ಪ್ರೇಯಸಿಯೆಂಬ ಬಿಸಿ ತುಪ್ಪ! ಮದ್ವೆಯಾದೋನ ಇಂಥ ಪಾಡು ಯಾರಿಗೂ ಬೇಡ ಅಂತಿದ್ದಾರೆ ನೆಟ್ಟಿಗರು!
ಅತ್ತ ಮಕ್ಕಳು, ಇತ್ತ ಶ್ರೇಷ್ಠಾ... ಇಬ್ಬರನ್ನೂ ಬಿಡಲಾಗದ ಸ್ಥಿತಿಯಲ್ಲಿ ಅಡಕತ್ತರಿಗೆ ಸಿಲುಕಿದ್ದಾನೆ ತಾಂಡವ್. ಪ್ರೇಯಸಿಯೆಂಬ ಬಿಸಿ ತುಪ್ಪ
ಇತ್ತ ತಾಂಡವ್ಗೆ ಮಕ್ಕಳ ಮೇಲೆ ವ್ಯಾಮೋಹ, ಪ್ರೇಯಸಿ ಶ್ರೇಷ್ಠಾಳ ಮೇಲೆ ಪ್ರೀತಿ. ಅವಳನ್ನೂ ಬಿಡುವ ಹಾಗಿಲ್ಲ, ಇವರನ್ನೂ ತೊರೆಯುವ ಹಾಗಿಲ್ಲ. ಪತ್ನಿ ಭಾಗ್ಯಳನ್ನಂತೂ ದೂರ ಸರಿಸಿ ಆಗಿದೆ. ಅವಳ ಜೊತೆ ಮಕ್ಕಳಿಗಾಗಿ ನಾಮ್ಕೇ ವಾಸ್ತೆ ಬಾಳುತ್ತಿದ್ದಾನೆ ತಾಂಡವ್ ಅಷ್ಟೇ. ಆದರೆ ಇದೀಗ ಪರಿಸ್ಥಿತಿ ಬಂದಿರುವುದು ಮಕ್ಕಳು ಮತ್ತು ಶ್ರೇಷ್ಠಾ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳುವುದು. ಇದು ತಾಂಡವ್ ಪಾಡಾದರೆ, ಇನ್ನು ಶ್ರೇಷ್ಠಾಳ ಗತಿ ಯಾರಿಗೂ ಬೇಡ. ಪತ್ನಿ, ಮಕ್ಕಳನ್ನು ಹೊಂದಿರೋ ಪುರುಷನ ಹಿಂದೆ ಹೋಗಿರುವ ಶ್ರೇಷ್ಠಾಳ ಪಾಡು ಕೇಳುವುದೇ ಬೇಡ. ಅವಳ ಎದುರೇ ತಾಂಡವ್-ಭಾಗ್ಯ ಒಟ್ಟಿಗೇ ಡ್ಯಾನ್ಸ್ ಮಾಡಿದ್ದಾರೆ. ಇದನ್ನು ನೋಡಿ ಶ್ರೇಷ್ಠಾಳಿಗೆ ಹೊಟ್ಟೆ ಉರಿದು ಹೋಗಿದೆ, ಬೆಂಕಿ ಬಿದ್ದಂಥ ಅನುಭವ. ಆದರೆ ಕುಸುಮಳ ಎದುರು ಏನನ್ನೂ ತೋರಿಸಿಕೊಳ್ಳುವ ಹಾಗಿಲ್ಲ.
