ಕನ್ನಡದ ಬಿಗ್ ಬಾಸ್ ಸೀಸನ್ ಗೆ  ಒಟ್ಟು 18 ಜನ ಸ್ಪರ್ಧಿಗಳು ಕಾಲಿಟ್ಟಿದ್ದಾರೆ.  ಬಿಗ್ ಬಾಸ್ ಮನೆ ಪ್ರವೇಶ ಮಾಡಿದ  ಸ್ಪರ್ಧಿಗಳ ಯಾರ್ಯಾರು ಒಂದು ಕಿರು ನೋಟ ಇಲ್ಲಿದೆ.

ಟಿಕ್ ಟಾಕ್ ಸೆಲೆಬ್ರಿಟಿಗಳನ್ನು ಕಳಿಸಲಾಗುತ್ತದೆ ಎಂಬ ಮಾತು ಸುಳ್ಳಾಗಿದೆ. ಕಿರುತೆರೆ ಕಲಾವಿದರು, ಗಾಯಕರು, ಲೇಖಕರು ಈ ಬಾರಿ ಪ್ರವೇಶ ಪಡೆದುಕೊಂಡಿದ್ದಾರೆ.

1. ಕುರಿ ಪ್ರತಾಪ್: ಹಾಸ್ಯ ಕಲಾವಿದ.. 150ಕ್ಕೂ ಅಧಿಕ ಸಿನಿಮಾಗಳಲ್ಲಿ ನಟನೆ.  ಕಿರುತೆರೆಯಲ್ಲಿ ದೊಡ್ಡ ಹೆಸರು. ಮಜಾ ಟಾಕೀಸ್ ನಿಂದ ಚಿರಪರಿಚಿತ

2. ಚಂದ್ರಿಕಾ: ಅಗ್ನಿ ಸಾಕ್ಷಿ ಧಾರಾವಾಹಿಯ ಚಂದ್ರಿಕಾ ಪಾತ್ರದ ಖ್ಯಾತಿ. ಕಿರುತೆರೆ ಕಲಾವಿದೆ. ಪ್ರಿಯಾಂಕಾ ಎಂಬ ಹೆಸರಿದ್ದರೂ ಚಂದ್ರಿಕಾನೆ ಚಿರಪರಿಚಿತ.

3. ರವಿ ಬೆಳಗೆರೆ: ಹಿರಿಯ ಪತ್ರಕರ್ತ, ಸಾಹಿತಿ,  ಪ್ರಾರ್ಥನಾ ಶಾಲೆಗಳ ಸಂಸ್ಥಾಪಕ. ಕನ್ನಡ ಸಾಹಿತ್ಯ ಲೋಕ ಮತ್ತು ಪತ್ರಿಕೋದ್ಯಮದಲ್ಲಿ ದೊಡ್ಡ ಹೆಸರು. ವಿವಾದಗಳು ಇವರೊಂದಿಗೆ ಸದಾ ಇದ್ದೇ ಇವೆ.

ಮನೆಗೆ ಎಂಟ್ರಿ ಕೊಟ್ಟ ದಿನವೇ ತಮ್ಮದೇ ರಹಸ್ಯ ಬಿಚ್ಚಿಟ್ಟ ಬೆಳಗೆರೆ

4. ಚಂದನಾ: ಚುಕ್ಕಿ ಪಾತ್ರದ ಮೂಲಕ ಮನಗೆದ್ದಿದ್ದ ಕಿರುತೆರೆ ನಟಿ ಚಂದನಾ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ.

5. ವಾಸುಕಿ ವೈಭವ್:  ಗಾಯಕ .. ಕಾಗದದ ದೋಣಿಯಲಿ, ಪ್ರವೀಣಾ... ಹಾಡುಗಳಿಂದ ಫೇಮಸ್. ಮನರಂಜಿಸುವ ತಾಕತ್ತು ತುಂಬಾ ಇದೆ.

6 . ದೀಪಿಕಾ ದಾಸ್: ನಾಗಿಣಿ ಧಾರಾವಾಹಿಯ ಮೂಲಕ ಮನೆಮಾತು. ಮನೆ ಪ್ರವೇಶ ಮಾಡಿದ ಕಿರುತೆರೆ ಸುಂದರಿ.

