ಬಿಗ್ ಬಾಸ್ ಮನೆಗೆ ಒಬ್ಬರಾದ ಮೇಲೆ ಒಬ್ಬರು ಅಚ್ಚರಿ ಸ್ಪರ್ದಿಗಳ ಪ್ರವೇಶ ಆಗುತ್ತಿದೆ.  ಹಾವೇರಿಯ ಅಗಡಿ ಗ್ರಾಮದ ಅಕ್ಕಿ ಮಠದ ಗುರಲಿಂಗ ಸ್ವಾಮೀಜಿ ಬಿಗ್ ಬಾಸ್ ಸೀಸನ್ 7ರ ಕಂಟೆಸ್ಟೆಂಟ್ ಆಗಿ ಮನೆ ಪ್ರವೇಶ ಮಾಡಿದ್ದು ನೂರು ದಿನದಲ್ಲಿ ನೂರು ಮನಸ್ಸುಗಳನ್ನು ಬದಲು ಮಾಡುತ್ತೇನೆ ಎಂದಿದ್ದಾರೆ.

ಹಾವೇರಿಯಲ್ಲಿ ಲಕ್ಷ ಸಸಿ ನೆಡುವ ಮೂಲಕ ಜನರಲ್ಲಿ ಪರಿಸರ ಜಾಗೃತಿ ಮೂಡಿಸಿದ್ದ ಈ ಸ್ವಾಮೀಜಿ ಲಿಮ್ಕಾ ಅವಾರ್ಡ್ಸ್ ಪಡೆದಿದ್ದಾರೆ. ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಬಿಗ್ ಬಾಸ್ ನಲ್ಲಿ ಒಂದು ವೇಳೆ ಹಣ ಗೆದ್ದರೆ ಅದೆಲ್ಲವನ್ನು ಉತ್ತರ ಕರ್ನಾಟಕ ನೆರೆ ಸಂತ್ರಸ್ತರ ಕಲ್ಯಾಣಕ್ಕೆ ನೀಡುತ್ತೇನೆ ಎಂದು ಘೋಷಿಸಿದ್ದಾರೆ.

ಯಾರಿಗೂ ಗೊತ್ತಿರದ ರಹಸ್ಯ ಬಿಚ್ಚಿಟ್ಟ ರವಿ ಬೆಳಗೆರೆ

ಹಿರಿಯ ನಟ ಜೈಜಗದೀಶ್ ಸಹ ಮನೆ ಒಳಗೆ ಪ ್ರವೇಶ ಮಾಡಿ ಸ್ನೇಹಿತ ರವಿ ಬೆಳಗೆರೆ ಅವರ ಕೈ ಕುಲುಕಿದ್ದಾರೆ. ಸ್ಯಾಂಡಲ್ ವುಡ್, ಕಿರುತೆರೆ, ಗಾಯಕರು, ನೃತ್ಯಗಾರ್ತಿ ಹೀಗೆ ಒಬ್ಬೊಬ್ಬಬ್ಬರಾಗಿ ಮನೆ ಒಳಗೆ ಸೇರಿದ್ದಾರೆ. ಕಿನ್ನರಿ ಧಾರಾವಾಹಿಯ ಮೂಲಕ ಮನ ಗೆದ್ದ ರಾಯಲ್ ಶೆಟ್ಟಿ [ಭೂಮಿ ಶೆಟ್ಟಿ] ಸಹ ಮನೆ ಒಳಗೆ ಎಂಟ್ರಿ ಕೊಟ್ಟಿದ್ದಾರೆ.