Asianet Suvarna News Asianet Suvarna News

ಸಿಹಿಗಿಂದು ಹುಟ್ಟುಹಬ್ಬದ ಸಂಭ್ರಮ: ರಿಯಲ್​ ಲೈಫ್​ನಲ್ಲೂ ನೋವುಂಡ ಪುಟಾಣಿಯ ವಿಶೇಷ ವಿಡಿಯೋ ರಿಲೀಸ್​

ಸೀತಾರಾಮ ಸೀರಿಯಲ್​ ಸಿಹಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ಜೀ ಕನ್ನಡ ವಾಹಿನಿ ವಿಶೇಷ ವಿಡಿಯೋ ಶೇರ್​ ಮಾಡಿದೆ.
 

Seetarama serial Sihis birthday celebration Special video has been released suc
Author
First Published Jan 26, 2024, 11:50 AM IST

ಸಿಹಿ ಎಂದರೆ ಸಾಕು ಸೀರಿಯಲ್​ ಪ್ರಿಯರ ಕಣ್ಣ ಮುಂದೆ ಬರುವುದು ಸೀತಾರಾಮ ಧಾರಾವಾಹಿಯ ಪುಟಾಣಿ. ಮುದ್ದು ಮುದ್ದು ಮಾತುಗಳಿಂದ ಪಟಪಟ ಎನ್ನುತ್ತ ಎಲ್ಲರನ್ನೂ ಮರಳುಮಾಡುವ ಸೀತಾರಾಮ ಸೀರಿಯಲ್​ ಸಿಹಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಈಕೆಯ ನಿಜವಾದ ಹೆಸರು ರಿತು ಸಿಂಗ್​. ಡ್ರಾಮಾ ಜ್ಯೂನಿಯರ್ಸ್ ಸೀಸನ್ 4 ಶೋ ಮೂಲಕ ಕಿರುತೆರೆ ಜನರಿಗೆ ಪರಿಚಿತರಾದ ರಿತು ಸಿಂಗ್ ಕ್ರೇಜಿಸ್ಟಾರ್​  ರವಿಚಂದ್ರನ್ ಅವರ ಫೇವರೆಟ್​ ನಟಿ. ಡ್ರಾಮಾ ಜ್ಯೂನಿಯರ್ಸ್ ಶೋನಲ್ಲಿ ಮುದ್ದು ಮುದ್ದಾಗಿ ಮಾತನಾಡುತ್ತ, ಸದಾ ರವಿಚಂದ್ರನ್ ಗರ್ಲ್‌ಫ್ರೆಂಡ್ ನಾನು ಎಂದು ಹೇಳುತ್ತಿದ್ದ ಈ ಪುಟ್ಟ ಪೋರಿ ಈಗ ಸೀರಿಯಲ್‌ನ ಕೇಂದ್ರ ಬಿಂದು ಆಗಿದ್ದಾಳೆ. ಐದು ವರ್ಷದ ಪೋರಿ ನಟನೆಗೆ, ಮುದ್ದು ಮುದ್ದಾದ ಮಾತಿಗೆ ವೀಕ್ಷಕರು ಮನ ಸೋತಿದ್ದಾರೆ.  ನೇಪಾಳ ಮೂಲದ ಪುಟಾಣಿ ಈಗ ಕನ್ನಡಿಗರ ಕಣ್ಮಣಿ. ಈಕೆಯ ಹುಟ್ಟುಹಬ್ಬದ ನಿಮಿತ್ತ ಜೀ ಕನ್ನಡ ವಾಹಿನಿ ವಿಶೇಷ ವಿಡಿಯೋ ಒಂದನ್ನು ರಿಲೀಸ್​ ಮಾಡಿದೆ. ಇದರಲ್ಲಿ ಸೀತಾರಾಮ ಸೀರಿಯಲ್​ನ ಹಲವು ದೃಶ್ಯಗಳನ್ನು ತೋರಿಸಲಾಗಿದೆ.

ಅಂದಹಾಗೆ, ರೀತು ನೇಪಾಳದವಳು. ನೇಪಾಳ ಮೂಲದ ರಿತು ತಾಯಿ ಜೊತೆಗೆ ಬೆಂಗಳೂರಿನಲ್ಲಿ ನೆಲೆಸಿದ್ದಾಳೆ. ಸೀತಾರಾಮ ಸೀರಿಯಲ್​ಗೂ ಸಿಹಿ ಬಾಳಿಗೂ ಸಾಮ್ಯತೆ ಇದೆ. ಹೌದು. ಸೀತಾರಾಮ ಸೀರಿಯಲ್​ ರೀತಿಯಲ್ಲಿಯೇ ಈಕೆಯ ನಿಜ ಜೀವನದ ಕೂಡ ಇದೆ. ಸೀತಾರಾಮ ಸೀರಿಯಲ್​ನಲ್ಲಿ ಈಕೆಗೆ ಅಪ್ಪ ಇಲ್ಲ. ಅಮ್ಮನೇ ಸರ್ವಸ್ವ. ಅದೇ ರೀತಿ ರಿತು ರಿಯಲ್​ ಲೈಫ್​ ಸ್ಟೋರಿ ಕೂಡ. ಇದರ ಬಗ್ಗೆ ಖುದ್ದು ಅವರ ಅಮ್ಮನೇ ಹೇಳಿಕೊಂಡಿದ್ದರು.

