ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೊ ಶ್ರೀರಸ್ತು ಶುಭಮಸ್ತು ಸೀರಿಯಲ್​ಗೆ  ಟ್ವಿಸ್ಟ್ ಬಂದಿದೆ. ತುಳಸಿ ಮನೆಬಿಟ್ಟು ಹೋಗಿದ್ದಾಳೆ. ​ನಟಿ ಸಪ್ತಮಿ ಗೌಡ ಹೇಳಿದ್ದೇನು? 

ಮದುವೆ ಎಂದರೆ ಎರಡು ಕುಟುಂಬಗಳು ಸೇರುವುದಲ್ಲ, ಮದುವೆ ಎಂದರೆ ಎರಡು ಮನಸ್ಸುಗಳ ಸಮ್ಮಿಲನ. ಕೆಲವು ಸಲ ದೇವರು ಎರಡು ಕೈಯಿಂದ ಕೊಟ್ಟರೂ ಕಿತ್ತುಕೊಳ್ಳುವುದಕ್ಕಾಗಿಯೇ ನೂರಾರು ಕೈಗಳು ಕಾಯುತ್ತಿರುತ್ತವೆ. ಜೀವನದಲ್ಲಿ ಕಳೆದಿರುವ ನೆನಪುಗಳು ಒಂಥರಾ ಖುಷಿ ಕೊಡಬಹುದು, ಇಲ್ಲವೇ ದುಃಖ ಕೊಡಬಹುದು. ಆದರೆ ತುಳಸಿಗೆ ಮಾತ್ರ ಅವರ ನೆನಪುಗಳೇ ನೋವು ಕೊಡುತ್ತಿದೆ. ಮನಸ್ಸು ತುಂಬಾ ಪ್ರೀತಿ ತುಂಬಿಕೊಂಡಿರುವವರು ಮಾತ್ರ ಮನೆಯವರಿಗಾಗಿ ತ್ಯಾಗ ಮಾಡುವುದಕ್ಕೆ ಸಾಧ್ಯ ಎನ್ನುತ್ತಲೇ ಸ್ಯಾಂಡಲ್​ವುಡ್​ ನಟಿ, ಕಾಂತಾರಾ ಬ್ಯೂಟಿ ಸಪ್ತಮಿ ಗೌಡ ಎಂಟ್ರಿ ಕೊಟ್ಟಿದ್ದಾರೆ...

ಹೌದು. ಇದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಶ್ರೀರಸ್ತು- ಶುಭಮಸ್ತು ಸೀರಿಯಲ್​ ಕಥೆ. ಇದರ ಪ್ರೊಮೋ ರಿಲೀಸ್​ ಆಗಿದ್ದು, ಸೀರಿಯಲ್​ನಲ್ಲಿ ಮಹಾ ಟ್ವಿಸ್ಟ್​ ಎದುರಾಗಿದೆ. ಎಲ್ಲಾ ಸಮಸ್ಯೆಗಳನ್ನು ದಾಟಿ ತುಳಸಿ ಮಾಧವ್​ ಮಗ ಅವಿಯ ಮದುವೆ ಮಾಡಿಸಿದ್ದಾಳೆ. ಅವಿಯ ಮದುವೆ ಆಗಬಾರದು ಎಂದು ಚಿಕ್ಕಮ್ಮ ಶಾರ್ವರಿ ಮಾಡಿದ ಪ್ಲ್ಯಾನ್​ ಎಲ್ಲಾ ಠುಸ್​ ಆಗಿದೆ. ಅವಿಯ ಮಾವನ ಜೊತೆ ಸೇರಿ ತಂತ್ರ ಹೆಣೆದಿದ್ದಳು ಶಾರ್ವರಿ. ಆದರೆ ಅವಿಯ ಪ್ರೇಯಸಿ ಇದಕ್ಕೆ ಅವಕಾಶ ಕೊಡದೇ ಅಪ್ಪನ ವಿರುದ್ಧವೇ ತಿರುಗಿ ಬಿದ್ದಳು. ಇದರಿಂದ ಮದುವೆಯೇನೋ ಆಗಿಬಿಟ್ಟಿದೆ.

