ನಟ ರಮೇಶ್​ ಅರವಿಂದ್​ ಮನುಷ್ಯನ ವ್ಯಕ್ತಿತ್ವ ಹೇಗಿರಬೇಕು ಎಂದು ಬಜ್ಜಿ, ಬೋಂಡಾದ ಪರಿಮಳದ ಮೂಲಕ ಉದಾಹರಣೆ ಕೊಟ್ಟಿದ್ದು ಹೀಗೆ... 

ನಮ್ಮ ಅಜ್ಜಿ ಮನೆ ರೈಲಿನ ಡಬ್ಬಿ ಥರ ಉದ್ದಕ್ಕೆ ಇರೋದು. ನಾವೆಲ್ಲಾ ಹೊರಗಡೆ ಕ್ರಿಕೆಟೋ, ಇನ್ನೇನೋ ಆಡ್ತಾ ಇರುತ್ತಿದ್ವಿ. ಅಜ್ಜಿ ಒಳಗಡೆ ಬಜ್ಜಿನೋ, ಬೋಂಡನೋ ಏನೋ ಮಾಡ್ತಾ ಇರೋಳು. ಅದರ ಘಮ ಘಮ ಹೊರಗಡೆವರೆಗೆ ನಮ್ಮ ಮೂಗಿಗೆ ಬಡಿಯೋದು. ಪರಿಮಳ ಬರ್ತಾ ಇದ್ದಂತೆಯೇ ಆಟ ಬಿಟ್ಟು ಒಳಗೆ ಓಡೋಡಿ ಹೋಗ್ತಾ ಇದ್ವಿ. ಆಗ ನಮ್ಮಜ್ಜ, ಯಾಕೋ ಬಂದ್ರಿ ಕೇಳೋರು. ಅಜ್ಜಿ ಬಜ್ಜಿ, ಬೋಂಡಾ ಮಾಡ್ತಾ ಇದ್ದಾಳಲ್ಲ, ತಿನ್ನಲು ಬಂದ್ವಿ ಅಂತಿದ್ವಿ. ಆಗ ಅಜ್ಜ, ನಿಮ್ಮಜ್ಜಿ ಅದೆಲ್ಲಾ ಮಾಡೋದು ನಿನಗೆ ಹೇಗೆ ಗೊತ್ತಾಯ್ತು, ಅವಳೇನಾದ್ರೂ ಮೈಕ್​ನಲ್ಲಿ ಅನೌನ್ಸ್​ ಮಾಡಿದ್ಲಾ ಇಲ್ಲಾ ಬೋರ್ಡ್​ ಹಾಕಿದ್ಲಾ ಕೇಳೋರು. ನಮಗೆ ಪರಿಮಳ ಬಂತು ಅಂತಿದ್ವಿ. ಆಗ ಅಜ್ಜ. ಲೈಫ್​ ಕೂಡ ಈ ಬಜ್ಜಿ, ಬೋಂಡಾದ ರೀತಿನೇ... ನೀವು ಮಾಡುವ ಪ್ರತಿಯೊಂದು ಕೆಲಸವೂ ಬೇರೆಯವರಿಗೆ ಪರಿಮಳ ಬೀರುವ ರೀತಿ ಇರಬೇಕು, ನಿಮ್ಮ ಕೆಲಸದಿಂದ ಬೇರೆಯವರಿಗೆ ಒಳಿತಾಗುವಂತೆ ನಡೆಯಬೇಕು ಎನ್ನೋರು.... ಎನ್ನುವ ಮೂಲಕ ಸ್ಯಾಂಡಲ್​ವುಡ್​ ನಟ ರಮೇಶ್​ ಅರವಿಂದ್​ ಸೋಷಿಯಲ್​ ಮೀಡಿಯಾದಲ್ಲಿ ಜೀವನದ ಪಾಠ ಮಾಡಿದ್ದಾರೆ.

ಅಜ್ಜನ ಈ ಮಾತಿನ ಕುರಿತು ಹೇಳಿದ ಅವರು, ಆಗ ಸಣ್ಣಗಿದ್ವಿ. ಅಜ್ಜ ಏನು ಹೇಳ್ತಾನೆ ಎಂದು ಅರ್ಥ ಆಗ್ತಿರಲಿಲ್ಲ. ಆದರೆ ಈಗ ಅಜ್ಜನ ಮಾತು ಅರ್ಥ ಆಗ್ತಿದೆ. ನಮ್ಮ ಪ್ರತಿಯೊಂದು ಮಾತು, ನಡೆ ಎಲ್ಲವೂ ಬೇರೆಯವರಿಗೆ ಉಪಯೋಗ ಆಗುವ ರೀತಿಯಲ್ಲಿ ಇರಬೇಕು. ನಾನು ನಡೆದುಕೊಳ್ಳುವ ರೀತಿ, ಸೋಷಿಯಲ್​ ಮೀಡಿಯಾಗಳಲ್ಲಿ ಹಾಕುವ ಪೋಸ್ಟ್​ ಎಲ್ಲವೂ ಒಳಿತನ್ನೇ ಬಯಸುವಂತೆ ಇರಬೇಕು. ಬಜ್ಜಿ ಬೋಂಡದ ರೀತಿಯಲ್ಲಿ ಅದು ಎಲ್ಲರಿಗೂ ಸುವಾಸನೆಯನ್ನೇ ಕೊಡುವಂತೆ ಇರಬೇಕು. ಅದೃಶವಾದ ಪರಿಮಳವನ್ನು ಅದುದ ಬೀರುತ್ತಲಿರಬೇಕು. ಆಗಲೇ ಬದುಕು ಸುಂದರ ಎಂದಿದ್ದಾರೆ. 

