ಇವಳು ಹೊಟ್ಟೆಯಲ್ಲಿದ್ದಾಗ ಸಾಯಿಸಲು ಹೊರಟಿದ್ವಿ: ಆ ದಿನಗಳ ನೆನೆದ ಶ್ರೀರಸ್ತು ಶುಭಮಸ್ತು ಪೂರ್ಣಿಯ ಅಪ್ಪ
ಶ್ರೀರಸ್ತು ಶುಭಮಸ್ತು ಸೀರಿಯಲ್ ಪೂರ್ಣಿ ಅಮ್ಮನ ಹೊಟ್ಟೆಯಲ್ಲಿದ್ದಾಗ ಸಾಯಿಸಲು ಹೋಗಿದ್ದರಂತೆ! ಆ ದಿನಗಳ ಕುರಿತು ಅಪ್ಪ ಹೇಳಿದ್ದೇನು?
ಅಂದು ಈ ಅಪ್ಪ-ಅಮ್ಮಂಗೆ ಪರಂಗಿ ಕಾಯಿ ಸಿಕ್ಕಿದ್ದರೆ ಇಂದು ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಪೂರ್ಣಿ ಪಾತ್ರಧಾರಿಯಾಗಿರುವ ಲಾವಣ್ಯ ನಮ್ಮ ಮುಂದೆ ಇರುತ್ತಿರಲಿಲ್ಲ! ಹೌದು. ಆಕೆ ಅಮ್ಮನ ಹೊಟ್ಟೆಯಲ್ಲಿದ್ದಾಗಲೇ ಯಾವುದೋ ಕಾರಣಕ್ಕೆ ಸಾಯಿಸಲು ಹೊರಟಿದ್ದರಂತೆ. ಈ ಒಂದು ಭಯಾನಕ ಘಟನೆಯನ್ನು ನೆನಪಿಸಿಕೊಂಡಿದ್ದಾರೆ ಲಾವಣ್ಯನವರ ತಂದೆ. ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಜೋಡಿ ನಂ.1ನಲ್ಲಿ ಲಾವಣ್ಯ ಮತ್ತು ಶಶಿ ದಂಪತಿ ಭಾಗವಹಿಸಿದ್ದಾರೆ. ಈ ವಾರದ ಕಾರ್ಯಕ್ರಮದಲ್ಲಿ ಲಾವಣ್ಯ ಅವರ ಅಪ್ಪನನ್ನು ಕರೆಸಲಾಗಿತ್ತು. ಅವರು ಲಾವಣ್ಯ ಹುಟ್ಟಿದ ಬಗ್ಗೆ ತಿಳಿಸಿದ್ದಾರೆ. ಆಗ ಹೈದರಾಬಾದ್ನಲ್ಲಿ ಟೈಯರ್ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೆ. ನನ್ನ ಪತ್ನಿ ಗರ್ಭಿಣಿಯಾದಳು. ಆಗಿನ ಸ್ಥಿತಿಯಲ್ಲಿ ಮಗು ಹುಟ್ಟುವುದು ಬೇಡವಾಗಿತ್ತು. ಅದ್ಯಾರೋ ಪುಣ್ಯಾತ್ಮರು ಏನೋ ಹೇಳಿಬಿಟ್ಟಿದ್ದರು. ಪರಂಗಿ ಕಾಯಿ ತಿಂದರೆ ಅಬಾರ್ಷನ್ ಆಗುತ್ತದೆ ಎಂದು ಯಾರೋ ಹೇಳಿಬಿಟ್ಟರು. ಅದರಿಂದ ಪರಂಗಿ ಕಾಯಿ ಹುಡುಕಿ ಹೊರಟಿದ್ವಿ ಎಂದು ಆ ದಿನದ ಕುರಿತು ಮಾಹಿತಿ ನೀಡಿದರು ಲಾವಣ್ಯ ಅವರ ಅಪ್ಪ.
ಅದೇನೋ ಗೊತ್ತಿಲ್ಲ. ಪರಂಗಿ ಕಾಯಿಗಾಗಿ 8-10 ಕಿಲೋ ಮೀಟರ್ ನಡೆದೇ ಬಿಟ್ಟೆ. ಆದರೆ ಆಶ್ಚರ್ಯ ಎಂದರೆ ಅಂದು ಆ ಕಾಯಿ ಸಿಗಲೇ ಇಲ್ಲ. ಒಂದು ವೇಳೆ ಆ ಕಾಯಿ ಸಿಕ್ಕಿದ್ದರೆ ಬಹುಶಃ ಲಾವಣ್ಯ ಹುಟ್ಟುತ್ತಿರಲಿಲ್ಲ. ಅಂದಿನ ಆ ಭ್ರೂಣವೇ, ಇಂದಿನ ಲಾವಣ್ಯ ಎಂದು ನೆನಪಿಸಿಕೊಂಡರು. ಇದೇ ವೇಳೆ ಲಾವಣ್ಯ ಅವರು ತುಂಬಾ ಮಾತನಾಡುವ ಬಗ್ಗೆಯೂ ಮಾಹಿತಿ ನೀಡಿದ ಅವರು, ಇದೇ ಕಾರಣಕ್ಕೆ ನಾನು ಈಕೆಯನ್ನು ಸೀಗಡಿ ಎಂದು ಕರೆಯುತ್ತೇನೆ. ನನ್ನ ಮೊಬೈಲ್ನಲ್ಲಿಯೂ ಇವಳ ಹೆಸರನ್ನು ಸೀಗಡಿ ಎಂದೇ ಸೇವ್ ಮಾಡಿಟ್ಟುಕೊಂಡಿದ್ದೇನೆ ಎಂದರು. ಇವಳು ಸದಾ ವಟ ವಟ ಎನ್ನುತ್ತಾಳೆ. ಇದರಿಂದ ಇವಳು ಹುಟ್ಟಿದಾಗಿನಿಂದಲೂ ನನಗೆ ಡೋಲಾ 16 ಮಾತ್ರೆಯೇ ಎಂದು ತಮಾಷೆ ಮಾಡಿದರು.
ಬಿಗ್ಬಾಸ್ ಮನೆಯಲ್ಲಿ ನೊಂದವರ ಸಂಘ: ಯಾರು ಯಾರಿಗೆ ಯಾವ್ಯಾವ ಪೋಸ್ಟ್? ಬಿದ್ದೂ ಬಿದ್ದೂ ನಕ್ಕ ಕಿಚ್ಚ ಸುದೀಪ್!
ಇದೇ ವೇಳೆ ಲಾವಣ್ಯ ಚಿಕ್ಕವರಿರುವಾಗ ಹೇಳದೇ ಕೇಳದೇ ಬಸ್ಸು ಹತ್ತಿರುವ ಘಟನೆ ನೆನಪು ಮಾಡಿಕೊಂಡರು. ಲಾವಣ್ಯ ಚಿಕ್ಕ ಮಗುವಾಗಿದ್ದಾಗ ನಮ್ಮ ಮನೆಯ ಪಕ್ಕದಲ್ಲಿಯೇ ಶರ್ಮಾ ಟ್ರಾನ್ಸ್‌ಪೋರ್ಟ್ ಇತ್ತು. ಅದೊಂದು ದಿನ ಮಗು ಲಾವಣ್ಯ ಶರ್ಮಾ ಟ್ರಾನ್ಸ್‌ಪೋರ್ಟ್ ಬಸ್ಸು ಹತ್ತಿಬಿಟ್ಟಳು. ಅವಳ ಉದ್ದೇಶ ಸ್ಲೀಪಿಂಗ್ ಬಸ್ಸಿನಲ್ಲಿ ಹಾಸಿಗೆ ಹೇಗಿರುತ್ತೆ, ಹೇಗೆ ಮಲಗುತ್ತಾರೆ ಎಂಬುದನ್ನೆಲ್ಲಾ ನೋಡಲಿಕ್ಕಾಗಿತ್ತು. ಆದರೆ, ಡ್ರೈವರ್ ಸೇರಿದಂತೆ ಯಾರಿಗೂ ಲಾವಣ್ಯ ಬಸ್ ಹತ್ತಿದ್ದಾಳೆ ಎಂಬುದು ಗೊತ್ತಿರಲಿಲ್ಲ. ಹಾಗೇ ಬಸ್ ತಿರುಪತಿಗೆ ಹೊರಟಿದೆ. ಲಾವಣ್ಯಾಗೆ ಬಸ್ ಎಲ್ಲಿಗೆ ಹೋಗುತ್ತಿದೆ ಎಂಬ ಅರಿವೂ ಕೂಡ ಇರಲಿಲ್ಲ. ಬಸ್ ಹೋಗುತ್ತಿರುವಾಗ ಮನೆಯ ಟೆರೆಸ್ ಮೇಲೆ ತನ್ನ ಅಮ್ಮನನ್ನು ನೋಡಿ 'ಟಾಟಾ ಬೈ ಬೈ' ಎಂದಿದ್ದಳು. ಅದನ್ನು ನೋಡಿದ ಲಾವಣ್ಯ ಅಮ್ಮ ಬೆಚ್ಚಿ ಬಿದ್ದು 'ಅಯ್ಯೋ ನನ್ನ ಮಗಳು, ಅಯ್ಯಯ್ಯೋ ನನ್ ಮಗಳು ಎಂದು ಕೂಗಿ ನನಗೆ ಹೇಳಿದಳು ಎಂಬುದನ್ನು ನೆನಪಿಸಿಕೊಂಡರು.
ವಿಷಯ ತಿಳಿಯುತ್ತಿದ್ದಂತೆಯೇ ಲಾವಣ್ಯ ಅಪ್ಪ ಮ್ಯಾನೇಜರ್‌ಗೆ ಹೇಳಿ, ಕೋಣನಕುಂಟೆ ಬಳಿ ಮಗಳನ್ನು ಬಸ್ಸಿನಿಂದ ಇಳಿಸಿಕೊಂಡ ಬಗ್ಗೆ ನೆನಪಿಸಿಕೊಂಡರು. 'ಅಂದು ನಾನು ಇವಳನ್ನು ಅಲ್ಲಿ ಇಳಿಸಿಕೊಂಡಿದ್ದಕ್ಕೆ ಇಂದು ಅವಳಿಲ್ಲಿ ಇದ್ದಾಳೆ' ಎಂದರು.
ಬಿಗ್ಬಾಸ್ ಮಜಾ ಮಾಡ್ತಾವ್ರೆ ಬಾಸು.... 'ಸಮ್ಥಿಂಗ್ ಸ್ಪೆಷಲ್' ಎನ್ನುತ್ತಲೇ ಹೊಸ ಪ್ರೊಮೋ ಬಿಡುಗಡೆ!