ಜೀ ಕನ್ನಡ, ಕಲರ್ಸ್ ಕನ್ನಡ ವಾಹಿನಿಗಳಲ್ಲಿ ಹಾರರ್ ಕಥೆಗಳ ಪ್ರಸಾರ ಆರಂಭ. ಸ್ಟಾರ್ ಸುವರ್ಣದ 'ಅವನು ಮತ್ತೆ ಶ್ರಾವಣಿ' ಧಾರಾವಾಹಿಯೂ ಈಗ ಹಾರರ್ ಗೆ ತಿರುಗುತ್ತಿದೆ. ಮಾಟಗಾತಿ ಸಂಯುಕ್ತಾಳ ಸೇಡಿನ ಕಥೆಯನ್ನು ಒಳಗೊಂಡ ಈ ಧಾರಾವಾಹಿ ರಾತ್ರಿ 10ಕ್ಕೆ ಪ್ರಸಾರವಾಗಲಿದೆ. ಚೈತ್ರಾ ರಾವ್, ಸ್ಕಂದ ಅಶೋಕ್, ಇಶಿಕಾ ಶೆಟ್ಟಿಗಾರ್ ಮುಖ್ಯ ಭೂಮಿಕೆಯಲ್ಲಿದ್ದಾರೆ.
ಝೀ ಕನ್ನಡ ಮತ್ತು ಕಲರ್ಸ್ ಕನ್ನಡದಲ್ಲಿ ಹಾರರ್ ಕಥೆಗಳು ಬರೋದಕ್ಕೆ ರೆಡಿಯಾಗಿದೆ. ಕಲರ್ಸ್ ಕನ್ನಡದಲ್ಲಿ ಈಗಾಗಲೇ ನೂರು ಜನ್ಮಕೂ ಪ್ರಸಾರವಾಗುತ್ತಿದೆ, ಜನರ ಮೆಚ್ಚುಗೆಗೂ ಪಾತ್ರವಾಗಿದೆ. ಇನ್ನು ಝೀ ಕನ್ನಡದಲ್ಲಿ ಕೂಡ ಹೊಸ ಹಾರರ್ ಸ್ಟೋರಿ ಸದ್ಯದಲ್ಲೇ ಶುರುವಾಗಲಿದೆ. ಎರಡು ಚಾನೆಲ್ ಗಳಲ್ಲಿ ಹಾರರ್ ಕಥೆ ಅಬ್ಬರಿಸೋಕೆ ಶುರುವಾಗಿದೆ. ಇದರ ನಡುವೆ ಈಗ ಸ್ಟಾರ್ ಸುವರ್ಣದಲ್ಲಿ (Star Suvarna) ಸಾಮಾನ್ಯ ಕಥೆಯೊಂದು ಹಾರರ್ ಆಗಿ ಬದಲಾಗುತ್ತಿದೆ.
ನಗುವ ನಯನ ಎನ್ನುತ್ತಾ ಕಣ್ಣಲ್ಲೇ ಮೋಡಿ ಮಾಡಿದ ಮಹಾನಟಿ ಚಂದನಾಗೆ ಸಿಕ್ತು ಭರ್ಜರಿ ಆಫರ್!
