ಅಬ್ಬಬ್ಬಾ!ಎರಡು ವಿಡಿಯೋ ಮಾಡಲು ಊರಾಚೆ 11 ಬಟ್ಟೆ ಬದಲಾಯಿಸಿದ ಅನುಪಮಾ ಗೌಡ
ಶೂಟಿಂಗ್ ದಿನಗಳು ಹೇಗಿರಲಿದೆ ಎಂದು ವಿಡಿಯೋ ಮಾಡಿದ ಅನುಪಮಾ ಗೌಡ. ಸಾಕಪ್ಪಾ ಸಾಕು ಎಂದ ನೆಟ್ಟಿಗರು...
ಕನ್ನಡ ಕಿರುತೆರೆ ಜನಪ್ರಿಯ ನಟಿ, ಬಿಗ್ ಬಾಸ್ ಸ್ಪರ್ಧಿ ಹಾಗೂ ನಿರೂಪಕಿ ಅನುಪಮಾ ಗೌಡ ಈ ಸಲ ಜಾಕ್‌ಪಾಟ್ ರಿಯಾಲಿಟಿ ಶೋ ನಿರೂಪಣೆ ಮಾಡುತ್ತಿದ್ದಾರೆ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಈ ರಿಯಾಲಿಟಿ ಶೋ ಪ್ರೋಮೋ ಶೂಟ್ ಮಾಡಲು ಊರಾಚೆ ಪಯಣ ಮಾಡಿರುವ ವಿಡಿಯೋ ಮಾಡಿದ್ದಾರೆ.
ಯುಟ್ಯೂಬ್ ಚಾನೆಲ್ ಆರಂಭಿಸಿರುವ ಅನುಪಮಾ ಗೌಡ ಚಿತ್ರೀಕರಣ ಮಾಡುವ ದಿನಗಳು ಹೇಗಿರಲಿದೆ ಯಾವ ರೀತಿ ಶೂಟಿಂಗ್ ನಡೆಯುತ್ತದೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
ಜಾಕ್‌ಪಾಟ್ ಎರಡು ಪ್ರೋಮೋ ವಿಡಿಯೋ ಮಾಡಲು ಅನುಪಮಾ ಗೌಡ ಸುಮಾರು 11 ಬಟ್ಟೆಗಳನ್ನು ಬದಲಾಯಿಸಿದ್ದಾರೆ. ಬೆಳಗ್ಗಿನಿಂದ ಸಂಜೆವರೆಗೂ ಶೂಟಿಂಗ್ ಮಾಡಿದ್ದಾರೆ.
ಅಬ್ಬಬ್ಬಾ! ಇಷ್ಟೊಂದು ಕಷ್ಟ ಇರುತ್ತಾ? ಸಣ್ಣ ವಿಡಿಯೋ ಮಾಡಲು ಇಷ್ಟೊಂದು ಬಟ್ಟೆ ಬೇಕಾ? ಸಂಭಾವನೆ ಎಷ್ಟು ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.
ಅನುಪಮಾ ಗೌಡ ಕನ್ನಡ ಮಾತನಾಡುವ ಶೈಲಿಯಿಂದ ಕಿರುತೆರೆ ವೀಕ್ಷಕರಿಗೆ ಬೇಗ ಹತ್ತಿರವಾಗುತ್ತಾರೆ. ಹೀಗಾಗಿ ಅನು ನಡೆಸಿಕೊಡುವ ಕಾರ್ಯಕ್ರಮವನ್ನು ಇಷ್ಟ ಪಟ್ಟು ನೋಡುತ್ತಾರೆ.
ಇನ್ನು ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಅನುಪಮಾ ತನ್ನ ಲೈಫ್‌ಸ್ಟೈಲ್ ಪ್ರತಿಯೊಂದನ್ನು ಅಪ್ಲೊಡ್ ಮಾಡುತ್ತಾರೆ. ವರ್ಕೌಟ್ , ಸ್ಕಿನ್ ಕೇರ್ ಎಲ್ಲವೂ ಇರುತ್ತದೆ