ನಿಮಗೂ ಲಕ್ಷ್ಮಿಯಂತೆ ಚಳಿಗಾಲದಲ್ಲಿ ಐಸ್‌ಕ್ರೀಂ ತಿನ್ನೋದು ಅಂದ್ರೆ ಇಷ್ಟನಾ? ಐಸ್‌ಕ್ರೀಂ ತಿಂದ್ರೆ ಏನೇನ್‌ ಬೆನಿಫಿಟ್ಸ್‌ ಇವೆ ಗೊತ್ತಾ?  

ಒಬ್ಬೊಬ್ಬರಿಗೆ ಒಂದೊಂದು ರೀತಿಯ ಆಸೆ ಇರುತ್ತದೆ, ಒಂದೊಂದು ರೀತಿಯ ಇಷ್ಟಗಳು ಇರುತ್ತವೆ. ಕೆಲವೊಂದು ಆಸೆ, ಇಷ್ಟಗಳು ವಿಚಿತ್ರ ಎನಿಸಿದರೂ ಅದು ಕೆಲವರಿಗೆ ಆಪ್ತವಾಗಿರುತ್ತದೆ. ಅದರಲ್ಲಿ ಒಂದು ಐಸ್‌ಕ್ರೀಂ ತಿನ್ನುವ ಆಸೆ. ಐಸ್‌ಕ್ರೀಂ ತಿನ್ನುವುದು ಎಂದರೆ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಬಹುತೇಕ ಎಲ್ಲರಿಗೂ ಇಷ್ಟವೇ. ಅದರಲ್ಲಿ ತಮ್ಮಿಷ್ಟದ ವೆರೈಟಿಗಳನ್ನು ಆಯ್ಕೆ ಮಾಡಿಕೊಂಡು ಬಾಯಿ ಚಪ್ಪರಿಸುವುದು ಇದೆ. ಹಾಗಿದ್ದ ಮೇಲೆ ಇದರಲ್ಲೇನು ವಿಶೇಷ ಅಂದುಕೊಳ್ಳಬೇಡಿ. ಐಸ್‌ಕ್ರೀಂ ಎಂದರೆ ಎಲ್ಲರಿಗೂ ನೆನಪಿಗೆ ಬರುವುದು ಬೇಸಿಗೆ ಕಾಲ. ಬೇಸಿಗೆಯ ಧಗೆಯಲ್ಲಿ ತಣ್ಣನೆಯ ಐಸ್‌ಕ್ರೀಂ ತಿಂದರೆ ಅದರ ಮಜವೇ ಬೇರೆ. ಆದರೆ ಚಳಿಗಾಲ,ಮಳೆಗಾಲಗಳಲ್ಲಿ ಐಸ್‌ಕ್ರೀಮ್‌ ತಿನ್ನುವಿರಾ? ಮೊದಲೇ ಹೇಳಿದಂತೆ ಚಳಿಗಾಲ, ಮಳೆಗಾಲಗಳಲ್ಲಿಯೂ ಐಸ್‌ಕ್ರೀಂ ತಿನ್ನುವ ಆಸೆ ಕೆಲವರಿಗೆ ಇರುತ್ತದೆ. ಇದು ಕೆಲವರಿಗೆ ಇಷ್ಟವೂ ಹೌದು. ಚುಮುಚುಮು ಚಳಿಯಲ್ಲಿ, ಧೋ ಎಂದು ಮಳೆ ಬೀಳುತ್ತಿರುವ ಸಂದರ್ಭದಲ್ಲಿ ಯಾರಾದರೂ ಐಸ್‌ಕ್ರೀಂ ತಿಂತಾರಾ ಎಂದು ಹಲವರಿಗೆ ಅನ್ನಿಸಬಹುದು. ಆದರೆ ಯಾರ ಇಷ್ಟ ಹೇಗೆ ಇರುತ್ತದೆ ಎನ್ನುವುದು ಕಷ್ಟವೇ. ಕೆಲವರಿಗೆ ಈ ಇಷ್ಟವೂ ಆಗುತ್ತದೆ. ಅದಕ್ಕೆ ಒಂದು ಉದಾಹರಣೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಲಕ್ಷ್ಮೀ ಬಾರಮ್ಮ ಸೀರಿಯಲ್‌.

ಇದೀಗ ಬಿಡುಗಡೆಯಾಗಿರುವ ಪ್ರೊಮೋದಲ್ಲಿ ಲಕ್ಷ್ಮಿ ಚಳಿಗಾಲದಲ್ಲಿ ಖುಷಿಯಿಂದ ಐಸ್‌ಕ್ರೀಂ ಮೆಲ್ಲುವುದನ್ನು ನೋಡಬಹುದು. ತನಗೆ ಚಳಿ ಮತ್ತು ಮಳೆಗಾಲದಲ್ಲಿ ಐಸ್‌ಕ್ರೀಂ ತಿನ್ನುವುದು ಇಷ್ಟ ಎಂದು ಆಕೆ ಹೇಳುತ್ತಾಳೆ. ಚಳಿ ಮತ್ತು ಮಳೆಗಾಲದಲ್ಲಿ ಐಸ್‌ಕ್ರೀಂ ತಿಂದರೆ ಶೀತ ಬರುತ್ತದೆ, ಆರೋಗ್ಯ ಸಮಸ್ಯೆ ಎದುರಾಗುತ್ತದೆ ಎಂದು ಹೇಳುವುದು ಮಾಮೂಲು. ಆದರೆ ಇದೇ ವೇಳೆ ಕೆಲವರು ಚಳಿಗಾಲದಲ್ಲಿ ಐಸ್‌ಕ್ರೀಂ ತಿನ್ನುವದರಿಂದ ಪ್ರಯೋಜನ ಇದೆ ಎಂದೂ ಹೇಳುತ್ತಾರೆ. 

ಏನ್ಮಾಡಿದ್ರೂ ನೀನು ರಶ್ಮಿಕಾ ಆಗಲ್ಲ, ಈಗ್ಲಾದ್ರೂ ರಾಮ ನಾಮ ಜಪಿಸ್ಬಾರ್ದಾ? ನಿವೇದಿತಾಗೆ ನೆಟ್ಟಿಗರ ಕ್ಲಾಸ್


ಚಳಿಗಾಲದಲ್ಲಿ ಬಹುತೇಕ ಎಲ್ಲರೂ ಎದುರಿಸುವ ಸಾಮಾನ್ಯ ಸಮಸ್ಯೆ ಎಂದರೆ ಗಂಟಲು ನೋವು. ಸಾಮಾನ್ಯವಾಗಿ ಸಾಧ್ಯವಾದಷ್ಟು ಬಿಸಿ ಪಾನೀಯಗಳನ್ನು ಸೇವಿಸುತ್ತೇವೆ. ಆದರೆ ಒಂದು ವರದಿಯ ಪ್ರಕಾರ, ಗಂಟಲಿಗೆ ಹಿತವಾದ ಪರಿಣಾಮವನ್ನು ಒದಗಿಸಲು ಐಸ್ ಕ್ರೀಮ್ ತಿನ್ನಬೇಕಂತೆ. ಏಕೆಂದರೆ ಐಸ್‌ಕ್ರೀಂ ತಣ್ಣಗಿದ್ದರೂ ಅದು ಉಷ್ಣದ ವಸ್ತುವಾಗಿದೆ. ಅಷ್ಟೇ ಅಲ್ಲದೇ ದೇಹವನ್ನು ಪ್ರವೇಶಿಸಲು ಪ್ರಯತ್ನಿಸುವ ಯಾವುದೇ ಸೂಕ್ಷ್ಮಜೀವಿಗಳು ಅಥವಾ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ನಮಗೆ ನಮ್ಮ ರೋಗನಿರೋಧಕ ಶಕ್ತಿ ಬೇಕು. ಒಂದೆರಡು ಆರೋಗ್ಯ ವರದಿಗಳನ್ನು ನಂಬುವುದಾದರೆ, ಐಸ್ ಕ್ರೀಮ್ ವಿಶೇಷವಾಗಿ ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನೂ ಐಸ್‌ಕ್ರೀಂ ಒದಗಿಸುತ್ತದೆ ಎನ್ನುವ ಮಾತೂ ಇದೆ. 