ಝುಮಕ ಝುಮಕ ಎಂದು ಸ್ಟೆಪ್ ಹಾಕಿದ ಪುಟ್ಟಕ್ಕನ ಮಕ್ಕಳು ಸ್ನೇಹಾ: ಪ್ರೆಗ್ನೆಂಟ್​ ಹೀಗೆಲ್ಲಾ ಮಾಡ್ಬಾರ್ದು ಎಂದ ಫ್ಯಾನ್ಸ್​

ಅದೇನೆಂದರೆ, ರಿತು ರಿಯಲ್​ ಅಪ್ಪ ದೂರ ಆಗಿದ್ದಾರೆ. ಈಕೆಯ ರಿಯಲ್​ ಲೈಫ್​ನಲ್ಲಿಯೂ ಅಮ್ಮನೇ ಎಲ್ಲಾ. ಪತಿಯಿಂದ ದೂರವಾಗಿರುವ ರಿತು ಅಪ್ಪ, ಒಬ್ಬಂಟಿಯಾಗಿ ಮಗಳನ್ನು ಸಾಕುತ್ತಿದ್ದಾಳೆ. ರಿಯಾಲಿಟಿ ಷೋನಲ್ಲಿ ಈ ಬಗ್ಗೆ  ರವಿಚಂದ್ರನ್ ಕೂಡ ಮಾತನಾಡಿದ್ದರು. ಹೋದವರು ಹೋಗಲಿ ಬಿಟ್ಟೋದವನು ಬಿಟ್ಟೋದ. ಗಂಡ ಇಲ್ಲ ಅಂತ ಅಳಬಾರದು. ಗಂಡ ಬಿಟ್ಟು ಹೋಗಿದ್ದಕ್ಕೆ ಇವತ್ತು ನಿಮ್ಮ ಮಗು ಇಷ್ಟೊಂದು ಪ್ರತಿಭಾವಂತೆ ಆಗಿರೋದು. ರಿತು ತುಂಬ ಪ್ರೌಢಿಮೆ ಇರುವ ಗೊಂಬೆ. ಯಾರೇ ಚಾಕಲೇಟ್ ಕೊಟ್ರೂ, ಎಷ್ಟೇ ಒತ್ತಾಯ ಮಾಡಿದ್ರೂ ಅವಳು ಚಾಕೋಲೇಟ್ ತಿನ್ನಲ್ಲ. ತುಂಬ ಒತ್ತಾಯ ಮಾಡಿದ್ರೆ ಮೊದಲು ನಮಗೆ ಚಾಕೋಲೇಟ್ ತಿನಿಸಿ ಆಮೇಲೆ ಅವಳು ತಿಂತಾಳೆ ಎಂದು ರವಿಚಂದ್ರನ್​ ಹೇಳಿದ್ದರು.

ಅಷ್ಟಕ್ಕೂ ಈ ಪೋರಿ ಈ ಸೀರಿಯಲ್‌ಗೆ ಆಯ್ಕೆ ಆದದ್ದು ಹೇಗೆ ಅನ್ನೋ ಪ್ರಶ್ನೆ ಕೆಲವರದು. ಡ್ರಾಮಾ ಜ್ಯೂನಿಯರ್ಸ್‌ನಲ್ಲಿ ಈಕೆಯ ಪರ್ಫಾಮೆನ್ಸ್‌ ನೋಡಿ ಈಕೆಗೆ ಸೀತಾರಾಮದಲ್ಲಿ ಸಿಹಿ ಪಾತ್ರ ಸಿಕ್ಕಿದೆ.  ಸಿಕ್ಕ ಅವಕಾಶವನ್ನು ಮಾತ್ರ ಈ ಪುಟಾಣಿ ಚೆನ್ನಾಗಿ ಬಳಸಿಕೊಂಡಿದ್ದಾಳೆ. ಪಾತ್ರಕ್ಕೆ ಜೀವ ತುಂಬಿದ್ದು ಮಾತ್ರ ಅಲ್ಲ ಆಕೆಯಿಂದಲೇ ಸೀರಿಯಲ್ ಗೆಲ್ಲುತ್ತಿದೆ ಅನ್ನುವಷ್ಟರ ಮಟ್ಟಿಗೆ ಕನ್ನಡಿಗರಿಗೆ ಮೋಡಿ ಮಾಡಿದ್ದಾಳೆ.

ರೀಲ್​ ಬಿಟ್ಟ ವಿವಾದದ ಬೆನ್ನಲ್ಲೇ ಮತ್ತೊಂದು ಆರೋಪದಲ್ಲಿ ಪ್ರತಾಪ್! ಡ್ರೋನ್​ ನೀಡ್ತೇನೆಂದು 35 ಲಕ್ಷ ಟೋಪಿ?

 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

Follow Us:
Download App:
  • android
  • ios