5 ನಿಮಿಷದಲ್ಲಿ ಪೆಸರಟ್ಟು ದೋಸೆ ಮಾಡಿದ ಅನುಪಮಾ ಗೌಡ; ವಿಡಿಯೋ ವೈರಲ್!
ಸಿಂಪಲ್ ರೆಸಿಪಿ ಪೋಸ್ಟ್ ಮಾಡುತ್ತಿರುವ ಅನುಪಮಾ ಗೌಡ. ಬ್ಯಾಚುಲರ್ ಜೀವನ ಫುಲ್ ಆರಾಮ್ ಎಂದ ನೆಟ್ಟಿಗರು.....
ಕನ್ನಡ ಕಿರುತೆರೆ ಅಕ್ಕ ಉರ್ಫ್ ಅನುಪಮಾ ಗೌಡ ಸದ್ಯ ಸುವರ್ಣ ಜಾಕ್‌ಪಾಟ್ ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದಾರೆ. ಬಿಗ್ ಬಾಸ್ ನಂತರ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ಅನು 21 ದಿನಗಳ ಕಾಲ ದಿನಕ್ಕೊಂದು ಸಿಂಪಲ್ ರೆಸಿಪಿ ಫೋಸ್ಟ್ ಮಾಡುವುದಾಗಿ ಅಭಿಮಾನಿಗಳಿಗೆ ಹೇಳಿದ್ದಾರೆ. ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಕೇವಲ 10ರಿಂದ 15 ನಿಮಿಷಗಳಲ್ಲಿ ಮಾಡಬಹುದಾದ ರೆಸಿಪಿಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ. ಆ ವಿಡಿಯೋಗಳ ಪೈಕಿ ಪೆಸರಟ್ಟು ದೋಸೆ ವೈರಲ್ ಆಗಿದೆ.
ಆಂಧ್ರ ಪ್ರದೇಶದಲ್ಲಿ ಹೆಚ್ಚಿನ ಮಾಡುವ ಪೆಸರಟ್ಟು ದೋಸೆಯನ್ನು ಅನು ದಿನಕ್ಕೆ ಎರಡು ಸಲ ಸೇವಿಸುತ್ತಾರೆ. ದೋಸೆ ಮಾಡುವ ಹಿಂದಿನ ದಿನ 150 ಗ್ರಾಂ ಹೆಸರು ಕಾಳನ್ನು ರಾತ್ರಿ ನೀರಿನಲ್ಲಿ ನೆನಸಬೇಕು ಅದರ ಜೊತೆ ನಾಲ್ಕು ಸ್ಪೂನ್ ಅಕ್ಕಿ ಕೂಡ ನೀರಿನಲ್ಲಿ ಸೇರಿಸಿ. ದೋಸೆ ಮಾಡುವ ದಿನ ಒಂದು ಮಿಕ್ಸಿಗೆ ನೆನಸಿಟ್ಟ ಹೆಸರು ಕಾಳು ಅಕ್ಕಿ, ಸ್ವಲ್ಪ ಶುಂಠಿ, ನಾಲ್ಕು ಹಸಿ ಮೆಣಸಿನಕಾಯಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಹಿಟ್ಟು ರೀತಿ ಮಾಡಿಕೊಳ್ಳಬೇಕು. ಮೊದಲು ನೀರು ಹಾಕದೇ ರುಬ್ಬಿಕೊಳ್ಳಿ ಆನಂತರ ಸ್ವಲ್ಪ ನೀರು ಸೇರಿಸಿ ರುಬ್ಬಿಕೊಳ್ಳಿ. ದೋಸೆ ಹಾಕುವಾಗ ನೀರಿನ ಪ್ರಮಾಣ ನೋಡಿಕೊಳ್ಳಿ.
