ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸ್ಯಾಂಡಲ್ ವುಡ್ ನ ಹೈಯೆಸ್ಟ್ ಪೇಯ್ಡ್ ನಟ! ಹೀಗೊಂದು ವರದಿ ಹೊರ ಬಿದ್ದಿದೆ. ಸಿನಿಮಾಗಿಂತ ಹೆಚ್ಚಾಗಿ ಕಿರುತೆರೆಯಲ್ಲಿ ಹೋಸ್ಟ್ ಮಾಡುವ ಬಿಗ್ ಬಾಸ್ ರಿಯಾಲಿಟಿ ಶೋಗಾಗಿ ಅತೀ ಹೆಚ್ಚು ಸಂಭಾವನೆ ಪಡೆಯುತ್ತಾರಂತೆ! 

ಬಿಗ್ ಬಾಸ್ ಮನೆ ಎಂಟ್ರಿ ಲೆಟೆಸ್ಟ್ ಲಿಸ್ಟ್, ಹನುಮಂನ ಜತೆ ಟಿಕ್ ಟಾಕ್ ಶೂರರು!

ಬಿಗ್ ಬಾಸ್ ಮುಂದಿನ 5  ಸೀಸನನ್ನು ಹೋಸ್ಟ್ ಮಾಡಲು 20 ಕೋಟಿಗೆ ಸಂಭಾವನೆಗೆ ಸಹಿ ಮಾಡಿದ್ದಾರೆ ಎನ್ನಲಾಗಿದೆ. ಇದು ಅಧಿಕೃತವಾಗಿಲ್ಲ.  ಅದ್ಭುತವಾದ ಮ್ಯಾನರಿಸಂ, ನಿರೂಪಣೆ ಮೂಲಕ ಬಿಗ್ ಬಾಸನ್ನು ತುಂಬಾ ಎತ್ತರಕ್ಕೆ ಕೊಂಡೊಯ್ದವರು ಸುದೀಪ್. ವೀಕೆಂಡ್ ಗಳಲ್ಲಿ ಕಾಣಿಸಿಕೊಳ್ಳುವ ಸುದೀಪ್ ಗಾಗಿ ಪ್ರೇಕ್ಷಕ ವರ್ಗ ಹಾಗೂ ಬಿಗ್ ಬಾಸ್ ಸ್ಪರ್ಧಿಗಳು ಕಾಯುತ್ತಿರುತ್ತಾರೆ. ಇವರನ್ನು ಬಿಟ್ಟು ಬೇರೆ ಯಾರೂ ನಡೆಸಿಕೊಡಲು ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ತಮ್ಮ ಛಾಪು ಮೂಡಿಸಿದ್ದಾರೆ. 

ಅಕ್ಟೋಬರ್ 13 ರಿಂದ ಬಿಗ್ ಬಾಸ್ 7 ಆರಂಭವಾಗಲಿದ್ದು ಸಾಮಾನ್ಯರಿಗೆ ಅವಕಾಶ ಇಲ್ಲದೇ ಇರುವುದು ಹೆಚ್ಚು ಕುತೂಹಲ ಮೂಡಿಸಿದೆ. 

 

ಈಗಾಗಲೇ 3 ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ದಬಾಂಗ್ -3, ಕೋಟಿಗೊಬ್ಬ 3, ಬಿಲ್ಲ ರಗ ಭಾಷಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಬ್ಯುಸಿ ಶೆಡ್ಯೂಲ್ ನಡುವೆಯೂ ಬಿಡುವು ಮಾಡಿಕೊಂಡು ವೀಕೆಂಡ್ ಗಳಲ್ಲಿ ಬಿಗ್ ಬಾಸ್ ಹೋಸ್ಟ್ ಮಾಡಲಿದ್ದಾರೆ. 

ಅಕ್ಟೋಬರ್ 8ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: