ಕಲರ್ಸ್‌ ಕನ್ನಡದ ದಿ ಮೋಸ್ಟ್‌ ಅವೈಟೆಡ್‌ ರಿಯಾಲಿಟಿ ಶೋ 'ಬಿಗ್‌ ಬಾಸ್‌-7' ಗೆ ಸುದೀಪ್ ಚಾಲನೆ ನೀಡಿದ್ದಾರೆ. ಸ್ಪರ್ಧಿಯೊಬ್ಬರು ವೇದಿಕೆ ಮೇಲೆ ಬಂದಾಗ ಸುದೀಪ್‌ ತಾಯಿಯ ಇಷ್ಟದ ವಿಚಾರವೊಂದನ್ನು ಬಹಿರಂಗ ಪಡಿಸಿದ್ದಾರೆ. ಏನದು ಇಲ್ಲಿದೆ ನೋಡಿ.

ರಾತ್ರಿ ಮನೆ ಮಂದಿಯೆಲ್ಲ ಕೂತು ತಮ್ಮ ನೆಚ್ಚಿನ ಸೆಲೆಬ್ರಿಟಿಗಳನ್ನು ನೋಡಲು ಕಾಯುತ್ತಿದ್ದ ಬಿಗ್‌ ಬಾಸ್‌-7 ಇಂದಿನಿಂದ ಪ್ರತಿ ದಿನ ರಾತ್ರಿ 9 ಕ್ಕೆ ಪ್ರಸಾರವಾಗಲಿದೆ. ಓಪನಿಂಗ್‌ ಸೆರಮನಿಯಲ್ಲಿ ತಮ್ಮ ಗುರಿಗಳನ್ನು ಹೇಳಿಕೊಂಡು ಕುಟುಂಬಸ್ಥರಿಗೆ ಗೆಲ್ಲುವ ಭರವಸೆ ನೀಡಿರುವ ಸ್ಪರ್ಧಿಗಳು ಪ್ರೇಕ್ಷಕರಿಗೆ ಮನರಂಜನೆ ನೀಡುವ ಭರವಸೆಯನ್ನು ಹುಟ್ಟಿಸಿದ್ದಾರೆ.

ಬಿಗ್ ಬಾಸ್ 7ಗೆ ಎಂಟ್ರಿ ಕೊಟ್ಟ 18 ಸ್ಪರ್ಧಿಗಳ ಪಟ್ಟಿ, ಟಿಕ್ ಟಾಕ್ ಸ್ಟಾರ್ಸ್ ಇದ್ದಾರಾ?

ಕಾರ್ಯಕ್ರಮದ ನಿರೂಪಕನಾದ ಸುದೀಪ್ ಎಂದಿನಂತೆ ತನ್ನದೇ ಶೈಲಿಯಲ್ಲಿ ಜನರ ಮನಸ್ಸು ಗೆದ್ದಿದ್ದಾರೆ. ಇನ್ನು 13ನೇ ಸ್ಪರ್ಧಿಯಾಗಿ ಮನೆಗೆ ಪ್ರವೇಶಿಸಿದ 'ರಾಧಾ ರಮಣ' ಮಾಸ್ಟರ್ ಮೈಂಡ್ ವಿಲನ್‌ ಸಿತಾರದೇವಿ ಅಲಿಯಾಸ್‌ ಸುಜಾತಾ ತಮ್ಮ ವೃತಿ ಜೀವನದ ಬಗ್ಗೆ ಸಂತಸದ ವಿಚಾರವೊಂದನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಸುದೀಪ್ - ಸುಜಾತಾ ಮಾತನಾಡುತ್ತಿರುವಾಗ ಸುದೀಪ್ ಇಂಟರೆಸ್ಟಿಂಗ್ ವಿಚಾರವೊಂದನ್ನು ರಿವೀಲ್ ಮಾಡಿದ್ದಾರೆ.

40 ರಿಂದ 38, ತಮ್ಮ ಬಗ್ಗೆ ಯಾರಿಗೂ ಗೊತ್ತಿಲ್ಲದ ತಮ್ಮದೇ ರಹಸ್ಯ ಹೇಳಿದ ಬೆಳಗೆರೆ

ನಟ-ನಟಿಯರು ಧಾರಾವಾಹಿ ನೋಡದೇ ಇರಬಹುದು ಆದರೆ ಅವರ ಕುಟುಂಬಸ್ಥರು ಮಾತ್ರ ಮಿಸ್ ಮಾಡದೆ ನೋಡುತ್ತಾರೆ. ಅಷ್ಟೇ ಯಾಕೆ ಅವರ ಅಭಿನಯಕ್ಕೆ ಫಿದಾ ಆಗಿರುತ್ತಾರೆ.

ರಾಧಾ ರಮಣ 'ಸಿತಾರ ದೇವಿ' ತೆರೆ ಹಿಂದೆ ಹೀಗಿದ್ದಾರೆ ನೋಡಿ!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ತಾಯಿಗೆ ಸುಜಾತಾ ಅಂದ್ರೆ ತುಂಬಾ ಇಷ್ಟವಂತೆ!. ಅವರ ಧಾರಾವಾಹಿಗಳನ್ನು ಮಿಸ್‌ ಮಾಡದೇ ನೋಡುತ್ತಾರಂತೆ ಹೀಗಂತ ಕಿಚ್ಚ ಸುದೀಪ್ ಸುಜಾತಾ ಎದುರು ಹೇಳಿಕೊಂಡಿದ್ದಾರೆ.

BBK7: 'ಗೆದ್ದರೆ ಎಲ್ಲವನ್ನು ಉತ್ತರ ಕರ್ನಾಟಕ ಸಂತ್ರಸ್ತರಿಗೆ ನೀಡ್ತೇನೆ’ ಸ್ವಾಮೀಜಿ ಘೋಷಣೆ