Asianet Suvarna News Asianet Suvarna News

ಏನ್ಮಾಡಿದ್ರೂ ನೀನು ರಶ್ಮಿಕಾ ಆಗಲ್ಲ, ಈಗ್ಲಾದ್ರೂ ರಾಮ ನಾಮ ಜಪಿಸ್ಬಾರ್ದಾ? ನಿವೇದಿತಾಗೆ ನೆಟ್ಟಿಗರ ಕ್ಲಾಸ್

ಬಿಗ್​ಬಾಸ್​ ಖ್ಯಾತಿಯ  ನಿವೇದಿತಾ ಗೌಡ ಹೊಸ ರೀಲ್ಸ್​ ಶೇರ್​ ಮಾಡಿದ್ದಾರೆ. ಆದರೆ ನೆಟ್ಟಿಗರು ನಟಿಯ ವಿರುದ್ಧ ಗರಂ ಆಗಿದ್ದಾರೆ. 
 

Bigg Boss fame Nivedita Gowda has shared new reels on Tamil Song suc
Author
First Published Jan 21, 2024, 4:40 PM IST

ವಿಜಯ ದೇವರಕೊಂಡ  ಮತ್ತು ರಶ್ಮಿಕಾ ಮಂದಣ್ಣ ಅಭಿನಯದ, 2018ರಲ್ಲಿ ತೆರೆ ಕಂಡ ತಮಿಳು ಚಿತ್ರ ಗೀತಗೋವಿಂದಂ ವಚ್ಚಿಂದಮ್ಮಾ ಹಾಡು ಸಕತ್​ ಹಿಟ್​ ಆಗಿತ್ತು. ಇದೀಗ ಅದೇ ಹಾಡಿಗೆ ನಟಿ ನಿವೇದಿತಾ ಗೌಡ ರೀಲ್ಸ್​ ಮಾಡಿದ್ದಾರೆ. ಅಂದಹಾಗೆ, ಸದ್ಯ  ಸೋಷಿಯಲ್​ ಮೀಡಿಯಾದಲ್ಲಿಯೇ ಹೆಚ್ಚು ಸದ್ದು ಮಾಡುತ್ತಿರುವ ನಟಿಯರ ಪೈಕಿ ಬಿಗ್​ಬಾಸ್​ ಖ್ಯಾತಿಯ ನಿವೇದಿತಾ ಗೌಡ ಒಬ್ಬರು. ಇವರ ಸೌಂದರ್ಯಕ್ಕಾಗಿಯೇ ಫ್ಯಾನ್ಸ್​ ಸಂಖ್ಯೆ ಸಕತ್​ ಹೆಚ್ಚಿದೆ. ಇದೇ  ಕಾರಣಕ್ಕೆ ಇವರು ಇನ್​ಸ್ಟಾಗ್ರಾಮ್​ನಲ್ಲಿ ವಾರಕ್ಕೆ ಏನಿಲ್ಲವೆಂದರೂ ನಾಲ್ಕೈದು ವಿಡಿಯೋ ಅಪ್​ಲೋಡ್​  ಮಾಡುತ್ತಾರೆ. ಬಾರ್ಬಿ ಡಾಲ್ ಎಂದೂ ಅಭಿಮಾನಿಗಳಿಂದ ಕರೆಸಿಕೊಳ್ತಿರೋ ಈಕೆ ಹಾಕುವ ವಿಡಿಯೋ (Video), ಫೋಟೋಗಳಿಗಾಗಿಯೇ ಫ್ಯಾನ್ಸ್ ಕಾತರದಿಂದ ಕಾಯ್ತಾ ಇರ್ತಾರೆ.      

