ಭಾರೀ ಬಿಗ್‌ ಡೀಲ್‌ಗೆ ಕೈ ಹಾಕಿರೋ ಕಿಚ್ಚ ಸುದೀಪ್, ಸದ್ಯದಲ್ಲೇ ಅದು ರಿವೀಲ್!

ಒಟ್ಟಾರೆ ಸುದೀಪ್ ಇನ್ಮುಂದೆ ಬಿಗ್ ಬಾಸ್​​ನಲ್ಲಿ ಕಾಣಸಿಗೋದಿಲ್ಲ. ಆದ್ರೆ ಬಿಗ್ ಬಾಸ್​ನಿಂದ ಸುದೀಪ್ ಸಂಪಾದಿಸಿರೋ ಹಣ ಮತ್ತು ಕೀರ್ತಿ ಎರಡೂ ಲೆಕ್ಕವಿಲ್ಲದಷ್ಟು...ಬಿಗ್ ಬಾಸ್​ನಿಂದ ದೂರವಾಗ್ತಾ ಇರೋ ನಟ ಕಿಚ್ಚ ಸುದೀಪ್ ಅವರು ಮುಂದೆ ಇದಕ್ಕಿಂದ ಬಿಗ್ ಡೀಲ್​ಗೆ...

Sandalwood actor Kiccha Sudeep starts new deal after Bigg Boss Kannada show

ಕಿಚ್ಚ ಸುದೀಪ್ (Kichcha Sudeep) ಹೋಸ್ಟ್ ಮಾಡುತ್ತಿರುವ 'ಬಿಗ್ ಬಾಸ್ ಸೀಸನ್ 11' ಫಿನಾಲೆಗೆ ದಿನಗಣನೆ ಶುರುವಾಗಿದೆ. ಇನ್ನೇನು ಇದೇ ವಾರಾಂತ್ಯಕ್ಕೆ ಬಿಗ್ ಬಾಸ್ ಶೋ ಮುಕ್ತಾಯಗೊಳ್ಳಲಿದೆ. ಈ ಸೀಸನ್ ಮೂಲಕ ಬಿಗ್ ಬಾಸ್ ಜೊತೆಗಿನ ಕಿಚ್ಚನ ಸಂಬಂಧವೂ ಮುಕ್ತಾಯ ಆಗ್ತಾ ಇದೆ. ಈ ಬಗ್ಗೆ ಸ್ವತಃ ಕಿಚ್ಚ ಸುದೀಪ್ ಅಧಿಕೃತವಾಗಿ ಸ್ಟೇಟ್​ಮೆಂಟ್ ಕೊಟ್ಟಾಗಿದೆ. ಇದೇ ವೇಳೆ ನಟ ಕಿಚ್ಚ ಸುದೀಪ್ ಅವರು ತಮ್ಮ ಪೈಲ್ವಾನ್ ಚಿತ್ರದ ನಟನೆಗಾಗಿ 2019ರ ಶ್ರೇಷ್ಠ ನಟ ಪ್ರಶಸ್ತಿ ಪಡೆದಿದ್ದಾರೆ.

ನಟ ಕಿಚ್ಚ ಸುದೀಪ್ ಈಗಾಗ್ಲೇ ಇದು ನನ್ನ ಕೊನೆಯ ಬಿಗ್ ಬಾಸ್ ಸೀಸನ್ ಅಂತ ಹೇಳಿದ್ರು. ಶೋ ನಡೀತಿರೋವಾಗಲೇ ವಿದಾಯದ ಮಾತನಾಡಿದ್ರು. ಇದೀಗ ಒನ್ಸ್ ಅಗೈನ್ ಫೈನಲ್​ಗೆ ಕೆಲವೇ ದಿನ ಬಾಕಿ ಇರೋವಾಗ ಮತ್ತೊಮ್ಮೆ ಕಿಚ್ಚ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಹಾಕಿ ಬಿಗ್ ಬಾಸ್​ಗೆ ಅಧಿಕೃತವಾಗಿ ಗುಡ್ ಬೈ ಹೇಳಿದ್ದಾರೆ. ಈ ಮೂಲಕ ನಟ ಕಿಚ್ಚ ಸುದೀಪ್ ಅವರ ಬಿಗ್ ಬಾಸ್‌ ಜರ್ನಿ ಅಧಿಕೃತ ಅಂತ್ಯ ಕಾಣಲಿದೆ. 

