ರಾಮಾಚಾರಿ ಧಾರಾವಾಹಿಗೆ ಗುಡ್ ಬೈ ಹೇಳಿದ ಕಿಟ್ಟಿಯ ರುಕ್ಮಿಣಿ…. ದೇವಿಕಾ ಭಟ್ ಭಾವುಕ ಪೋಸ್ಟ್ ವೈರಲ್!
ರಾಮಾಚಾರಿ ಧಾರಾವಾಹಿಯಲ್ಲಿ ರುಕ್ಕು ಆಗಿ ಎಂಟ್ರಿ ಕೊಟ್ಟು , ಕೃಷ್ಣನ ಮನದರಸಿಯಾದ ದೇವಿಕಾ ಭಟ್ ಇದೀಗ ತಮ್ಮ ಪಾತ್ರಕ್ಕೆ ಗುಡ್ ಬೈ ಹೇಳಿದ್ದಾರೆ.
ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುವ ರಾಮಾಚಾರಿ ಧಾರಾವಾಹಿಯಲ್ಲಿ ಮೊದಲಿಗೆ ರಾಮಾಚಾರಿಯ ಸಹೋದರ ಕಿಟ್ಟಿ ಆಲಿಯಾಸ್ ಕೃಷ್ಣನ ಪಾತ್ರದ ಎಂಟ್ರಿಯಾಗಿದ್ದು, ಆದಾದ ನಂತರ ಕೃಷ್ಣನನ್ನ ಪ್ರೀತಿಸುವ ಕೃಷ್ಣನಿಗೆ ಶಬರಿಯಂತೆ ಕಾಯುತ್ತಿರುವ ರುಕ್ಕು ಎಂಟ್ರಿ ಕೊಟ್ಟಾಗಿತ್ತು. ರುಕ್ಕು ಅಂದ್ರೆ ರುಕ್ಮಿಣಿ ಪಾತ್ರವನ್ನು ಜನ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು.
ಇಲ್ಲಿವರೆಗೂ ಸೀರಿಯಲ್ ನಲ್ಲಿ ಏನೇನು ಆಯ್ತು ಅನ್ನೋದನ್ನ ನೀವೇ ನೋಡಿದ್ದೀರಿ. ರುಕ್ಮಿಣಿಯನ್ನು ಕೃಷ್ಣ ಇಷ್ಟಪಡುತ್ತಿರೋದು ಗೊತ್ತಾಗಿ, ರುಕ್ಮಿಣಿಯನ್ನು ಅಲ್ಲಿಂದ ಕರೆಸಿಕೊಳ್ಳೋಕೆ ಚಾರು ಆಕೆಯ ಊರಿಗೆ ಹೋಗ್ತಾಳೆ, ನಂತ್ರ ಚಾರು ಮನೆಯವರೆಲ್ಲಾ ಒಬ್ಬೊಬ್ಬರಾಗಿ ಬಂದು ರುಕ್ಮಿಣಿ ಮನೆಗೆ ಸೇರಿಕೊಂಡು, ಕೊನೆಗೆ ಹರಸಾಹಸ ಮಾಡಿ, ರುಕ್ಕುನ ಆ ಮನೆಯಿಂದ ಹೊರ ಕರೆದುಕೊಂಡು ಬಂದಾಗಿದೆ.
ಸದ್ಯ ತೋರಿಸುತ್ತಿರುವ ಧಾರಾವಾಹಿಯ ಪ್ರೊಮೋದಂತೆ ರುಕ್ಮಿಣಿ ಮತ್ತು ಕೃಷ್ಣನ (Rukmini and Krishna) ಮದುವೆಗೆ ಎಲ್ಲಾ ರೀತಿಯ ತಯಾರಿ ನಡೆಯುತ್ತಿದೆ. ಇತ್ತ ನಾರಾಯಣ ಆಚಾರ್ಯರಿಗೆ ಮುಂದೆ ಏನೋ ಕೆಟ್ಟದಾಗುತ್ತೆ, ಕೃಷ್ಣನ ಜಾತಕದಲ್ಲಿ ಕೆಟ್ತ ಘಟನೆಗಳು ನಡೆಯುವ ಸೂಚನೆ ಇದೆ ಎಂದು ತಿಳಿದು, ತುಂಬಾನೆ ಚಿಂತೆಯಲ್ಲಿದ್ದಾರೆ. ಮದುವೆ ಆಗುತ್ತೋ? ಇಲ್ವೋ? ಮುಂದೆ ಏನಾಗುತ್ತೆ ಎನ್ನುವ ಕುತೂಹಲ ಸೀರಿಯಲ್ ವೀಕ್ಷಕರ ಮನದಲ್ಲಿ ಮೂಡಿದೆ.
