ರಾಮ್ ಕಣ್ಣಲ್ಲಿ ಸೀತೆಗೆ ಕಾಣಿಸಿದ್ದು ಯಾರು? ಚಾಂದನಿನಾ, ಖುದ್ದು ಅವಳೇನಾ? ಕುತೂಹಲ ಘಟ್ಟದಲ್ಲಿ ಸೀತಾರಾಮ
ನನ್ನ ಕಣ್ಣಲ್ಲಿ ನಿಮಗೆ ಕಾಣಿಸ್ತಿರೋದು ಯಾರು, ನೀವಾ ಆ ಚಾಂದನಿನಾ ಎಂದು ರಾಮ್ ಕೇಳಿದಾಗ ಸೀತಾ ನಾಚಿ ನೀರಾಗಿದ್ದಾಳೆ. ಸೀತಾ-ರಾಮ ಒಂದಾಗಿಬಿಟ್ರಾ?
ನಿಮ್ಮನ್ನು ನೋಡದೇ ಇದ್ರೆ ಏನನ್ನೋ ಕಳೆದುಕೊಂಡ ಹಾಗೆ ಆಗ್ತಿದೆ. ಫಸ್ಟ್ ಟೈಂ ಲೈಫ್ನಲ್ಲಿ ಹೀಗೆ ಆಗ್ತಿದೆ ಎಂದು ಸೀತಾ ಹೇಳಿದರೆ, ರಾಮ್ ನನ್ನ ಕಣ್ಣ ನೋಡಿ ಹೇಳಿ, ಅದರಲ್ಲಿ ಯಾರು ಕಾಣಿಸ್ತಾರೆ, ನೀವಾ ಚಾಂದನಿನಾ ಎಂದು ಕೇಳಿದಾಗ ನಾಚಿ ನೀರಾಗಿದ್ದಾಳೆ ಸೀತಾ. ಏನೂ ಅರ್ಥವಾಗದ ಸಿಹಿ ಕಣ್ ಕಣ್ ಬಿಟ್ಟು ನೋಡುತ್ತಿದ್ದಾಳೆ. ಅಂತೂ ಸೀತಾ ರಾಮ್ಗೆ ಪರೋಕ್ಷವಾಗಿ ಪ್ರೇಮ ನಿವೇದನೆ ಮಾಡಿಕೊಂಡಾಯ್ತು. ಮುಂದೇನು? ಹೌದು. ಸೀತಾರಾಮ ಸೀರಿಯಲ್ ಕುತೂಹಲದ ಹಂತ ತಲುಪಿದೆ. ಇಲ್ಲಿಯವರೆಗೆ ರಾಮ್ ಬಾಯಿಬಿಟ್ಟು ಹೇಳಲ್ಲ, ಸೀತಾ ಅರ್ಥ ಮಾಡಿಕೊಳ್ಳಲ್ಲ ಎನ್ನುವ ಸ್ಥಿತಿ ಇತ್ತು. ಇವತ್ತು ಏನಾದ್ರೂ ಆಗ್ಲೇ ಹೋಗಲಿ, ಸೀತಾಳ ಮುಂದೆ ಪ್ರೀತಿ ಹೇಳಿಕೋ ಎಂದು ರಾಮ್ಗೆ ಅಶೋಕ್ ಹುರಿದುಂಬಿಸಿದ್ದ. ಹೌದು, ಇನ್ನು ಕಾದು ಕುಳಿತರೆ ಪ್ರಯೋಜನ ಇಲ್ಲ ಎಂದುಕೊಂಡ ರಾಮ್ ಸೀತಾಳಲ್ಲಿ ಪ್ರೀತಿ ನಿವೇದನೆ ಮಾಡಿಕೊಳ್ಳಲು ಗುಲಾಬಿ ಹೂವು ಖರೀದಿಸಿದ್ದ. ಒಂದೆಡೆ ರಾಮ್ ಗುಲಾಬಿ ಹಿಡಿದು ಸೀತಾಳಿಗಾಗಿ ಬರುತ್ತಿದ್ದರೆ, ಇತ್ತ ರಾಮ್ನ ಬಗ್ಗೆ ಪ್ರೀತಿ ಹುಟ್ಟಿರೋ ಸೀತಾ ಕೂಡ ಕೆಂಪು ಗುಲಾಬಿ ಹಿಡಿದು ರಾಮ್ಗೋಸ್ಕರ ಬಂದಿದ್ದಳು. ಇನ್ನೇನು ಇಬ್ಬರೂ ಪ್ರೀತಿ ನಿವೇದನೆ ಮಾಡಿಕೊಳ್ಳಬೇಕು ಎನ್ನುವಷ್ಟರದಲ್ಲಿಯೇ ಚಾಂದನಿ ಹಿಂದಿನಿಂದ ಬಂದು ರಾಮ್ನನ್ನು ತಬ್ಬಿದ್ದಳು. ಇವಳೇ ರಾಮ್ನ ಮಾಜಿ ಪ್ರೇಯಸಿ ಎನ್ನುವ ಸತ್ಯ ಗೊತ್ತಾಗಿ ಸೀತಾ ಹಿಂದಕ್ಕೆ ಸರಿದಿದ್ದಳು.
