ಅಮ್ಮ ಶಕುಂತಲಾದೇವಿಯನ್ನೇ ಕೊಲ್ಲಲು ಸುಪಾರಿ ಕೊಟ್ಟು ಬಿಟ್ನಾ ಜೈದೇವ್? ಮಾಡಿದ್ದೇನು, ಆಗಿದ್ದೇನು?
ಮಲ್ಲಿಯ ಜೊತೆ ಅತ್ತೆ ಶಕುಂತಲಾದೇವಿ ಆಸ್ಪತ್ರೆಗೆ ಹೋಗಿದ್ದಾಳೆ. ಆ್ಯಕ್ಸಿಡೆಂಟ್ ಮಾಡಿಸಿ ಕೊಲೆ ಮಾಡುವಂತೆ ಜೈದೇವ್ ಸುಪಾರಿ ಕೊಟ್ಟಾಗಿದೆ. ಮುಂದೇನು?
ಪತ್ನಿ ಮಲ್ಲಿಯನ್ನು ಹೇಗಾದರೂ ಮಾಡಿ ಕೊಲೆ ಮಾಡಲು ಸಂಚು ರೂಪಿಸಿದ್ದಾನೆ ಜೈದೇವ್. ಆಸ್ಪತ್ರೆಗೆ ಪತ್ನಿಯನ್ನು ಚೆಕಪ್ಗೆ ಕಳಿಸುವಂತೆ ಪ್ಲ್ಯಾನ್ ಮಾಡಿದ್ದಾನೆ. ಆಸ್ಪತ್ರೆಗೆ ಅವಳೊಬ್ಬಳೇ ಹೋಗುವುದಿಲ್ಲ, ಹೋಗುವುದಿದ್ದರೆ ಭೂಮಿಕಾ ಕೂಡ ಹೋಗುತ್ತಾಳೆ ಎನ್ನುವ ತಂತ್ರ ರೂಪಿಸಿದ್ದ. ಒಂದೇ ಕಲ್ಲಿಗೆ ಎರಡು ಹಕ್ಕಿಯನ್ನು ಉರುಳಿಸುವ ಪ್ಲ್ಯಾನ್ ಇದಾಗಿತ್ತು. ಭೂಮಿಕಾ ಮತ್ತು ಮಲ್ಲಿ ಆಸ್ಪತ್ರೆಗೆ ಹೋಗುವ ಸಮಯದಲ್ಲಿ ಇಬ್ಬರನ್ನೂ ಕೊಲೆ ಮಾಡುವಂತೆ ಲಾರಿ ಡ್ರೈವರ್ಗೆ ಸುಪಾರಿ ಕೊಟ್ಟಿದ್ದ ಜೈದೇವ್. ಯಾರು ಈ ಕಾಲ್ ಮಾಡಿದ್ದಾರೆ ಎನ್ನುವುದು ಗೊತ್ತಾಗಬಾರದು ಎಂದು ಸುಪಾರಿ ಕೊಟ್ಟ ತಕ್ಷಣ ಕೊಳದಲ್ಲಿ ಫೋನ್ ಬೀಸಾಕಿದ್ದಾನೆ. ಇಬ್ಬರೂ ಸತ್ತರೂ, ಲಾರಿ ಡ್ರೈವರ್ ಅರೆಸ್ಟ್ ಆದರೂ ತಾನೇ ಸುಪಾರಿ ಕೊಟ್ಟಿದ್ದು ಎಂದು ತಿಳಿಯಬಾರದು ಎನ್ನುವ ಉದ್ದೇಶಕ್ಕೆ ಹೀಗೆ ಮಾಡಿದ್ದಾನೆ!