ಈಕೆ ಏನೇ ಡ್ರೆಸ್ ಹಾಕಿದ್ರೂ ತುಂಬಾ ಮುದ್ದಾಗಿ ಕಾಣುವ ಕಾರಣ ಕಮೆಂಟ್​ಗಳ ಸುರಿಮಳೆಯೇ ಆಗುತ್ತದೆ. ಅದರ ಜೊತೆ ಅಷ್ಟೇ ಟ್ರೋಲ್​ಗಳೂ ಬರುತ್ತವೆ. ಟ್ರೋಲ್​ಗೆ ಜಗ್ಗದೇ  ನಿವೇದಿತಾ ಹಲವಾರು ವಿಡಿಯೋಗಳನ್ನು ಶೇರ್​ ಮಾಡುತ್ತಲೇ ಇರುತ್ತಾರೆ. ಇದಕ್ಕೆ ಪರ-ವಿರೋಧ ಕಮೆಂಟ್​ಗಳ ಸುರಿಮಳೆಯಾಗುತ್ತಲೇ ಇರುತ್ತದೆ.  ಕಮೆಂಟ್​ಗಳು ಏನೇ ಇದ್ದರೂ ನಟಿ ಮಾತ್ರ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. ಇದೀಗ ರಶ್ಮಿಕಾ ಮಂದಣ್ಣನವರ ಹಾಡಿಗೆ ಸ್ಟೆಪ್​ ಏನೋ ಹಾಕಿದ್ದಾರೆ. ಇದರಲ್ಲಿಯೂ ನಟಿ ಮಾಮೂಲಿನಂತೆಯೇ ತುಂಬಾ ಮುದ್ದಾಗಿ ಕಾಣಿಸುತ್ತಾರೆ. ಆದರೆ ಈ ರೀಲ್ಸ್​ಗೂ ಹಲವರು ತೀಕ್ಷ್ಣವಾಗಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ನಟಿ ನಿವೇದಿತಾ ಹೆಚ್ಚಾಗಿ ಬೇರೆ ಭಾಷೆಯ ಹಾಡುಗಳಿಗೆ ರೀಲ್ಸ್​  ಮಾಡುತ್ತಾರೆ. ಇದರ ಬಗ್ಗೆ ಈಕೆಯ ಅಭಿಮಾನಿಗಳ ತಕರಾರು ಇದ್ದೇ ಇದೆ. ಇಂಗ್ಲಿಷ್​ ಹಾಡುಗಳನ್ನೇ ಹೆಚ್ಚು ಆಯ್ದುಕೊಳ್ಳುವುದು ಇದೆ. ಇದೀಗ ತಮಿಳಿನ ಹಾಡಿಗೆ ರೀಲ್ಸ್​  ಮಾಡಿರುವುದರಿಂದ ಕನ್ನಡದ ಬಗ್ಗೆ ಇಷ್ಟು ತಾತ್ಸಾರವೇಕೆ ಎಂದು ಕೆಲವರು ಪ್ರಶ್ನಿಸಿದ್ದಾರೆ.

ಪ್ರೀತಿ ಅಂದ್ರೇನು ಅಂತ ನಿವೇದಿತಾ ಗೌಡಗೆ ಈಗ ಗೊತ್ತಾಯ್ತಂತೆ! ಮೂರು ವರ್ಷ ಬೇಕಾಯ್ತಾ ಕೇಳ್ತಿದ್ದಾರೆ ಫ್ಯಾನ್ಸ್​

