Asianet Suvarna News Asianet Suvarna News

ನಾನು ಎಮೋಷನಲ್‌, ಕಣ್ಣೀರಿಟ್ಟಿದ್ದೀನಿ ಯಾಕೆ ತೋರಿಸಿಲ್ಲ; ಪ್ರತಾಪ್- ಕಿಚ್ಚ ಸುದೀಪ್‌ಗೆ ಇಶಾನಿ ಕ್ಷಮೆ?

ಕಾಗೆ ಕಕ್ಕ ಪದ ಬಳಸಿದ್ದಕ್ಕೆ ಇಶಾನಿ ವಿರುದ್ಧ ಆಕ್ರೋಶ. ಕನ್ನಡವನ್ನು ಸರಿಯಾಗಿ ಕಲಿಯುತ್ತೀನಿ ಎಂದು ರ್ಯಾಪರ್. 

Colors Kannada Bigg Boss Eshani talks about Drone Prathap and Kiccha Sudeep vcs
Author
First Published Jan 23, 2024, 11:56 AM IST

ಕಲರ್ಸ್‌ ಕನ್ನಡ ಬಿಗ್ ಬಾಸ್ ಸೀಸನ್ 10 ಫಿನಾಲೆ ವಾರ ಆರಂಭವಾಗಿದೆ. ಹೀಗಾಗಿ ಎಲಿಮಿನೇಟ್ ಆಗಿರುವ ಸ್ಪರ್ಧಿಗಳು ಸರ್ಪ್ರೈಸ್ ಎಂಟ್ರಿ ಕೊಟ್ಟು ಫಿನಾಲೆ ಸ್ಪರ್ಧಿಗಳ ಜೊತೆ ಮಾತನಾಡಿದ್ದರು. ಈ ವೇಳೆ ಡ್ರೋನ್ ಪ್ರತಾಪ್‌ ಕಾಗೆ ಕಕ್ಕ ಎಂದು ಇಶಾನಿ ನೀಡಿದ ಹೇಳಿಕೆ ವೈರಲ್ ಆಗಿತ್ತು. ವೀಕೆಂಡ್ ಚರ್ಚೆಯಲ್ಲಿ ಕಿಚ್ಚ ಸುದೀಪ್ ಕೂಡ ಉತ್ತರ ಕೊಟ್ಟರು. ಇಶಾನಿ ವಿರುದ್ಧ ಗರಂ ಆಗಿದ್ದರು. ಇದರ ಬಗ್ಗೆ ಇಶಾನಿ ರಿಯಾಕ್ಟ್ ಮಾಡಿದ್ದಾರೆ. 

'ಕಾಂಟ್ರವರ್ಸಿಗಳ ಬಗ್ಗೆ ಬೇಸರವಿದೆ. ಕಾಂಟ್ರವರ್ಸಿ ಕ್ರಿಯೇಟ್ ಮಾಡಿಕೊಳ್ಳಲು ನಾನು ಬಿಗ್ ಬಾಸ್ ಮನೆಯೋಳಗೆ ಮತ್ತೆ ಹೋಗಿಲ್ಲ.  ನಾನು ಕನ್ನಡ ಕಲಿಯುತ್ತಿರುವೆ ಹೀಗಾಗಿ ನಾನು ಹೇಳುತ್ತಿರುವ ನಿಜವಾದ ಅರ್ಥ ಬೇರೆ ಇರನೇ ಇತ್ತು. ನಾನು ಏನೇ ಮಾತನಾಡಲು ಪ್ರಯತ್ನ ಪಟ್ಟರು ತಪ್ಪಾಗಿ ಅರ್ಥಾವಾಗುತ್ತಿತ್ತು.  ಯಾರ ಮೇಲೆ ನನಗೆ ಕೋಪನೂ ಇಲ್ಲ. ಗೇಮ್ ಶೋ ಅಂದ್ಮೇಲೆ ಈ ರೀತಿ ಚರ್ಚೆಗಳು ನಡೆಯುತ್ತದೆ. ನಾನು ಮಾತನಾಡುವ ರೀತಿ ಸರಿಯಾಗಿಲ್ಲ ಅನಿಸುತ್ತದೆ. ನನಗೆ ಯಾವುದೇ ರೀತಿ ಆಟಿಡ್ಯೂಟ್ ಇಲ್ಲ ನಾನು ಸಿಂಪಲ್ ಹುಡುಗಿ. ನಮ್ಮ ಚಾಮುಂಡೇಶ್ವರಿ ದೇವಸ್ಥಾನವಿದೆ ಅಲ್ಲಿ ಅನ್ನದಾನ ಮಾಡುತ್ತೀನಿ, ಹಸು ಅಂದ್ರೆ ಇಷ್ಟ ಶ್ರಮಗಳಲ್ಲಿ ಸಮಯ ಕಳೆಯುತ್ತೀನಿ. ನನ್ನ ಮೈಂಡ್‌ ಸೆಟ್‌ ಬೇರೆ...ಸಣ್ಣ ಪುಟ್ಟ ವಿಚಾರಗಳು ಇಷ್ಟವಾಗುತ್ತದೆ. ನನ್ನ ಬಗ್ಗೆ ಹೇಗೆ ಹೇಳಬೇಕು ಗೊತ್ತಿಲ್ಲ. ನಾನು ಇಂಗ್ಲಿಷ್‌ನಲ್ಲಿ ಏನೇ ಹೇಳಬೇಕಿದ್ದರೂ ಸ್ಪಷ್ಟವಾಗಿ ಹೇಳಬಹುದು ಆದರೆ ಕನ್ನಡದಲ್ಲಿ ಚೆನ್ನಾಗಿ ಕಲಿತು ಮಾತನಾಡಬೇಕು' ಎಂದು ಕನ್ನಡ ಖಾಸಗಿ ಟಿವಿ ಸಂದರ್ಶನಲ್ಲಿ ಇಶಾನಿ ಮಾತನಾಡಿದ್ದಾರೆ. 