ಆದರೆ ಇದೀಗ ಸೀತಾಗೂ ಕುಚ್ಕುಚ್ ಶುರುವಾಗಿದೆ. ರಾಮ್ನನ್ನು ನೋಡದಿದ್ದರೆ ಏನೋ ಸಂಕಟ ಎನ್ನುವಂತಾಗಿದೆ. ಇದೇ ಪ್ರೀತಿ ಎನ್ನುವುದು ಅವಳಿಗೆ ಅರ್ಥವಾಗಿದೆ. ಇದನ್ನೇ ನೇರವಾಗಿ ರಾಮ್ ಬಳಿ ಹೇಳಿಕೊಂಡಿದ್ದಾಳೆ. ಆದರೆ ಚಾಂದನಿಯ ತಂತ್ರ ಏನು? ಸೀತಾ-ರಾಮ ಇಷ್ಟು ಬೇಗ ಒಂದಾಗ್ತಾರಾ? ಇಡೀ ಸೀರಿಯಲ್ ತಿರುಳು ಇರುವುದೇ ಇವರಿಬ್ಬರ ಒಂದಾಗುವ ಸನ್ನಿವೇಶದ ಮೇಲೆ. ಹಾಗಿದ್ದರೆ ಇಷ್ಟು ಬೇಗ ಒಂದಾದರೆ ಮುಂದೇನು ಎನ್ನುತ್ತಿದ್ದಾರೆ ಫ್ಯಾನ್ಸ್. ಅಷ್ಟಕ್ಕೂ ರಾಮ್ ಮನೆಯಲ್ಲಿ ಅಥವಾ ಸೀತಾಳೇ ತನ್ನ ರಾಮ್ಗೆ ಯೋಗ್ಯ ವಧು ಎಂದುಕೊಂಡಿರುವ ತಾತನಿಗೆ ಸೀತಾಳಿಗೆ ಇದಾಗಲೇ ಮದ್ವೆಯಾಗಿದ್ದು, ಸಿಹಿ ಎನ್ನುವ ಮಗಳು ಇದ್ದಾಳೆ ಎನ್ನುವ ವಿಷಯ ಗೊತ್ತಿಲ್ಲ. ಅಷ್ಟಕ್ಕೂ ಸೀತಾಳ ಹಿನ್ನೆಲೆಯನ್ನು ಇದುವರೆಗೂ ತೋರಿಸಿಲ್ಲ. ಸಿಹಿ ನಿಜವಾಗಿಯೂ ಸೀತಾಳ ಮಗಳೇ ಎನ್ನುವ ವಿಷಯವನ್ನೂ ಸಸ್ಪೆನ್ಸ್ನಲ್ಲಿ ಇಡಲಾಗಿದೆ.
ಅಮ್ಮ ಶಕುಂತಲಾದೇವಿಯನ್ನೇ ಕೊಲ್ಲಲು ಸುಪಾರಿ ಕೊಟ್ಟು ಬಿಟ್ನಾ ಜೈದೇವ್? ಮಾಡಿದ್ದೇನು, ಆಗಿದ್ದೇನು?