ಇವಳು ಹೊಟ್ಟೆಯಲ್ಲಿದ್ದಾಗ ಸಾಯಿಸಲು ಹೊರಟಿದ್ವಿ: ಆ ದಿನಗಳ ನೆನೆದ ಶ್ರೀರಸ್ತು ಶುಭಮಸ್ತು ಪೂರ್ಣಿಯ ಅಪ್ಪ

ಆದರೆ ಮದುವೆ ಮನೆಯಲ್ಲಿ, ಅವಿಯ ಮಾವ ತುಳಸಿಗೆ ಕಂಡೀಷನ್​ ಹಾಕಿದ್ದಾನೆ. ಅದೇನೆಂದರೆ, ನನ್ನ ಮಗಳು ಬರಬೇಕು ಎಂದರೆ ಮದುವೆ ಮನೆ ಹೊಸಲು ದಾಟಿ ಹೋಗಬೇಕು ಎಂದು. ಸದಾ ಎಲ್ಲರ ಹಿತವನ್ನೇ ಬಯಸುವ ತುಳಸಿ ತನ್ನಿಂದ ಮನೆಯವರಿಗೆ ಸಮಸ್ಯೆ ಆಗಬಾರದು ಎಂದುಕೊಂಡು ಇದಕ್ಕೆ ಒಪ್ಪಿದ್ದಾಳೆ. ಅತ್ತ ಮದುವೆಯಾಗುತ್ತಿದ್ದಂತೆಯೇ ಇತ್ತ ಮನೆ ಬಿಟ್ಟು ಹೋಗಿದ್ದಾಳೆ. ಆದರೆ ಅವಿಯ ಪತ್ನಿಗೆ ಅಪ್ಪನ ಕುತಂತ್ರದ ಅರಿವಿದೆ. ತುಳಸಿಯಿಂದಲೇ ತಮ್ಮ ಮದುವೆ ಸಾಧ್ಯವಾಗಿದೆ ಎನ್ನುವುದೂ ಆಕೆಗೆ ಗೊತ್ತಿದೆ.

ಆಕೆ, ಮನೆಗೆ ಪ್ರವೇಶಿಸುತ್ತಿದ್ದಂತೆಯೇ ತುಳಸಿ ಅತ್ತೆ ಎಲ್ಲಿ ಎಂದು ಕೇಳಿದ್ದಾಳೆ. ಇದನ್ನು ಕೇಳಿ ಶಾರ್ವರಿಗೆ ಶಾಕ್​ ಆಗಿದೆ. ಅವಿ ಪತ್ನಿಗೆ ಏನೋ ಎಡವಟ್ಟು ಆಗಿದೆ ಎಂದು ತಿಳಿದಿದೆ. ಅದೇ ಕಾರಣಕ್ಕೆ ತುಳಸಿ ಅತ್ತೆ ಇಲ್ಲದೇ ನಾನು ಮನೆಯ ಹೊಸಿಲು ತುಳಿಯುವುದಿಲ್ಲ ಎಂದಿದ್ದಾರೆ. ಎಲ್ಲರೂ ಗಾಬರಿಯಾಗಿದ್ದಾರೆ. ಮುಂದೆನು? ತುಳಸಿ ಮನೆಗೆ ಬಂದರೆ ಅವಿಗೆ ತೊಂದರೆ. ಮೊದಲೇ ಅವನಿಗೆ ತುಳಸಿ ಅಂದರೆ ಆಗಿಬರುವುದಿಲ್ಲ. ತುಳಸಿ ಮನೆಗೆ ವಾಪಸಾದರೆ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಖಂಡಿತ. ಇನ್ನು ತುಳಸಿ ಮನೆಗೆ ಬರದೇ ತಾನು ಮನೆ ಪ್ರವೇಶ ಮಾಡುವುದಿಲ್ಲ ಎಂದು ಅವಿಯ ಪತ್ನಿ ಹೇಳುತ್ತಿದ್ದಾಳೆ. ಈ ಭಾರಿ ಟ್ವಿಸ್ಟ್​ ಕುರಿತು ಪ್ರೊಮೋ ಬಿಡುಗಡೆ ಮಾಡಲಾಗಿದೆ. ಈ ಪ್ರೊಮೋದಲ್ಲಿ ಸಂಬಂಧಗಳ ಕುರಿತು ನಟಿ ಸಪ್ತಮಿ ಗೌಡ ಮಾತನಾಡಿದ್ದಾರೆ. 

ಸಿಹಿಗಿಂದು ಹುಟ್ಟುಹಬ್ಬದ ಸಂಭ್ರಮ: ರಿಯಲ್​ ಲೈಫ್​ನಲ್ಲೂ ನೋವುಂಡ ಪುಟಾಣಿಯ ವಿಶೇಷ ವಿಡಿಯೋ ರಿಲೀಸ್​

View post on Instagram