ನಟಿ ವೈಷ್ಣವಿ ಗೌಡ ಅವರ ಮದುವೆಯ ಬಗ್ಗೆ ಅಭಿಮಾನಿಗಳು ಪದೇ ಪದೇ ಪ್ರಶ್ನಿಸುತ್ತಿದ್ದಾರೆ. ಸೀತಾರಾಮ ಸೀರಿಯಲ್‌ನಲ್ಲಿ ಪ್ರಿಯಾ ಪಾತ್ರಧಾರಿ ಮೇಘನಾ ಶಂಕರಪ್ಪ ಕೂಡ ವೈಷ್ಣವಿಯವರನ್ನು ಮದುವೆಯ ಬಗ್ಗೆ ಕೇಳಿದ್ದಾರೆ. ಈ ಹಿಂದೆ ವೈಷ್ಣವಿ ಅವರ ನಿಶ್ಚಿತಾರ್ಥ ಮುರಿದುಬಿದ್ದಿತ್ತು. 300ಕ್ಕೂ ಹೆಚ್ಚು ಪ್ರಪೋಸ್‌ಗಳು ಬಂದಿದ್ದರೂ ಅವರು ಒಪ್ಪಿಕೊಂಡಿಲ್ಲ. ಅಗ್ನಿಸಾಕ್ಷಿ ಸೀರಿಯಲ್ ಮೂಲಕ ಜನಪ್ರಿಯರಾದ ವೈಷ್ಣವಿ, ಸದ್ಯ ಸೀತಾರಾಮದಲ್ಲಿ ನಟಿಸುತ್ತಿದ್ದಾರೆ.

ಸಾಮಾನ್ಯವಾಗಿ ನಟ-ನಟಿಯರ ಅಭಿಮಾನಿಗಳಿಗೆ ಅವರ ಮದುವೆಯದ್ದೇ ಚಿಂತೆ. ಮದುವೆಯಾದರೆ ಮಕ್ಕಳದ್ದು ಚಿಂತೆ. ಒಟ್ಟಿನಲ್ಲಿ ತಮ್ಮ ನೆಚ್ಚಿನ ನಟ- ನಟಿಯರ ಮದುವೆ ಮಾಡಿಸುವಲ್ಲಿ ಅಭಿಮಾನಿಗಳು ನಿರತಾಗಿರುತ್ತಾರೆ. ಅದೇ ರೀತಿ ಸೀತಾರಾಮ ಸೀರಿಯಲ್​ ಸೀತಾ ಅರ್ಥಾತ್​ ನಟಿ ವೈಷ್ಣವಿ ಗೌಡ ಅವರ ಮದುವೆಯ ಬಗ್ಗೆ ಇದಾಗಲೇ ಸಾಕಷ್ಟು ಬಾರಿ ಅಭಿಮಾನಿಗಳು ತಲೆ ಕೆಡಿಸಿಕೊಂಡದ್ದು ಇದೆ. ಮದ್ವೆ ಯಾವಾಗ ಎನ್ನುವ ಪ್ರಶ್ನೆ ನಟಿಗೆ ಎದುರಾಗಿ ಸುಸ್ತಾಗಿದ್ದೂ ಇದೆ. ಪದೇ ಪದೇ ಇದೇ ಪ್ರಶ್ನೆಯನ್ನು ಯಾಕೆ ಕೇಳ್ತೀರಾ ಎಂದು ವೈಷ್ಣವಿ ಗೌಡ ಅವರು ಬೇಸರಿಸಿಕೊಂಡದ್ದೂ ಆಗಿದೆ. ಆದರೂ ಅಭಿಮಾನಿಗಳು ಅದೇ ಪ್ರಶ್ನೆಯನ್ನು ಕೇಳುವುದೂ ಅಲ್ಲದೇ, ಸೀತಾರಾಮ ಸೀರಿಯಲ್​ ರಾಮ್​ನೇ ರಿಯಲ್​ ಲೈಫ್​ನಲ್ಲಿಯೂ ಗಂಡನಾಗಲಿ ಎಂದು ಹಾರೈಸುವವರೂ ಇದ್ದಾರೆ. ರಾಮ್​ ಅರ್ಥಾತ್​ ಗಗನ್​ ಚೆಂಗಪ್ಪಾ ಕೂಡ ಸಿಂಗಲ್​ ಆಗಿರುವ ಕಾರಣ ಹಾಗೂ ಇವರಿಬ್ಬರ ಕೆಮೆಸ್ಟ್ರಿಯನ್ನು ಅಭಿಮಾನಿಗಳು ಮೆಚ್ಚಿಕೊಂಡಿರುವ ಕಾರಣ, ನಿಜ ಜೀವನದಲ್ಲಿಯೂ ಇವರೇ ಜೋಡಿಯಾಗಲಿ ಎಂದು ಹಾರೈಸುತ್ತಿರುವವರೇ ಹೆಚ್ಚುಮಂದಿ. ಅಷ್ಟಕ್ಕೂ ಯಾವುದೇ ಸೀರಿಯಲ್​ಗಳಲ್ಲಿ ಒಬ್ಬ ನಟ-ನಟಿ ಬಾಂಡಿಂಗ್​ ಚೆನ್ನಾಗಿ ಇದ್ದ ತಕ್ಷಣ, ಅವರನ್ನು ಇವರ ಜೊತೆ ಸಂಬಂಧ ಮಾಡುವುದು ಮೊದಲಿನಿಂದಲೂ ನಡೆದು ಬಂದಿದೆ ಅನ್ನಿ. 

