ಸೀತಾರಾಮ ಸೀರಿಯಲ್​ಗೆ ರವಿಚಂದ್ರನ್​ ಎಂಟ್ರಿ ಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಸಿಹಿಯೊಂದು ಮನವಿ ಮಾಡಿಕೊಂಡಿದ್ದಾಳೆ. ಏನದು ನೋಡಿ... 

ಸಿಹಿ ಎಂದರೆ ಸಾಕು ಸೀರಿಯಲ್​ ಪ್ರಿಯರ ಕಣ್ಣ ಮುಂದೆ ಬರುವುದು ಸೀತಾರಾಮ ಧಾರಾವಾಹಿಯ ಪುಟಾಣಿ. ಮುದ್ದು ಮುದ್ದು ಮಾತುಗಳಿಂದ ಪಟಪಟ ಎನ್ನುತ್ತ ಎಲ್ಲರನ್ನೂ ಮರಳುಮಾಡುವ ಸೀತಾರಾಮ ಸೀರಿಯಲ್​ ಸಿಹಿ ನಿನ್ನೆ ಅಂದರೆ ಜನವರಿ 26ರಂದು ಹುಟ್ಟುಹಬ್ಬ ಆಚರಸಿಕೊಂಡಿದ್ದಾರೆ. ಈಕೆಯ ನಿಜವಾದ ಹೆಸರು ರಿತು ಸಿಂಗ್​. ಡ್ರಾಮಾ ಜ್ಯೂನಿಯರ್ಸ್ ಸೀಸನ್ 4 ಶೋ ಮೂಲಕ ಕಿರುತೆರೆ ಜನರಿಗೆ ಪರಿಚಿತರಾದ ರಿತು ಸಿಂಗ್ ಕ್ರೇಜಿಸ್ಟಾರ್​ ರವಿಚಂದ್ರನ್ ಅವರ ಫೇವರೆಟ್​ ನಟಿ. ಡ್ರಾಮಾ ಜ್ಯೂನಿಯರ್ಸ್ ಶೋನಲ್ಲಿ ಮುದ್ದು ಮುದ್ದಾಗಿ ಮಾತನಾಡುತ್ತ, ಸದಾ ರವಿಚಂದ್ರನ್ ಗರ್ಲ್‌ಫ್ರೆಂಡ್ ನಾನು ಎಂದು ಹೇಳುತ್ತಿದ್ದ ಈ ಪುಟ್ಟ ಪೋರಿ ಈಗ ಸೀರಿಯಲ್‌ನ ಕೇಂದ್ರ ಬಿಂದು ಆಗಿದ್ದಾಳೆ. ಐದು ವರ್ಷದ ಪೋರಿ ನಟನೆಗೆ, ಮುದ್ದು ಮುದ್ದಾದ ಮಾತಿಗೆ ವೀಕ್ಷಕರು ಮನ ಸೋತಿದ್ದಾರೆ. ನೇಪಾಳ ಮೂಲದ ಪುಟಾಣಿ ಈಗ ಕನ್ನಡಿಗರ ಕಣ್ಮಣಿ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದೀಗ ಈ ಪುಟಾಣಿ ಸೀತಾರಾಮ ಸೀರಿಯಲ್​ ಪ್ರಿಯರಲ್ಲಿ ಒಂದು ಮನವಿ ಮಾಡಿಕೊಂಡಿದ್ದಾಳೆ. ಅಷ್ಟಕ್ಕೂ ಅದೇನು ಆಕೆಯ ಪರ್ಸನಲ್​ ಲೈಫ್​ ಮನವಿಯಲ್ಲ. ಬದಲಿಗೆ ಸೀತಾರಾಮ ಸೀರಿಯಲ್​ ಮನವಿ. ಇದೀಗ ಅವಳ ಸ್ಕೂಲ್​ಡೇ ಫಂಕ್ಷನ್​ ಇದೆ. ಅದಕ್ಕೆ ಆಕೆ ತನ್ನ ಫ್ರೆಂಡ್​ ರಾಮ್​ ಬರುತ್ತಾನೆ ಎಂದು ಕಾಯುತ್ತಿದ್ದಾಳೆ. ಅದೇ ಇನ್ನೊಂದೆಡೆ ಸೀತಾ ಮತ್ತು ರಾಮರ ನಡುವೆ ಬಿರುಕು ಹೆಚ್ಚುತ್ತಲೇ ಸಾಗಿದೆ. ತಾನು ಶ್ರೀಮಂತ ಎಂದು ಹೇಳದೇ ಸತ್ಯ ಮುಚ್ಚಿಟ್ಟ ಬಗ್ಗೆ ಸೀತಾಳಿಗೆ ರಾಮನ ಮೇಲೆ ಕೋಪ. ಆದರೆ ರಾಮನಿಗೋ ಸೀತಾಳ ಮೇಲೆ ಲವ್​ ಶುರುವಾಗಿದೆ. ಅಮ್ಮ ರಾಮನ ಮೇಲೆ ಕೋಪ ಮಾಡಿಕೊಂಡರೂ ಪುಟಾಣಿ ಸಿಹಿಗೆ ರಾಮ್​ನನ್ನು ಬಿಟ್ಟು ಇರಲು ಆಗುತ್ತಿಲ್ಲ. ಆದರೆ ಅಮ್ಮನ ಕೋಪದ ಮುಂದೆ ಏನೂ ಮಾಡದ ಸ್ಥಿತಿ.

