Asianet Suvarna News Asianet Suvarna News

ರೋಚಕ ವಿಧಾನದಿಂದ ಕನ್ನಡ ಕಲಿತ ಸಾನ್ಯಾ ಅಯ್ಯರ್! ಅಜ್ಜಿಯ ಪಾಠ ವಿಧಾನ ತಿಳಿಸಿದ ನಟಿ

ಕಿರುತೆರೆ ನಟಿ ಸಾನ್ಯಾ ಅಯ್ಯರ್​ ಕನ್ನಡ ಕಲಿತ ವಿಧಾನವೇ ರೋಚಕವಾದದ್ದು. ಅಜ್ಜಿ ಹೇಗೆ ಕನ್ನಡ ಕಲಿಸಿದರು ಎನ್ನುವ ವಿಷಯವನ್ನು ಬಹಿರಂಗಗೊಳಿಸಿದ್ದಾರೆ ನಟಿ. 
 

Sanya Iyer  revealed how her grandmother taught her Kannada suc
Author
First Published Sep 11, 2023, 9:17 PM IST

 ಬಿಗ್ ಬಾಸ್ 9 ಸೀಸನ್ (Bigg Boss Season 9) ಮೂಲಕ ಸಿಕ್ಕಾಪಟ್ಟೆ ಜನಪ್ರಿಯತೆ ಗಳಿಸಿದ ನಟಿ ಸಾನ್ಯಾ ಐಯ್ಯರ್  ಕನ್ನಡ ಪ್ರೀತಿಯ ಕುರಿತು ಮಾತನಾಡಿದ್ದು, ಅದರ ವಿಡಿಯೋ  ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.  ಸಾನ್ಯಾ ಅಯ್ಯರ್​ ಕಿರುತೆರೆಯಲ್ಲಿಯೂ ಎತ್ತಿದ ಕೈ. ಈಕೆ  ಕನ್ನಡ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟಿ. ಪುಟ್ಟ ಗೌರಿ ಮದುವೆ ಸೀರಿಯಲ್ ಮೂಲಕ ಮನೆ ಮಾತಾಗಿದ್ದಾರೆ. ಪುಟ್ಟ ಗೌರಿ ಮದುವೆಯಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದ ಸಾನ್ಯಾ, 8ನೇ ತರಗತಿಯವರೆಗೆ ಈ ಧಾರಾವಾಹಿಯಲ್ಲಿ ನಟಿಸಿದ್ದರು. ಕೊನೆಗೆ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದಲ್ಲಿ ಪದವಿ ಪಡೆದಿರುವ ಈಕೆ, ಮಲಯಾಳಂನಲ್ಲಿಯೂ ಹೆಸರು ಮಾಡಿದರು. ಮಲಯಾಳದ ' ಆರಾರೋ..ನೀಯಾರೋ' ಎಂಬ ಅಲ್ವಮ್ ಸಾಂಗ್​ನಲ್ಲಿ ಕಾಣಿಸಿಕೊಂಡು ಫೇಮಸ್​ ಆದರು. ಅದಾದ ಬಳಿಕ ಕನ್ನಡದ ಡಾನ್ಸಿಂಗ್ ರಿಯಾಲಿಟಿ ಶೋ ನಲ್ಲಿ ಅಭಿನಯಿಸಿ ಜನರಿಗೆ ಮತ್ತಷ್ಟು ಹತ್ತಿರವಾದರು. 'ಗುಲಾಬ್ ಜಾಮೂನ್' ಎಂಬ ಚಿತ್ರದಲ್ಲಿಯೂ ನಟಿಸಿದರು. ಆದರೆ ಹೆಚ್ಚು ಫೇಮಸ್​ ಆಗಿದ್ದು  ಬಿಗ್ ಬಾಸ್ 9 ಸೀಸನ್ ಮೂಲಕ.  ‘ಬಿಗ್ ಬಾಸ್ ಕನ್ನಡ ಒಟಿಟಿ’ಯಲ್ಲಿಯೂ ಗಮನ ಸೆಳೆದರು.

ಸಾಮಾಜಿಕ ಜಾಲತಾಣದಲ್ಲಿ ಸಕತ್​ ಆ್ಯಕ್ಟಿವ್ ಆಗಿರುವ ನಟಿ ಸಾನ್ಯಾ, ಆಗಾಗ್ಗೆ  ರೀಲ್ಸ್​  ಮಾಡಿ ಫ್ಯಾನ್ಸ್​ ಹೃದಯ ಗೆಲ್ಲುತ್ತಿದ್ದಾರೆ.  ಪಡ್ಡೆ ಹುಡುಗರ ನಿದ್ದೆ ಕದಿಯುತ್ತಿದ್ದಾರೆ.  ರೂಪೇಶ್ ಶೆಟ್ಟಿ (Roopesh Shetty) ಜೊತೆಗಿನ ಆಪ್ತತೆ ಕಾರಣಕ್ಕೆ ಸಾಕಷ್ಟು ಸುದ್ದಿ ಆಗಿರೋ ಸಾನ್ಯಾ ಕೆಲ ದಿನಗಳ ಹಿಂದೆ  ಲವ್​ ಬಗ್ಗೆ ಒಂದು ಸಂದೇಶ ನೀಡಿದ್ದು, ಇದಕ್ಕೆ ಸಕತ್​ ರೆಸ್ಪಾನ್ಸ್​ ಬಂದಿತ್ತು.  ನಂತರ  ಪುನೀತ್ ರಾಜ್​ಕುಮಾರ್ ಚಿತ್ರದ ಸಾಂಗ್​ಗೆ ರೀಲ್ಸ್ ಮಾಡಿ, ಎಲ್ಲರ ಮನ ಗೆದ್ದಿದ್ದರು. 