ಅಷ್ಟಕ್ಕೂ ರಾಮ್ಗೆ ಈಗ ಚಾಂದನಿ ಬೇಡ. ಅವಳು ಎಂಟ್ರಿ ಕೊಡುತ್ತಿದ್ದಂತೆಯೇ, ಅಮ್ಮನ ನೆನಪಿನಲ್ಲಿ ಕಣ್ಣೀರಿಡುತ್ತಿದ್ದಾನೆ ರಾಮ. ಚಾಂದಿನಿಗೆ ರಾಮ್ ಪ್ರೀತಿ ಬೇಕಿಲ್ಲ, ಅವನ ಆಸ್ತಿ ಬೇಕು ಅಷ್ಟೇ. ಇದೇ ಕಾರಣಕ್ಕೆ ಅವಳು ಅಂದು ರಾಮ್ ಜೊತೆ ಪ್ರೀತಿ ನಾಟಕ ಮಾಡಿ, ಬ್ರೇಕಪ್ ಮಾಡಿಕೊಂಡು ಸಿಕ್ಕಾಪಟ್ಟೆ ನೋವು ಕೊಟ್ಟು, ಈಗ ಮತ್ತೆ ಅವನ ಬಳಿ ಬಂದಿದ್ದಾಳೆ. ಆದರೆ ಸೀತಾಗೆ ಇದೆಲ್ಲಾ ಗೊತ್ತಾಗಬೇಕಲ್ಲ. ರಾಮ್ನನ್ನು ಚಾಂದಿನಿ ಹುಚ್ಚಿಯಂತೆ ಪ್ರೀತಿಸ್ತಾ ಇದ್ದಾಳೆ. ಅವರಿಬ್ಬರೂ ಒಂದಾಗಬೇಕು ಎನ್ನುವುದು ಅವಳ ಆಸೆ.
ಒಟ್ಟಿನಲ್ಲಿ ಸೀರಿಯಲ್ ಕುತೂಹಲವನ್ನು ಕೆರಳಿಸುವಂತಿದೆ. ಅದೇ ಇನ್ನೊಂದೆಡೆ, ಸೀತಾ ದೂರವಾದಾಗ ರಾಮ್ನ ಅಮ್ಮನ ನೆನಪು ಕಾಡಿದೆ. ತನ್ನ ಅಮ್ಮ ಹೇಗೆ ಸತ್ತಳು ಎಂಬ ಬಗ್ಗೆ ಇದುವರೆಗೆ ಯಾರೂ ಬಾಯಿಬಿಡದ ಬಗ್ಗೆ ಇದೀಗ ರಾಮ್ಗೆ ಸಂದೇಹ ಶುರುವಾಗಿದೆ. ನೇರವಾಗಿಯೇ ಚಿಕ್ಕಮ್ಮನ ಬಳಿ ಈ ವಿಷಯ ಕೇಳಿದಾಗ, ಆಕೆಗೆ ಶಾಕ್ ಆಗಿದೆ. ಚಿಕ್ಕಮ್ಮನೇ ರಾಮ್ ಅಮ್ಮನನ್ನು ಕೊಲೆ ಮಾಡಿಸಿದ್ದು ಎಂದು ಕುಡಿದ ಅಮಲಿನಲ್ಲಿ ಇರುವ ಮಾವ ಸತ್ಯ ಹೇಳಿದ್ದಾನೆ. ಆದರೆ ಅದನ್ನು ನಂಬುವ ಸ್ಥಿತಿಯಲ್ಲಿ ರಾಮ್ ಇಲ್ಲ. ಇದನ್ನು ಕೇಳಿ ಚಿಕ್ಕಮ್ಮನಿಗೂ ಶಾಕ್ ಆಗಿದ್ದರೂ, ರಾಮ್ಗೆ ಇದೆಲ್ಲಾ ಸುಳ್ಳು ಎಂದು ಮನವರಿಕೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾಳೆ. ಈ ನಿಜ ಯಾವಾಗ ಗೊತ್ತಾಗುವುದು ಎಂಬುದೂ ಈಗಿರುವ ಕುತೂಹಲ.
ಪ್ರೇಯಸಿಯೆಂಬ ಬಿಸಿ ತುಪ್ಪ! ಮದ್ವೆಯಾದೋನ ಇಂಥ ಪಾಡು ಯಾರಿಗೂ ಬೇಡ ಅಂತಿದ್ದಾರೆ ನೆಟ್ಟಿಗರು!