MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಸಿನಿಮಾ ಸ್ಕ್ರಿಪ್ಟ್‌ನಲ್ಲೇ ಕಿಸ್ಸಿಂಗ್ ಸೀನ್ ಇರಲಿಲ್ಲ, 'ಇಂಪ್ರೊವೈಸೇಷನ್' ಹೆಸರಲ್ಲಿ ಪದೇ ಪದೇ ಚುಂಬಿಸಿದ ಸಹನಟ!

ಸಿನಿಮಾ ಸ್ಕ್ರಿಪ್ಟ್‌ನಲ್ಲೇ ಕಿಸ್ಸಿಂಗ್ ಸೀನ್ ಇರಲಿಲ್ಲ, 'ಇಂಪ್ರೊವೈಸೇಷನ್' ಹೆಸರಲ್ಲಿ ಪದೇ ಪದೇ ಚುಂಬಿಸಿದ ಸಹನಟ!

ಖ್ಯಾತ ನಟಿ ಪ್ರಿಯಾ ಬಾಪಟ್, ಸಹನಟನೊಬ್ಬ ಚಿತ್ರಕಥೆಯಲ್ಲಿಲ್ಲದಿದ್ದರೂ 'ಇಂಪ್ರೊವೈಸೇಷನ್' ನೆಪದಲ್ಲಿ ತಮಗೆ ಬಲವಂತವಾಗಿ ಚುಂಬಿಸಿ ಕಿರುಕುಳ ನೀಡಿದ್ದನ್ನು ಬಹಿರಂಗಪಡಿಸಿದ್ದಾರೆ. ಈ ಕಷ್ಟದ ಸಮಯದಲ್ಲಿ ಪತಿ ತಕ್ಷಣವೇ ಶೂಟಿಂಗ್ ಸ್ಥಳಕ್ಕೆ ಬಂದು ಬೆಂಬಲವಾಗಿ ನಿಂತಿದ್ದನ್ನು ಸ್ಮರಿಸಿದ್ದಾರೆ.

2 Min read
Author : Sathish Kumar KH
Published : Jun 07 2026, 04:35 PM IST
Share this Photo Gallery
  • FB
  • TW
  • Linkdin
  • Whatsapp
16
Image Credit : Instagram

ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮೀಟೂ (MeToo) ಅಭಿಯಾನದ ನಂತರ ಹಲವು ನಟಿಯರು ತಮಗಾದ ಕಹಿ ಅನುಭವಗಳನ್ನು ಮುಕ್ತವಾಗಿ ಹಂಚಿಕೊಳ್ಳುತ್ತಿದ್ದಾರೆ. ಇದೀಗ ಪ್ರಸಿದ್ಧ ಮರಾಠಿ ಮತ್ತು ಒಟಿಟಿ ನಟಿ ಪ್ರಿಯಾ ಬಾಪಟ್ ತಮ್ಮ ಕರಿಯರ್‌ನ ಆರಂಭದ ದಿನಗಳಲ್ಲಿ ಎದುರಿಸಿದ ಅತ್ಯಂತ ಅಲೋಸರಗೊಳಿಸುವ ಮತ್ತು ಮುಜುಗರದ ಘಟನೆಯೊಂದನ್ನು ಬಹಿರಂಗಪಡಿಸಿದ್ದಾರೆ. ಮೊದಲ ಸಿನಿಮಾದ ಶೂಟಿಂಗ್ ವೇಳೆ ಸಹನಟನೊಬ್ಬ ಚಿತ್ರಕಥೆಯಲ್ಲೇ ಇಲ್ಲದಿದ್ದರೂ 'ಇಂಪ್ರೊವೈಸೇಷನ್' ಹೆಸರಿನಲ್ಲಿ ತಮಗೆ ಪದೇ ಪದೇ ಬಲವಂತವಾಗಿ ಚುಂಬಿಸಿದ್ದಾಗಿ ನಟಿ ಆಕ್ರೋಶ ಹೊರಹಾಕಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
Image Credit : Instagram

ಚಿತ್ರಕಥೆಯಲ್ಲೇ ಇರದ ಚುಂಬನ ದೃಶ್ಯ:

ಫಿಲ್ಮ್‌ಫೇರ್‌ಗೆ ನೀಡಿರುವ ಸಂದರ್ಶನದಲ್ಲಿ ಈ ಕಹಿ ಘಟನೆಯನ್ನು ನೆನೆದಿರುವ ಪ್ರಿಯಾ ಬಾಪಟ್, ಅದೊಂದು ಹಾಡಿನ ಚಿತ್ರೀಕರಣದ ವೇಳೆ ನಡೆದ ಪ್ರಸಂಗ ಎಂದು ವಿವರಿಸಿದ್ದಾರೆ. 'ಸಿನಿಮಾದ ಹಾಡಿನ ಶೂಟಿಂಗ್ ನಡೆಯುವಾಗ ಆ ಸನ್ನಿವೇಶದಲ್ಲಿ ಚುಂಬನದ ದೃಶ್ಯ ಇರಲಿಲ್ಲ. ಆದರೆ ಸಹನಟ ಮಾತ್ರ ಸೀನ್ ಚೆನ್ನಾಗಿ ಬರಲಿ ಎಂದು ತನ್ನಷ್ಟಕ್ಕೆ ತಾನೇ 'ಇಂಪ್ರೊವೈಸ್' ಮಾಡಿಕೊಳ್ಳುತ್ತಿದ್ದೇನೆ ಎಂಬ ನೆಪ ಒಡ್ಡಿ ನನ್ನನ್ನು ಪದೇ ಪದೇ ಚುಂಬಿಸಲು ಆರಂಭಿಸಿದ.