ನಾನೇನಾದ್ರೂ ನಿನ್ನ ಮದ್ವೆಯಾಗಿದ್ರೆ... ನಿವೇದಿತಾ ಹೊಸ ರೀಲ್ಸ್​ ನೋಡಿ ಫ್ಯಾನ್ಸ್​ ಹೇಳಿದ್ದೇನು?

ಅಷ್ಟಕ್ಕೂ ರಮೇಶ್​ ಅರವಿಂದ್​ ಅವರು ಸೋಷಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿದ್ದು, ಆಗೀಗ ಇಂಥ ಜೀವನ ಪಾಠಗಳನ್ನು ಮಾಡುತ್ತಲಿರುತ್ತಾರೆ. ಬದುಕಿನ ಅರ್ಥದ ಕುರಿತು ಹೇಳುತ್ತಲಿರುತ್ತಾರೆ. ಕಿರುತೆರೆಯಲ್ಲಿ ನಟ ಬಿಜಿಯಾಗಿದ್ದು, ಇತ್ತೀಚೆಗೆ ಅವರು ಮಹಾನಟಿ ಷೋ ಮುಗಿಸಿದ್ದಾರೆ. ಈ ಷೋನಲ್ಲಿ ಷೋನಲ್ಲಿ ರೋಪ್​ ಮೇಲೆ ಹಾರುವ ಮೂಲಕ ಸಕತ್​ ಸೌಂಡ್ ಮಾಡಿದ್ದರು ನಟ.

ರವಿಚಂದ್ರನ್ ಅವರ ಶಾಂತಿ ಕ್ರಾಂತಿ ಚಿತ್ರದ ಗಾಳಿಯೋ ಗಾಳಿಯೋ ಹಾಡನ್ನು ಈ ಷೋನಲ್ಲಿ ರೀ-ಕ್ರಿಯೇಟ್ ಮಾಡಲಾಗಿತ್ತು. ಇದರಲ್ಲಿ ರಮೇಶ್ ಅರವಿಂದ್ ವೇದಿಕೆ ಮೇಲೆ ಅದ್ಭುತವಾಗಿಯೇ ಎಂಟ್ರಿ ಕೊಟ್ಟಿದ್ದರು. ರಮೇಶ್ ಅರವಿಂದ್ ಈ ಹಿಂದೆ ಈ ರೀತಿ ಪ್ರಯೋಗ ಮಾಡಿರಲಿಲ್ಲ. ಆದರೆ 60ನೇ ವಯಸ್ಸಿನಲ್ಲಿಯೂ ಡಾನ್ಸ್​ಗಾಗಿ ಸಕತ್​ ಟ್ರೇನಿಂಗ್​ ಪಡೆದು ಈ ಸಾಹಸ ಮಾಡಿದ್ದರು. ರಮೇಶ್ ಅರವಿಂದ್ ರೋಪ್‌ ಮೂಲಕ ಗಾಳಿಯಲ್ಲಿ ತೇಲುತ್ತಲೇ ಡ್ಯಾನ್ಸ್ ಮಾಡಿದ್ದರು. ಆ ಬಳಿಕ ಕೆಳಗೆ ಬಂದಿದ್ದರು. ಒಂದು ರೌಡ್ ಚಕ್ರದ ತರ ಸ್ಟೈಲ್ ಆಗಿ ತಿರುಗಿ ಮೇಲೆ ಹೋಗಿ ಮತ್ತೆ ಕೆಳಕ್ಕೆ ಬಂದು ಥ್ರಿಲ್​ ಮೂಡಿಸಿದ್ದರು. ಗಾಳಿಯೋ ಗಾಳಿಯೋ ಹಾಡಿಗೆ ನಟಿ ಪ್ರೇಮ ಸಾಥ್ ಕೊಟ್ಟಿದ್ದರು.

ನಿಮ್ಮನೆ ಮಕ್ಕಳಲ್ಲೂ ವಿಷಬೀಜ ಬಿತ್ತಬೇಕಾ? ಅಮ್ಮಂದಿರೇ ಆಯ್ಕೆ ನಿಮಗೆ ಬಿಟ್ಟಿದ್ದು... ಏನಿದು ನೆಟ್ಟಿಗರ ಮಾತು?

View post on Instagram