'ಅವನು ಮತ್ತೆ ಶ್ರಾವಣಿ' ಧಾರಾವಾಹಿಯಲ್ಲಿ ಹೊಸ ತಿರುವು. ಸಂಯುಕ್ತಾಳ ಕುತಂತ್ರದಿಂದ ಶ್ರಾವಣಿಯ ಜೀವಕ್ಕೆ ಅಪಾಯ. ಅಧೀರ ಎಂಬ ಆತ್ಮದ ಶಕ್ತಿಯಿಂದ ಸಂಯುಕ್ತಾ ಭಯಾನಕ ಸೇಡು ತೀರಿಸಿಕೊಳ್ಳಲು ಹೊರಟಿದ್ದಾಳೆ. ಶ್ರಾವಣಿಯನ್ನು ಯಾರು ರಕ್ಷಿಸುವರು? ಈ ಪ್ರಶ್ನೆಗಳಿಗೆ ಉತ್ತರ ಸ್ಟಾರ್ ಸುವರ್ಣದಲ್ಲಿ ರಾತ್ರಿ 10ಕ್ಕೆ.
ಕನ್ನಡ ಕಿರುತೆರೆಯಲ್ಲಿ ಜನಪ್ರಿಯ ಧಾರಾವಾಹಿಗಳ ಪೈಕಿ ಸ್ಟಾರ್ ಸುವರ್ಣ (Star Suvarna) ವಾಹಿನಿಯ 'ಅವನು ಮತ್ತೆ ಶ್ರಾವಣಿ' ಕಥೆಯೂ (Avanu Matte Shravani) ಒಂದು. ಈಗಾಗಲೇ 400 ಕ್ಕೂ ಹೆಚ್ಚು ಯಶಸ್ವಿ ಸಂಚಿಕೆಗಳೊಂದಿಗೆ ಮುನ್ನುಗ್ಗುತ್ತಿರುವ ಈ ಧಾರಾವಾಹಿಯಲ್ಲಿ ಇನ್ಮುಂದೆ ಒಂದು ಭಯಾನಕ ಸೇಡಿನ ಸಂಘರ್ಷದ ತಿರುವು ಬರಲಿದೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ 'ಅವನು ಮತ್ತೆ ಶ್ರಾವಣಿ' ಸೀರಿಯಲ್ ತನ್ನ ಚಿತ್ರಕಥೆಯಲ್ಲಿ ಹೊಸ ತಿರುವು ಪಡೆದುಕೊಂಡಿದೆ.
ಎರಡಕ್ಷರದ ಪ್ರೀತಿಗೆ ಮನಸೋತು ಅಭಿ-ಶ್ರಾವಣಿಯ ಬಾಳಲ್ಲಿ ಎರಡನೇ ಅವಕಾಶ ಸಿಕ್ಕೇ ಬಿಡ್ತು ಅನ್ನುವಷ್ಟರಲ್ಲಿ, ಇದೀಗ ಕುತಂತ್ರಿ ಸಂಯುಕ್ತಾಳ ಸಂಚಿಗೆ ಶ್ರಾವಣಿಯ ಜೀವ ಅಪಾಯದಲ್ಲಿದೆ. ಕಥೆಯಲ್ಲಿ ಅಧೀರ ಎಂಬ ಆತ್ಮದ ಆಗಮನವಾಗಲಿದ್ದು, ಸಂಯುಕ್ತಾಳಿಗೆ ಅಧೀರನ ಶಕ್ತಿ (Adheera) ವರದಂತೆ ಸಿಕ್ಕಾಗಿದೆ. ಹಾಗಿದ್ದರೆ ಶ್ರಾವಣಿ ಗತಿಯೇನು? ಖಂಡಿತವಾಗಿಯೂ ಶ್ರಾವಣಿ ಇನ್ಮುಂದೆ ಭಯಾನಕ ನರಕ ನೋಡಲಿದ್ದಾಳಾ?