 ಇವೆಲ್ಲಾ ಎಷ್ಟು ನಿಜವೋ, ಸುಳ್ಳೋ ಗೊತ್ತಿಲ್ಲ. ಒಟ್ಟಿನಲ್ಲಿ ಐಸ್‌ಕ್ರೀಂ ಒತ್ತಡವನ್ನು ಕಮ್ಮಿ ಮಾಡುವುದಂತೂ ದಿಟ. ಲಕ್ಷ್ಮೀ ಬಾರಮ್ಮ ಸೀರಿಯಲ್‌ನ ಲಕ್ಷ್ಮಿಯೇ ಇದಕ್ಕೆ ಉದಾಹರಣೆ. ಮ್ಮ ಒತ್ತಡವನ್ನು ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಕಡಿಮೆ ಮಾಡುವ ಅನೇಕ ಆರಾಮದಾಯಕ ಆಹಾರಗಳಿದ್ದು, ಅವುಗಳಲ್ಲಿ ಒಂದು ಐಸ್‌ಕ್ರೀಂ ಆಗಿದೆ. ಕಾಲ ಯಾವುದೇ ಇದ್ದರೂ, ಜನರಲ್ಲಿ ಒತ್ತಡ ಅಂತೂ ಕಡಿಮೆ ಆಗಲ್ಲ. ದಿನೇ ದಿನೇ ಒತ್ತಡ ಹೆಚ್ಚುತ್ತಲೇ ಇರುತ್ತದೆ. ಇಂಥ ಒತ್ತಡವನ್ನು ಶಮನ ಮಾಡುವ ಗುಣ ಐಸ್ಕ್ರೀಂಗೆ ತಕ್ಕಮಟ್ಟಿಗೆ ಇದೆ ಎಂದರೂ ತಪ್ಪಾಗಲಿಕ್ಕಿಲ್ಲ. ಐಸ್ ಕ್ರೀಮ್ ಮೂಡ್‌ ಅನ್ನು ಬದಲಿಸುವ ಶಕ್ತಿ ಹೊಂದಿದೆ ಎಂದು ಅಧ್ಯಯನವೊಂದು ಹೇಳಿದೆ. ಇದು ಟ್ರಿಪ್ಟೊಫಾನ್ ಎಂಬ ಸಂಯುಕ್ತವನ್ನು ಹೊಂದಿರುತ್ತದೆ, ಇದು ಮೆದುಳಿನಲ್ಲಿ ಸಿರೊಟೋನಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದು ನಮ್ಮ ಹಾಳಾದ ಮೂಡ್‌ ಅನ್ನು ಸರಿ ಮಾಡುತ್ತದೆ ಎನ್ನಲಾಗುತ್ತದೆ. ಅದೇನೇ ಇರಲಿ, ನಿಮಗೂ ಲಕ್ಷ್ಮಿಯಂತೆ ಚಳಿ,ಮಳೆಗಾಲದಲ್ಲಿ ಐಸ್‌ಕ್ರೀಂ ತಿನ್ನೋದು ಅಂದ್ರೆ ಇಷ್ಟನಾ? 

ಬಾವಿಯ ತುಂಬಾ ಹೆಣಗಳ ರಾಶಿ: ಶ್ರೀರಾಮ ಉಳಿದ ಪ್ರಯಾಗರಾಜ್​ನ ಕೌತುಕ ವಿವರಿಸಿದ್ದಾರೆ ಡಾ.ಬ್ರೋ