ಸ್ಯಾಂಡಲ್‌ವುಡ್‌ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ನಟ ಸ್ಕಂದ ಅಶೋಕ್‌ ಈಗ ಮತ್ತೆ ಕಿರುತೆರೆಗೆ ಮರಳಿದ್ದಾರೆ. ಅದುವೇ 'ಸರಸು' ಧಾರಾವಾಹಿ ಮೂಲಕ ಎನ್ನಲಾಗಿದೆ. ಹೌದು! ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಖ್ಯಾತ ಧಾರಾವಾಹಿಗಳಾದ 'ರಾಧಾ ರಮಣ' ಸ್ಕಂದ ಹಾಗೂ 'ಸೀಲತಾ ವಲ್ಲಭ' ಗುಬ್ಬಿ ಅಲಿಯಾಸ್ ಸುಪ್ರೀತಾ ಸತ್ಯನಾರಾಯಣ್ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

'ಸರ್ವ ಮಂಗಳ ಮಾಂಗಲ್ಯೆ' ಧಾರಾವಾಹಿಯ ಸಂದೀಪ್‌ ರಾಜು ಕಲರ್‌ಫುಲ್‌ ಜರ್ನಿ ಇದು!

ವಿಡಿಯೋ ಪ್ರೋಮೋದಲ್ಲಿ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿರುವ ಸುಪ್ರೀತಾ, ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದಾರೆ. 'ಧಾರಾವಾಹಿಯಲ್ಲಿ ನನ್ನದು ಸರಸು ಪಾತ್ರ. ಬುದ್ಧೀವಂತೆ. ಕ್ಲಾಸ್‌ಗೆ ಟಾಪರ್‌. ಜೀವನದಲ್ಲಿ ಸಾಧನೆ ಮಾಡಬೇಕು ಎಂದು ಸದಾ ಚಿಂತಿಸುತ್ತಿರುತ್ತಾಳೆ. ಆದರೆ ಜವಾಬ್ದಾರಿ ಕಳೆದುಕೊಳ್ಳಬೇಕೆಂದು ತಂದೆ ಮದುವೆ ಮಾಡಲು ನಿರ್ಧರಿಸುತ್ತಾರೆ. ನಟಿಯ ಸುತ್ತ ಸುತ್ತುವ ಕಥೆ ಇದು. ಶಿಕ್ಷಕರ ಸಹಾಯ ಪಡೆದುಕೊಂಡು ತನ್ನ ಗುರಿ ಸಾಧಿಸುತ್ತಾಳೆ' ಎಂದು ಹೇಳಿದ್ದಾರೆ.

 

ಕೆಲವು ದಿನಗಳ ಹಿಂದೆ ಡಿಂಪಲ್ ಕ್ವೀನ್‌ ರಚಿತಾ ರಾಮ್‌ ಜೊತೆ 'ಕಸ್ತೂರಿ ನಿವಾಸ' ಚಿತ್ರದಲ್ಲಿ ಅಭಿನಯಿಸುತ್ತಿರುವುದಾಗಿ ಸ್ಕಂದ ಹೇಳಿದ್ದರು. ಅಲ್ಲದೇ ತಮ್ಮ ಸರಸು ಧಾರಾವಾಹಿಯಲ್ಲಿ ತಮ್ಮ ಪಾತ್ರ ಹೇಗಿರಲಿದೆ ಎಂದೂ ಹೇಳಿದ್ದಾರೆ. 'ಧಾರಾವಾಹಿಯಲ್ಲಿ ನಾನು ಶಿಕ್ಷಣ ತಜ್ಞನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವೆ. ಜೊತೆಗೆ ಇಲ್ಲಿ ಒಂದು ಕ್ಯೂಟ್‌ ಲವ್‌ ಸ್ಟೋರಿ ನಡೆಯಲಿದೆ. ಪಾತ್ರದ ಹೆಸರು ಅರವಿಂದ್. ಮುಂದಿನ ತಿಂಗಳು ಧಾರಾವಾಹಿ ಆರಂಭವಾಗಲಿದೆ,' ಎಂದು ಧಾರಾವಾಹಿಯ ಕಥೆ ಹೇಗಿರುತ್ತದೆ ಎಂಬ ಸುಳಿವು ನೀಡಿದ್ದಾರೆ.

ಐಟಿ ಕ್ಷೇತ್ರಕ್ಕೆ ಗುಡ್ ಬೈ ಹೇಳಿ ನಟನೆಗೆ ಹಾಯ್ ಹೇಳಿದ ಸೇವಂತಿಯ ಅಶ್ವಿನ್ ಅಲಿಯಾಸ್ ವಿನಯ್ ಕಶ್ಯಪ್

ಮೈಸೂರು ಮಂಜು ನಿರ್ದೇಶನ 'ಸರಸು' ಧಾರಾವಾಹಿ ತಂಡ ಈಗಾಗಲೆ ತೀರ್ಥಹಳ್ಳಿಯಲ್ಲಿ ಶೂಟಿಂಗ್ ಆರಂಭಿಸಿದೆ. ಸೆಪ್ಟೆಂಬರ್‌ ತಿಂಗಳ ಕೊನೆಯಲ್ಲಿ ಪ್ರಸಾರ ಆರಂಭಿಸಲಿದೆ, ಎನ್ನಲಾಗುತ್ತಿದೆ.