ಆದರೆ ಆದದ್ದೇ ಬೇರೆ! ಹೇಗಾದರೂ ಮಾಡಿ ಮಲ್ಲಿ ಮತ್ತು ಅತ್ತೆಯನ್ನು ಒಂದು ಮಾಡುವ ಯೋಚನೆ ಭೂಮಿಕಾಗೆ. ಇದೇ ಕಾರಣಕ್ಕೆ ಮಲ್ಲಿಯ ಜೊತೆ ಅತ್ತೆಯನ್ನು ಚೆಕಪ್ಗೆ ಕಳಿಸಿದ್ದಾಳೆ ಭೂಮಿಕಾ. ಅತ್ತೆ ಶಕುಂತಲಾದೇವಿ ತನಗೆ ಲೇಡೀಸ್ ಕ್ಲಬ್ ಮೀಟಿಂಗ್ ಇದೆ ಎಂದರೂ ಕೇಳದ ಭೂಮಿಕಾ ಈಗಲೇ ಕರೆದುಕೊಂಡು ಹೋಗಿ ಎಂದಿದ್ದಾಳೆ. ಆದರೆ ಈ ವಿಷ್ಯ ಜೈದೇವ್ಗೆ ಗೊತ್ತಿರಲಿಲ್ಲ. ಆಸ್ಪತ್ರೆಗೆ ಪತ್ನಿ ಹೋಗುತ್ತಿರುವುದು ತಿಳಿಯುತ್ತಲೇ ಸುಪಾರಿ ಹಂತಕನಿಗೆ ಕೊಲೆ ಮಾಡಲು ಹೇಳಿದ್ದಾನೆ. ಆ್ಯಕ್ಸಿಡೆಂಟ್ ಹೇಗಿರಬೇಕು ಎಂದರೆ ಒಳಗೆ ಇರುವವರು ಯಾರು ಎಂದು ತಿಳಿಯಬಾರದು, ಬಾಡಿ ಆ ರೀತಿಯಲ್ಲಿ ಆಗಿರಬೇಕು ಎಂದಿದ್ದಾನೆ. ಮಲ್ಲಿ ಮತ್ತು ಭೂಮಿಕಾ ಇಬ್ಬರನ್ನೂ ಸಾಯಿಸಿದ ಖುಷಿಯಲ್ಲಿ ತೇಲಾಡ್ತಿದ್ದಾನೆ ಜೈದೇವ್! ಕೊನೆಯದಾಗಿ ಪತ್ನಿಯನ್ನು ನೋಡಲು ಹೋದರೆ ಆತನಿಗೆ ಶಾಕ್ ಆಗಿದೆ. ಇದಕ್ಕೆ ಕಾರಣ, ಆಸ್ಪತ್ರೆಗೆ ಮಲ್ಲಿ ಜೊತೆ ಅಮ್ಮ ಶಕುಂತಲಾ ಹೋಗುತ್ತಿದ್ದಾಳೆ!
ಮದ್ವೆಯಾದ 7 ತಿಂಗಳಿಗೇ ಅಮ್ಮನಾದ ಆಲಿಯಾ ಭಟ್ ಕುರಿತ ಇಂಟರೆಸ್ಟಿಂಗ್ ವಿಷ್ಯ ಇದೀಗ ರಿವೀಲ್!