ಸಿಹಿಗಿಂದು ಹುಟ್ಟುಹಬ್ಬದ ಸಂಭ್ರಮ: ರಿಯಲ್​ ಲೈಫ್​ನಲ್ಲೂ ನೋವುಂಡ ಪುಟಾಣಿಯ ವಿಶೇಷ ವಿಡಿಯೋ ರಿಲೀಸ್​

View post on Instagram
View post on Instagram

ತನ್ನ ಸ್ಕೂಲ್​ ಡೇ ಫಂಕ್ಷನ್​ಗೆ ಬರುವಂತೆ ರಾಮ್​ಗೆ ಸೀಕ್ರೇಟ್​ ಆಗಿ ಸಿಹಿ ಪತ್ರ ಬರೆದಿದ್ದು, ಅದು ರಾಮ್​ಗೆ ತಲುಪಿದೆ. ಅದೇ ಇನ್ನೊಂದೆಡೆ ಕಾಕತಾಳೀಯ ಎನ್ನುವಂತೆ ರಾಮ್​ ಆ ಶಾಲೆಯ ಫಂಕ್ಷನ್​ಗೆ ಗೆಸ್ಟ್​ ಆಗಲು ಹೋಗುತ್ತಿದ್ದಾನೆ. ಸಿಹಿಗೆ ಇದರ ಅರಿವಿಲ್ಲ. ಆದರೆ ಇಲ್ಲೊಂದು ಟ್ವಿಸ್ಟ್​ ಎಂದರೆ ಸಿಹಿಯ ಸ್ಕೂಲ್​ ಡೇ ಫಂಕ್ಷನ್​ಗೆ ಕ್ರೇಜಿಸ್ಟಾರ್​ ರವಿಚಂದ್ರನ್​ ಬರುತ್ತಿದ್ದಾರೆ. ಆದ್ದರಿಂದ ವಿಶೇಷವಾಗಿ ಸಿಹಿ ಪ್ರೇಕ್ಷಕರಲ್ಲಿ ಒಂದು ಮನವಿ ಮಾಡಿಕೊಂಡಿದ್ದಾಳೆ. ನಿಮಗೆಲ್ಲಾ ಸರ್​ಪ್ರೈಸ್​ ಇದೆ. ರವಿಚಂದ್ರನ್​ ಸರ್​ ಅವರು ಶಾಲೆಯ ಫಂಕ್ಷನ್​ಗೆ ಗೆಸ್ಟ್​ ಆಗಿ ಬರುತ್ತಿದ್ದಾರೆ. ನನ್ನ ಫ್ರೆಂಡ್​ ರಾಮ್​ ಕೂಡ ಬಂದ್ರೆ ಚೆನ್ನಾಗಿತ್ತಲ್ವಾ ಎಂದಿರುವ ಸಿಹಿ, ನನ್ನ ಸ್ಕೂಲ್​ ಡೇ ಫಂಕ್ಷನ್​ ಅನ್ನು ತಪ್ಪದೇ ನೋಡಿ ಎಂದು ಹೇಳಿದ್ದಾಳೆ. 

ಅಂದಹಾಗೆ, ರೀತು ನೇಪಾಳದವಳು. ನೇಪಾಳ ಮೂಲದ ರಿತು ತಾಯಿ ಜೊತೆಗೆ ಬೆಂಗಳೂರಿನಲ್ಲಿ ನೆಲೆಸಿದ್ದಾಳೆ. ಸೀತಾರಾಮ ಸೀರಿಯಲ್​ಗೂ ಸಿಹಿ ಬಾಳಿಗೂ ಸಾಮ್ಯತೆ ಇದೆ. ಹೌದು. ಸೀತಾರಾಮ ಸೀರಿಯಲ್​ ರೀತಿಯಲ್ಲಿಯೇ ಈಕೆಯ ನಿಜ ಜೀವನದ ಕೂಡ ಇದೆ. ಸೀತಾರಾಮ ಸೀರಿಯಲ್​ನಲ್ಲಿ ಈಕೆಗೆ ಅಪ್ಪ ಇಲ್ಲ. ಅಮ್ಮನೇ ಸರ್ವಸ್ವ. ಅದೇ ರೀತಿ ರಿತು ರಿಯಲ್​ ಲೈಫ್​ ಸ್ಟೋರಿ ಕೂಡ. ಇದರ ಬಗ್ಗೆ ಖುದ್ದು ಅವರ ಅಮ್ಮನೇ ಹೇಳಿಕೊಂಡಿದ್ದರು. ಈಕೆಗೆ ವೇದಿಕೆಯ ಮೇಲೆ ರವಿಚಂದ್ರನ್​ ಅವರೇ ಧೈರ್ಯ ತುಂಬಿದ್ದರು, ಜೊತೆಗೆ ರಿತು ತಾಯಿಗೂ ಧೈರ್ಯ ಹೇಳಿದ್ದರು. 

View post on Instagram