ಇನ್ನು ಕೆಲವರು ಇಂಥ ರೀಲ್ಸ್​ ಯಾವಲಾದ್ರೂ ಮಾಡಬಹುದಮ್ಮಾ. ಈ ಕ್ಷಣದಲ್ಲಿ ಜಗತ್ತಿನಾದ್ಯಂತ ಶ್ರೀರಾಮನ ಜಪ ಮೊಳಗಿರುವ ಸಂದರ್ಭದಲ್ಲಿ ನೀನು ರಾಮನ ಮೇಲೆ ಒಂದು ರೀಲ್ಸ್​ ಮಾಡಿದ್ರೆ ಗ್ರೇಟ್​ ಆಗುತ್ತಿದ್ದಿ, ಅದನ್ನು ಬಿಟ್ಟು ಪದೇ ಪದೇ ಇಂಥ ರೀಲ್ಸ್​ ಮಾಡುವುದು ಸರಿಯಲ್ಲ ಎಂದಿದ್ದಾರೆ. ಅದಕ್ಕೆ ಕೆಲವರು ಈ ದೇಶದಲ್ಲಿ ಏನಾಗುತ್ತಿದೆ ಎನ್ನುವುದೇ ಇಂಥ ಕಲಾವಿದರಿಗೆ ತಿಳಿದೇ ಇರುವುದಿಲ್ಲ, ಇನ್ನು ರೀಲ್ಸ್​ ಮಾಡುವುದು ಎಲ್ಲಿಂದ ಎಂದು ಪ್ರಶ್ನಿಸುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಡ್ಯಾನ್ಸ್​ ಮಾಡಿದ್ರೆ ನೀನೇನೂ ರಶ್ಮಿಕಾ ಆಗಲ್ಲ, ಅದನ್ನು ಬಿಟ್ಟು ನಮ್ಮ ಸಂಸ್ಕೃತಿಯನ್ನು ಸ್ವಲ್ಪ ಕಲಿತುಕೋ ಎನ್ನುತ್ತಿದ್ದಾರೆ.  ಒಟ್ಟಿನಲ್ಲಿ ಈ ಬಾರಿ ನಟಿ ಬೇರೆ ರೀತಿಯಲ್ಲಿ ಟ್ರೋಲ್​ಗೆ ಒಳಗಾಗುತ್ತಿದ್ದಾರೆ. 

ಕೆಲ ದಿನಗಳ ಹಿಂದೆ ನಿವೇದಿತಾ ಅವರು ಹಾಡೊಂದನ್ನು ಹಾಡಿ ಎಲ್ಲರ ಮನ ಗೆದ್ದಿದ್ದರು. ಸೊಂಟ ಬಳುಕಿಸುತ್ತಾ ಡ್ಯಾನ್ಸ್ ಮಾಡುತ್ತಿದ್ದ ನಿವೇದಿತಾ  ಸಹೋದರನ ಜೊತೆ ಸೇರಿ ಹಾಡಿದ ಹಾಡು ಕೇಳಿ ಫ್ಯಾನ್ಸ್​ ಖುಷಿಯಾಗಿದ್ದರು.  ಯಾವುದೇ ಡ್ರೆಸ್​ ಹಾಕಿದರೂ ಸಕತ್​ ಕ್ಯೂಟ್​ ಆಗಿ ಕಾಣಿಸೋ ನಿವೇದಿತಾ ಅವರು  ಹಾಡು ಹೇಳುವ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಹಾರ್ಟ್​ ಇಮೋಜಿಗಳಿಂದ ಕಮೆಂಟ್​ ಬಾಕ್ಸ್​ ತುಂಬಿ ಹೋಗಿತ್ತು. ತಮಿಳಿನ ಹಾಡಿಗೆ ಸಕತ್​ ಧ್ವನಿ ನೀಡಿದ್ದಾರೆ  ನಿವೇದಿತಾ. ಸಹೋದರ ಮತ್ತು ನಾನು ಸಿಂಗರ್​ ಅಲ್ಲ, ಸುಮ್ಮನೇ ಈ ವಿಡಿಯೋ ಮಾಡುತ್ತಿರುವುದಾಗಿ ಹೇಳಿದ್ದಾರೆ. ಆದರೂ ಇವರ ಮಧುರ ಕಂಠಕ್ಕೆ ಫ್ಯಾನ್ಸ್​ ಫಿದಾ ಆಗಿದ್ದಾರೆ. 

ಆಮೀರ್​ ಖಾನ್​ ಪುತ್ರಿ ಇರಾ ರಿಸೆಪ್ಷನ್​ನಲ್ಲಿ ಜೈ ಶ್ರೀರಾಮ್​ ಎಂದು ಜಪಿಸಿದ ಕಂಗನಾ: ವಿಡಿಯೋ ವೈರಲ್

Follow Us:
Download App:
  • android
  • ios