ಆ್ಯಕ್ಸಿಡೆಂಟ್ ಮಾಡಬೇಡ ಎಂದು ಡ್ರೈವರ್ಗೆ ಹೇಳೋಣ ಎಂದರೆ ಮೊಬೈಲ್ ಫೋನ್ ಅನ್ನು ನೀರಿಗೆ ಎಸೆದು ಆಗಿಬಿಟ್ಟಿದೆ. ಆ ಫೋನ್ ಬಿಟ್ಟರೆ ಬೇರೆ ಫೋನ್ನಲ್ಲಿ ಡ್ರೈವರ್ ನಂಬರ್ ಇಲ್ಲ. ಈಜುಕೊಳಕ್ಕೆ ಹಾರಿದ್ದಾನೆ ಜೈದೇವ್. ಅವನಿಗೆ ಮೊಬೈಲ್ ಸಿಗತ್ತಾ?ಮೊಬೈಲ್ ಸಿಕ್ಕಿಗೆ ಫೋನ್ ಮಾಡಲು ಆಗತ್ತಾ? ಫೋನ್ ಮಾಡಿದರೂ ಆ್ಯಕ್ಸಿಡೆಂಟ್ ತಪ್ಪಿಸಲು ಸಾಧ್ಯವಾಗುತ್ತಾ? ಇತ್ತ ಕಾರು, ಅತ್ತ ಲಾರಿ ಎರಡೂ ಹೊರಟಾಗಿದೆ, ಆ್ಯಕ್ಸಿಡೆಂಟ್ ಆಗೋದೊಂದೇ ಬಾಕಿ. ಮುಂದೇನು? ಇದನ್ನು ನೋಡಲು ಜೀ ಕನ್ನಡ ವಾಹಿನಿಯ ಅಮೃತಧಾರೆ ಸೀರಿಯಲ್ ನೋಡಬೇಕು. ಇದರ ಪ್ರೊಮೋ ರಿಲೀಸ್ ಆಗಿದ್ದು, ಕುತೂಹಲ ಮನೆ ಮಾಡಿದೆ.
ಇದಾಗಲೇ ಭೂಮಿಕಾ ಮಲ್ಲಿಗೆಂದು ಮಾಡಿರುವ ಸೂಪ್ನಲ್ಲಿ ವಿಷ ಬೆರೆಸಿ ಪತ್ನಿಯನ್ನು ಕೊಲ್ಲಲು ಸಂಚು ರೂಪಿಸಿದ್ದ ಜೈದೇವ. ಆದರೆ ಅದರ ಅರಿವಿಲ್ಲದೇ ತಾಯಿ ಶಕುಂತಲಾ ದೇವಿ ಅದನ್ನು ಸೇವಿಸಿದ್ದಳು. ಅದನ್ನು ತಿನ್ನದಂತೆ ಪರಿಪರಿಯಾಗಿ ಅಮ್ಮನಿಗೆ ಹೇಳಿದ್ದರೂ ಆಕೆಗೆ ಇದರ ಅರಿವು ಇರಲಿಲ್ಲ. ಏಕೆಂದರೆ ಏನೇ ಕುತಂತ್ರ ಮಾಡುವುದಿದ್ದರೂ ಮೊದಲು ತನಗೆ ತಿಳಿಸು ಎಂದಿದ್ದಳು. ಆದರೆ ಜೈದೇವ ಅಮ್ಮನಿಗೆ ಹೇಳದೇ ವಿಷ ಹಾಕಿಕೊಟ್ಟಿದ್ದ. ವಿಷ ಬೆರೆಸಿದ ಆಹಾರವನ್ನು ಶಕುಂತಲಾ ದೇವಿ ತಿಂದೇ ಬಿಟ್ಟಿದ್ದಳು. ನಂತರ ಆಕೆಗೆ ವಾಂತಿ ಮಾಡಿಸಿ ಹೇಗೋ ಬದುಕಿಸಿಕೊಂಡಿದ್ದದ ಜೈದೇವ. ಆದರೆ ಈಗ? ಶಕುಂತಲಾದೇವಿ ಕಾರಿನ ಮುಂಭಾಗದಲ್ಲಿ ಕುಳಿತಿದ್ದರೆ, ಮಲ್ಲಿ ಹಿಂದೆ ಕುಳಿತಿದ್ದಾಳೆ. ಅಪಘಾತವಾಗುತ್ತಾ? ಆದರೆ...?
ಆರೋಗ್ಯ ವಿಚಾರದಲ್ಲಿ 33 ಮಿಲಿಯನ್ ಫಾಲೋವರ್ಸ್ ದಾರಿ ತಪ್ಪಿಸಿದ್ರಾ ನಟಿ ಸಮಂತಾ? ವೈದ್ಯರು ಕಿಡಿಕಿಡಿ!