Related Articles

Related image1
ಕಟ್ ಅಂದ್ರು ನಿಂತಿರಲಿಲ್ಲ ಕಿಸ್, ಇಂಟಿಮೇಟ್ ಶೂಟ್ ಸತ್ಯ ಬಿಚ್ಚಿಟ್ಟ ನಟಿ
Related image2
ಜಾನ್ವಿ ಕಪೂರ್‌ಳನ್ನು ಕಿಸ್ ಮಾಡುವ ಗೊಂಬೆಯನ್ನಾಗಿ ಬಳಸಿಕೊಂಡಿದ್ದಾರೆ; 'ಪೆದ್ದಿ' ಚಿತ್ರತಂಡದ ವಿರುದ್ಧ ಗಾಯಕಿ ಆಕ್ರೋಶ!
36
Image Credit : Instagram

ಈ ಬಗ್ಗೆ ನಾನು ಮೊದಲೇ ನಿರ್ದೇಶಕರಲ್ಲಿ ಇಂತಹ ದೃಶ್ಯಗಳ ಅಗತ್ಯವಿದೆಯೇ ಎಂದು ಅನುಮಾನ ವ್ಯಕ್ತಪಡಿಸಿದ್ದೆ. ಆದರೆ ಶೂಟಿಂಗ್ ಸೆಟ್‌ನಲ್ಲಿ ಸಹನಟನ ವರ್ತನೆ ಮಾತ್ರ ಮಿತಿ ಮೀರಿತ್ತು. ಆ ಸಮಯದಲ್ಲಿ ನಾನು ಚಿತ್ರರಂಗಕ್ಕೆ ಹೊಸಬಳಾಗಿದ್ದರಿಂದ ಸಂಪೂರ್ಣ ನಿಸ್ಸಹಾಯಕಳಾಗಿದ್ದೆ. ನನಗಾಗಿ ಧ್ವನಿ ಎತ್ತಲು ಅಂದು ಸಾಧ್ಯವಾಗಲಿಲ್ಲ' ಎಂದು ಪ್ರಿಯಾ ಅಳಲು ತೋಡಿಕೊಂಡಿದ್ದಾರೆ.

46
Image Credit : Instagram

ಹೋಟೆಲ್‌ನಲ್ಲೂ ಮುಂದುವರಿದ ಕಿರುಕುಳ:

ಸಹನಟನ ಕಾಟ ಕೇವಲ ಶೂಟಿಂಗ್ ಸೆಟ್‌ಗೆ ಮಾತ್ರ ಸೀಮಿತವಾಗಿರಲಿಲ್ಲ, ಬದಲಿಗೆ ಹೋಟೆಲ್‌ನಲ್ಲೂ ಮುಂದುವರಿದಿತ್ತು ಎನ್ನಲಾಗಿದೆ. 'ನಾವು ತಂಗಿದ್ದ ಹೋಟೆಲ್‌ನಲ್ಲೇ ಆ ಸಹನಟನೂ ಇದ್ದ. ನನಗೆ ಇಷ್ಟವಿಲ್ಲದಿದ್ದರೂ ಜೊತೆಗೆ ಊಟ ಮಾಡಲು ಬರಬೇಕು ಎಂದು ಆತ ನಿರಂತರವಾಗಿ ಪೀಡಿಸುತ್ತಿದ್ದ, ತುಂಬಾ ಸಲ ಟಾರ್ಗೆಟ್ ಮಾಡುತ್ತಿದ್ದ. ಈ ಘಟನೆಗಳು ನನ್ನನ್ನು ಮಾನಸಿಕವಾಗಿ ತೀವ್ರ ಆಘಾತಕ್ಕೆ ದೂಡಿದವು' ಎಂದು ಪ್ರಿಯಾ ಹೇಳಿದ್ದಾರೆ.