ಇದೀಗ ಪ್ರೇಯಸಿಯನ್ನು ಸಮಾಧಾನಪಡಿಸಲು ತಾಂಡವ್ ಶ್ರೇಷ್ಠಾಳ ಮನೆಗೆ ಬಂದಿದ್ದಾನೆ. ಆದರೆ ಇಲ್ಲಿಯವರೆಗೆ ಆಗಿರುವ ಬೆಳವಣಿಗೆಯನ್ನು ನೋಡಿ ರೋಸಿ ಹೋಗಿದ್ದಾಳೆ ಶ್ರೇಷ್ಠಾ. ತನ್ನ ಬಣ್ಣದ ಮಾತುಗಳಿಂದ ಅವಳನ್ನು ರಮಿಸುವ ಪ್ರಯತ್ನ ಮಾಡಿದ್ದಾಳೆ ಆತ. ಆಗ ಆಕೆ ನಾನು ನಿನ್ನ ಹೆಂಡ್ತಿ ಭಾಗ್ಯ ಅಲ್ಲ, ಹೀಗೆಲ್ಲಾ ಮಾತನಾಡಿ, ನನ್ನನ್ನು ಮರಳು ಮಾಡುವು ಸುಲಭವಲ್ಲ. ನಾನು ಅವಳಂತೆಯೇ ಪೆದ್ದು ಅಲ್ಲ ಎಂದಿದ್ದಾಳೆ. ಜೊತೆಗೆ ತನಗೇನಾದ್ರೂ ಕೈಕೊಟ್ರೆ ಗೊತ್ತಲ್ಲ ಎಂದು ವಾರ್ನಿಂಗ್ ಕೂಡ ಮಾಡಿದ್ದಾಳೆ. ಇದೀಗ ಶ್ರೇಷ್ಠಾ ತಾಂಡವ್ಗೆ ನುಂಗಲಾಗದ ತುತ್ತಾಗಿ ಪರಿಣಮಿಸಿದ್ದಾಳೆ. ನಾನು ನಿನ್ನನ್ನು ಎಷ್ಟು ಪ್ರೀತಿ ಮಾಡ್ತೇನೆ ಎಂದೆಲ್ಲಾ ಹೇಳಿ ಆಕೆಯ ಕೋಪವನ್ನು ಶಮನ ಮಾಡುವ ವ್ಯರ್ಥ ಪ್ರಯತ್ನಮಾಡುತ್ತಿದ್ದಾನೆ. ಅದರೆ ಅವಳಿಗೆ ಅದೇನೂ ಬೇಡ. ಭಾಗ್ಯಳಿಗೆ ಡಿವೋರ್ಸ್ ಕೊಟ್ಟು ತನ್ನ ಜೊತೆ ಇರಬೇಕು ಅಷ್ಟೇ ಅವಳಿಗೆ ಬೇಕಾದದ್ದು.
ಮದುವೆ ಗಂಡು-ಹೆಣ್ಣಿಗೆ ಮಾತ್ರ ಸಂಬಂಧಿಸಿದ್ದು, ಕುಟುಂಬಗಳ ನಡುವೆ ಅನ್ನೋದು ನಾನ್ಸೆನ್ಸ್- ವಿದ್ಯಾ ಬಾಲನ್
ಇತ್ತ ತಾಂಡವ್ ಏನು ಮಾಡುವುದು ಎಂದು ತಿಳಿಯುವಷ್ಟರಲ್ಲಿಯೇ ಕುಸುಮಾ ಮತ್ತು ಮಕ್ಕಳು ಜೊತೆಗೂಡಿ ಪ್ಲ್ಯಾನ್ ಮಾಡಿದ್ದಾರೆ. ಹೇಗಾದರೂ ಮಾಡಿ ಮಗ ಮತ್ತು ಸೊಸೆಯನ್ನು ಒಂದುಮಾಡುವುದು ಕುಸುಮಾ ಉದ್ದೇಶವಾದ್ರೆ, ಮಕ್ಕಳಿಗೂ ಇದೇ ಬೇಕು. ಅಪ್ಪ-ಅಮ್ಮ ಜೊತೆಯಾಗಿ ಇರಬೇಕು. ಇನ್ನು ಪೂಜಾಳಿಗೆ ತನ್ನ ಭಾವನ ಎಲ್ಲಾ ವಿಷಯ ಗೊತ್ತಿರುವ ಕಾರಣ, ಅಕ್ಕನ ಸಂಸಾರ ಸರಿ ಮಾಡಲು ನೋಡುತ್ತಿದ್ದಾಳೆ. ಎಲ್ಲರೂ ಸೇರಿ ಪ್ಲ್ಯಾನ್ ಮಾಡಿಯೇ ಬಿಟ್ಟಿದ್ದಾರೆ.