7. ಜೈಜಗದೀಶ್: ಕನ್ನಡದ ಹಿರಿಯ ನಟ, ಸಾಕಷ್ಟು ಚಿತ್ರಗಳಲ್ಲಿ ಅಭಿನಯ, ನಾಯಕ ನಟ, ಪೋಷಕ ಪಾತ್ರ, ವಿಲನ್ ಎಲ್ಲದಕ್ಕೂ ಸೈ.  ಸಿನಿಮಾ ನಿರ್ಮಾಣ ಮಾಡಿದ ದಾಖಲೆ

8. ಗುರುಲಿಂಗ ಸ್ವಾಮೀಜಿ:  ಹಾವೇರಿಯ ಅಕ್ಕಿ ಮಠದ ಗುರುಲಿಂಗ ಸ್ವಾಮೀಜಿ ಸಾಮಾಜಿಕ ಕೆಲಸದಲ್ಲಿ ಎತ್ತಿದ ಕೈ. ಗೆದ್ದರೆ ಎಲ್ಲ ಹಣವನ್ನು ಉತ್ತರ ಕರ್ನಾಟಕ ಸಂತ್ರಸ್ತರಿಗೆ ನೀಡುತ್ತೇನೆ ಎಂದು ಘೋಷಣೆ ಮಾಡಿ ಒಳಹೋಗಿದ್ದಾರೆ.

9. ಭೂಮಿಕಾ ಶೆಟ್ಟಿ: ಕುಂದಾಪುರದ ಕುವರಿ, ಕಿನ್ನರಿ ಧಾರಾವಾಹಿಯ ಮಣಿ, ಬಿಗ್‌ಮನೆಗೆ 9ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ.

10 .ಡ್ಯಾನ್ಸರ್ ಕಿಶನ್: ತಲಧಿಮಿತ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ರು. ಮುಂಬೈನಲ್ಲಿಯೂ ಕೆಲಸ ಮಾಡಿದ ಅನುಭವ

11. ದುನಿಯಾ ರಶ್ಮಿ: ದುನಿಯಾ ಚಿತ್ರದ ಮುಖೇನ ಹೆಸರು ಮಾಡಿದ್ದ ನಟಿ ನಂತರ ದೊಡ್ಡ ಹಿಟ್ ಕೊಡಲು ವಿಫಲವಾಗಿದ್ದರು.

12. ಚಂದನ್ ಆಚಾರ್:  ಕಿರಿಕ್ ಪಾರ್ಟಿ ಚಿತ್ರದಲ್ಲಿ ಕಾಣಿಸಿಕೊಂಡ ತರಲೆ ಹುಡುಗ.  ಹಾಡು ಹೇಳುವುದರಲ್ಲಿಯೂ ನಿಸ್ಸೀಮ.

13 . ಸುಜಾತಾ:  ಸೀರಿಯಲ್‌ನಲ್ಲಿ ಮಾಸ್ಟರ್‌ಮೈಂಡ್ ಸಿತಾರಾದೇವಿ, ರೇಡಿಯೋ ಜಾಕಿಯಾಗಿಯೂ ಕಾಣಿಸಿಕೊಂಡವರು.

14.  ರಾಜು ತಾಳಿಕೋಟೆ; ಇಬ್ಬರು ಹೆಂಡಿರ ಮುದ್ದಿನ ರಾಜು ತಾಳಿಕೋಟೆ ರಂಗಭೂಮಿಯಲ್ಲಿ ದೊಡ್ಡ ಹೆಸರು. ಸಿನಿಮಾದಲ್ಲಿಯೂ ಕಾಣಿಸಿಕೊಂಡವರು.

15. ಚೈತ್ರಾ ವಾಸುದೇವನ್: ಕಿರುತೆರೆಯ ಫೇಮಸ್ ನಿರೂಪಕಿ ಇವರು. ಹಲವು ಸಿನಿಮಾದಲ್ಲಿಯೂ ಕಾಣಿಸಿಕೊಂಡಿದ್ದಾರೆ,

16.ಚೈತ್ರಾ ಕೋಟೂರ್: ಬರಹಗಾರ್ತಿ, ನಟಿ.. ಸೂಜಿ ದಾರದಲ್ಲಿ ಕಾಣಿಸಿಕೊಂಡಿದ್ದರು.

17.ಶೈನ್ ಶೆಟ್ಟಿ: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾಣಿಸಿಕೊಂಡು ಹೆಸರು ಮಾಡಿದ್ದ ಕಲಾವಿದ, ಗಾಯಕ ಶೈನ್ ಶೆಟ್ಟಿ ಉಳಿದ ಎಲ್ಲರಿಗೆ ಟಫ್ ಕಾಂಪಿಟೇಶನ್ ನೀಡುವುದು ಖಂಡಿತ.

18. ಹರೀಶ್ ರಾಜ್: ಕಿರುತೆರೆ ಕಲಾವಿದರಾಗಿ ಬೆಳದು ಸಿನಿಮಾ ನಾಯಕರಾಗಿ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಕಲಾವಿದ ಹರೀಶ್ ರಾಜ್ ಎಂಟ್ರಿ ಕೊಟ್ಟಿದ್ದಾರೆ.