ಕಲರ್ಸ್, ಝೀ ಬಳಿಕ ಇದೀಗ ಸುವರ್ಣದಲ್ಲೂ ದೆವ್ವದ ಅಟ್ಟಹಾಸ…. ಹಾರರ್ ಸ್ಟೋರಿಯಾಗಿ ಬದಲಾದ ಸಾಂಸಾರಿಕ ಕಥೆ
ಈ ಅಧೀರ ಯಾರು? ಸಂಯುಕ್ತಾಳಿಗೂ ಅಧೀರನಿಗೂ ಇರೋ ಸಂಬಂಧವೇನು? ಸಂಯುಕ್ತಾಳ ನಿಜರೂಪವನ್ನು ಹೊರತರುವಲ್ಲಿ ಶ್ರಾವಣಿ ಯಶಸ್ವಿಯಾಗ್ತಾಳಾ? ಅತ್ತೆ ತಾಯಿಯ ಎರಡನೇ ರೂಪ ಎಂಬ ಭ್ರಮೆಯಲ್ಲಿರೋ ಅಭಿಮನ್ಯುವಿಗೆ ಸತ್ಯದ ಅರಿವಾಗುತ್ತಾ? ಶ್ರಾವಣಿ ಜೀವ ಅಪಾಯದಲ್ಲಿದೆ ಎಂದೇ ಹೇಳಬೇಕು. ಆದರೆ, ಏನಾಗುತ್ತೆ ಮುಂದೆ? ಎಲ್ಲವೂ ಸಂಯುಕ್ತಾ ಅಂದುಕೊಂಡಂತೆ ಆಗುತ್ತಾ? ಆದರೆ, ಶ್ರಾವಣಿ ಕಾಪಾಡೋರು ಯಾರು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇದೇ ಸೋಮವಾರದಿಂದ ಸಿಗಲಿದೆ.
ಕೌಟುಂಬಿಕ ಕಥಾ ಹಂದರದೊಂದಿಗೆ ಸಾಗುತ್ತಿದ್ದ ಈ ಕಥೆಯು ಇನ್ಮುಂದೆ ಭಯಾನಕ ಸೇಡಿನ ಸಂಘರ್ಷದೊಂದಿಗೆ ಹಾರರ್ ರೀತಿಯಲ್ಲಿ ಮುಂದುವರಿಯಲಿದೆ. ಈಗಾಗಲೇ ವಾಹಿನಿಯಲ್ಲಿ ಪ್ರೋಮೋ ರಿಲೀಸ್ ಆಗಿದ್ದು ನೋಡುಗರಲ್ಲಿ ಸಂಚಿಕೆ ನೋಡುವ ಕಾತುರತೆ ಹೆಚ್ಚಾಗಿದೆ. 'ಅವನು ಮತ್ತೆ ಶ್ರಾವಣಿ' ಸೋಮವಾರದಿಂದ ಪ್ರತಿದಿನ ರಾತ್ರಿ 10 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗಲಿದೆ. ಸದ್ಯ ಈ ಧಾರಾವಾಹಿಯಲ್ಲೂ ದೆವ್ವದ ಕಾಟ ಪ್ರಾರಂಭವಾಗಿದ್ದು ಮನೆಮಮನೆಯಲ್ಲಿ ಮಹಿಳೆಯರು ಸೋಫಾದ ತುದಿಯಿಂದ ಜಾರಿಬೀಳುವ ಅಪಾಯ ಹೆಚ್ಚಾಗುತ್ತಿದೆ ಎನ್ನಬಹುದೇ?
ಭಾರೀ ಬಿಗ್ ಡೀಲ್‌ಗೆ ಕೈ ಹಾಕಿರೋ ಕಿಚ್ಚ ಸುದೀಪ್, ಸದ್ಯದಲ್ಲೇ ಅದು ರಿವೀಲ್!