ಸ್ಟಾರ್ ಸುವರ್ಣ ವಾಹಿನಿಯ ಅವನು ಮತ್ತೆ ಶ್ರಾವಣಿ (Avanu Matte Shravani) ಸೀರಿಯಲ್ ಇಲ್ಲಿವರೆಗೆ ಸಾಮಾನ್ಯ ಕಥೆಯಾಗಿ ಮೂಡಿಬರುತ್ತಿತ್ತು. ಮೊದಲಿಗೆ ಪ್ರೇಮಿಗಳ ನಡುವಿನ ಬ್ರೇಕಪ್, ಆಮೇಲೆ ಫ್ಯಾಮಿಲಿ ದ್ವೇಷ ಕಥೆಯಲ್ಲಿ ಈ ಧಾರಾವಾಹಿ ಸಾಗುತ್ತಿತ್ತು. ಆದರೆ ಇದೀಗ ದಿಡೀರ್ ಆಗಿ ಕಥೆಯ ತಿರುವೇ ಬದಲಾಗಿದೆ. ಇನ್ನು ಶೀಘ್ರದಲ್ಲೇ ಹಾರರ್ ಕಥೆ ಬರಲಿದೆ. ಈಗಾಗಲೇ ಪ್ರೊಮೋ ಬಿಡುಗಡೆಯಾಗಿದ್ದು, ಭಯಾನಕ ಎಳೆಗಳು ನೋಡಿದ್ರೆ ಎದೆ ಝಲ್ ಎನಿಸುತ್ತಿದೆ. ಸೀರಿಯಲ್ ಪ್ರೇಮಿಗಳು ಸಹ ಸೀರಿಯಲ್ ಪ್ರೊಮೋ ನೋಡಿ ಥ್ರಿಲ್ ಆಗಿದ್ದಾರೆ. ಹಾರರ್ ಕಥೆಯ ಝಲಕ್ ನೋಡೋದಕ್ಕೆ ಕಾಯುತ್ತಿದ್ದಾರೆ. ಇಲ್ಲಿವರೆಗೆ ಕಥೆಯಲ್ಲಿ ಕೌಟುಂಬಿಕ ಕಥೆ ಪ್ರಸಾರವಾಗುತ್ತಿತ್ತು, ಇನ್ನು ಹಾರರ್ ಕಥೆ ಹೇಗೆ ಮೂಡಿ ಬರಲಿದೆ ಎನ್ನುವ ಕುತೂಹಲ ಜನರನ್ನು ಕಾಡುತ್ತಿದೆ.
ಹಾರರ್ ಕಥೆ (Horror Story) ಮುಂದಿನ ವಾರದಿಂದಲೇ ಪ್ರಸಾರ ಆಗುತ್ತಿದೆ. ಸದ್ಯ ಪ್ರೋಮೋವನ್ನ ಅಧಿಕೃತವಾಗಿಯೇ ಚಾನೆಲ್ ರಿಲೀಸ್ ಮಾಡಿದೆ. ಅವನು ಮತ್ತೆ ಶ್ರಾವಣಿ ರಾತ್ರಿ 10 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಬರ್ತಾ ಇದೆ. ಇದೊಂದು ಭಯಾನಕ ಸೇಡಿನ ಕಥೆಯಾಗಿದ್ದು, ಸಂಯುಕ್ತಾ ಪಾತ್ರದಲ್ಲಿ ಚೈತ್ರಾ ರಾವ್ ನಟಿಸುತ್ತಿದ್ದು, ಅವರೇ ಈ ಹಾರರ್ ಕಥೆಯ ಮುಖ್ಯ ಪಾತ್ರವಾಗಿದ್ದಾರೆ. ತನ್ನ ಸೇಡನ್ನು ತೀರಿಸಿಕೊಳ್ಳಲು ಮಾಟ ಮಂತ್ರದ ಮೊರೆಹೊಗುವ ಮಾಟಗಾತಿ ಸಂಯುಕ್ತಾ, ಯಾವ ರೀತಿಯಾಗಿ ಶ್ರಾವಣಿಯ ನಿದ್ರೆಯನ್ನು ಕೆಡಿಸಿ, ಆಕೆಯನ್ನು ಭಯದ ನೆರಳಿನಲ್ಲಿ ನರಳುವಂತೆ ಮಾಡುತ್ತಾಳೆ ಅನ್ನೋದೆ ಸೀರಿಯಲ್ ಕಥೆ. ಈ ಸೀರಿಯಲ್ ನಲ್ಲಿ ನಾಯಕನಾಗಿ ಸ್ಕಂದ ಅಶೋಕ್ ಅವರು ಅಭಿಮನ್ಯು ಪಾತ್ರದಲ್ಲಿ ಹಾಗೂ ನಾಯಕಿ ಶ್ರಾವಣಿಯಾಗಿ ಇಶಿಕಾ ಶೆಟ್ಟಿಗಾರ್ ನಟಿಸುತ್ತಿದ್ದಾರೆ.