2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಘೋಷಣೆ, ದರ್ಶನ್‌ ಸಿನಿಮಾಗೂ ಅವಾರ್ಡ್!

ಅಲ್ಲಿಗೆ ಈ ವಾರಾಂತ್ಯಕ್ಕೆ ನಡೆಯಲಿರೋ ಫಿನಾಲೆಯು ಕಿಚ್ಚನ ಕೊನೆ ಫಿನಾಲೆ ಆಗಲಿದೆ. ಮುಂದಿನ ದಿನಗಳಲ್ಲಿ ಬಿಗ್ ಬಾಸ್ ಮುಂದುವರೆಯಬಹುದು.. ಬೇರೇ ನಿರೂಪಕರು ಬಂದು ಬಿಗ್ ಬಾಸ್ ಶೋ ನಡೆಸಿಕೊಡಬಹುದು. ಆದ್ರೆ ಕಿಚ್ಚ ಅಂತೂ ಇನ್ಮುಂದೆ ಈ ವೇದಿಕೆ ಮೇಲೆ ಕಾಣಿಸಿಕೊಳ್ಳಲ್ಲ ಅನ್ನೋದು ಫಿಕ್ಸ್.

ಸುದೀಪ್ ಇಲ್ಲದೇ ಹೋಗಿದ್ದಲ್ಲಿ ಬಹುಶಃ ಬಿಗ್ ಬಾಸ್ ಕಾರ್ಯಕ್ರಮ ಕನ್ನಡದಲ್ಲಿ ಇಷ್ಟು ಜನಪ್ರೀಯತೆ ಪಡೆಯೋದು ಸಾಧ್ಯನೇ ಇರಲಿಲ್ಲ. ಸುದೀಪ್ ಬಿಗ್ ಕೇವಲ ಬಾಸ್ ಶೋಗೆ ವಾರಕ್ಕೊಮ್ಮೆ ಬರೋ ವಿಸಿಟಿಂಗ್ ಆಂಕರ್ ಅಲ್ಲ. ಅಥವಾ ಸೆಲೆಬ್ರಿಟಿ ಜಡ್ಜ್ ಅಲ್ಲ. ಇದು ತನ್ನದೇ ಶೋ. ಇದಕ್ಕೆ ತಾನೇ ಜವಾಬ್ದಾರ ಅನ್ನೋ ರೀತಿಯಲ್ಲಿ  ಹೆಗಲ ಮೇಲೆ ಹೊತ್ತು ಈ ಶೋನ ನಡೆಸಿಕೊಂಡು ಬಂದವರು ಸುದೀಪ್.

ಬಿಗ್ ಬಾಸ್ 11 ಸೀಸನ್‌ನಿಂದ ಕಿಚ್ಚ ಸುದೀಪ್ ಗಳಿಸಿದ್ದೆಷ್ಟು? ಇದು ಪೇಮೆಂಟ್ ವಿಷ್ಯ ಗುರೂ!