56
Image Credit : Instagram

ಬೆಂಬಲವಾಗಿ ನಿಂತ ಪತಿ ಉಮೇಶ್ ಕಾಮತ್:

ಈ ಕಷ್ಟದ ಸಮಯದಲ್ಲಿ ಪ್ರಿಯಾ ಅವರಿಗೆ ಧೈರ್ಯ ತುಂಬಿದ್ದು ಅವರ ಪತಿ ಉಮೇಶ್ ಕಾಮತ್. ಸೆಟ್‌ನಲ್ಲಿ ನಡೆಯುತ್ತಿದ್ದ ಕಿರುಕುಳದ ಬಗ್ಗೆ ಪ್ರಿಯಾ ಪ್ರತಿದಿನ ರಾತ್ರಿ ಪತಿಗೆ ಕರೆ ಮಾಡಿ ಕಣ್ಣೀರು ಹಾಕುತ್ತಿದ್ದರು. ಪರಿಸ್ಥಿತಿಯ ಗಾಂಭೀರ್ಯತೆಯನ್ನು ಅರಿತ ಉಮೇಶ್ ತಕ್ಷಣವೇ ಮುಂಬೈನಿಂದ ಶೂಟಿಂಗ್ ನಡೆಯುತ್ತಿದ್ದ ಭೋಪಾಲ್‌ಗೆ ಧಾವಿಸಿ ಬಂದರು. ಮುಂದಿನ ಮೂರು ದಿನಗಳ ಕಾಲ ಅವರು ಪ್ರಿಯಾ ಜೊತೆಯಲ್ಲೇ ಸೆಟ್‌ನಲ್ಲಿದ್ದರು. ಪತಿಯ ಉಪಸ್ಥಿತಿ ತಮಗೆ ಆ ಪರಿಸ್ಥಿತಿಯನ್ನು ಎದುರಿಸಲು ದೊಡ್ಡ ಮಾನಸಿಕ ಶಕ್ತಿಯನ್ನು ನೀಡಿತು ಎಂದು ಪ್ರಿಯಾ ಕೃತಜ್ಞತೆಯಿಂದ ಸ್ಮರಿಸಿದ್ದಾರೆ.

66
Image Credit : Instagram

ಮರಾಠಿ ಚಿತ್ರರಂಗ ಮಾತ್ರವಲ್ಲದೆ, 'ಸಿಟಿ ಆಫ್ ಡ್ರೀಮ್ಸ್' ವೆಬ್ ಸೀರೀಸ್ ಮೂಲಕ ದೇಶಾದ್ಯಂತ ಅಪಾರ ಜನಪ್ರಿಯತೆ ಗಳಿಸಿರುವ ಪ್ರಿಯಾ ಬಾಪಟ್, 'ಕಾಕ್‌ಸ್ಪರ್ಶ್', 'ಹ್ಯಾಪಿ ಜರ್ನಿ' ಹಾಗೂ 'ಆಮ್ಹಿ ದೋಗಿ' ಅಂತಹ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಇವರ ಈ ಲೇಟೆಸ್ಟ್ ಸ್ಟೇಟ್‌ಮೆಂಟ್ ಚಿತ್ರರಂಗದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ದಕ್ಷಿಣ ಭಾರತದ ನಟಿ
ನಟಿ
ಸಿನಿಮಾ
Latest Videos
Recommended Stories
Recommended image1
Peddi Controversy: ಜಾನ್ವಿ ಕಪೂರ್ ಬೆನ್ನಿಗೆ ನಿಂತ ಕನ್ನಡದ ನಟಿ: ಇಂಡಸ್ಟ್ರಿಯ ಕರಾಳ ಸತ್ಯ ಬಿಚ್ಚಿಟ್ಟ ಆಶಿಕಾ!
Recommended image2
ಹಾಡಿನ ಸೀನ್‌ನಲ್ಲಿ ಬೇಕಂತಲೆ ಸತತವಾಗಿ ಮುತ್ತಿಟ್ಟ ಸಹ ನಟ, ಅಸಹಾಯಕತೆ ನೆನೆದು ಕಣ್ಣೀರಿಟ್ಟ ನಟಿ
Recommended image3
Shocking: ಶೂಟಿಂಗ್‌ ವೇಳೆ ಕಾಜೋಲ್‌ ತಲೆಗೆ ಭಾರೀ ಪೆಟ್ಟು; ಶಾರುಖ್‌ ಮರೆತ ನಟಿ ಆ ನಟನನ್ನು ಮಾತ್ರ ಮರೆಯಲೇ ಇಲ್ಲ!
Related Stories
Recommended image1
ಕಟ್ ಅಂದ್ರು ನಿಂತಿರಲಿಲ್ಲ ಕಿಸ್, ಇಂಟಿಮೇಟ್ ಶೂಟ್ ಸತ್ಯ ಬಿಚ್ಚಿಟ್ಟ ನಟಿ
Recommended image2
ಜಾನ್ವಿ ಕಪೂರ್‌ಳನ್ನು ಕಿಸ್ ಮಾಡುವ ಗೊಂಬೆಯನ್ನಾಗಿ ಬಳಸಿಕೊಂಡಿದ್ದಾರೆ; 'ಪೆದ್ದಿ' ಚಿತ್ರತಂಡದ ವಿರುದ್ಧ ಗಾಯಕಿ ಆಕ್ರೋಶ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved