Asianet Suvarna News Asianet Suvarna News

ವರದಕ್ಷಿಣೆ ಕುರಿತು ವೀಕ್ಷಕರಿಗೆ ಪ್ರಶ್ನೆ ಕೇಳಿದ್ದಾರೆ ಅಂತರಪಟ ಸೀರಿಯಲ್‌ ನಟಿ ಶ್ವೇತಾ ಪ್ರಸಾದ್‌

ಅಂತರಪಟ ಸೀರಿಯಲ್‌ನಲ್ಲಿ ಐಎಎಸ್‌ ಅಧಿಕಾರಿಯಾಗಿರುವ ನಟಿ ಶ್ವೇತಾ ಪ್ರಸಾದ್‌ ವರದಕ್ಷಿಣೆ ಕುರಿತು ವೀಕ್ಷಕರಿಗೆ ಹೀಗೊಂದು ಪ್ರಶ್ನೆ ಕೇಳಿದ್ದಾರೆ. 
 

Shweta Prasad  IAS officer in the Antarpata serial asked the viewers a question about dowry suc
Author
First Published Jan 23, 2024, 3:58 PM IST

ಜನರು ಇನ್ನೂ ವರದಕ್ಷಿಣೆ ಕೇಳುತ್ತಾರೆಯೇ ಅಥವಾ ನೀಡುತ್ತಾರೆಯೇ ಎಂದು ತಿಳಿಯಲು ನನಗೆ ಕುತೂಹಲವಿದೆ. ನಿಮ್ಮ ಕುಟುಂಬ ಅಥವಾ ಸಮಾಜದಲ್ಲಿ ನೀವು ವೈಯಕ್ತಿಕವಾಗಿ ಈ ಪರಿಸ್ಥಿತಿಯನ್ನು ಎದುರಿಸಿದ್ದೀರಾ? ಹೀಗೊಂದು ಪ್ರಶ್ನೆ ಕೇಳಿರುವವರು ನಟಿ ಶ್ವೇತಾ ಆರ್‌.ಪ್ರಸಾದ್‌. ರಾಧಾ ರಮಣ ಸೀರಿಯಲ್‌ನಲ್ಲಿ ರಾಧಾ ಮಿಸ್ ಆಗಿ ಕನ್ನಡಿಗರ ಮನ ಗೆದ್ದಿದ್ದ ನಟಿ ಶ್ವೇತಾ ಆರ್ ಪ್ರಸಾದ್ (Shwetha R Prasad) ಈ ಸೀರಿಯಲ್ ನಿಂದ ಹೊರ ಬಂದು ಸುದೀರ್ಘ ಅವಧಿಯ ಬಳಿಕ ಕಲರ್ಸ್‌ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಅಂತರಪಟ ಸೀರಿಯಲ್‌ನಲ್ಲಿ  ಐಎಎಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಟೋ ಡ್ರೈವರ್ ಮಗಳಾಗಿದ್ದರೂ ಐಎಎಸ್ ಅಧಿಕಾರಿಯಾಗಿರುವವಳಾಗಿ ಶ್ವೇತಾ ನಟಿಸುತ್ತಿದ್ದಾರೆ. 

ಇದರಲ್ಲಿ ಇವರ ಪಾತ್ರ ಸಮಾಜ ಕಾರ್ಯಕ್ಕೆ ಸಂಬಂಧಿಸಿದ್ದು, ಇದಾಗಲೇ ಸೀರಿಯಲ್‌ನಲ್ಲಿ ಸ್ಯಾನಿಟರಿ ನ್ಯಾಪಕೀನ್‌ ಬಗ್ಗೆ ನಟಿ ಕಾಳಜಿಯ ಮಾತುಗಳನ್ನಾಡಿದ್ದರು. ಇದಾದ ಬಳಿಕ ಈಗ ವರದಕ್ಷಿಣೆ ವಿರುದ್ಧ ಹೋರಾಡುತ್ತಿದ್ದಾರೆ. ಹೀಗೆ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುವ ಐಎಎಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.

ಈ ಲಕ್ಷ್ಮಿಯಂತೆ ಮಳೆ, ಚಳಿಯಲ್ಲಿ ಐಸ್‌ಕ್ರೀಂ ತಿನ್ನೋದು ನಿಮಗೂ ಇಷ್ಟನಾ?

ಇದೀಗ ನಟಿ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ, ತಾವು ಈ ಸೀರಿಯಲ್‌ ಅನ್ನು ಏಕೆ ಒಪ್ಪಿಕೊಂಡಿದ್ದೆ ಎನ್ನುವ ಬಗ್ಗೆ ವಿವರಿಸಿದ್ದಾರೆ. ನಟನೆಯಿಂದ ತುಂಬಾ ದೂರ ಉಳಿದ ಬಳಿಕ, ಪುನಃ ಅಂತರಪಟ ಸೀರಿಯಲ್‌ ಒಪ್ಪಿಕೊಂಡಿರುವ ಬಗ್ಗೆ ವಿವರಣೆ ನೀಡಿರುವ ನಟಿ,  ಅಂತರಪಟದಲ್ಲಿ ನನ್ನ ವಿಶೇಷ ಪಾತ್ರವನ್ನು ನೀವೆಲ್ಲರೂ ಇಷ್ಟಪಟ್ಟಿದ್ದೀರಿ ಎಂದು ನಾನು ಭಾವಿಸುತ್ತೇನೆ ಎನ್ನುತ್ತಲೇ ನಾನು ಈ ಪಾತ್ರವನ್ನು ಒಪ್ಪಿಕೊಂಡಿದ್ದು ಏಕೆ ಎಂದು ವಿವರಿಸಿದ್ದಾರೆ. ಈ ಪಾತ್ರವನ್ನು ನಾನು ಒಪ್ಪಿಕೊಳ್ಳಲು ಕಾರಣ,  ಅದು ಸಮಾಜದಲ್ಲಿ ಬಹಳ ಮುಖ್ಯವಾದ ಕಾಳಜಿಯನ್ನು ತಿಳಿಸುತ್ತದೆ. ಅದು ವರದಕ್ಷಿಣೆ ಕುರಿತು ಎಂದಿದ್ದಾರೆ.

ಈ ಸಂದರ್ಭದಲ್ಲಿ ಜನರು ಇನ್ನೂ ವರದಕ್ಷಿಣೆ ಕೇಳುತ್ತಾರೆಯೇ ಅಥವಾ ನೀಡುತ್ತಾರೆಯೇ ಎಂದು ತಿಳಿಯಲು ನನಗೆ ಕುತೂಹಲವಿದೆ. ನಿಮ್ಮ ಕುಟುಂಬ ಅಥವಾ ಸಮಾಜದಲ್ಲಿ ನೀವು ವೈಯಕ್ತಿಕವಾಗಿ ಈ ಪರಿಸ್ಥಿತಿಯನ್ನು ಎದುರಿಸಿದ್ದೀರಾ ಎಂದು ನಟಿ ಪ್ರಶ್ನಿಸಿದ್ದಾರೆ. ವರಕ್ಷಿಣೆ ಎನ್ನುವ ಭೂತ ಸಮಾಜದಿಂದ ಮರೆಯಾಗಲು ಸಾಧ್ಯವೆ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ವರದಕ್ಷಿಣೆ ಪಡೆಯುವವರಿಗೆ, ಕೊಡುವವರಿಗೆ ಎಲ್ಲರೂ ಕಾನೂನಿನ ಅನ್ವಯ ಶಿಕ್ಷೆಗೆ ಅರ್ಹರು. ಆದರೆ ವರದಕ್ಷಿಣೆಯಿಂದ ಇಂದಿಗೂ ಅದೆಷ್ಟೋ ಹೆಣ್ಣುಮಕ್ಕಳ ಕೊಲೆ, ಆತ್ಮಹತ್ಯೆ ನಡೆಯುತ್ತಲೇ ಇದೆ. ಒಮ್ಮೆ ಮದುವೆ ಮಾಡಿಕೊಟ್ಟ ಮೇಲೆ ಕೊಟ್ಟ ಹೆಣ್ಣು ಕುಲದಿಂದ ಹೊರಕ್ಕೆ ಎನ್ನುವ ನಾಣ್ಣುಡಿಯನ್ನು ಪಾಲಿಸುವ ಕೆಲವು ಪಾಲಕರು, ಏನೇ ಕಷ್ಟ ಬಂದರೂ ಗಂಡನ ಮನೆಯೇ ಸರ್ವಸ್ವ ಎಂದು ಹೇಳಿ ಮಗಳನ್ನು ವಾಪಸ್‌ ಬರಲು ಬಿಡದ ಕಾರಣ, ಅದೆಷ್ಟೋ ಹೆಣ್ಣುಮಕ್ಕಳು ಅತ್ತ ಗಂಡನ ಮನೆಯಲ್ಲಿಯೂ ಹಿಂಸೆ ತಾಳದೇ, ಇತ್ತ ತವರಿಗೂ ಬರಲು ಆಗದೇ ಆತ್ಮಹತ್ಯೆಯ ಹಾದಿ ತುಳಿಯುವುದು ನಡೆಯುತ್ತಲೇ ಇದೆ. ಇದೀಗ ನಟಿ ಇದನ್ನೇ ತಿಳಿಯಬಯಸಿದ್ದಾರೆ.

ಏನ್ಮಾಡಿದ್ರೂ ನೀನು ರಶ್ಮಿಕಾ ಆಗಲ್ಲ, ಈಗ್ಲಾದ್ರೂ ರಾಮ ನಾಮ ಜಪಿಸ್ಬಾರ್ದಾ? ನಿವೇದಿತಾಗೆ ನೆಟ್ಟಿಗರ ಕ್ಲಾಸ್

Follow Us:
Download App:
  • android
  • ios