ಆದರೆ, ಇದೀಗ ಮೊದಲ ಬಾರಿಗೆ ಸೀತಾರಾಮ ಶೂಟಿಂಗ್​ ಸೆಟ್​​ನಲ್ಲಿ ಖುದ್ದು ಇದೇ ಸೀರಿಯಲ್​ ಪ್ರಿಯಾ ಅರ್ಥಾತ್​ ಮೇಘನಾ ಶಂಕರಪ್ಪ ಅವರು ಈ ಪ್ರಶ್ನೆಯನ್ನು ನಟಿಯ ಮುಂದೆ ಇಟ್ಟಿದ್ದಾರೆ. ಇದನ್ನು ಕೇಳಿ ಅರೆ ಕ್ಷಣ ವೈಷ್ಣವಿ ಸೈಲೆಂಟ್​ ಆಗಿದ್ದಾರೆ. ಆಮೇಲೆ ಮೇಘನಾ ಅಶೋಕ್​ ಪಾತ್ರಧಾರಿಗೆ ವೈಷ್ಣವಿ ಯಾವ ವರ್ಷ ಮದ್ವೆಯಾಗಬೇಕು ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಅವರು ಯಾವಾಗಲಾದರೂ ಆಗಲಿ, ಖುಷಿಯಾಗಿ ಇರಲಿ ಎಂದಿದ್ದಾರೆ. ಆಮೇಲೆ ಮೇಘನಾ ಬೇಗ ಹೇಳಿ, ಯಾವಾಗ ಗುಡ್​ನ್ಯೂಸ್ ಎಂದಾಗ, ವೈಷ್ಣವಿ ಅದನ್ನು ನಿಮ್ಮ ಬ್ಲಾಗ್​ನಲ್ಲಿ ಯಾಕೆ ಹೇಳಲಿ? ನನ್ನದೇ ಚಾನೆಲ್​ನಲ್ಲಿ ಅನೌನ್ಸ್​ ಮಾಡುತ್ತೇನೆ ಎಂದಿದ್ದಾರೆ. ಆಗ ಮೇಘನಾ ಹಾಗಿದ್ದರೆ ಶೀಘ್ರದಲ್ಲಿಯೇ ವೈಷ್ಣವಿ ಗುಡ್​ನ್ಯೂಸ್​ ಕೊಡಲಿದ್ದಾರೆ ಎಂದಿದ್ದಾರೆ. ಇದರ ವಿಡಿಯೋವನ್ನು ಮೇಘನಾ ಶಂಕರಪ್ಪ ಅವರು ಶೇರ್​ ಮಾಡಿಕೊಂಡಿದ್ದು, ಅದೀಗ ವೈರಲ್​ ಆಗಿದೆ. 