'ಯಾಕೆ ನನ್ನ ಮೇಲೆ ಇಷ್ಟೋಂದು ಕಾಂಟ್ರವರ್ಸಿ ಆಗುತ್ತಿದೆ ಗೊತ್ತಾಗುತ್ತಿಲ್ಲ. ಕನ್ನಡ ಕಲಿಯಬೇಕು ಅನ್ನೋ ಆಸೆ ತುಂಬಾ ಇದೆ. ಯಾವ ರೀತಿ ಮಾತನಾಡಬೇಕು ಯಾವ ಪದ ಬಳಸಬೇಕು ಬಳಸಬಾರದು ಅಂತ ತಿಳಿದುಕೊಳ್ಳಬೇಕು ಅನ್ನೋ ಆಸೆ ಇದೆ. ನಾನು ಯಾವುದೂ ಟ್ರೋಲ್ ಮತ್ತು ಮೀಮ್ಸ್‌ಗಳನ್ನು ನೋಡಿಲ್ಲ, ಬೇರೆ ಸ್ಪರ್ಧಿಗಳ ಬಗ್ಗೆ ಸಾಕಷ್ಟು ನೀಡಿದ್ದೀನಿ. ಆದರೆ ನನ್ನ ಬಗ್ಗೆ ಎಲ್ಲಿಯೂ ಕಾಣಿಸಿಲ್ಲ. ಮನೆಯಲ್ಲಿ ಇದ್ದಾಗ ಹೊರ ಬಂದ ಮೇಲೆ ಅಲ್ಲದೆ ಟಿವಿಯಲ್ಲಿ ನೋಡಿದ ಮೇಲೆ ನಾನು ಅದನ್ನು ಹೇಳಿರುವುದು' ಎಂದು ಇಶಾನಿ ಹೇಳಿದ್ದಾರೆ. 

'ನಾನು ಬಿಗ್ ಬಾಸ್ ಮನೆಯಲ್ಲಿ ಸಿಂಪತಿ ಕಾರ್ಡ್ ಪ್ಲೇ ಮಾಡಿಲ್ಲ. ನಾನು ಜಾಸ್ತಿ ಎಮೋಷನಲ್‌ ಆಗಿದ್ದೆ ಆದರೆ ಅದು ವೀಕ್‌ನೆಸ್‌ ಅಲ್ಲ ನನ್ನ ಶಕ್ತಿಯಾಗಿತ್ತು. ಈಗ ಸಿಂಪತಿ ಕಾರ್ಡ್‌ ಅಂತ ಹೇಳುವುದಿಲ್ಲ. ನಾನು ಬೇಸರ ಮಾಡಿಕೊಂಡಾಗ ಅಥವಾ ಕಣ್ಣೀರು ಇಟ್ಟಾಗ ಯಾಕೆ ನನಗೆ ಸರಿಯಾಗಿ ಸಪೋರ್ಟ್‌ ಸಿಕ್ಕಿಲ್ಲ...ಬೇರೆ ಸ್ಪರ್ಧಿಗಳಿಗೆ ಒಳ್ಳೆ ಸಪೋರ್ಟ್‌ ಸಿಕ್ಕಿದೆ ಆದರೆ ನನಗೆ ಅಲ್ಲಿ ಸಿಕ್ಕಿಲ್ಲ. ಸಿಂಪತಿ ಕಾರ್ಡ್‌ ಅಲ್ಲ ಎಮೋಷನಲ್‌ ಆಗುವುದು ಅಥವಾ ಕಣ್ಣೀರು ಇಡುವುದು ನನ್ನ ನಿಜ ಗುಣ ಆದರೆ ಬೇರೆ ಅವರು ಮಾತ್ರ ಪ್ರಾಮಾಣಿಕವಾಗಿದ್ದರು ಆದರೆ ನಾನು ಬೇಸರ ಮಾಡಿಕೊಂಡರೆ ನೆಗೆಟಿವ್ ಆಗಿ ಅಂದುಕೊಳ್ಳುತ್ತಾರೆ. ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಳ್ಳಲು ಲವ್ ಕ್ರಿಯೇಟ್ ಮಾಡಿಲ್ಲ, ನಾನು ಪ್ರಾಮಾಣಿಕ ಭಾವನೆ ತೋರಿಸಿದೆ ಮೈಕಲ್ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಈ ಪ್ರೀತಿ ವಿಚಾರದಿಂದ ನಾನು ಕೊಂಚ ಕುಗ್ಗಿದೆ' ಎಂದಿದ್ದಾರೆ ಇಶಾನಿ . 

Follow Us:
Download App:
  • android
  • ios