ಅಬ್ಬಬ್ಬಾ!ಎರಡು ವಿಡಿಯೋ ಮಾಡಲು ಊರಾಚೆ 11 ಬಟ್ಟೆ ಬದಲಾಯಿಸಿದ ಅನುಪಮಾ ಗೌಡ
ಪೆಸರಟ್ಟು ದೋಸೆಯನ್ನು ದಿನ ತಿನ್ನಬಹುದು. ತುಪ್ಪ, ಚೆನ್ನಿ ಅಥವಾ ಚಿಕನ್ ಮೊಟ್ಟೆ ಸಾರಿನಲ್ಲಿ ತಿನ್ನಬಹುದು. ಯಾವುದರ ಜೊತೆಗೆ ಬೇಕಿದ್ದರೂ ಈ ದೋಸೆಯನ್ನು ಸೇವಿಸಬಹುದು ಎಂದು ಅನುಪಮಾ ಹೇಳಿದ್ದಾರೆ. ಮನೆಯಲ್ಲಿ ನಾವು ಟ್ರೈ ಮಾಡಿದ್ವಿ ಸೂಪರ್ ಆಗಿತ್ತು ಚೆನ್ನಾಗಿತ್ತು ನಮಗೆ ಇಷ್ಟ ಆಯ್ತು ಬ್ಯಾಚುಲರ್‌ಗೆಳಿಗೆ ಸಹಾಯ ಆಗುತ್ತಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಇಡೀ ಕೂದಲ ಬಣ್ಣ ಬದಲಾಯಿಸಿಕೊಂಡ ಅನುಪಮಾ ಗೌಡ; ಕೊನೆಯಲ್ಲಿತ್ತು ಬಿಗ್ ಶಾಕ್!!
ಹೆಸರುಕಾಳು ಅತ್ಯಂತ ಜನಪ್ರಿಯ ಸಸ್ಯಾಹಾರಿ ಸೂಪರ್‌ಫುಡ್‌ಗಳಲ್ಲಿ ಒಂದು. ಅಷ್ಟೇ ಅಲ್ಲ, ಹೆಸರುಕಾಳು ಉತ್ತಮ ಗುಣಮಟ್ಟದ ಪ್ರೋಟೀನ್ ಮತ್ತು ಇತರ ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ದೇಹದಲ್ಲಿ ಪ್ರೋಟೀನ್ ಪ್ರಮುಖ ಪಾತ್ರ ವಹಿಸುತ್ತೆ. ಪ್ರೋಟೀನ್ ಅಂಶವು ಅಂಗಾಂಶವನ್ನು ನಿರ್ಮಿಸಲು ಮತ್ತು ಸರಿಪಡಿಸಲು ಮತ್ತು ಸ್ನಾಯುಗಳು, ಮೂಳೆಗಳು, ರಕ್ತ ಮತ್ತು ಚರ್ಮ ರಚನೆಗೆ ಸಹಾಯ ಮಾಡುತ್ತೆ.ಹೆಸರುಕಾಳಿನಲ್ಲಿ ಸಾಕಷ್ಟು ಪೋಷಕಾಂಶಗಳಿವೆ. ಅವು ವಿಟಮಿನ್ಸ್ ಮತ್ತು ಮಿನರಲ್ಸ್‌ನಿಂದ ಸಮೃದ್ಧವಾಗಿವೆ. ಈ ಹೆಸರುಕಾಳು ಸೆಲೆನಿಯಮ್ ಮತ್ತು ಅಗತ್ಯ ಅಮೈನೊ ಆಮ್ಲಗಳಿಂದ ಸಮೃದ್ಧವಾಗಿದೆ, ಇದನ್ನು ದೇಹವು ಸ್ವತಃ ತಯಾರಿಸಲು ಸಾಧ್ಯವಾಗೋದಿಲ್ಲ. ಮೊಳಕೆ ಕಾಳುಗಳನ್ನು ತಿನ್ನುವುದು ತುಂಬಾ ಒಳ್ಳೆಯದು.