ಪ್ರಿಯಾ ಮದ್ವೆ ಆಯ್ತು, ಈಗೇನಿದ್ರೂ ಸೀತಾಳದ್ದು! 'ಆ ಹುಡುಗನ' ಬಗ್ಗೆ ಬಾಯ್ಬಿಟ್ಟು ಎಲ್ಲರ ಹುಬ್ಬೇರಿಸಿದ ವೈಷ್ಣವಿ ಗೌಡ


ಅಷ್ಟಕ್ಕೂ, ಈ ಹಿಂದೆ ವೈಷ್ಣವಿ ಅವರ ಬಾಳಲ್ಲಿ ದುರಂತವೂ ನಡೆದಿದೆ. 2022ರ ನವೆಂಬರ್‌ನಲ್ಲಿ ವೈಷ್ಣವಿ ಗೌಡ, ವಿದ್ಯಾಶಂಕರ್ ಎನ್ನುವವರು ಕುಟುಂಬದ ಮುಂದೆ ಹಾರ ಹಾಕಿಕೊಂಡಿದ್ದ ಫೋಟೋವೊಂದು ವೈರಲ್ ಆಗಿತ್ತು. ಎಲ್ಲರೂ ಇದು ನಿಶ್ಚಿತಾರ್ಥ ಎಂದೇ ಭಾವಿಸಿದರು. ಆಮೇಲೆ ವೈಷ್ಣವಿ ಕುಟುಂಬವೇ ಇದು ನಿಶ್ಚಿತಾರ್ಥ ಅಲ್ಲ ಎಂದು ಹೂ ಮುಡಿಸುವ ಶಾಸ್ತ್ರ ಎಂದು ಸ್ಪಷ್ಟನೆ ನೀಡಿತು. ಆ ನಂತರ ವಿದ್ಯಾಶಂಕರ್ ಕುರಿತಾದ ಆಡಿಯೋವೊಂದು ವೈರಲ್ ಆಗಿತ್ತು. ಆ ನಂತರ ವೈಷ್ಣವಿ ಅವರು ವಿದ್ಯಾಶಂಕರ್ ಜೊತೆ ಸಂಬಂಧ ಮುಂದುವರೆಸೋದಿಲ್ಲ ಎಂದು ಹೇಳಿದ್ದರು. 'ಅದು ನನ್ನ ತಾಯಿಯಿಂದ ಬಂದ ಸಂಬಂಧವಾಗಿತ್ತು. ಕೆಲ ದಿನಗಳ ನಂತರ ಸಂದರ್ಭ ಬದಲಾಯ್ತು, ನಾವು ಸಂಬಂಧ ಮುಂದುವರೆಸಲಿಲ್ಲ. ಆ ಘಟನೆ ನಮ್ಮ ಹಿಂದೆ ನಡೆದಿದ್ದಾಗಿತ್ತು. ಏನಾಗತ್ತೋ ಅದು ಒಳ್ಳೆಯದಕ್ಕೆ ಆಗುವುದು. ನನಗೆ ಇಂದಿಗೂ ಕೂಡ ರಿಲೇಶನ್‌ಶಿಪ್‌ನಲ್ಲಿ ನಂಬಿಕೆಯಿದೆ. ಮುಂದೊಂದು ದಿನ ನನಗೂ ಮದುವೆಯಾಗಿ ಕುಟುಂಬ ಇರುತ್ತದೆ ಎಂದು ನಂಬಿದ್ದೇನೆ. ಆ ರೀತಿ ಘಟನೆಗಳು ನನ್ನ ನಂಬಿಕೆಯನ್ನು ಮುರಿಯೋದಿಲ್ಲ' ಎಂಬ ಮಾತನ್ನು ಈ ಘಟನೆ ನಡೆದು ಎಷ್ಟೋ ದಿನಗಳ ಬಳಿಕ ಸಂದರ್ಶನವೊಂದರಲ್ಲಿ ವೈಷ್ಣವಿ ಹೇಳಿದ್ದರು.

