Asianet Suvarna News Asianet Suvarna News

ರಿಪೋರ್ಟ್‌ ಮಾಡಿ ಅಕೌಂಟ್ ಬ್ಲಾಕ್ ಆಗುತ್ತೆ; ಡ್ರೋನ್‌ ಪ್ರತಾಪ್‌ಗೆ ಮೆಸೇಜ್ ಮಾಡಿದ Dr. ಬ್ರೋ!

 ಏನೇ ಇರಲಿ ಕಷ್ಟ ಅಂತ ಬಂದಾಗ ಕೈ ಹಿಡಿಯುತ್ತಾರೆ ಡಾ.ಬ್ರೋ. ಇದಕ್ಕೆ ಸಾಕ್ಷಿಯಾಯ್ತು ಪ್ರತಾಪ್‌ಗೆ ಹಾಕಿರುವ ಮೆಸೇಜ್. ನೆಟ್ಟಿಗರು ಫುಲ್ ಖುಷ್. 

Report fake pages account will get deleted suggestion from Dr Bro to bigg boss Drone Prathap vcs
Author
First Published Feb 5, 2024, 2:51 PM IST

ಬಿಗ್ ಬಾಸ್‌ ಸೀಸನ್ 10ರಲ್ಲಿ ಡ್ರೋನ್ ಪ್ರತಾಪ್‌ ಸ್ಪರ್ಧಿಸಿ ಎರಡನೇ ಸ್ಥಾನ ಪಡೆದುಕೊಂಡರು. 10 ಲಕ್ಷ ರೂಪಾಯಿ ಜೊತೆ ಎಲೆಕ್ಟ್ರಿಕ್‌ ಗಾಡಿ ಕೂಡ ಪಡೆದುಕೊಂಡರು. ಈ ಹಿಂದೆ ನೀಡಿದ ಭಾಷಗಳಿಂದ ಡ್ರೋನ್ ಪ್ರತಾಪ್ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದರು. ಮುಗ್ಧ ಮನಸ್ಸಿನಿಂದ ಪ್ರತಿಯೊಬ್ಬರ ಪ್ರೀತಿ ಪಡೆದು ಕಳಂಕದಿಂದ ದೂರ ಆಗಿಬಿಟ್ಟಿದ್ದಾ. ಈ ಸಮದಯಲ್ಲೂ ಪ್ರತಾಪ್‌ ಬಗ್ಗೆ ಪಾಸಿಟಿವ್ ಮಾತನಾಡುವವರ ನಡುವೆ ನೆಗೆಟಿವ್ ಮಾತನಾಡುವವರೂ ಇದ್ದಾರೆ. ಆದರೆ ಡಾ.ಬ್ರೋ ಮಾತ್ರ ಪ್ರತಾಪ್ ಸಪೋರ್ಟ್‌ಗೆ ನಿಂತಿದ್ದಾರೆ. 

ಬಿಗ್ ಬಾಸ್ ಮನೆಯಲ್ಲಿ ಪ್ರತಾಪ್ ಏನೂ ಗೆದ್ದಿಲ್ಲ, ಆಟ ಆಡಿದ್ದು ಅಷ್ಟಕ್ಕೆ ಅಷ್ಟೆ ಆದರೂ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ ಅಂದ್ರೆ ಹಣ ಕೊಟ್ಟು ಪ್ರಚಾರ ಪಡೆದುಕೊಂಡಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿತ್ತು. ಇದಕ್ಕೆ ಸ್ಪಷ್ಟನೆ ನೀಡಬೇಕು ಎಂದು ಪ್ರತಾಪ್ ಅಕೌಂಟ್ ಮ್ಯಾನೇಜ್ ಮಾಡುತ್ತಿದ್ದ ಸ್ನೇಹಿತ ಒಂದು ಪೋಸ್ಟ್‌ ಹಾಕುತ್ತಾರೆ. ಇದಕ್ಕೆ ಡಾ.ಬ್ರೋ ಪ್ರತಿಕ್ರಿಯೆ ನೀಡುತ್ತಾರೆ. 'ವೃಯಕ್ತಿಕವಾಗಿ ನನಗೂ ಅವರಿಗೂ ಪರಿಚಯನೇ ಇಲ್ಲ. ನನಗೆ ಅವರು ಯಾರು ಅಂತ ಗೊತ್ತಿಲ್ಲ. ಅವರಿಗೆ ನಾನು ಯಾರು ಅಂತ ಗೊತ್ತಿದೆ ಗೊತ್ತಿಲ್ಲ ಏನೂ ಗೊತ್ತಿಲ್ಲ. ಆದರೆ ನಾನು ಬಿಗ್ ಬಾಸ್ ಮನೆಯಲ್ಲಿದ್ದಾಗ ಮೆಸೇಜ್ ಮಾಡಿದ್ದಾರೆ. ನಾವು ಯಾರಿಗೂ ಹಣ ಕೊಟ್ಟು ಪ್ರಚಾರ ಪಡೆಯುತ್ತಿಲ್ಲ ಅಂತ ನನ್ನ ಟೀಂನವರು ಪೋಸ್ಟ್‌ ಮಾಡಿದ್ದರು ಅದಕ್ಕೆ ಡಾ.ಬ್ರೋ ಮೆಸೇಜ್ ಮಾಡಿದ್ದಾರೆ. ಫೇಕ್‌ ನ್ಯೂಸ್‌  ಮಾಡುತ್ತಿರುವ ಅಕೌಂಟ್‌ಗಳನ್ನು ರಿಪೋರ್ಟ್‌ ಮಾಡಿ ಬ್ರೋ ಅಕೌಂಟ್‌ಗಳು ಕ್ಲೋಸ್ ಆಗುತ್ತದೆ ಎಂದು ಮೆಸೇಜ್ ಮಾಡಿದ್ದಾರೆ. ಅನೇಕರು ಈ ಸಮಯದಲ್ಲಿ ನನ್ನ ಮೇಲೆ ಪ್ರೀತಿ ತೋರಿಸಿದ್ದಾರೆ' ಎಂದು ಖಾಸಗಿ ಸಂದರ್ಶನದಲ್ಲಿ ಡ್ರೋನ್ ಪ್ರತಾಪ್ ಹೇಳಿದ್ದಾರೆ. 