ಗುಂಡ ಅಪ್ಪನಿಗೆ ಕಾಲ್ ಮಾಡಿ ಎಲ್ಲಿ ಇದ್ದಿ ಎಂದು ಕೇಳಿದ್ದಾನೆ. ಶ್ರೇಷ್ಠಾ ಮನೆಯಲ್ಲಿ ಇರೋ ಆತ ಏನೇನೋ ಸಬೂಬು ಹೇಳಿದ್ದಾನೆ. ಕುಸುಮಾ ಹೇಳಿಕೊಟ್ಟಂತೆಯೇ ಹೇಳಿರುವ ಗುಂಡಾ, ಕೂಡಲೇ ಶಾಪಿಂಗ್ ಮಾಲ್ಗೆ ಬಾ ಎಂದಿದ್ದಾನೆ. ನನಗೆ ತುರ್ತು ಕೆಲಸ ಇದೆ, ಇದು ಆಗಲ್ಲ ಎಂದು ತಾಂಡವ್ ಹೇಳಿದರೂ ಸುಳ್ಳು ಹೇಳಿದ ಗುಂಡಾ, ನಾವು ಇದಾಗಲೇ ಆಟೋದಲ್ಲಿ ಹೊರಟಾಗಿದೆ, ನೀನು ಅಲ್ಲಿಯೇ ಬಾ ಎಂದಿದ್ದಾನೆ. ಇದೇನಾದ್ರೂ ಶ್ರೇಷ್ಠಾಳಿಗೆ ಗೊತ್ತಾದರೆ ಅಷ್ಟೇ ಕಥೆ. ಅತ್ತ ಮಕ್ಕಳು, ಇತ್ತ ಪ್ರೇಯಸಿ, ಅತ್ತ ದರಿ ಇತ್ತ ಪುಲಿ ಎನ್ನುವ ಸ್ಥಿತಿ ತಾಂಡವ್ದು. ಶ್ರೇಷ್ಠಾ ಅಂತೂ ಹೋಗಲು ಬಿಡುವುದಿಲ್ಲ. ಮಕ್ಕಳು ಇದಾಗಲೇ ಸುಳ್ಳು ಹೇಳಿ ಆಟೋದಲ್ಲಿ ಇದ್ದೇವೆ ಎಂದಿದ್ದಾರೆ. ಮುಂದೆ ತಾಂಡವ್ ಮಾಡೋದೇನು ಎನ್ನುವುದು ಈಗಿರುವ ಕುತೂಹಲ. ಮದ್ವೆಯಾದ್ರೂ ಬೇರೊಬ್ಬಳ ಹಿಂದೆ ಹೋಗೋದು ಬೇಕಿತ್ತಾ ಮಗನೇ ಎಂದು ತಾಂಡವ್ಗೆ ನೆಟ್ಟಿಗರು ಪ್ರಶ್ನೆ ಮಾಡ್ತಿದ್ರೆ, ಮದ್ವೆಯಾದವನ ಹಿಂದೆ ಹೋಗೋದು ನಿನಗೆ ಬೇಕಿತ್ತಾ ಎಂದು ಶ್ರೇಷ್ಠಾಳನ್ನು ಪ್ರಶ್ನಿಸುತ್ತಿದ್ದಾರೆ.
ಡಿವೋರ್ಸ್ ಆದ್ಮೇಲೆ ಡೇಟಿಂಗ್ ಶುರು ಮಾಡಿದ್ವಿ: ಆಮೀರ್ ಖಾನ್ 2ನೇ ಮಾಜಿ ಪತ್ನಿ ಕಿರಣ್ ಓಪನ್ ಮಾತು!