ಕಂಟೆಸ್ಟೆಂಟ್ ಗಳು ಅದೆಷ್ಟೇ ಕಂಟೆಂಟ್ ಕೊಟ್ಟರೂ ಏನೇ ವೀಕ್ಷಕವರ್ಗವನ್ನು ಹುಟ್ಟುಹಾಕಿದ್ರೂ ಬಿಗ್ ಬಾಸ್ ನ ಮೂಲ ಶಕ್ತಿಯಾಗಿದ್ದವರು ಸುದೀಪ್. ಕಂಟೆಸ್ಟೆಂಟ್​​ಗಳು ಅದೆಂಥಾ ಕಿರಿಕ್ ಮಾಡಿದ್ರೂ, ಪ್ರತಿವಾರದ ಎಲ್ಲ ಕಿರಿಕ್​​ಗಳನ್ನ ವಾರದ ಕೊನೆಯಲ್ಲಿ ತಮ್ಮ ಮಾತುಗಾರಿಕೆಯ ಮೂಲಕ  ಅಳಿಸಿಹಾಕಿ, ಮತ್ತೆ ಮರುವಾರಕ್ಕೆ ವೀಕ್ಷಕವರ್ಗವನ್ನ ರೆಡಿಮಾಡ್ತಾ ಇದ್ದದ್ದು ಸುದೀಪ್.

ಇಂಥಾ ಸುದೀಪ್ ಇಲ್ಲದ ಬಿಗ್ ಬಾಸ್​​ನ ಊಹಿಸೋದು ಕೂಡ ಕಷ್ಟ. ಸುದೀಪ್  ಎತ್ತರ,    ಧ್ವನಿ, ಆ ಚಾರ್ಮ್, , ಮಾತಿನ ವೈಖರಿ, ಆಟಿಟ್ಯೂಡ್, ಇಷ್ಟುವರ್ಷದ ಬಿಗ್ ಬಾಸ್ ಅನುಭವ... ಇದನ್ನೆಲ್ಲ ಸರಿಗಟ್ಟೋಕೆ ಯಾರಿಂದಾನೂ ಖಂಡಿತ ಸಾಧ್ಯ ಇಲ್ಲ. ಹಾಗಂತ ಶೋ ನಿಲ್ಲಿಸೋಕಂತೂ ಸಾಧ್ಯ ಇಲ್ಲ ಅಲ್ವಾ..? ಶೋ ಮಸ್ಟ್ ಗೋ ಆನ್.. ಸೋ ಬಿಗ್ ಹೋಸ್ಟ್ ಅಗಲಿಕ್ಕೆ ಹೊಸ ತಾರೆಯರ ಹುಡುಕಾಟ ಶುರುವಾಗಿದೆ. 

ಮಣಿಸರ ಮಾರುತ್ತಿದ್ದ ಸುಂದರಿ ಮೊನಾಲಿಸಾ ಮುಂದಿನ ಭವಿಷ್ಯವೇನು?

ಒಟ್ಟಾರೆ ಸುದೀಪ್ ಇನ್ಮುಂದೆ ಬಿಗ್ ಬಾಸ್​​ನಲ್ಲಿ ಕಾಣಸಿಗೋದಿಲ್ಲ. ಆದ್ರೆ ಬಿಗ್ ಬಾಸ್​ನಿಂದ ಸುದೀಪ್ ಸಂಪಾದಿಸಿರೋ ಹಣ ಮತ್ತು ಕೀರ್ತಿ ಎರಡೂ ಲೆಕ್ಕವಿಲ್ಲದಷ್ಟು... ಹೀಗೆ ಲೆಕ್ಕಕ್ಕೆ ಸಿಗದಷ್ಟು ಸಂಪಾದಿಸಿದ್ರೂ ಕಿಚ್ಚ ಬಿಗ್ ಬಾಸ್​ನಿಂದ ದೂರವಾಗ್ತಾ ಇದ್ದಾರೆ ಅಂದ್ರೆ ಖಂಡಿತ ಇದಕ್ಕಿಂದ ಬಿಗ್ ಡೀಲ್​ಗೆ ಕಿಚ್ಚ ಸುದೀಪ್ ಅವರು ಕೈ ಹಾಕಿದ್ದಾರೆ ಎಂದೇ ಅರ್ಥ..! ಹಾಗಿದ್ದರೆ ಅದೇನು? ಸದ್ಯದಲ್ಲೇ ಆ ಸಂಗತಿ ರಿವೀಲ್ ಆಗಲಿದೆ ಕಾದು ನೋಡಿ!

Latest Videos
Follow Us:
Download App:
  • android
  • ios