ಇಡೀ ಕೂದಲ ಬಣ್ಣ ಬದಲಾಯಿಸಿಕೊಂಡ ಅನುಪಮಾ ಗೌಡ; ಕೊನೆಯಲ್ಲಿತ್ತು ಬಿಗ್ ಶಾಕ್!!
ಹಲವು ದಿನಗಳ ನಂತರ ಬಿಗ್ ಮೇಕ್ ಓವರ್ ಮಾಡಿಸಿಕೊಂಡ ಅನುಪಮಾ ಗೌಡ. ಹೊಸ ಲುಕ್ ನೋಡಿ ನೆಟ್ಟಿಗರು ಫುಲ್ ಶಾಕ್....

ಅಕ್ಕ ಸೀರಿಯಲ್ ಮೂಲಕ ಜರ್ನಿ ಆರಂಭಿಸಿದ ಅನುಪಮಾ ಗೌಡ ಇದೀಗ ಬಿಗ್ ಹೇರ್ ಮೇಕ್ಓವರ್ ಮಾಡಿಸಿಕೊಳ್ಳುತ್ತಿದ್ದಾರೆ. ಯುಟ್ಯೂಬ್‌ನಲ್ಲಿ ವಿಡಿಯೋ ಹಾಕಿದ್ದಾರೆ.
ಹೌದು! ಬಿಗ್ ಬಾಸ್ ಸೀಸನ್ 5ರ ನಂತರ ಅನುಪಮಾ ಗೌಡ ಹೇರ್ ಸ್ಟೈಲ್‌ನ ಪ್ರಶಾಂತ್ ನೋಡಿಕೊಳ್ಳುತ್ತಾರೆ. ವಸ್ತ್ರ ವಿನ್ಯಾಸವನ್ನು ತೇಜಸ್ವಿನಿ ಕ್ರಾಂತಿ ನೋಡಿಕೊಳ್ಳುತ್ತಾರೆ.
ಹಲವು ದಿನಗಳಾಯ್ತು ಕೂದಲ ಬಣ್ಣ ಬದಲಾಯಿಸಿ ಹೀಗಾಗಿ ನಾನು ಗ್ಲೋಬಲ್ ಹೇರ್ ಕಲರ್ ಅಂದ್ರೆ ಇಡೀ ಕೂದಲು ಬಣ್ಣ ಬದಲಾಯಿಸುತ್ತಿರುವೆ ಎಂದಿದ್ದಾರೆ ಅನುಪಮಾ ಗೌಡ.
ಕೂದಲ ಕಟ್ ಮಾಡಿಸಿಕೊಳ್ಳುವುದಿಲ್ಲ ಆದರೆ ಇರುವ ಕೂದಲಿಗೆ ನಾನು ಬಣ್ಣ ಹಾಕಿಸುತ್ತಿರುವೆ. ಇಷ್ಟು ದಿನ ಎಲ್ಲರು ಕೇಳುತ್ತಿದ್ದರು ಎಂದು ವಿಡಿಯೋದಲ್ಲಿ ಅನುಪಮಾ ಹೇರ್ ಕಲರ್ ಮಾಡಿಸಿದ್ದಾರೆ.
ಸುಮಾರು 2 ಗಂಟೆಗಳ ಕಾಲ ಅನುಪಮಾ ಹೇರ್ ಕಲರಿಂಗ್ ಮಾಡಿಸಿಕೊಂಡಿದ್ದಾರೆ. ಮೇಲಿಂದ ಕೂದಲು ಕಪ್ಪಿದ್ದು ತುದಿಯಲ್ಲಿ ಕ್ಯಾರಮೆಲ್ ಬಣ್ಣವಿದೆ. ಈ ಬಣ್ಣ ಇಷ್ಟ ಆಗಿಲ್ಲ ಅಂದ್ರೆ ಕೇವಲ 20 ನಿಮಿಷದಲ್ಲಿ ಮತ್ತೊಂದು ಬಣ್ಣ ಬದಲಾಯಿಸಬಹುದು.
ಅನುಪಮಾ ಗೌಡ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸುವರ್ಣ ಸೂಪರ್ ಸ್ಟಾರ್ ರಿಯಾಲಿಟಿ ಶೋ ನಿರೂಪಣೆ ಮಾಡುತ್ತಿದ್ದಾರೆ.
ಯುಟ್ಯೂಬ್ ಲೋಕದಲ್ಲಿ ಬ್ಯುಸಿಯಾಗಿರುವ ಅನುಪಮಾ ಗೌಡ ತಮ್ಮ ಕೆಲಸ, ಫ್ಯಾಷನ್, ಲೈಫ್‌ಸ್ಟೈಲ್, ಶೂಟಿಂಗ್ ಮತ್ತು ಹೇರ್‌ಕೇರ್ ಬಗ್ಗೆ ಜನರಿಗೆ ತೋರಿಸುತ್ತಾರೆ.