I Love You ಹೇಳ್ಬೇಡಿ, ಅದರ ಬದ್ಲು... ನಟಿ ಸಾನ್ಯಾ ಅಯ್ಯರ್​ ಹೇಳಿದ್ದೇನು?

ಇಂತಿಪ್ಪ ನಟಿ ಈಗ ತಮಗೆ ಕನ್ನಡದ ಮೇಲಿನ ಪ್ರೀತಿಯ ಬಗ್ಗೆ ವಿವರಣೆ ನೀಡಿದ್ದಾರೆ. ತಮಗೆ ಕನ್ನಡ ಯಾಕೆ ಹೆಚ್ಚು ಆಪ್ತವಾಗಿದೆ, ಕನ್ನಡ ಎಂದರೆ ತಮಗೆ ಪ್ರೀತಿ, ಹೆಮ್ಮೆ ಮೂಡಲು ಕಾರಣ ಏನು ಎಂಬ ಬಗ್ಗೆ ನಟಿ ಮಾತನಾಡಿದ್ದಾರೆ. ನಟಿಯ ಮಾತಿನಲ್ಲಿಯೇ ಹೇಳುವುದಾದರೆ, 'ನನಗೆ ಕನ್ನಡ ಹೆಚ್ಚು ಹತ್ತಿರವಾಗಲು ಕಾರಣ ನನ್ನ ಅಜ್ಜಿ. ಈಕೆ ಸರ್ಕಾರಿ ಶಾಲೆಯ ಪ್ರಾಧ್ಯಾಪಕಿಯಾಗಿದ್ದರು. ಅಲ್ಲಿಂದಲೇ ನನಗೆ ಕನ್ನಡದ ನಂಟು ಶುರುವಾಗಿದ್ದು' ಎಂದಿದ್ದಾರೆ. ಕನ್ನಡವನ್ನು ನನ್ನ ಅಜ್ಜಿ ಕಲಿಸುತ್ತಿದ್ದ ರೀತಿಯೇ ವಿಭಿನ್ನವಾದದ್ದು, ಅವರು ಪುಸ್ತಕ (book) ನೋಡಿ ಕಲಿಯುವುದಕ್ಕಿಂತ ಕನ್ನಡವನ್ನು ಆಟವಾಡುತ್ತಾ ಕಲಿತರೆ ಹೆಚ್ಚು ಸೂಕ್ತ ಎಂದು ತಿಳಿದುಕೊಂಡವರು. ಇದೇ  ಕಾರಣಕ್ಕೆ ಅವರು ನನಗೂ ಆಟವಾಡಿಸುತ್ತಲೇ ಕನ್ನಡ ಕಲಿಸಿದರು ಎಂದು ಸಾನ್ಯಾ ಅಯ್ಯರ್​ ಹೇಳಿದ್ದಾರೆ.

ಅಜ್ಜಿಯ ಸಪೋರ್ಟ್​ನಿಂದ (support) ನಾನು ಇಂದು ಕನ್ನಡ ಕಲಿತಿದ್ದೇನೆ. ನನ್ನ ಅಜ್ಜಿ ಪಜಲ್ಸ್​ ಮೂಲಕ ಕನ್ನಡ ಹೇಳಿಕೊಟ್ಟರು. ಚಿಕ್ಕಚಿಕ್ಕ ಪದಬಂಧವನ್ನು ಮಾಡುವ ಮೂಲಕ ಅಕ್ಷರ ಜೋಡಣೆ ತಿಳಿಸಿಕೊಟ್ಟರು. ಕನ್ನಡ ಕಲಿತ ಆ ಫೀಲೀಂಗೇ ಬೇರೆಯಾಗಿತ್ತು. ಕನ್ನಡ ಎಂದರೆ ಅದೇನೋ ಹೆಮ್ಮೆ,  ಆಪ್ತತೆ ಬರಲೂ ಇದೇ ಕಾರಣ ಎಂದು ಸಾನ್ಯಾ ಅಯ್ಯರ್​ ಹೇಳಿದ್ದಾರೆ. ಅಂದಹಾಗೆ, ಸಾನ್ಯಾ ಅಯ್ಯರ್​ ಈ ಹಿಂದೆ ಯೋಗರಾಜ್ ಭಟ್ಟರ ನಿದೇರ್ಶನದ ವಿ.ಹರಿಕೃಷ್ಣ ಅವರ ಸಂಗೀತದ  ‘ಪರಮಾತ್ಮ’ ಚಿತ್ರದ  'ಹೆಸರು ಪೂರ್ತಿ ಹೇಳದೇ'  ಹಾಡಿಗೆ ಸಾನ್ಯಾ ರೀಲ್ಸ್​ ಮಾಡಿದ್ದರು.  ಪುನೀತ್ ರಾಜ್​ಕುಮಾರ್ ನಟನೆಯ ಸಿನಿಮಾದ ಹಾಡು ಈಗಲೂ ಜನರ ಫೇವರಿಟ್​. ಸುಂದರವಾಗಿ ಸೀರೆ ಉಟ್ಟುಕೊಂಡಿರುವ ಸಾನ್ಯಾ ನನಗೆ ‘ಐ ಲವ್​ ಯೂ ಹೇಳಬೇಡಿ ಅದರ ಬದಲು ಈ ಹಾಡನ್ನು ಹೇಳಿ’ ಎನ್ನುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.

ಮತ್ತೊಮ್ಮೆ ಬೋಲ್ಡ್ ಫೋಟೋ ಶೂಟ್ ಮೂಲಕ ಕಿಚ್ಚು ಹಚ್ಚಿದ ಸಾನ್ಯಾ ಅಯ್ಯರ್

Follow Us:
Download App:
  • android
  • ios