ನಾನು ಎಮೋಷನಲ್‌, ಕಣ್ಣೀರಿಟ್ಟಿದ್ದೀನಿ ಯಾಕೆ ತೋರಿಸಿಲ್ಲ; ಪ್ರತಾಪ್- ಕಿಚ್ಚ ಸುದೀಪ್‌ಗೆ ಇಶಾನಿ ಕ್ಷಮೆ?

ಬಿಗ್ ಬಾಸ್‌ನಿಂದ ಬಂದ ಹಣವನ್ನು ದಾನ ಮಾಡುತ್ತೀನಿ ಹಾಗೂ ಎಲೆಕ್ಟ್ರಿಕ್‌ ಗಾಡಿಯನ್ನು ಡೆಲಿವರಿ ಮಾಡುವ ಹುಡುಗರಿಗೆ ಕೊಡುತ್ತೀನಿ ಎಂದು ಪ್ರತಾಪ್‌ ಫಿನಾಲೆ ದಿನವೇ ಘೋಷಣೆ ಮಾಡಿದ್ದರು. ಬಿಗ್ ಬಾಸ್ ಮುಗಿಯುತ್ತಿದ್ದಂತೆ ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋನಲ್ಲಿ ಪ್ರತಾಪ್‌ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಇಷ್ಟು ದಿನ ಮಾತನಾಡುವುದಿಲ್ಲ ಕಾಮಿಡಿ ಮಾಡುವುದಿಲ್ಲ ಆದರೆ ಸಮಯಕ್ಕೆ ಸರಿಯಾಗಿ ಆಕ್ಟಿಂಗ್ ಮಾಡಿ ಸಿಂಪತಿ ಗಿಟ್ಟಿಸಿಕೊಳ್ಳುತ್ತಾನೆ ಎನ್ನುತ್ತಿದ್ದವರು ಪ್ರತಾಪ್ ಇದ್ದಕ್ಕಿ ಸೂಕ್ತ ಎನ್ನುತ್ತಾರೆ. ಅಲ್ಲದೆ ಚಾಲೆನ್‌ ಮತ್ತು ಕಿಚ್ಚ ಸುದೀಪ್ ಅವರಿಂದ ತಮ್ಮ ಜೀವನ ಚೆನ್ನಾಗಿದೆ. ಹೀಗಾಗಿ ವಾಹಿನಿ ಯಾವುದೇ ಕೆಲಸ ಹೇಳಿದರೂ ನಾನು ಮಾಡಲು ಸಿದ್ಧ. ತಂದೆ-ತಾಯಿ ನಂತರ ನನ್ನ ಜೀವನದಲ್ಲಿ ಅಮೂಲ್ಯವಾದ ಸ್ಥಾನ ಪಡೆದುಕೊಂಡಿರುವುದು ಬಿಗ್ ಬಾಸ್ ಎನ್ನುತ್ತಾರೆ ಪ್ರತಾಪ್. 

Follow Us:
Download App:
  • android
  • ios