದ ಜೊತೆಯಲ್ಲೇ ರಾಮನ ಬಾಲ್ಯ, ಮಿಥಿಲಾ ನಗರದ ಪರಿಚಯದೊಂದಿಗೆ ಆಯೋಧ್ಯೆ ಜೊತೆಗಿನ ನಂಟು ಸೀತೆಯ ರಾಮ ಧಾರಾವಾಹಿಯಲ್ಲಿ ಅನಾವರಣವಾಗಲಿದೆ. ಒಬ್ಬಂರಿಂದೊಬ್ಬರು ದೂರವಿದ್ದರು ಸಂಸ್ಕಾರ, ವಿದ್ಯೆ, ಗುಣಗಳಲ್ಲಿ ರಾಮ- ಸೀತೆಯರು ಪರಸ್ಪರ ಪ್ರತಿಬಿಂಬದಂತಿರುತ್ತಾರೆ. ರಾಮ ಮತ್ತು ಸೀತೆಯ ಪಾತ್ರಗಳು ವರ್ಗ ಮತ್ತು ವಯಸ್ಸಿನ ಭೇದವಿಲ್ಲದೆ, ಎಲ್ಲರಿಗೂ ಆಪ್ತವೆನಿಸಲಿವೆ. ಅಹಲ್ಯಾ ಶಾಪ ವಿಮೋಚನೆ, ಸೀತಾ ಸ್ವಯಂವರ, ಸೀತಾ ರಾಮರ ವನವಾಸ, ಲಂಕಾಪತಿ ರಾವಣನ ಅಟ್ಟಹಾಸ, ಸೀತಾಪಹರಣ, ರಾಮ ಬಂಟ ಹನುಮಂತನ ಕತೆ, ವಾಲಿ ವಧೆ, ಲಂಕಾ ದಹನ ಮತ್ತು ರಾವಣನ ಸಂಹಾರ ಹೀಗೆ ಮರ್ಯಾದ ಪುರುಷೋತ್ತಮನ ಜೀವನದ ಪ್ರತಿ ಕ್ಷಣವನ್ನು ಸೀತೆಯ ದೃಷ್ಟಿಯಿಂದ ಸೆರೆಹಿಡಿಯಲಾಗಿದೆ.

ನಿಜ ಜೀವನದಲ್ಲೂ ಪ್ರೀತಿಸುತ್ತಿದ್ದಾರಾ 'ರಾಧಾ ಕೃಷ್ಣ' ಜೋಡಿ ಸುಮೇಧ್-ಮಲ್ಲಿಕಾ?

ಸೀತೆಯ ರಾಮ ಧಾರಾವಾಹಿಯಲ್ಲಿ ಪ್ರತಿ ಪಾತ್ರಕ್ಕೂ ಪ್ರಾಮುಖ್ಯತೆ ನೀಡಲಾಗಿದೆ. ಸೀತೆಯ ರಾಮ ಧಾರಾವಾಹಿಯ ಪ್ರತಿ ಸನ್ನಿವೇಶಗಳು ಕಿರುತೆರೆಯಲ್ಲಿ ದೃಶ್ಯ ವೈಭವ ಸೃಷ್ಟಿಸಲಿವೆ. ಸೀತೆಯ ರಾಮ ಧಾರಾವಾಹಿಯಲ್ಲಿ ಅನೇಕ ಪುಸ್ತಕಗಳಲ್ಲಿ ಉಲ್ಲೇಖವಾಗದಿರುವ ‘ಶಾಂತ’ ಎನ್ನುವ ರಾಮನ ಹಿರಿಯ ಸಹೋದರಿಯ ಕತೆಯನ್ನು ನೋಡಬಹುದಾಗಿದೆ. ಸೀತೆಯ ಪಾತ್ರಕ್ಕೆ ನಟಿ ಮದಿರಾಕ್ಷಿ ಜೀವ ತುಂಬಿದ್ದಾರೆ, ಆಶಿಶ್‌ ಶರ್ಮಾ ರಾಮನಾಗಿ ಕಾನಿಸಿಕೊಂಡಿದ್ದಾರೆ, ದಾನಿಷ್‌ ಅಖ್ತರ್‌ ಸೈಫಿ ಹನುಮಂತನ ಪಾತ್ರಧಾರಿಯಾಗಿದ್ದಾರೆ.

ನಟ ಕಾರ್ತಿಕ್‌ ಜಯರಾಂ(ಜೆ.ಕೆ) ರಾವಣನ ಪಾತ್ರದಲ್ಲಿ ಅಮೋಘವಾಗಿ ಅಭಿನಯಿಸಿದ್ದಾರೆ.