ಇದೆಲ್ಲದರ ನಡುವೆ ಇದೀಗ ರುಕ್ಮಿಣಿ ಪಾತ್ರದ ಮೂಲಕ ಗಮನ ಸೆಳೆದ ನಟಿ ದೇವಿಕಾ ಭಟ್ (Devika Bhatt) ಸೋಶಿಯಲ್ ಮೀಡಿಯಾ ಪೋಸ್ಟ್ ಸದ್ದು ಮಾಡುತ್ತಿದೆ. ಈ ಪೋಸ್ಟ್ ನಲ್ಲಿ ನಟಿ ತಮ್ಮ ಪಾತ್ರಕ್ಕೆ ಗುಡ್ ಬೈ ಹೇಳುತ್ತಿರುವುದಾಗಿ ತಿಳಿಸಿದ್ದಾರೆ. ಅಂದ್ರೆ ದೇವಿಕಾ ಸೀರಿಯಲ್ ನಿಂದ ಹೊರ ನಡೆಯುತ್ತಿದ್ದಾರೆ. ಆದರೆ ಇವರು ಸೀರಿಯಲ್ ಅರ್ಧಕ್ಕೆ ಬಿಡುತ್ತಿದ್ದಾರೆಯೇ? ಅಥವಾ ಸೀರಿಯಲ್ ನಲ್ಲಿ ಪಾತ್ರವೇ ಮುಕ್ತಾಯವಾಗುತ್ತಾ ಅನ್ನೋದು ಗೊತ್ತಾಗಿಲ್ಲ.
ಅಷ್ಟಕ್ಕೂ ನಟಿ ತಮ್ಮ ಇನ್’ಸ್ಟಾಗ್ರಾಂ ಖಾತೆಯಲ್ಲಿ (Instagram Account)ಸೀರಿಯಲ್ ನಲ್ಲಿ ನಡೆದ ಮದುವೆಯ ಒಂದಷ್ಟು ಫೋಟೊಗಳನ್ನು ಶೇರ್ ಮಾಡಿ. ರಾಮಾಚಾರಿ ಧಾರಾವಾಹಿಯಲ್ಲಿ ರುಕ್ಮಿಣಿ ಪಾತ್ರಕ್ಕೆ ಗುಡ್ ಬೈ ಹೇಳುವ ಸಮಯ ಈಗ ಬಂದಿದೆ. ಈ ಪ್ರಯಾಣವು ಮ್ಯಾಜಿಕ್ ನಂತೆ ಇತ್ತು, ಮತ್ತು ಇದೆಲ್ಲವೂ ನಿಮ್ಮ ಅಚಲ ಪ್ರೀತಿ ಮತ್ತು ಬೆಂಬಲದಿಂದಾಗಿ ಆಗಿದೆ. ರುಕ್ಮಿಣಿಯನ್ನು ತೆರೆದ ಹೃದಯದಿಂದ ಅಪ್ಪಿಕೊಂಡಿದ್ದಕ್ಕಾಗಿ ಮತ್ತು ಅವಳನ್ನು ನಿಮ್ಮ ಜೀವನದ ಭಾಗವಾಗಿಸಿದ್ದಕ್ಕಾಗಿ ಧನ್ಯವಾದಗಳು.
ನಾನು ಮುಂದುವರಿಯುತ್ತಿದ್ದಂತೆ, ಸುಂದರವಾದ ನೆನಪುಗಳು, ಪಾಠಗಳು ಮತ್ತು ನಿಮ್ಮ ಆಶೀರ್ವಾದಗಳನ್ನು ನನ್ನೊಂದಿಗೆ ಕೊಂಡೊಯ್ಯುತ್ತೇನೆ. ಇದು ವಿದಾಯವಲ್ಲ- ಇದು ಹೊಸ ಆರಂಭದ ಕಡೆಗೆ ಒಂದು ಹೆಜ್ಜೆಯಾಗಿದೆ. ನಿಮ್ಮ ಪ್ರೋತ್ಸಾಹವು ನನಗೆ ಜಗತ್ತನ್ನು ಅರ್ಥೈಸುತ್ತದೆ, ಮತ್ತು ಹೊಸ ಮತ್ತು ರೋಮಾಂಚಕ ರೀತಿಯಲ್ಲಿ ನಿಮ್ಮನ್ನು ರಂಜಿಸೋದನ್ನು ಮುಂದುವರೆಸಲಿದ್ದೇನೆ, ನಿಮ್ಮ ಆಶೀರ್ವಾದ ಯಾವಾಗಲೂ ಇರಲಿ. ಫಾರೆವರ್ ಗ್ರೇಟ್ ಫುಲ್. ಜೊತೆಗೆ ನನ್ನ ಫ್ಯಾನ್ ಪೇಜ್ ಗೆ ಸ್ಪೆಷಲ್ ಥ್ಯಾಂಕ್ಸ್ ಎಂದಿದ್ದಾರೆ.