ಇದಾಗಲೇ ವೈಷ್ಣವಿ ಅವರು, ಸುಮಾರು 300ಕ್ಕೂ ಅಧಿಕ ಲವ್‌ ಪ್ರಪೋಸ್‌ಗಳು ಬಂದಿದ್ದರೂ ಒಪ್ಪಿಕೊಂಡಿಲ್ಲ ಎಂಬ ಬಗ್ಗೆ ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಕನ್ನಡ ನಾಡಿನ ಜನತೆಗೆ ಅಗ್ನಿಸಾಕ್ಷಿಯ ಸನ್ನಿಧಿಯಾಗಿ ಪರಿಚಿತಗೊಂಡ ವೈಷ್ಣವಿಗೌಡ ಅವರ ಸೌಂದರ್ಯ ಹಾಗೂ ನಟನೆಯನ್ನು ನೋಡಿ ಲಕ್ಷಾಂತರ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಅಗ್ನಿಸಾಕ್ಷಿ ಧಾರಾವಾಹಿಯ ನಂತರ ಬಿಗ್‌ಬಾಸ್‌ ಮನೆಯಲ್ಲೂ ಕಾಣಿಸಿಕೊಂಡ ವೈಷ್ಣವಿ ಇಲ್ಲಿಯೂ ಕೂಡ ಹೆಚ್ಚಿನ ರಗಳೆ ಮಾಡಿಕೊಳಳದೇ ಸೀದಾ-ಸಾದಾ ನಡತೆಯಿಂದ ಜನರ ಮನಸ್ಸನ್ನು ಗೆದ್ದಿದ್ದರು. ಇದಾದ ನಂತರ ಪುನಃ ಒಂದೆರಡು ಸಿನಿಮಾಗಳಲ್ಲಿಯೂ ನಟಿಸಿದ ವೈಷ್ಣವಿಗೌಡ, ಅಲ್ಲಿ ಹೆಚ್ಚಿನ ಯಶಸ್ಸು ಸಿಗದ ಹಿನ್ನೆಲೆಯಲ್ಲಿ ಪುನಃ ಕಿರುತೆರೆಗೆ ಆಗಮಿಸಿದ್ದಾರೆ.

ಮಹಿಳೆಯರಿಗೆ ಸ್ಫೂರ್ತಿಯಾದ ನಟಿ ವೈಷ್ಣವಿ ಅಮ್ಮ: ಈಗಷ್ಟೇ ಕಾನೂನು, ಸೈಕಾಲಾಜಿ ಡಿಗ್ರಿ ಮುಗಿಸಿದ ಅವರ ಮಾತು ಕೇಳಿ...

ಇನ್ನು ವೈಷ್ಣವಿ ಗೌಡ ಕುರಿತು ಹೇಳುವುದಾದರೆ, ಕನ್ನಡದ ಪ್ರೇಕ್ಷಕರಿಗೆ ಸನ್ನಿಧಿಯಂತಲೇ ಇವರು ಪರಿಚಯವಿದ್ದರು. ಅಗ್ನಿಸಾಕ್ಷಿ ಸೀರಿಯಲ್​ನ ಸನ್ನಿಧಿ ಮೂಲಕ ಸಕತ್​ ಫೇಮಸ್​ ಆಗಿದ್ದ ನಟಿ ಈಗ ಸೀತಾರಾಮದ ಸೀತೆಯಾಗಿ ಮನೆ ಮಾತಾಗಿದ್ದಾರೆ. ವೈಷ್ಣವಿ ಕನ್ನಡ ಕಿರುತೆರೆಲೋಕದ ಜನಪ್ರಿಯ ನಟಿ. ಅಷ್ಟೇ ಅಲ್ಲದೇ, ಹಲವು ಉತ್ಪನ್ನಗಳ ರಾಯಭಾರಿಯೂ ಹೌದು. ಜೀ ಕನ್ನಡದ `ದೇವಿ' ಸೀರಿಯಲ್‌ನಿಂದ ಇವರ ಕಿರುತೆರೆ ಪಯಣ ಆರಂಭವಾಯಿತು.ನಂತರ `ಪುನರ್‌ವಿವಾಹ'ದಲ್ಲಿ ನಟಿಸಿ `ಅಗ್ನಿಸಾಕ್ಷಿ' ಸೀರಿಯಲ್‌ನ ಸನ್ನಿಧಿಯಾಗಿ ಆಯ್ಕೆಗೊಂಡರು. ಈ ಪಾತ್ರದ ಮೂಲಕ ಅಪಾರ ಜನಮನ್ನಣೆ ಪಡೆದಿದ್ದಾರೆ. `ಗಿರಿಗಿಟ್ಲೆ' ಚಿತ್ರದ ಮೂಲಕ ನಾಯಕಿಯಾಗಿದ್ದಾರೆ. `ಭರ್ಜರಿ ಕಾಮಿಡಿ' ಎಂಬ ರಿಯಾಲಿಟಿ ಷೋ ನಿರೂಪಣೆ ಕೂಡ ಮಾಡಿದ್ದಾರೆ. `ಕುಣಿಯೋಣ ಬಾರ' ಡ್ಯಾನ್ಸ್ ರಿಯಾಲಿಟಿ ಷೋ ಆಗೂ ಬಿಗ್​ಬಾಸ್​ ಸೀಸನ್​ 8ನಲ್ಲಿ ಭಾಗವಹಿಸಿದ್ದಾರೆ.


YouTube video player