ರುಕ್ಮಿಣಿ ಎಂಟ್ರಿ ಹಿಂದಿದೆ ವೈಶಾಖ ಕೈವಾಡ... ನೆಗೆಟಿವ್ ಪಾತ್ರದಿಂದಾಗಿಯೇ ಸೀರಿಯಲ್ ಬಿಟ್ಟೋದ್ರ ದೇವಿಕಾ ಭಟ್?
ರಾಮಾಚಾರಿ ಧಾರಾವಾಹಿಯಲ್ಲಿ ಮತ್ತೊಂದು ಮಹಾ ತಿರುವು ಸಿಕ್ಕಿದ್ದು, ಇದೀಗ ರಾಮಾಚಾರಿ ಮನೆಗೆ ರುಕ್ಮಿಣಿ ಎಂಟ್ರಿ ಕೊಟ್ಟಿರೋದರ ಹಿಂದೆ ವೈಶಾಖ ಕೈವಾಡ ಇದೆ ಅನ್ನೋದು ಗೊತ್ತಾಗಿದೆ.
ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ರಾಮಾಚಾರಿ ಧಾರಾವಾಹಿಯಲ್ಲಿ ದಿನಕ್ಕೊಂದು ತಿರುವು ಸಿಗುತ್ತಿದೆ. ಇದೀಗ ಎಲ್ಲಾ ಏಳು ಬೀಳುಗಳನ್ನು ಎದುರಿಸಿ, ರಾಮಾಚಾರಿ ಮತ್ತು ಚಾರು ಕೃಷ್ಣ ಮತ್ತು ರುಕ್ಮಿಣಿಯ ಮದುವೆ ಮಾಡಿಸಿದ್ದಾಗಿದೆ. ರುಕ್ಮಿಣಿ ಕೂಡ ಚಾರುವಿನಂತೆ ಮುಗ್ಧ ಮನಸ್ಸಿನ ಹಾಗೂ ನಾರಾಯಣಾಚಾರಿಗಳ ಮನೆಗೆ ಹೇಳಿ ಮಾಡಿಸಿದ ಸೊಸೆ ಎನ್ನುತ್ತಾ, ಇಡೀ ಮನೆಯವರು ಜೊತೆಯಾಗಿ ರುಕ್ಮಿಣಿಯನ್ನು ರಾಕ್ಷಸರ ಕೋಟೆಯಿಂದ ಹೊರ ಕರೆದುಕೊಂಡು ಬಂದು ಕೃಷ್ಣನ ಜೊತೆಗೆ ಮದುವೆ ಮಾಡಿಸಿದ್ದೂ ಆಗಿದೆ. ಆದರೆ ಇದೀಗ ಸೀರಿಯಲ್ ನಲ್ಲಿ ದೊಡ್ಡದಾದ ಟ್ವಿಸ್ಟ್ ಸಿಕ್ಕಿದೆ.
ಮದುವೆಯಾಗಿ ಕೃಷ್ಣ ಮತ್ತು ರುಕ್ಮಿಣಿಯನ್ನು ಮನೆಗೆ ತುಂಬಿಸುವ ಎಲ್ಲಾ ಆಚರಣೆಗಳು ಸಂಭ್ರಮದಿಂದ ನಡೆದಿದೆ. ಚಾರು ಪ್ರೀತಿಯಿಂದ ತನ್ನ ಓರಗಿತ್ತಿಯನ್ನು ಮನೆಯೊಳಗೆ ತುಂಬಿಸಲು ಎಲ್ಲಾ ರೀತಿಯಲ್ಲೂ ಸಖಲ ಸಿದ್ಧತೆ ನಡೆಸಿದ್ದಾಳೆ. ಅಕ್ಕಿ ಮತ್ತು ಬೆಲ್ಲವನ್ನು ಸೇರಲ್ಲಿಟ್ಟು, ಹೊಸ್ತಿಲ ಮೇಲೆ ಇಟ್ಟು, ರುಕ್ಮಿಣಿಯನ್ನು ಮನೆ ತುಂಬಿಸಲು ಮನೆ ಮಂದಿ ನೆರೆದಿದ್ದಾರೆ. ಆದರೆ ಬಲಗಾಲಿಟ್ಟು ಮನೆಯೊಳಗೆ ಕಾಲಿಡಬೇಕಾಗಿದ್ದ ರುಕ್ಕು ಮಾತ್ರ ಸೇರನ್ನು ಜೋರಾಗಿ ಎಡ ಕಾಲಲ್ಲಿ ಒದ್ದು ಎಡ ಕಾಲನ್ನೇ ಮನೆಯೊಳಗೆ ಇಟ್ಟು ಎಂಟ್ರಿ ಕೊಟ್ಟಿದ್ದಾಳೆ. ಜೋರಾಗಿ ಒದ್ದ ಸೇರು ಚಾರು ಹಣೆಗೆ ತಾಕಿದೆ, ಅಷ್ಟೇ ಅಲ್ಲ, ಎಡಗಾಲಲ್ಲಿ ಸೇರೊದ್ದು, ಎಡಗಾಲನ್ನೇ ಮನೆಯೊಳಗಿಟ್ಟ ರುಕ್ಮಿಣಿಯ ನಡೆ ಚಾರು ಸಂಶಯಕ್ಕೆ ಕಾರಣವಾಗಿದೆ. ಇದನ್ನೇ ಚಾರು, ರಾಮಾಚಾರಿ ಬಳಿ ಹೇಳಿದಾಗ, ಆತ ಮಾತ್ರ ಇದು ನಿನ್ನ ಭ್ರಮೆ ಇರಬಹುದು, ಯಾರಾದ್ರೂ ಎಡಗಾಲಿಟ್ಟು ಯಾಕೆ ಮನೆಯೊಳಗೆ ಬರುತ್ತಾರೆ, ಸಾಧ್ಯವೇ ಇಲ್ಲ ಎನ್ನುತ್ತಾ, ಚಾರುವಿನ ಗೊಂದಲವನ್ನು ದೂರ ಮಾಡಿ, ಪೂಜೆಗೆ ಕರೆದುಕೊಂಡು ಹೋಗುತ್ತಾನೆ.
ರಾಮಾಚಾರಿ ಧಾರಾವಾಹಿಗೆ ಗುಡ್ ಬೈ ಹೇಳಿದ ಕಿಟ್ಟಿಯ ರುಕ್ಮಿಣಿ…. ದೇವಿಕಾ ಭಟ್ ಭಾವುಕ ಪೋಸ್ಟ್ ವೈರಲ್!
ಮನೆಯಲ್ಲಿ ಇಷ್ಟೆಲ್ಲಾ ನಡೆಯುತ್ತಿರಬೇಕಾದ್ರೆ, ಪಾಪ ಕೆಲಸಗಳನ್ನು ಮಾಡಿ ಜೈಲು ಸೇರಿರುವ ವೈಶಾಖ, ಇಷ್ಟು ದಿನ ನೀವು ಟ್ರೈಲರ್ ನೋಡಿದ್ದು, ಇನ್ನು ಮುಂದೆ ನೀವು ಸಿನಿಮಾನೆ ನೋಡ್ತಿರಾ ಎನ್ನುತ್ತಾ ಜೋರಾಗಿ ನಗುತ್ತಿದ್ದಾಳೆ. ಅಂದ್ರೆ ಇದರ ಅರ್ಥ ಏನು? ರುಕ್ಮಿಣಿ ಎಡಕಾಲಲ್ಲಿ ಸೇರೊದ್ದು ಬರೋದಕ್ಕೂ, ವೈಶಾಖ ಅಟ್ಟಹಾಸ ಮಾಡೋದಕ್ಕೂ ಖಂಡಿತಾ ಸಂಬಂಧ ಇರಬಹುದು. ರುಕ್ಮಿಣಿಯನ್ನು ಆ ಮನೆಗೆ ಸೇರುವಂತೆ ಮಾಡಿದ್ದೇ ವೈಶಾಖ ಎನ್ನುವಂತೆ ತೋರುತ್ತಿದೆ. ಯಾವುದಕ್ಕೂ ಇನ್ನು ಸೀರಿಯಲ್ ನೋಡಿದ್ರೆ ಕಥೆ ಏನು ಅಂತ ತಿಳಿಯಬಹುದು.
ಇನ್ನು ರಾಮಾಚಾರಿ ಧಾರಾವಾಹಿಯಲ್ಲಿ (Ramachari Serial) ಇಲ್ಲಿವರೆಗೂ ರುಕ್ಮಿಣಿ ಪಾತ್ರದಲ್ಲಿ ಮುದ್ದು ಮುಖದ ಹುಡುಗಿ ದೇವಿಕಾ ಭಟ್ (Devika Bhat) ಅಭಿನಯಿಸುತ್ತಿದ್ದರು. ಇವರ ಪಾತ್ರವನ್ನು ಜನ ಇಷ್ಟ ಪಟ್ಟಿದ್ದರು. ಮದುವೆಯ ಸೀನ್ ಕಳೆದು, ಮನೆ ತುಂಬಿಸುವ ಸಂದರ್ಭದಲ್ಲಿ ಪಾತ್ರಧಾರಿ ಹಾಗೂ ಪಾತ್ರ ಎರಡು ಬದಲಾಗಿದೆ. ದೇವಿಕಾ ಭಟ್ ಸೀರಿಯಲ್ ಗೆ ಗುಡ್ ಬೈ ಹೇಳಿದ್ದು, ಅವರ ಜಾಗಕ್ಕೆ ವಿದ್ಯಾ ರಾಜ್ (Vidya Raj) ಆಗಮಿಸಿದ್ದಾರೆ. ಪಾಸಿಟಿವ್ ಆಗಿದ್ದ ರುಕ್ಮಿಣಿ ಪಾತ್ರವನ್ನು ನೆಗೆಟೀವ್ ಆಗಿ ಮಾಡಿರೋದಕ್ಕಾಗಿಯೇ ದೇವಿಕಾ ಭಟ್ ಸೀರಿಯಲ್ ನಿಂದ ಹೊರ ನಡೆದಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಅಥವಾ ವಿಲನ್ ಪಾತ್ರಕ್ಕೆ ದೇವಿಕಾ ಸೂಟ್ ಆಗೋದಿಲ್ಲ ಅಂತಾನೂ ಆಕೆಯ ಪಾತ್ರ ಬದಲಾಯಿಸಿರುವ ಸಾಧ್ಯತೆ ಇದೆ. ಒಟ್ಟಲ್ಲಿ ಹೊಸ ಪಾತ್ರ ಮಾತ್ರ ವೀಕ್ಷಕರಿಗೆ ಇಷ್ಟವಾಗಿಲ್ಲ.
ರಾಮಾಚಾರಿಗೆ ಚಾರು ಇದ್ದಂತೆ ಕಿಟ್ಟಿಗೊಬ್ಬಳು ರುಕ್ಮಿಣಿ!... ಈ ಸುಂದರಿ ರಿಯಲ್ ಲೈಫಲ್ಲಿ ಸಖತ್ ಬೋಲ್ಡ್ & ಬ್ಯೂಟಿಫುಲ್